ರಾಮಲಿಂಗ ರಾಜು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೈರಾಜು ರಾಮಲಿಂಗ ರಾಜು
Born16 ಸೆಪ್ಟೆಂಬರ್ 1954 (ವಯಸ್ಸು 63)
ಭೀಮಾವರಂ, ಆಂಧ್ರ ಪ್ರದೇಶ, ಭಾರತ
StatusGranted bail on 18th August 2010
Nationalityಭಾರತೀಯ
Occupationಸತ್ಯಂ ಕಂಪ್ಯೂಟರ್ ಸರ್ವಿಸಸ್ ಮಾಜಿ ಅಧ್ಯಕ್ಷರು
Criminal penalty7 ವರ್ಷ ಜೈಲು ಶಿಕ್ಷೆಗೆ ಗುರಿಯಾದರು
Criminal statusಜಾಮೀನು ನೀಡಲಾಗಿದೆ
Spouseನಂದಿನಿ (ವಿ. 1976)
Children2

ಬೈರಾಜು ರಾಮಲಿಂಗ ರಾಜು (16 ಸೆಪ್ಟೆಂಬರ್ 1954 ರಂದು ಜನನ) ಸತ್ಯಮ್ ಕಂಪ್ಯೂಟರ್ ಸರ್ವೀಸಸ್ ನ   ಮಾಜಿ ಅಧ್ಯಕ್ಷ ಮತ್ತು ಸಿಇಒ. ₹71.36 ಬಿಲಿಯನ್ (ಸರಿಸುಮಾರಾಗಿ ಯುಎಸ್ $ 1.5 ಶತಕೋಟಿ) ಗಳಷ್ಟು  ಹಣ ದುರುಪಯೋಗ ಮಾಡಿದ ಆರೋಪದಿ೦ದ  ಇವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು.  2015 ರಲ್ಲಿ, ಕಾರ್ಪೊರೇಟ್ ವಂಚನೆ ಹಾಗು ಹಣ ದುರುಪಯೋಗ ಮಾಡಿದ್ದಾರೆ೦ದು ಒಪ್ಪಿಕೊಳ್ಳುವುದರ ಮೂಲಕ  ಸತ್ಯಂ ಕುಸಿತಕ್ಕೆ  ಕಾರಣರಾದರು. [೧][೨] 

ಆರಂಭಿಕ ಜೀವನ[ಬದಲಾಯಿಸಿ]

ರಾಮಲಿಂಗ ರಾಜು 16 ಸೆಪ್ಟೆಂಬರ್ 1954 ರಂದು ಕೃಷಿ ಕುಟುಂಬಕ್ಕೆ ಜನಿಸಿದರು. ನಾಲ್ಕು ಮಕ್ಕಳಲ್ಲಿ ಇವರೆ ಹಿರಿಯರು. ವಿಜಯವಾಡದ ಆಂಧ್ರ ಲೊಯೋಲಾ ಕಾಲೇಜಿನಿಂದ  ಕಾಮರ್ಸ್ ಪದವಿ ಪಡೆದರು. ಅಮೆರಿಕಾದ ಒಹಾಯೋ ವಿಶ್ವವಿದ್ಯಾಲಯದಿಂದ MBA ಪದವಿ ಪಡೆದರು. 1977 ರಲ್ಲಿ ಭಾರತಕ್ಕೆ ಮರಳಿದ ನಂತರ, ರಾಜು ಇಪ್ಪತ್ತೆರಡನೆ ವಯಸ್ಸಿನಲ್ಲಿ ಮದುವೆಯಾದರು. 

ಹಗರಣ[ಬದಲಾಯಿಸಿ]

ಹಲವು ವರ್ಷಗಳ ಕಾಲ ಸುಳ್ಳು ಲೆಕ್ಕ ಸೃಷ್ಟಿಸಿ ಸತ್ಯಂ ಕಂಪ್ಯೂಟರ್ ಕಂಪನಿಗೆ ಹೆಚ್ಚು ಲಾಭ ಬರುತ್ತಿರುವಂತೆ ರಾಮಲಿಂಗರಾಜು ಹಾಗೂ ಅವರ ಸೋದರರು ಇತರರ ಜತೆಗೂಡಿ ತೋರಿಸಿದ್ದರು. ರಾಮರಾಜು ಅವರಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 5.5 ಕೋಟಿ ರೂ. ದಂಡ ವಿಧಿಸಿದರು. ಇತರೆ ಆರೋಪಿಗಳಾದ ಕಂಪನಿಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಡ್ಲಮಣಿ ಶ್ರೀನಿವಾಸ್‌, ಪಿಡಬ್ಲ್ಯುಸಿ ಕಂಪನಿಯ ಮಾಜಿ ಆಡಿಟರ್‌ಗಳಾದ ಸುಬ್ರಮಣಿ ಗೋಪಾಲಕೃಷ್ಣನ್‌, ಟಿ. ಶ್ರೀನಿವಾಸ್‌, ರಾಜು ಅವರ ಮತ್ತೂಬ್ಬ ಸೋದರ ಸೂರ್ಯನಾರಾಯಣ ರಾಜು, ಮಾಜಿ ನೌಕರರಾದ ಜಿ. ರಾಮಕೃಷ್ಣ, ಡಿ. ವೆಂಕಟಪತಿ ರಾಜು, ಶ್ರೀಶೈಲಂ, ಸತ್ಯಂ ಕಂಪನಿಯ ಮಾಜಿ ಆಂತರಿಕ ಮುಖ್ಯ ಆಡಿಟರ್‌ ವಿ.ಎಸ್‌. ಪ್ರಭಾಕರ ಗುಪ್ತಾ ಅವರಿಗೂ 7 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ ತಲಾ 25 ಲಕ್ಷ ರೂ. ದಂಡ ವಿಧಿಸಿತು. [೧][ಶಾಶ್ವತವಾಗಿ ಮಡಿದ ಕೊಂಡಿ] [೩] [೨][ಶಾಶ್ವತವಾಗಿ ಮಡಿದ ಕೊಂಡಿ]

ಉಲ್ಲೇಖಗಳು[ಬದಲಾಯಿಸಿ]

  1. "Satyam's chairman Ramalinga Raju resigns, admits fraud". The Times of India. 7 January 2009. Retrieved 20 October 2013.
  2. Rs 7,000-crore fraud. The Hindu Business Line. Retrieved on 27 December 2013.
  3. Norris, Floyd (7 January 2009) A Corporate Hero Admits Fraud. New York Times