ವಿಷಯಕ್ಕೆ ಹೋಗು

ರಾಬರ್ಟ್ ಗ್ರೀನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಬರ್ಟ್ ಗ್ರೀನ್‍ನನ್ನು ಚಿತ್ರಿಸುವ ಉಬ್ಬಚ್ಚು

ರಾಬರ್ಟ್ ಗ್ರೀನ್ (1558-92) ಅತ್ಯುತ್ತಮ ಇಂಗ್ಲಿಷ್ ಪದ್ಯ ಬರೆಹಗಾರಲ್ಲೊಬ್ಬ.

ಜೀವನ, ಕೃತಿಗಳು

[ಬದಲಾಯಿಸಿ]

ಜನನ ಬಹುಶಃ ನಾರ್ವಿಚ್‌ನಲ್ಲಿ.[] ಶಿಕ್ಷಣ ಕೇಂಬ್ರಿಜಿನ ಸೇಂಟ್ ಜಾನ್ಸ್ ಕಾಲೇಜಿನಲ್ಲಿ. 1578 ರಲ್ಲಿ ಬಿ.ಎ., 1583ರಲ್ಲಿ ಎಂ.ಎ. ಪದವಿ ಪಡೆದ.[][][] ಇಲ್ಲಿ ಥಾಮಸ್ ನ್ಯಾಷ್‍ನೊಂದಿಗೆ ಸ್ನೇಹ ಬೆಳೆಸಿದ. ಇವನಿಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸದಸ್ಯತ್ವ ದೊರಕಿತ್ತು. ಊರೂರು ಅಲೆತ ಈತನ ಪ್ರವೃತ್ತಿ. ಅನೇಕ ಐರೋಪ್ಯ ದೇಶಗಳಲ್ಲಿ ಅಲೆದು ಕೊನೆಗೆ ಲಂಡನಿಗೆ ಬಂದು ನೆಲೆನಿಂತ. ಆ ಹೊತ್ತಿಗಾಗಲೇ ಮದುವೆಯಾಗಿ ಹೆಂಡತಿ ಮತ್ತು ಮಗುವನ್ನು ತ್ಯಜಿಸಿದ್ದ.

ವಿಶ್ವವಿದ್ಯಾಲಯದಲ್ಲಿದ್ದಾಗಲೇ ಬರೆಹಕ್ಕೆ ಕೈ ಹಾಕಿದ್ದ ಈತ ಮ್ಯಾಮಿಲಿಯ ಎಂಬ ಕೃತಿಯನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದ್ದ. ನಾಟಕಕಾರನಾಗಿ ಈತ ಇಂಗ್ಲಿಷ್ ನಾಟಕಗಳಿಗೆ ತಳಹದಿ ಹಾಕಿದನೆನ್ನಬಹುದು. ಗ್ರೀನ್ ರಚಿಸಿದ ನಾಟಕಗಳಲ್ಲಿ ಈಗ ದೊರೆತಿರುವವು ಕೆಲವು ಮಾತ್ರ. ಆಲ್‌ಫಾನ್ಸಸ್ ಕಿಂಗ್ ಆಫ್ ಆರಗಾನ್ ಮತ್ತು ಆರ್‌ಲ್ಯಾಂಡೊ ಫ್ಯೂರಿಯೋಸ ನಾಟಕಗಳ ಮೇಲೆ ಮಾರ್ಲೋನ ಪ್ರಭಾವ ಕಂಡುಬರುತ್ತದೆ. ಫ್ರೈಯರ್ ಬೇಕನ್ ಅಂಡ್ ಫ್ರೈಯರ್ ಬಂಗೆ, ಜೇಮ್ಸ್ IV-ಇವು ರೊಮ್ಯಾಂಟಿಕ್ ಹರ್ಷನಾಟಕಗಳು. ಜೇಮ್ಸ್ IV ಚಾರಿತ್ರಿಕವಾಗಿರದೆ ಯಕ್ಷರಾಜ ಓಬೆರಾನ್ ಬಗ್ಗೆ ರಚಿತವಾದ ಕಾಲ್ಪನಿಕ ನಾಟಕ. ಇದರಲ್ಲಿ ಯಕ್ಷಿಣಿಯ ಪ್ರಯೋಗ ತಂದದ್ದು ಈತನ ವಿಶೇಷ.

ಗ್ರೀನ್ ಬರೆದವುಗಳಲ್ಲಿ ಗಮನಿಸಬೇಕಾದ ಸಾಹಿತ್ಯ ಕೃತಿಗಳೆಂದರೆ ಕಿರುಪುಸ್ತಕಗಳು (ಪ್ಯಾಂಫ್ಲೆಟ್ಸ್). ಇವು ಕಾದಂಬರಿಗೆ ತುಂಬ ಹತ್ತಿರದವು. ಇವುಗಳಲ್ಲಿ ಎಲಿಜ಼ಬೀತನ್ ಕಾಲದ ಕೆಳಮಟ್ಟದ ಲಂಡನ್ ಜನಜೀವನದ ಬಗ್ಗೆ ಬರೆದದ್ದೇ ಹೆಚ್ಚು. ಗೈಡೋನಿಯಸ್; ಕಾರ್ಡ್ ಆಫ್ ಫ್ಯಾನ್ಸಿ (1584), ಪ್ಯಾಂಡೋಸ್ಟೊ (1588), ಪೆರಿಮೆಡೀಸ್ (1588), ಮೆನಾಫಾನ್ (1589), ಮೌರ್ನಿಂಗ್ ಗಾರ್ಮೆಂಟ್ (1590), ನೆವರ್ ಟೂ ಲೇಟ್ (1590), ಫೇರ್‌ವೆಲ್ ಟು ಫಾಲಿ (1591), ಎ ಕ್ವಿಪ್ ಫಾರ್ ಎನ್ ಅಪ್‌ಸ್ಟಾರ್ಟ್ ಕೋರ್ಟಿಯರ್ (1592), ಫಿಲೊಮೆಲಾ (1592)-ಇವು ಈತನ ಕೆಲವು ಪ್ರಸಿದ್ಧ ಕಿರುಪುಸ್ತಕಗಳು. ಅನೇಕವುಗಳಲ್ಲಿ ಸಮಾಜದ ವಿವಿಧ ವ್ಯಕ್ತಿಗಳನ್ನು ವಿಡಂಬಿಸಿದ್ದಾನೆ. ವಿಡಂಬನೆ, ಹಾಸ್ಯ ಈತನ ಕೃತಿಗಳಲ್ಲಿ ಪ್ರಧಾನವಾಗಿ ತೋರುವ ಗುಣಗಳು.

ಕೊನೆಯ ವರ್ಷಗಳು ಮತ್ತು ಮರಣ

[ಬದಲಾಯಿಸಿ]

ಗ್ರೀನ್ ವಿಶ್ವವಿದ್ಯಾಲಯದಲ್ಲಿರುವಾಗಲೇ ಕೆಳದರ್ಜೆಯ ಜನರೊಡನೆ ಬೆರೆಯಲು ಪ್ರಾರಂಭಿಸಿದ. ಅಲ್ಲಿಯ ಜೀವನದಲ್ಲಿಯೇ ಆಕರ್ಷಣೆ ಕಂಡು ಅಲ್ಲಿಯೇ ಮುಳುಗಿದ. ಜೇಬುಗಳ್ಳರ, ಕುಡುಕರ, ವೇಶ್ಯೆಯರ ಸಹವಾಸ ಆತನ ನಿತ್ಯದ ಬಾಳಾಯಿತು. ಈ ಸಹವಾಸದಿಂದಲೇ ಈ ಕೃತಿಗಳಲ್ಲಿಯ ಕೆಳಪಾತ್ರಗಳ ಚಿತ್ರಣದಲ್ಲಿ ಜೀವಂತತೆ ಕಾಣುತ್ತದೆ. ಸಹವಾಸ ದೋಷದಿಂದ ಈತನಿಗೆ ಕುಡಿತದ ಚಟ ಅಂಟಿಕೊಂಡಿತು. ಜೀವನದ ಕೊನೆಗಾಲದಲ್ಲಿ ತನ್ನ ಹಿಂದಿನ ಜೀವನದ ಬಗ್ಗೆ ವಿಶಾದ ಪಟ್ಟು ಅನೇಕ ಲೇಖನಗಳನ್ನು ಬರೆದ. ಮರಣಶಯ್ಯೆಯಲ್ಲಿದ್ದಾಗ ಈತ ಕಡುಬಡವ. ಊಟಕ್ಕೂ ಗತಿ ಇಲ್ಲದವ. ಸಾಯುವ ಮೊದಲು ಹೆಂಡತಿಗೆ ತನ್ನ ತಪ್ಪುಗಳನ್ನು ಕ್ಷಮಿಸುವಂತೆ ಬರೆದು ತೀರಿಕೊಂಡ. ಇವನ ಸಂಸಾರಕ್ಕೆ ಇದ್ದವರು ಇಬ್ಬರೇ. ಈತನ ಚಮ್ಮಾರ ಗೆಳೆಯ ಮತ್ತು ಗೆಳೆಯನ ಹೆಂಡತಿ. ಹೀಗೆ ಇಂಗ್ಲಿಷಿನ ಆದ್ಯ ವೃತ್ತಿಬರೆಹಗಾರರಲ್ಲೊಬ್ಬನಾದ ಗ್ರೀನ್ ರಿಕ್ತಹಸ್ತನಾಗಿ ಅಸುನೀಗಿದ.

ಉಲ್ಲೇಖಗಳು

[ಬದಲಾಯಿಸಿ]
  1. Newcomb 2004.
  2. 1 2 Parr 1962, p. 540.
  3. "Greene, Robert (GRN575R)". A Cambridge Alumni Database. University of Cambridge.

ಗ್ರಂಥಸೂಚಿ

[ಬದಲಾಯಿಸಿ]
  • Newcomb, L.H. (2004). "Greene, Robert (bap. 1558, d. 1592)". Oxford Dictionary of National Biography (online ed.). Oxford University Press. doi:10.1093/ref:odnb/11418. {{cite encyclopedia}}: Cite has empty unknown parameters: |HIDE_PARAMETER15=, |HIDE_PARAMETER13=, |HIDE_PARAMETER21=, |HIDE_PARAMETER30=, |HIDE_PARAMETER14=, |HIDE_PARAMETER17=, |HIDE_PARAMETER32=, |HIDE_PARAMETER16=, |HIDE_PARAMETER25=, |HIDE_PARAMETER24=, |HIDE_PARAMETER9=, |HIDE_PARAMETER11=, |HIDE_PARAMETER4=, |HIDE_PARAMETER2=, |HIDE_PARAMETER28=, |HIDE_PARAMETER18=, |HIDE_PARAMETER20=, |HIDE_PARAMETER5=, |HIDE_PARAMETER19=, |HIDE_PARAMETER10=, |HIDE_PARAMETER33=, |HIDE_PARAMETER31=, |HIDE_PARAMETER29=, |HIDE_PARAMETER26=, |HIDE_PARAMETER8=, |HIDE_PARAMETER7=, |HIDE_PARAMETER23=, |HIDE_PARAMETER3=, and |HIDE_PARAMETER12= (help); Invalid |ref=harv (help) (Subscription or UK public library membership required.) ಟೆಂಪ್ಲೇಟು:DNBfirst
  • Parr, Johnstone (1962). "Robert Greene and His Classmates at Cambridge". PMLA. 77 (5): 536–43. doi:10.2307/460403. JSTOR 460403. S2CID 163500984.

ಹೊರಗಿನ ಕೊಂಡಿಗಳು

[ಬದಲಾಯಿಸಿ]




ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: