ರಾಜು ತಾಳಿಕೋಟಿ
ಗೋಚರ
ರಾಜು ತಾಳಿಕೋಟಿಯವರು (ಜನನ ೧೯೬೩ ಮರಣ ೧೩ ಅಕ್ಟೋಬರ್ ೨೦೨೫) ಕನ್ನಡ ನಾಟಕ ಮತ್ತು ಚಲನಚಿತ್ರ ಹಾಸ್ಯ ನಟ. (ಮೂಲ ಹೆಸರು: ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ). ಇವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದವರು. ತಾಳಿಕೋಟೆ ಅವರು 13 ಅಕ್ಟೋಬರ್ 2025 ರಂದು ತಮ್ಮ 62 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.[೧]
ರಾಜು ತಾಳಿಕೋಟಿ | |
|---|---|
| ಜನನ | ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ 1962 ಅಥವಾ 1963 |
| ಮರಣ | (aged 62) ಉಡುಪಿ, ಕರ್ನಾಟಕ, ಭಾರತ |
| ವೃತ್ತಿ |
|
| ಸಕ್ರಿಯರಾಗಿದ್ದ ವರ್ಷಗಳು | 2002–2025 |
ಇವರು ವಿಜಯಪುರ ಜಿಲ್ಲೆಯ ತಾಳಿಕೋಟಿ ನಗರದಲ್ಲಿ ವಾಸವಾಗಿದ್ದರು. ಇವರು ಖಾಸ್ಗತೇಶ್ವರ ನಾಟಕ ಮಂಡಳಿ, ತಾಳಿಕೋಟಿಯ ಮಾಲಿಕರು.[೨] ಇವರ ಪ್ರಖ್ಯಾತ ನಾಟಕಗಳು ಕಲಿಯುಗದ ಕುಡುಕ, ಕುಡುಕರ ಸಾಮ್ರಾಜ್ಯಅಸಲಿ ಕುಡುಕ, ಈ ನಾಟಕಗಳ ಆಡಿಯೊ ಕ್ಯಾಸೆಟಗಳನ್ನೂ ಬಿಡುಗಡೆ ಮಾಡಿದ್ದಾರೆ.
ಜನನ ೧೯೬೩ ಮರಣ ೧೩ ಅಕ್ಟೋಬರ್ ೨೦೨೫ ಮೈಲಾರ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ನಾಟಕದ ಟೆಂಟ್ ಗಳನ್ನು ಹಾಕುತ್ತಿದ್ದರು
ನಟಿಸಿದ ಚಲನಚಿತ್ರಗಳು
[ಬದಲಾಯಿಸಿ]- ಪಂಜಾಬಿ ಹೌಸ್ (2002)
- ಮನಸಾರೆ (2009)
- ಪಂಚರಂಗಿ (2010)
- ಜಾಕಿ (2010)
- ಸುಗ್ರೀವ (2010)
- ಅಪ್ಪು ಅಂಡ್ ಪಪ್ಪು (2010)
- ಮಲ್ಲಿಕಾರ್ಜುನ (2011)
- ಲೈಫು ಇಷ್ಟೇನೆ (2011)
- ರಾಜಧಾನಿ (2011)
- ಅಲೆಮಾರಿ (2012)
- ಮೈನಾ (2013)
- ಟೋಪಿವಾಲಾ (2013)
- ವೀರ (2013)
- ಪಾಥರಗಿತ್ತಿ (2015)
- ಯು ದಿ ಎಂಡ್ ಎ (2016)
- 100 (2021)
- ಶ್ರೀಮಂತ (2023)[೩]
ಉಲ್ಲೇಖಗಳು
[ಬದಲಾಯಿಸಿ]- ↑ TOI Entertainment Desk (13 October 2025). "Kannada actor-comedian Raju Talikote passes away due to cardiac arrest - Report". Archived from the original on 13 October 2025.
- ↑ Raju Talikoti SINDGI (BIJAPUR)
- ↑ "SreemantaU". The Times of India.