ವಿಷಯಕ್ಕೆ ಹೋಗು

ರಾಜಶೇಖರಯ್ಯ ಜಿ. ಮಠಪತಿ (ರಾಗಂ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ. ರಾಜಶೇಖರಯ್ಯ ಜಿ. ಮಠಪತಿ (ರಾಗಂ)
ಹುಟ್ಟು(೧೯೭೧-೦೯-೧೨)೧೨ ಸೆಪ್ಟೆಂಬರ್ ೧೯೭೧
ತೆಲಸಂಗ, ಅಥಣಿ ತಾಲೂಕು, ಬೆಳಗಾವಿ ಜಿಲ್ಲೆ
ಬೇರೆ ಹೆಸರುರಾಗಂ
ಉದ್ಯೋಗsಬರಹಗಾರ, ಪ್ರಾಧ್ಯಾಪಕ, ಚಲನಚಿತ್ರ ಸಂಗೀತ ಸಂಯೋಜಕ
ಹೆಂಡತಿ/ಗಂಡ
ಪದ್ಮಶ್ರೀ
(m. ೨೦೦೫)
ಮಕ್ಕಳು3

ಡಾ. ರಾಜಶೇಖರಯ್ಯ ಜಿ. ಮಠಪತಿ (ಜನನ 12 ಸೆಪ್ಟೆಂಬರ್ 1971) ರಾಗಂ ಎಂಬ ಕಾವ್ಯ ನಾಮದಿಂದ ಜನಪ್ರಿಯರಾದ ಇವರು ಒಬ್ಬ ಭಾರತೀಯ ಕವಿ, ನಾಟಕಕಾರ, ಕಾದಂಬರಿಕಾರ ಮತ್ತು ವಿಮರ್ಶಕರಾಗಿದ್ದಾರೆ. ರಾಗಂ ತಮ್ಮ ಬಾಲ್ಯ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಕರ್ನಾಟಕದ ಕೊನೆಯ ಪಟ್ಟಣವಾದ ಚಡಚಣದಲ್ಲಿ ಪೂರ್ಣಗೊಳಿಸಿದರು. ಅವರು ತಮ್ಮ ಪದವಿ ಅಧ್ಯಯನದಿಂದ ಪಿಎಚ್‌ಡಿವರೆಗೆ ಹೆಚ್ಚಿನ ಶಿಕ್ಷಣವನ್ನು ವಿಜಯಪುರ, ಸೋಲಾಪುರ, ಕೊಲ್ಲಾಪುರ ಮತ್ತು ಧಾರವಾಡ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪಡೆದರು. ಆರಂಭದಲ್ಲಿ ಅವರು ಮೈಸೂರಿನ ಸಿಐಐಎಲ್‌ನಲ್ಲಿ ಸಹಾಯಕ ಸಂಶೋಧಕರಾಗಿ ಕೆಲಸ ಮಾಡಿ, ನಂತರ ಬೆಳಗಾವಿ, ಹುಬ್ಬಳ್ಳಿ, ಗುಳೇದಗುಡ್ಡ, ಭಟ್ಕಳ, ಬಾಗಲಕೋಟೆ ಮತ್ತು ಬೇಲೂರುಗಳಲ್ಲಿ ಉಪನ್ಯಾಸಕ ಹುದ್ದೆಗಳನ್ನು ನಿರ್ವಹಿಸಿ, ಪ್ರಸ್ತುತ ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಜಯನಗರದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ರಾಗಂ ರವರು ಸಂಗೀತ ಸಂಯೋಜನೆ ಮತ್ತು ಚಲನಚಿತ್ರ ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದಾರೆ.[][]

"ಹೆಣ್ಣು ಹೇಳುವ ಅರ್ಧಸತ್ಯ", "ಓಶೋ ಎಂಬ ವಿದ್ರೋಹಿಯ ಕಥೆ", "ಅನಾದ", "ಬದುಕಬಾರದೆ ಬದುಕು," "ಗಲ್ಲು ಗಡಿಪಾರು", "ಕುರ್ಬಾನ್" ಮತ್ತು "ಶ್ರೀಸಾಮಾನ್ಯರಿಗಾಗಿ ಸಾಹಿತ್ಯ" ಸೇರಿದಂತೆ ಇನ್ನೂ ಅನೇಕ ಗಮನಾರ್ಹ ಕೃತಿಗಳು ಸೇರಿವೆ. 2012 ರಲ್ಲಿ, ಬೆಂಗಳೂರಿನ ಗಾಂಧಿ ಭವನದಿಂದ ಅವರ "ಗಾಂಧಿ ಅಂತಿಮ ದಿನಗಳು" ಕೃತಿಗೆ ಗಾಂಧಿ ಸ್ಮಾರಕನಿಧಿ ಪ್ರಶಸ್ತಿಯನ್ನು ನೀಡಲಾಯಿತು. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ರವರು ರಾಗಂ ಅವರ ಒಟ್ಟಾರೆ ಸಾಹಿತ್ಯ ಕೊಡುಗೆಗಾಗಿ 2013 ರಲ್ಲಿ "ಶ್ರೀವಿಜಯ ಪ್ರಶಸ್ತಿ" ನೀಡಿ ಗೌರವಿಸಿದೆ. ಅವರ "ಜಾಡಮಾಲಿಯ ಜೀವ ಕೇಳುವದಿಲ್ಲ" ಕೃತಿ 2018 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪುಸ್ತಕ ಸೊಗಸು ಬಹುಮಾನವನ್ನು ಪಡೆದುಕೊಂಡಿದೆ ಮತ್ತು ಅವರ "ಜಗದ್ವಂದ್ಯ ಭಾರತಂ" ಕೃತಿಯು 2019 ರ ಅತ್ಯುತ್ತಮ ಕಾದಂಬರಿ ಎಂದು ಶಿವಮೊಗ್ಗದ ಕನ್ನಡ ಸಂಘದ ಕುವೆಂಪು ಸ್ಮಾರಕ ಪ್ರಶಸ್ತಿಯೊಂದಿಗೆ ಗುರುತಿಸಲ್ಪಟ್ಟಿದೆ. ಅವರ "ಬದುಕಬಾರದೆ ಬದುಕು" ಕೃತಿಯು ಕಲಬುರಗಿ ವಿಶ್ವವಿದ್ಯಾಲಯದಿಂದ 2022 ರಲ್ಲಿ ಬಸವ ಪುರಸ್ಕಾರವನ್ನು ಗಳಿಸಿತು. ಕರ್ನಾಟಕ ಗಡಿ ಪ್ರಾಧಿಕಾರವು 2025 ರಲ್ಲಿ ಮಹಾರಾಷ್ಟ್ರದ ಮಂಗಳವೇಡೆ (ಅರಳಿ)ತಾಲೂಕಿನಲ್ಲಿ ನಡೆಸಿದ ಅಂತರ್ರರಾಜ್ಯ' ಗಡಿನಾಡ ಸಾಹಿತ್ಯ ಸಂಸ್ಕೃತಿ ' ( ೨ ದಿನಗಳ)ಉತ್ಸವದ ಸರ್ವಾಧ್ಯಕ್ಷರನ್ನಾಗಿಸಿ ಅಭಿನಂದಿಸಿದೆ. ಆಂಧ್ರಪ್ರದೇಶದ ರಿದಂ ಅಕಾಡೆಮಿಯು ಬೆಂಗಳೂರಿನಲ್ಲಿ 2025ರಲ್ಲಿ ನಡೆಯಿಸಿದ ಅಂತರಾಷ್ಟ್ರ ನೃತ್ಯ- ಸಂಸ್ಕೃತಿ -ಸಾಹಿತ್ಯ ಲಾಸ್ಯಂ ಉತ್ಸವದಲ್ಲಿ ರಾಗಂ ಅವರಿಗೆ 'ಗುರು ಸಮ್ಮಾನ' ಪ್ರಶಸ್ತಿ ನೀಡುವುದರ ಮೂಲಕ ಗೌರವಿಸಿದೆ . ಕಲ್ಯಾಣ ಕರ್ನಾಟಕದ ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನ ರಾಗಂ ಅವರ ಸಮಗ್ರ ಸಾಹಿತ್ಯ ಸಾಧನೆಯನ್ನು ಗುರುತಿಸಿ2025 ರಲ್ಲಿ ಭಾರತೀಯ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ ರಾಗ0 ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಗಂ ಅವರ ಕಾದಂಬರಿಯನ್ನು ಆಧರಿಸಿದ "ದಂಡಿ" ಚಿತ್ರವು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡನೇ ಬಹುಮಾನವನ್ನು ಗಳಿಸಿದೆ. ಹಿಂದಿ ಮತ್ತು ಕನ್ನಡ ಎರಡರಲ್ಲೂ ಏಕಕಾಲದಲ್ಲಿ ನಿರ್ಮಿಸಲಾದ "ನಸ್ಸಾಬ್" ಚಿತ್ರದ ಚಿತ್ರಕಥೆ, ಸಂಭಾಷಣೆ, ಸಂಗೀತ ಮತ್ತು ಸಾಹಿತ್ಯದ ಜವಾಬ್ದಾರಿ ರಾಗಂ ಅವರದ್ದಾಗಿದೆ.[]

ಜೀವನ ಮತ್ತು ಸಾಹಿತ್ಯ

[ಬದಲಾಯಿಸಿ]

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ತೆಲಸಂಗದಲ್ಲಿ 1971 ರಲ್ಲಿ ಜನಿಸಿದ ರಾಗಂ, ಕರ್ನಾಟಕದ ಕೊನೆಯ ಪಟ್ಟಣವಾದ ಚಡಚಣದಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರೈಸಿದರು. ಅವರು ತಮ್ಮ ಪದವಿ ಅಧ್ಯಯನದಿಂದ ಪಿಎಚ್‌ಡಿವರೆಗೆ ವಿಜಯಪುರ, ಸೋಲಾಪುರ, ಕೊಲ್ಲಾಪುರ ಮತ್ತು ಧಾರವಾಡ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಶಿಕ್ಷಣವನ್ನು ಪಡೆದರು.

ಕುಟುಂಬ

[ಬದಲಾಯಿಸಿ]

ರಾಗಂ ನವೆಂಬರ್ 10, 2005 ರಂದು ಪದ್ಮಶ್ರೀ ಅವರನ್ನು ವಿವಾಹವಾದರು. ರಾಗಂ ಅವರಿಗೆ ಸಿದ್ಧಾರ್ಥ ಮತ್ತು ಕಬೀರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ, ತರಂಗಿಣಿ ಎಂಬ ಒಬ್ಬಳು ಮಗಳು ಇದ್ದಾಳೆ.

ವೃತ್ತಿಜೀವನ

[ಬದಲಾಯಿಸಿ]

ರಾಗಂ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದಾಗ, ಆರಂಭದಲ್ಲಿ ಮೈಸೂರಿನ ಸಿಐಐಎಲ್‌ನಲ್ಲಿ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡಿದರು, ನಂತರ ಬೆಳಗಾವಿ, ಹುಬ್ಬಳ್ಳಿ, ಗುಳೇದಗುಡ್ಡ, ಭಟ್ಕಳ, ಬಾಗಲಕೋಟೆ ಮತ್ತು ಬೇಲೂರುಗಳಲ್ಲಿ ಉಪನ್ಯಾಸಕ ಹುದ್ದೆಗಳನ್ನು ವಹಿಸಿಕೊಂಡರು. ಪ್ರಸ್ತುತ, ಅವರು ಬೆಂಗಳೂರಿನ ವಿಜಯನಗರದ ಸರ್ಕಾರಿ ಪ್ರಥಮ ಸರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದಾರೆ.

ಸಾಹಿತ್ಯ

[ಬದಲಾಯಿಸಿ]

ಕವನ ಸಂಕಲನಗಳು

[ಬದಲಾಯಿಸಿ]
  • ಅರ್ಪಣೆ
  • ಎರಡು ದಡಗಳ ನಡುವೆ
  • ಒಂದಿಷ್ಟು ಕರುಣೆ, ಮತ್ತಷ್ಟು ನೀರು
  • ನಿಶಾಗಾನ (ಕನ್ನಡ ಮತ್ತು ಇಂಗ್ಲಿಷ್)
  • ಇರುವಷ್ಟು ಕಾಲ ಇರುವಷ್ಟೇ ಕಾಲ
  • ಕೀಲುಗೊಂಬೆಯ ಕಾತರ

ಕಾದಂಬರಿಗಳು

[ಬದಲಾಯಿಸಿ]
  • ಜಗದ್ವಂದ್ಯ ಭಾರತಂ, (ಕನ್ನಡ,ಇಂಗ್ಲಿಷ್ & ತೆಲಗು)
  • ದಂಡಿ (ಕನ್ನಡ ಮತ್ತು ಇಂಗ್ಲಿಷ್)

ಕಥೆಗಳು

[ಬದಲಾಯಿಸಿ]
  • ಅಳಲು
  • ಹೆಣ್ಣು ಹೇಳುವ ಅರ್ಧಸತ್ಯ: ಈ ಸಾಕಿಯರ ಕೈ ಸೋಕಿ
  • ಸುಪಾರಿಸ್ವಾಮಿ ಮತ್ತು ಸಕೀನಾ ಕತೆಗಳು
  • ದೇವರ ಕೊಂದವಳು

ನಾಟಕಗಳು

[ಬದಲಾಯಿಸಿ]
  • ಗಾಂಧಿ ಮತ್ತು ಗೂಂಡಾ (2002)
  • ಅಮರತ್ವಕ್ಕೆ ಆಹ್ವಾನ (2008)
  • ಗಾಂಧಿ ಅಂತಿಮ ದಿನಗಳು

ಜೀವನ ಚರಿತ್ರೆ

[ಬದಲಾಯಿಸಿ]
  • ಹಠಯೋಗಿ (1996)
  • ಓಶೋ ನಃ ಭೂತೋ ನಃ ಭವಿಷ್ಯತಿ (2006)
  • ಫಕೀರನ ಫಿಲ್ಮಿ ದುನಿಯಾ (2009)
  • ಓಶೋ ಒಂದು ಕಿರಣದ ಪಯಣ (2009)
  • ಜಿ ಬಿ ಜೋಶಿ, ಶತಮಾನ ಕಂಡ ಸಾಹಿತಿ (2010)
  • ಓಶೋ ಎಂಬ ದ್ರೋಹಿಯ (2011)
  • ಪರದೇಸಿ ಫಿಲ್ಮಿ ಪಯಣ (2011)
  • ಗಾಂಧಿ ಅಂತಿಮ ದಿನಗಳು (2012)
  • ಕೆ.ಎ. ಅಬ್ಬಾಸ್ (2012)
  • ಗಾಂಧಿ ಮುಗಿದ ಅಧ್ಯಾಯ (2013)
  • ಬತ್ತಲೆಗೆ ಬೆರಗಾಗಬಾರದು (2015)
  • ಗಾಂಧಿ (2015)
  • ಜಾನ್‌ ಕೀಟ್ಸ್: ನೀರ ಮೇಲೆ ನೆನಪ ಬರೆದು (2017)
  • ದಿಗಂಬರವೆ ದಿವ್ಯಾಂಬರ (2017)

ಸಾಹಿತ್ಯವಿಮರ್ಶೆ

[ಬದಲಾಯಿಸಿ]
  • ಅವಲೋಕನ (1997)
  • ಲಿಂಗದೇವರು ಹಳೆಮನೆಯವರ ಅಂತೆಂಬರಗಂಡ (2002)
  • ಪ್ರಚಲಿತ ಕನ್ನಡ ಕಾವ್ಯ (2004)
  • ಶಬ್ಧಸೂತಕದಿಂದ (2010)
  • ಬೆಶರತ್ (2010)
  • ವಿಬಂಧ (2010)
  • ಕನ್ನಡಕ್ಕೊಂದು ಕನ್ನಡಿ (2011)
  • ಬಹಿಷ್ಕೃತರ ಬೆಳಕಿನಲ್ಲಿ (2013)
  • ಹೂವ ತಂದವರು (2016)
  • ಶ್ರೀಸಾಮಾನ್ಯರಿಗಾಗಿ ಸಾಹಿತ್ಯ (2020)
  • ಕಡಲಾಯಿತು ಕನ್ನಡ (2021)

ಅನುವಾದ

[ಬದಲಾಯಿಸಿ]
  • ಲಾಜವಂತಿ (2007)
  • ಸ್ಪರ್ಶ (2007)
  • ವಿದಾಯ (2007)
  • ಒಂದು ದಿನದ ರಾಜ (2007)
  • ಅಮರತ್ವಕ್ಕೆ ಆಹ್ವಾನ (2008)
  • ಜಗತ್ಪ್ರಸಿದ್ಧ ಭಾಷೆಗಳು (2010)
  • ಲೋಕ ವಿಖ್ಯಾತರ ನುಡಿ ಮುತ್ತುಗಳು (2010)
  • ವಿಶ್ವ ಶ್ರೇಷ್ಠ ಮಹಿಳೆಯರ ಭಾಷಣಗಳು (2010)
  • ಜಗತ್ತಿನ ಆಯ್ದ ಮಹಾತ್ಮರ ಭಾಷಣಗಳು (2010)
  • ಪ್ರಪಂಚದ ಶ್ರೇಷ್ಠ ತತ್ವಜ್ಞಾನಿಗಳ ಭಾಷಣಗಳು (2011)
  • ಮಹಾನ್‌ ಯೋಧರ ಮಹಾನ್‌ ಭಾಷಣಗಳು (2011)
  • ವಿಶ್ವಮಾನ್ಯ ಸಾಹಿತಿಗಳ ಭಾಷಣಗಳು (2011)
  • ನೊಬೆಲ್‌ ಪ್ರಶಸ್ತಿ ವಿಜೇತರ ಭಾಷಣಗಳು (2011)
  • ವಿಶ್ವ ವಿಖ್ಯಾತ ರಾಜಕರಣಿಗಳ ಭಾಷಣಗಳು (2011)
  • ಬದುಕು ಬದಲಿಸುವ ಮಾತುಗಳು (2012)
  • ಗಾಂಧಿ ಸೂತ್ರ (2012)
  • ಭಗ್ನ ಪ್ರೀತಿ (2012)
  • ಜಾಡಮಾಲಿ ಜೀವ ಕೇಳುವುದಿಲ್ಲ (2018)
  • ನೇಪಾಳಿ ಕವಿತೆಗಳು (2019)

ಅಂಕಣಬರಹ

[ಬದಲಾಯಿಸಿ]
  • ನನ್ನೊಳಗಿನ ನಾನು (2007)
  • ಕಾವ್ಯಕ್ಕೆ ಉರುಳು ಭಾಗ-1 (2014)
  • ಕಾವ್ಯಕ್ಕೆ ಉರುಳು ಭಾಗ-2 (2015)
  • ಕಾವ್ಯಕ್ಕೆ ಉರುಳು ಭಾಗ-3 (2015)
  • ಪ್ರೀತಿ ನಲವತ್ತು ರೀತಿ (2015)
  • ಕಾವ್ಯಕ್ಕೆ ಉರುಳು ಭಾಗ-4 (2016)
  • ಮಹಿಳೆ ಎಂಬ ಮುರಕ್ಷರ (2016)
  • ಕುರ್ಬಾನ್ (2016)
  • ರಕ್ತ ಮತ್ತು ರಾಜಕಾರಣ (2017)
  • ಗಲ್ಲು ಗಡಿಪಾರು (2017)

ರಾಗಂ ಸಾಹಿತ್ಯದ ಸಂಪಾದಕೀಯ

[ಬದಲಾಯಿಸಿ]
  • ಬರಹವೆಂಬ ನಿತ್ಯಧ್ಯಾನ (2018)
  • ದಂಡಿ: ಮಾತು, ವಿಮರ್ಶೆ – ಪರಾಮರ್ಶೆ (2022)

ಪತ್ರ ಸಾಹಿತ್ಯ

[ಬದಲಾಯಿಸಿ]
  • ಇಂತಿ ನಿನ್ನ ಬಾಪು (2013)
  • ಮನುಷ್ಯ ಮರವಾಗಬೇಕು: ಲೆಟರ್ಸ್ ಆಫ್‌ ಜಾನ್ ಕೀಟ್ಸ್ (2021)

ಚಿಂತನ ಸಾಹಿತ್ಯ

[ಬದಲಾಯಿಸಿ]
  • ಬದುಕ ಬಾರದೆ ಬದುಕು (2020)
  • ಅನಾದ: ಬರಹಗಾರನ ಮರಣ ಮುಟ್ಟದ ಮಾತು (2022)

ನೆನಪು

[ಬದಲಾಯಿಸಿ]
  • ಸಂತೆಯಿಂದ ಸಂತನೆಡೆಗೆ: ಯೋಗಸ್ಥಃ (2024) (ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ತೆಲಗು)

ರಾಗಂ ಚಲನಚಿತ್ರಗಳು

[ಬದಲಾಯಿಸಿ]

ರಾಗಂ ನಾಟಕಗಳ ಪ್ರದರ್ಶನ

[ಬದಲಾಯಿಸಿ]
  • 'ಗಾಂಧಿಯವರ ಕೊನೆಯ ದಿನಗಳು', ರಂಗ ಆರಾಧನಾ ತಂಡ, ಸವದತ್ತಿ
  • 'ಲೆಟರ್ಸ ಟು ಡೆತ್', ರಂಗ ಚಂದಿರ, ಬೆಂಗಳೂರು - 2022
  • 'ನಸಾಬ್', ಒನ್‌ ಮ್ಯಾನ್‌ ಶೋ, ಗ್ರೀನ್‌ ಸ್ಟೇಜ್‌ ವಿಜಯ ಅವರಿಂದ - 2022

ಅಭಿನಂದನೆಗಳು ಮತ್ತು ಪ್ರಶಸ್ತಿಗಳು

[ಬದಲಾಯಿಸಿ]

[ಸೂಕ್ತ ಉಲ್ಲೇಖನ ಬೇಕು]

  • ನೇಹಾ ಸಂಸ್ಕೃತಿ ಫಾರ್ಮ್, ಕೊಪ್ಪಳ ರವರಿಂದ 2008 ರಲ್ಲಿ ಸನ್ಮಾನ
  • ಮುನ್ಸಿಪಲ್‌ ಕೌನ್ಸಿಲ್, ಬೇಲೂರು ರವರಿಂದ ಸಾಹಿತ್ಯ ಸಾಧನೆಗಾಗಿ ಪೌರ ಸನ್ಮಾನ - 2009
  • ವಿಶ್ವ ರೂರಲ್‌ ಡೆವಲಪ್‌ಮೆಂಟ ಟ್ರಸ್ಟ್, ಬೇಲೂರು ರವರಿಂದ 2010 ರಲ್ಲಿ ಸನ್ಮಾನ
  • ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಅರೇಹಳ್ಳಿ 2011 ರಲ್ಲಿ ಸನ್ಮಾನ
  • ವೇಲಾಪುರಿ ಸಾಹಿತ್ಯ ಮತ್ತು ಸಂಸ್ಕೃತಿ ಫೋರಂ, ಬೇಲೂರು, 2012
  • 2011-12ರ ‘ಗಾಂಧಿ ಅಂತಿಮ ದಿನಗಳು’ ಕರ್ನಾಟಕ ರಾಜ್ಯ ಗಾಂಧಿ ಸ್ಮಾರಕನಿಧಿ ಪ್ರಶಸ್ತಿ
  • ಡಿ.ಎಸ್. ಕರ್ಕಿ ಪ್ರಶಸ್ತಿ (‘ಗಾಂಧಿ ಮುಗಿದ ಅಧ್ಯಾಯ’ ಕೃತಿಗೆ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ -2015
  • ರೇಣುಕ ಬಸವ ಭೂಷಣ ಪ್ರಶಸ್ತಿ, ಕೊಚೇರಿ 2015
  • ಬುದ್ಧ ಶಾಂತಿ ಪ್ರಶಸ್ತಿ, ವಿಶ್ವ ಚೇತನ ಟ್ರಸ್ಟ್, ಬೆಂಗಳೂರು 2015
  • ಶ್ರೀವಿಜಯಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು 2016
  • ಸಾ. ಜಾ. ನಾಗಲೋಟಿಮಠ ಸಾಹಿತ್ಯ ರತ್ನಪ್ರಶಸ್ತಿ (ಗಾಂಧಿ ಪುಸ್ತಕಕ್ಕಾಗಿ) 2016
  • ಅಡ್ವೈಸರ್‌ ಸಾಹಿತ್ಯ ಪ್ರಶಸ್ತಿ, (ಗಾಂಧಿ ಪುಸ್ತಕಕ್ಕಾಗಿ) ಮಂಡ್ಯ – 2017
  • ಕನ್ನಡ ಸೇವಾ ರತ್ನ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು-2018
  • ಸಂಗಮ ಸಿರಿ ಸಾಹಿತ್ಯ ಪ್ರಶಸ್ತಿ, ಅಮೀನಗಡ-2018
  • 10ನೇ ಅಖಂಡ ಇಂಡಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ, 26ನೇ ಜುಲೈ, 2018 ರಂದು ಚಡಚಣದಲ್ಲಿ
  • ಚೇತನ ಸಾಹಿತ್ಯ ಪುರಸ್ಕಾರ (‘ಜಾಡಮಾಲಿಯ ಜೀವ ಕೇಳುವಲ್ಲಿ’ ಕೃತಿಗೆ), ಧಾರವಾಡ-2019
  • ‘ಜಾಡಮಾಲಿಯ ಜೀವ ಕೇಳುವುದಿಲ್ಲʼ ಕೃತಿಗೆ 2018ರ ಪುಸ್ತಕ ಸೊಗಸು ಮತ್ತು ಮುದ್ರಣ ಸೊಗಸು’ ಪ್ರಶಸ್ತಿ ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು - 2019
  • ‘ಜಗದ್ವಂದ್ಯ ಭಾರತಂ’ ಕಾದಂಬರಿಗೆ ಕರ್ನಾಟಕ ಸಂಘ, ಶಿವಮೊಗ್ಗ ರವರು ಕುವೆಂಫು ಹೆಸರಲ್ಲಿ ಕೊಡಮಾಡುವ 2019 ಅತ್ಯುತ್ತಮ ಕಾದಂಬರಿ ಪ್ರಶಸ್ತಿ, 20ನೇ ಜೂನ್, 2020
  • 2020-21ನೇ ಸಾಲಿನ ʼಅಜೂರ ಪ್ರತಿಷ್ಠಾನ ಪ್ರಶಸ್ತಿ’ (ಬದುಕಬಾರದೆ ಬದುಕು ಕೃತಿಗೆ) ಹಾರೂಗೇರಿ, 08ನೇ ಫೆಬ್ರವರಿ 2021
  • 50ನೇ ಹುಟ್ಟುಹಬ್ಬದ ಆಚರಣೆಯೊಂದಿಗೆ ಸಂಗಮ ಪ್ರತಿಷ್ಠಾನ, ಹುನಗುಂದ ಮತ್ತು ಸಾಹಿತ್ಯ ಬಳಗದಿಂದ 11ನೇ ಸೆಪ್ಟೆಂಬರ್ 2021 ರಂದು ಅಭಿನಂದನೆ
  • ಬೆಳದಿಂಗಳ ಕಾವ್ಯ ವೇದಿಕೆ, ಗುಳೇದಗುಡ್ಡದ ವತಿಯಿಂದ 12ನೇ ಸೆಪ್ಟೆಂಬರ್ 2021 ರಂದು 50 ನೇ ಜನ್ಮದಿನದ ಶುಭಾಶಯಗಳು
  • ಶಿಕ್ಷಕ ಸನ್ಮಾನ: ಲಯನ್ಸ್‌ ಕ್ಲಬ್‌ ಆಫ್‌ ಬೆಂಗಳೂರು ಕಿಂಗ್ಸ್‌ 5ನೇ ಸೆಪ್ಟೆಂಬರ್ 2021
  • ‘ದಂಡಿ’ ಕಾದಂಬರಿ ಆಧಾರಿತ ಚಲನಚಿತ್ರಕ್ಕೆ ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (BIFF) 2 ನೇ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ 3 - 10 ಮಾರ್ಚ್ 2022 [][][]
  • 08ನೇ ಮೇ 2022 ರಂದು ಕಲಬುರ್ಗಿಯ ಜನ ಕಲ್ಯಾಣ ಟ್ರಸ್ಟ್‌ನಿಂದ ‘ಬದುಕಬಾರದೆ ಬದುಕು’ ಪುಸ್ತಕಕ್ಕೆ ‘ಬಸವ ಪುರಸ್ಕಾರ’ ರಾಜ್ಯ ಮಟ್ಟದ ಪ್ರಶಸ್ತಿ.
  • ʼಕಾಯಕ ಪ್ರಶಸ್ತಿʼ, ಬೆನಕನಹಳ್ಳಿ, ವಿಜಯಪುರ ಜಿಲ್ಲೆ – 06.03.2024
  • ನೂರು ಕೃತಿಗಳ ದಾರಿ ಕ್ರಮಿಸಿದ ಹಿನ್ನೆಲೆಯಲ್ಲಿ ʼರಾಗಂ ನೂರೊಂದು ರಾಗʼ ಅಭಿನಂದನಾ ಸಮಾರಂಭ, ಕಂದಗಲ್‌ ಹನುಮಂತರಾಯ ರಂಗ ಮಂದಿರ, ವಿಜಯಪುರ - 10.03.2024
  • ʼಸಾಹಿತ್ಯ ಸಂತʼ ಪುರಸ್ಕಾರ, ಸಮಸ್ತ ಗುಡೂರಿನ (ಇಳಕಲ್ಲ ತಾಲ್ಲೂಕು ಬಾಗಲಕೋಟೆ ಜಿಲ್ಲೆ) ಸಾಹಿತ್ಯ ಬಳಗ ಮತ್ತು ನಾಗರೀಕರಿಂದ – 26.05.2024
  • ʼಸಾಹಿತ್ಯ ದಿಗ್ಗಜರು ಪ್ರಶಸ್ತಿʼ, ಆಲೂರು ವೆಂಕಟರಾಯ ಸಭಾಭವನ, ಧಾರವಾಡ – 02.06.2024

ಉಲ್ಲೇಖಗಳು

[ಬದಲಾಯಿಸಿ]
  1. "ಯಾದಗಿರಿ | ಸಗರನಾಡಿಗೆ ಹಿರಿದಾದ ಇತಿಹಾಸವಿದೆ : ಸಾಹಿತಿ ರಾಜಶೇಖರ ಮಠಪತಿ". 17 December 2024.
  2. https://m.vijaykarnatakaepaper.com/imageview_254347_23117436_4_1_21-11-2024_10_i_1_sf.html
  3. Anandraj, Shilpa (5 July 2023). "Shivu Jamkhandi talks about 'Nasab', based on an autobiography". The Hindu.
  4. "ಮಹಾತ್ಮಾ ಗಾಂಧೀಜಿ ಸಾರಥ್ಯದಲ್ಲಿ 'ದಂಡಿ' ಸತ್ಯಾಗ್ರಹ ನಡೆಯುತ್ತಿದಾಗಲೇ, ಉತ್ತರ ಕನ್ನಡದಲ್ಲೂ ಹೋರಾಟ ಶುರು: ವಿಶಾಲ್ ರಾಜ್".
  5. "Tara, Suchendra Prasad share screen space in Dandi". The Times of India. 23 March 2021.
  6. "DandiUA". The Times of India.
  7. "'ದಂಡಿ'ಯಾಗಿ ಬರಲಿದೆ ಉತ್ತರಕನ್ನಡದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ". 19 March 2021.