ರಾಮನಾಥನ್ ಕೃಷ್ಣನ್

ವಿಕಿಪೀಡಿಯ ಇಂದ
Jump to navigation Jump to search

ರಾಮನಾಥನ್ ಕೃಷ್ಣನ್ (ಜನನ ೧೧ ಏಪ್ರಿಲ್ ೧೯೩೭, ಭಾರತದ ಮದ್ರಾಸ್ ನಲ್ಲಿ) ಭಾರತದ ನಿವೃತ್ತ ಟೆನ್ನಿಸ್ ಆಟಗಾರರಾಗಿದ್ದಾರೆ, ಇವರು ೧೯೫೦ ಹಾಗು ೧೯೬೦ರ ದಶಕದ ನಡುವೆ ವಿಶ್ವದ ಮುಂಚೂಣಿ ಟೆನ್ನಿಸ್ ಆಟಗಾರರಲ್ಲಿ ಒಬ್ಬರೆನಿಸಿದ್ದರು.

ಮಧ್ಯದಲ್ಲಿರುವವರು, 2009ರಲ್ಲಿ

ವೃತ್ತಿಜೀವನ[ಬದಲಾಯಿಸಿ]

ಕೃಷ್ಣನ್ ತಮ್ಮ ತಂದೆ, T.K. ರಾಮನಾಥನ್ ರ ಮಾರ್ಗದರ್ಶನದಲ್ಲಿ ತಮ್ಮ ಕೌಶಲಗಳ ಒರೆ ಹಚ್ಚಿದರು. ನಂತರ ಶೀಘ್ರದಲ್ಲಿ ಎಲ್ಲ ಜೂನಿಯರ್ ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ರಾಷ್ಟ್ರೀಯ ಸುತ್ತಿನಲ್ಲಿ ಗಮನ ಸೆಳೆದರು.

ವಿಂಬಲ್ಡನ್[ಬದಲಾಯಿಸಿ]

೧೯೫೪ರಲ್ಲಿ, ಫೈನಲ್ ಪಂದ್ಯದಲ್ಲಿ ಆಶ್ಲೆ ಕೂಪರ್ ರನ್ನು ಪರಾಭವಗೊಳಿಸುವ ಮೂಲಕ ವಿಂಬಲ್ಡನ್ ನಲ್ಲಿ[೧] ಬಾಲಕರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗಳಿಸಿದ ಮೊದಲ ಏಷಿಯಾದ ಆಟಗಾರನೆನಿಸಿದರು. ೧೯೫೯ರಲ್ಲಿ, ಕೃಷ್ಣನ್ ವಿಂಬಲ್ಡನ್ ನಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಆಡುವುದರ ಜೊತೆಗೆ ಮೂರನೇ ಸುತ್ತಿನಲ್ಲಿ ಅಲೆಕ್ಸ್ ಒಲ್ಮೆಡೊಗೆ ಶರಣಾದರು. ನಂತರದಲ್ಲಿ ಅದೇ ವರ್ಷ, ಭಾರತದ ಪರ ಡೇವಿಸ್ ಕಪ್ ನಲ್ಲಿ, ಕೃಷ್ಣನ್ ಆಸ್ಟ್ರೇಲಿಯಾದ ರೊಡ್ ಲವೆರ್ ರನ್ನು ನಾಲ್ಕು ಸೆಟ್ ಗಳಲ್ಲಿ ಪರಾಭವಗೊಳಿಸಿದರು.(ವಿಂಬಲ್ಡನ್ ನ ಉಪಾಂತ ವಿಜಯಿ)[೨] ಈ ಪ್ರದರ್ಶನಗಳು ವಿಂಬಲ್ಡನ್ ನಲ್ಲಿ ಕೃಷ್ಣನ್ ರಿಗೆ ೧೯೬೦ರಲ್ಲಿ ಕ್ರಮಾಂಕದ ಪಟ್ಟಿಯಲ್ಲಿ ಏಳನೇ ಸ್ಥಾನ ಗಳಿಸಿಕೊಟ್ಟವು. ಇವರು ಸೆಮಿ-ಫೈನಲ್ಸ್ ಹಂತ ತಲುಪುವುದರ ಜೊತೆಗೆ ಅಂತಿಮವಾಗಿ ಚ್ಯಾಂಪಿಯನ್ ನೆಯಲೆ ಫ್ರೇಸರ್ ಎದುರು ಪರಾಭವಗೊಂಡರು[೩]. ೧೯೬೧ರಲ್ಲಿ, ಕೃಷ್ಣನ್, ನೇರ ಸೆಟ್ಟುಗಳಲ್ಲಿ ರಾಯ್ ಎಮರ್ಸನ್ ರನ್ನು ಪರಾಭವಗೊಳಿಸುವ ಮೂಲಕ ವಿಂಬಲ್ಡನ್ ಸೆಮಿ-ಫೈನಲ್ಸ್ ಹಂತ ತಲುಪಿದರು; ಆದರೆ ಸೆಮಿಸ್ ನಲ್ಲಿ ಅಂತಿಮವಾಗಿ ಚ್ಯಾಂಪಿಯನ್ ರೊಡ್ ಲವೆರ್ ಗೆ ಶರಣಾದರು. ಕೃಷ್ಣನ್ ವಿಂಬಲ್ಡನ್ ನಲ್ಲಿ ಉನ್ನತ ಕ್ರಮಾಂಕದ ಸ್ಥಾನವನ್ನು(#೪) ೧೯೬೨ರಲ್ಲಿ ಗಳಿಸಿದರು. ಆದರೆ ಅವರ ಕಣಕಾಲಿಗುಂಟಾದ ಪೆಟ್ಟಿನಿಂದಾಗಿ ಪಂದ್ಯಾವಳಿಯನ್ನು ಮಧ್ಯದಲ್ಲೇ ಕೈಬಿಡಬೇಕಾಯಿತು[೪].

ಡೇವಿಸ್ ಕಪ್[ಬದಲಾಯಿಸಿ]

೧೯೬೬ರಲ್ಲಿ ಡೇವಿಸ್ ಕಪ್ ನ ಅಂತಿಮ ಹಂತ ತಲುಪಿದ ಭಾರತೀಯ ತಂಡದಲ್ಲಿ ಕೃಷ್ಣನ್ ಒಬ್ಬ ಪ್ರಮುಖ ಸದಸ್ಯರಾಗಿದ್ದರು. ಕೃಷ್ಣನ್ ವಿಲ್ಹೆಲ್ಮ್ ಬಂಗರ್ಟ್ ರನ್ನು(ಆ ವರ್ಷದ ವಿಂಬಲ್ಡನ್ ನಲ್ಲಿ ಫೈನಲ್ ಹಂತ ತಲುಪಿದ ಆಟಗಾರ) ಪರಾಭವಗೊಳಿಸುವ ಮೂಲಕ ಭಾರತವು ಅಂತರ-ವಲಯ ಸೆಮಿ-ಫೈನಲ್ಸ್ ನಲ್ಲಿ ಪಶ್ಚಿಮ ಜರ್ಮನಿಯನ್ನು ಅಚ್ಚರಿಗೊಳಿಸಿತು. ಕೋಲ್ಕತ್ತಾದಲ್ಲಿ(ಅಂದಿಗೆ ಕಲ್ಕತ್ತಾ ಎಂದು ಪರಿಚಿತ), ಬ್ರೆಜಿಲ್ ನ ವಿರುದ್ಧದ ಸೆಮಿ-ಫೈನಲ್ಸ್ ನಲ್ಲಿ ಎರಡೂ ಕಡೆಯವರು ಒಂದೊಂದು ಪಂದ್ಯವನ್ನು ಗೆದ್ದರು ಹಾಗು ಬ್ರೆಜಿಲಿಯನ್ ಚ್ಯಾಂಪಿಯನ್ ತೋಮಸ್ ಕೋಚ್ ವಿರುದ್ಧ ಕೃಷ್ಣನ್ ಆಡಿದ ಪಂದ್ಯವು ನಿರ್ಣಾಯಕವೆನಿಸಿತು. ಕೋಚ್ ಎರಡು ಸೆಟ್ಟುಗಳಲ್ಲಿ ಒಂದು ಅಂಕದಿಂದ ಮುಂದಿದ್ದು, ನಾಲ್ಕನೇ ಸೆಟ್ಟಿನಲ್ಲಿ ೫-೨ ಅಂಕಗಳಿಂದ ಮುಂಚೂಣಿಯಲ್ಲಿದ್ದರು. ಆಗ ಕೃಷ್ಣನ್ ೭-೫ ಅಂಕಗಳನ್ನು ಪಡೆದು ಸೆಟ್ಟನ್ನು ಗೆಲ್ಲುವುದರ ಜೊತೆಗೆ ಪಂದ್ಯವನ್ನು ಗೆದ್ದು ಅತ್ಯಂತ ಸ್ಮರಣೀಯವಾಗಿಸಿ ತಮ್ಮ ಸ್ಥಾನವನ್ನು ಮತ್ತೆ ಕಾಯ್ದುಕೊಂಡರು. ಆಸ್ಟ್ರೇಲಿಯ ವಿರುದ್ಧದ ಅಂತಿಮ ಪಂದ್ಯದಲ್ಲಿ ಕೃಷ್ಣನ್ ಹಾಗು ಜೈದೀಪ್ ಮುಖರ್ಜಿ ಡಬಲ್ಸ್ ರಬ್ಬರ್(ಮೂರಾಟದಲ್ಲಿ ಎರಡಾಟ ಗೆಲ್ಲುವುದು) ಗೆದ್ದರು.(ಜಾನ್ ನ್ಯೂಕೊಂಬೆ ಹಾಗು ಟೋನಿ ರೋಚೆ ವಿರುದ್ಧ), ಆದರೆ ಕೃಷ್ಣನ್ ಎರಡೂ ಸಿಂಗಲ್ಸ್ ಪಂದ್ಯಗಳಲ್ಲಿ (ಫ್ರೆಡ್ ಸ್ಟೋಲ್ಲೇ ಹಾಗು ರಾಯ್ ಎಮರ್ಸನ್ ವಿರುದ್ಧ) ಪರಾಭವಗೊಳ್ಳುವುದರ ಜೊತೆಗೆ ಭಾರತವು ೪-೧ ಅಂಕಗಳಿಂದ ಸೋಲನ್ನು ಅನುಭವಿಸಬೇಕಾಯಿತು. [೫] ಕೃಷ್ಣನ್ ೧೯೫೩ ಹಾಗು ೧೯೭೫ರ ನಡುವೆ ಭಾರತೀಯ ಡೇವಿಸ್ ಕಪ್ ನ ತಂಡದಲ್ಲಿ ಒಬ್ಬ ಸಾಧಾರಣ ಆಟಗಾರನಾಗಿರುವುದರ ಜೊತೆಗೆ ೬೯-೨೮ ಜಯದ ದಾಖಲೆಯನ್ನು ಒಟ್ಟುಗೂಡಿಸಿದರು.(ಸಿಂಗಲ್ಸ್ ನಲ್ಲಿ ೫೦-೧೯ ಹಾಗು ಡಬಲ್ಸ್ ನಲ್ಲಿ ೧೯-೯)[೬]

ಕೃಷ್ಣನ್ ಸತತ ಎಂಟು ವರ್ಷಗಳ ಕಾಲ ಭಾರತದ ರಾಷ್ಟ್ರೀಯ ಟೆನ್ನಿಸ್ ಪ್ರಶಸ್ತಿಯನ್ನೂ ಸಹ ಗಳಿಸಿದರು.

ಆಟದ ಶೈಲಿ[ಬದಲಾಯಿಸಿ]

ಕೃಷ್ಣನ್ ರ ಆಟದ ಶೈಲಿಯು 'ಟಚ್ ಟೆನ್ನಿಸ್' ಎಂದು ಪರಿಚಿತವಾಗಿದೆ. ವಿಮರ್ಶಕರು ಕೃಷ್ಣನ್ ರನ್ನು ಅದ್ಭುತವೆಂದು ಸಂಬೋಧಿಸುತ್ತಾರೆ, ದಿ ಡೈಲಿ ಟೆಲಿಗ್ರ್ಯಾಫ್ ನ ಲಂಸೆ ಟಿನ್ಗೆಯ್, ಇವರ ಟೆನ್ನಿಸ್ ಶೈಲಿಯನ್ನು 'ಶುದ್ಧವಾದ ಪೌರಸ್ತ್ಯ ಮಾಂತ್ರಿಕತೆ' ಎಂದು ವಿವರಿಸಿದರೆ, ಮತ್ತೊಬ್ಬ ವಿಮರ್ಶಕರು ಇವರ ಶೈಲಿಯನ್ನು 'ಪೌರಸ್ತ್ಯ ಮಾಂತ್ರಿಕತೆ' ಎಂದು ವಿವರಿಸಿದ್ದಾರೆ[೭]. ತೀರ ಇತ್ತೀಚಿಗೆ, ರಾಬರ್ಟ್ ಫಿಲಿಪ್ 'ಕೃಷ್ಣನ್ ರ ಪ್ರತಿಯೊಂದು ಹಾಗು ಎಲ್ಲ ರಾಲಿಯು(ಒಂದರ ಮೇಲೊಂದಾಗಿ ಹಿಂದಿರುಗಿಸಿದ ಚೆಂಡಿನ ಹೊಡೆತಗಳ ಆರಂಭಿಕ ಶ್ರೇಣಿ) ಎಂದು ಬರೆಯುತ್ತಾರೆ[೮]. ಅನುಭವಿ ಕ್ರೀಡಾ ಪತ್ರಕರ್ತ C.V. ನರಸಿಂಹನ್ ರ ಪ್ರಕಾರ, 'ಅವರ ಸರ್ವೀಸ್(ಚೆಂಡನ್ನು ಬೀಸು ಹೊಡೆತದಿಂದ ಎದುರು ಕೋರ್ಟಿಗೆ ಹೊಡೆಯುವುದು) ಬಲಯುತವಾದ ಅಸ್ತ್ರವಾಗಿರಲಿಲ್ಲ, ಜೊತೆಗೆ ಅವರು ಯಾವುದೇ ಬಲಯುತ ನೆಲದ ಹೊಡೆತಗಳನ್ನಾಗಲಿ ಮಾಡಿರಲಿಲ್ಲ. ಅವರು ಸ್ಥಿರತೆಯೊಂದಿಗೆ, ಓರೆಯಾದ ವಾಲಿಗಳು(ಚೆಂಡು ನೆಲವನ್ನು ಮುಟ್ಟುವ ಮುನ್ನವೇ ಅದನ್ನು ಹಿಂದಿರುಗಿಸುವುದು) ಹಾಗು ಆಗೊಮ್ಮೆ ಈಗೊಮ್ಮೆ ಬೀಸುತ್ತಿದ್ದ ಆಕರ್ಷಕ ಅರ್ಧ ವಾಲಿಯ ಬೀಳು ಹೊಡೆತದಿಂದ ಗೆಲುವನ್ನು ಸಾಧಿಸುತ್ತಿದ್ದರು'[೧]. ಅವರ ಶೈಲಿಗೆ ಪ್ರಾಧಾನ್ಯತೆ ನೀಡಿ ಕೌಶಲವನ್ನು ಸಾಧಿಸಿದ ಇತರ ಗಮನಾರ್ಹ ಆಟಗಾರರಲ್ಲಿ ರಾಫೆಲ್ ಒಸುನ, ನಿಕೋಲ ಪಿಯೆಟ್ರಂಗೆಲಿ ಹಾಗು ಕೃಷ್ಣನ್ ರ ಪುತ್ರ ರಮೇಶ್ ಸೇರಿದ್ದಾರೆ[೯].

ಪ್ರಶಸ್ತಿಗಳು[ಬದಲಾಯಿಸಿ]

ಕೃಷ್ಣನ್ ಗೆ ೧೯೬೧ರಲ್ಲಿ ಅರ್ಜುನ ಪ್ರಶಸ್ತಿ, ೧೯೬೨ರಲ್ಲಿ ಪದ್ಮಶ್ರೀ ಹಾಗು ೧೯೬೭ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.[೭]

ಪುಸ್ತಕ[ಬದಲಾಯಿಸಿ]

ಕೃಷ್ಣನ್, ತಮ್ಮ ಪುತ್ರ ರಮೇಶ್ ಕೃಷ್ಣನ್ ಹಾಗು ನಿರ್ಮಲ್ ಶೇಖರ್ ಜತೆಗೂಡಿ, 'ಏ ಟಚ್ ಆಫ್ ಟೆನ್ನಿಸ್: ದಿ ಸ್ಟೋರಿ ಆಫ್ ಏ ಟೆನ್ನಿಸ್ ಫ್ಯಾಮಿಲಿ' ಎಂಬ ಶೀರ್ಷಿಕೆಯುಳ್ಳ ಪುಸ್ತಕ ಬರೆದಿದ್ದಾರೆ.[೧೦] ಪುಸ್ತಕವು, ಟೆನ್ನಿಸ್ ಆಟದಲ್ಲಿ ಕೃಷ್ಣನ್ ರ ಮೂರು ತಲೆಮಾರುಗಳ ಗಳ ಸಾಧನೆಯನ್ನು ಒಳಗೊಂಡಿದೆ, ಇದನ್ನು ಪೆಂಗ್ವಿನ್ ಬುಕ್ಸ್ ಇಂಡಿಯ ಬಿಡುಗಡೆ ಮಾಡಿದೆ[೧೧].

ಪ್ರಸಕ್ತ[ಬದಲಾಯಿಸಿ]

ಕೃಷ್ಣನ್ ಇದೀಗ ಚೆನ್ನೈನಲ್ಲಿ ವಾಸಿಸುತ್ತಾರೆ, ಅಲ್ಲಿ ಅವರು ಅನಿಲ ವಿತರಣಾ ಏಜೆನ್ಸಿಯ ನಿರ್ವಹಣೆ ಮಾಡುತ್ತಾರೆ. ರಮೇಶ್ ಕೃಷ್ಣನ್, ವಿಂಬಲ್ಡನ್ ಜೂನಿಯರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ತಮ್ಮ ತಂದೆಯ ಸಾಧನೆಗೆ ಸರಿಸಮನಾದ ಸಾಧನೆಯನ್ನು ಮಾಡುವುದರ ಜೊತೆಗೆ, ೧೯೮೦ರ ದಶಕದಲ್ಲಿ ಭಾರತದ ಮುಂಚೂಣಿ ಟೆನ್ನಿಸ್ ಆಟಗಾರನಾದರು.

ವೃತ್ತಿಜೀವನದ ಮುಖ್ಯಾಂಶಗಳು[ಬದಲಾಯಿಸಿ]

 • ೧೯೫೪ - ವಿಂಬಲ್ಡನ್ ಜೂನಿಯರ್ ಚ್ಯಾಂಪಿಯನ್.
 • ೧೯೬೦ - ವಿಂಬಲ್ಡನ್ - ಏಳನೇ ಕ್ರಮಾಂಕ ಸ್ಥಾನ ಗಳಿಕೆ, ಸೆಮಿ-ಫೈನಲ್ಸ್ ಹಂತ ತಲುಪಿದರು.(ಅಂತಿಮವಾಗಿ ಚ್ಯಾಂಪಿಯನ್ ನೆಯಾಲೆ ಫ್ರೇಸರ್ ಎದುರು ಪರಾಭವಗೊಂಡರು)
 • ೧೯೬೧ - ವಿಂಬಲ್ಡನ್ - ಏಳನೇ ಕ್ರಮಾಂಕ ಸ್ಥಾನ ಗಳಿಕೆ, ಸತತ ಎರಡನೇ ಬಾರಿಗೆ ಸೆಮಿ-ಫೈನಲ್ಸ್ ಹಂತ ತಲುಪಿದರು.(ಅಂತಿಮವಾಗಿ ಚ್ಯಾಂಪಿಯನ್ ರೊಡ್ ಲವೆರ್ ಎದುರು ಪರಾಭವಗೊಂಡರು)
 • ೧೯೬೬ - ಡೇವಿಸ್ ಕಪ್ ಫೈನಲ್ ಹಂತಕ್ಕೆ ಪ್ರವೇಶಿಸಿದ ಭಾರತೀಯ ತಂಡದ ಸದಸ್ಯರಾಗಿದ್ದರು. (ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡದ ಎದುರು ಪರಾಭವ)


ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ ಹಾರ್ಮನಿ ಮ್ಯಾಗಜಿನ್ ಫೆಬ್ರವರಿ 2005
 2. ಸ್ಪೋರ್ಟ್ಸ್ ಇಲ್ಲಸ್ಟ್ರೆಟೆಡ್ ಆಗಸ್ಟ್ 24,1959
 3. ಚೆನ್ನೈಆನ್ಲೈನ್
 4. ಮಜುಂದಾರ್ ಹಾಗು ಮಂಗನ್ ಸಂಪಾದಕರು (೨೦೦೫) ಸೌತ್ ಏಶಿಯನ್ ಸೊಸೈಟಿಯಲ್ಲಿ ಕ್ರೀಡೆ: ಹಿಂದೆ ಹಾಗು ಪ್ರಸಕ್ತ ISBN ೦-೪೧೫-೩೫೯೫೩-೮ [೧]
 5. [http://tssonnet.com/tss2936/stories/20060909006003100.htm ದಿ ನೆವರ್-ಸೇ-ಡೈ ಕ್ರಿಷ್: ಸ್ಪೋರ್ಟ್ಸ್ ಸ್ಟಾರ್ ವೀಕ್ಲಿ ಸೆಪ್ಟೆಂಬರ್ ೯, 2006]
 6. ಡೇವಿಸ್ ಕಪ್ ದಾಖಲೆ
 7. ೭.೦ ೭.೧ ಸ್ಪೋರ್ಟ್ ಸ್ಟಾರ್ ಜನವರಿ 28,2006
 8. ದಿ ಡೈಲಿ ಟೆಲಿಗ್ರ್ಯಾಫ್ ಜನವರಿ 1, 2007
 9. ಅಬ್ಸರ್ವರ್ ಸ್ಪೋರ್ಟ್ಸ್ ಮಂಥ್ಲಿಯಲ್ಲಿ ಪಾಲ್ ಬೈಲಿ ಜನವರಿ 8, 2006
 10. ದಿ ಇಂಡಿಯನ್ ಎಕ್ಸ್ಪ್ರೆಸ್ಸ್ ಏಪ್ರಿಲ್ 8, 1999
 11. , ಗೂಗಲ್ ಪುಸ್ತಕಗಳು

ಉಲ್ಲೇಖಗಳು