ರವಿ ಡಿ. ಚನ್ನಣ್ಣನವರ್

ವಿಕಿಪೀಡಿಯ ಇಂದ
Jump to navigation Jump to search
ರವಿ ಡಿ. ಚನ್ನಣ್ಣನವರ್
Ravi D. Channannavar
Ravi D Channannavar.jpg

ಭಾರತೀಯ ಪೊಲೀಸ್ ಸೇವೆ, ಕರ್ನಾಟಕ ಸರ್ಕಾರ
ಅಧಿಕಾರ ಅವಧಿ
೮ ಸೆಪ್ಟೆಂಬರ್ ೨೦೧೧ – ಪ್ರಸ್ತುತ

ಭಾರತೀಯ ಪೊಲೀಸ್ ಸೇವೆ, ಮೈಸೂರು
ಅಧಿಕಾರ ಅವಧಿ
೨೪ ಜೂನ್ ೨೦೧೩ – ೧೭ ಮಾರ್ಚ ೨೦೧೮
ಪೂರ್ವಾಧಿಕಾರಿ ಎಸ್ಪಿ ಅಭಿನವ್ ಖಾರೆ
ಉತ್ತರಾಧಿಕಾರಿ ಅಮಿತ್ ಸಿಂಗ್
ವೈಯುಕ್ತಿಕ ಮಾಹಿತಿ
ಜನನ ರವಿ ಧ್ಯಾಮಪ್ಪ ಚನ್ನಣ್ಣನವರ್
೨೩ ಜುಲೈ ೧೯೮೫
ಗದಗ್, ಕರ್ನಾಟಕ, ಭಾರತ
ರಾಷ್ಟ್ರೀಯತೆ ಭಾರತೀಯ
ಸಂಗಾತಿ(ಗಳು) ಡಾ.ತ್ರಿವೇಣಿ
ಮಕ್ಕಳು
ಅಭ್ಯಸಿಸಿದ ವಿದ್ಯಾಪೀಠ ಎಸ್.ಜೆ.ಜೆ.ಎಮ್ ಮುಳಗುಂದ, ಧಾರವಾಡ
ಕರ್ನಾಟಕ ಕಾಲೇಜು ಧಾರವಾಡ
ವೃತ್ತಿ ನಾಗರಿಕ ಸೇವಕ

ರವಿ ಧ್ಯಾಮಪ್ಪ ಚನ್ನಣ್ಣನವರ್ ಕರ್ನಾಟಕದ ಒಬ್ಬ ಭಾರತೀಯ ನಾಗರಿಕ ಸೇವಕ. ಇವರು ೨೦೦೮ ರ ತಂಡದಲ್ಲಿ ತರಭೇತು ಪಡೆದ ಕರ್ನಾಟಕ ಪೊಲೀಸ್ ಅಧಿಕಾರಿ. ಗದಗ್ ಜಿಲ್ಲೆಯವರಾದ ರವಿ ಡಿ.ಸಿ ಅವರು ನೀಲಗುಂದ ಸರ್ಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪ್ರಾರಂಭಿಸಿದರು[೧].ಇವರು ಮೊದಲು ಧಾರವಾಡ ಮತ್ತು ಹಾಸನ ಜಿಲ್ಲೆಗಳಲ್ಲಿ ಎಸ್ಪಿ ಆಗಿ ಸೇವೆ ಸಲ್ಲಿಸಿದ್ದರು[೧].

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

 • ರವಿ ಅವರು ಗದಗ ತಾಲೂಕಿನ ನೀಲಗುಂದ ಗ್ರಾಮದಲ್ಲಿ ೨೩ ಜುಲೈ ೧೯೮೫ ರಂದು ಧ್ಯಾಮಪ್ಪ ಚನ್ನಣ್ಣನವರ್ ಹಾಗೂ ರತ್ನಮ್ಮ ದಂಪತಿಗೆ ಜನಿಸಿದರು. ಇವರು ಮೂಲತಃ ಕೃಷಿ ಕಾರ್ಮಿಕರ ಕುಟುಂಬಕ್ಕೆ ಸೇರಿದವರು. ಗದಗದ ನೀಲಗುಂದ ಸರ್ಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪ್ರಾರಂಭಿಸಿದರು. ಬಡ ಕುಟುಂಬದಲ್ಲಿ ಹುಟ್ಟಿದ ಇವರು ಶಿಕ್ಷಣದ ವೆಚ್ಚ ಭರಿಸಲು ಹೊಟೆಲ್‍ಗಳಲ್ಲಿ ಕೆಲಸ ಮಾಡುತ್ತಿದ್ದರು.
 • ೨೦೦೮ರಲ್ಲಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ) ನಡೆಸಿದ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ೭೦೩ ನೇ ಸ್ಥಾನ ಪಡೆದರು[೨].ಗದಗದಲ್ಲಿ ಪದವಿ ಪೂರ್ವ ವಿದ್ಯಾಭ್ಯಾಸ ನಡೆಸುತ್ತಿದ್ದಾಗ ತಮ್ಮ ಶೈಕ್ಷಣಿಕ ವೆಚ್ಚಗಳು ಹಾಗೂ ಕೌಟುಂಬಿಕ ಜವಾಬ್ದಾರಿಗಳನ್ನು ನಿಭಾಯಸಲು ಅವರು ಅರೆಕಾಲಿಕ ಕೆಲಸ ಮಾಡುತ್ತಿದ್ದರು.
 • ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಬಿ.ಎ. ಪದವಿಗೆ ಸೇರ್ಪಡೆಗೊಂಡರು.[೨]
 • ನಂತರ ರವಿ ಅವರು ಅರೆಕಾಲಿಕ ಕೆಲಸ ಹಾಗೂ ಶೈಕ್ಷಣಿಕ ಅಧ್ಯಯನವನ್ನು ಮುಂದುವರಿಸಿದರು. ಸಂಜೆ ೬ ಗಂಟೆಯಿಂದ-ಮಧ್ಯರಾತ್ರಿಯವರೆಗೆ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದರು[೩].
 • ಮೇ ೨೦೦೭ ರಲ್ಲಿ, ಐಎಎಸ್ ಪರೀಕ್ಷೆಯ ತರಭೇತು ತರಗತಿಗಳಿಗೆ ಹಾಜರಾಗಲು ರವಿ ಅವರು ಹೈದರಾಬಾದ್ ಗೆ ತೆರಳಿದರು. ಅವರು ಆರ್ಥಿಕ ವೆಚ್ಚವನ್ನು ನಿಭಾಯಿಸುವಂತ ಇನ್ಸ್ಟಿಟ್ಯೂಟ್ ಸೇರಿ ಶ್ರದ್ಧೆಯಿಂದ ಪರೀಕ್ಷೆಗೆ ತಯಾರಾಗಲು ಪ್ರಾರಂಭಿಸಿದರು[೩]. ಇವರು ಮಾರ್ಚ್ ೧೨, ೨೦೧೨ ರಂದು ಡಾ.ತ್ರಿವೇಣಿಯವರನ್ನು ವಿವಾಹವಾದರು[೪].

ವೃತ್ತಿಜೀವನ[ಬದಲಾಯಿಸಿ]

ಇತರ ಸೇವೆಗಳು[ಬದಲಾಯಿಸಿ]

 • ಇವರು ಬೆಳಗಾವಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿದ್ದ ಸಮಯದಲ್ಲಿ ನಡೆದ ಕೋಮು ಗಲಭೆಯಲ್ಲಿ ಕಾರ್ಯ ನಿರ್ವಹಿಸಿದರು. ಅಲ್ಲಿ ತೊಂದರೆಕೋರರ ​​ಮನೆಗಳನ್ನು ಪ್ರವೇಶಿಸಿ ಅವರನ್ನು ಬಂಧಿಸಿದರು[೧].
 1. ೨೦೧೫ ರಲ್ಲಿ ಶಿವಮೊಗ್ಗದಲ್ಲಿ ನಡೆದ ಹಿಂಸಾಚಾರವನ್ನು ಚಾಣಾಕ್ಷ್ಯತನದಿಂದ ಹತೋಟಿಗೆ ತರುವಲ್ಲಿ ಯಶಸ್ವಿಯಾದರು[೪].
 2. ಮಹಿಳಾ ಸುರಕ್ಷತೆಯನ್ನು ಉತ್ತೇಜಿಸಲು "ಒನಕೆ ಓಬವ್ವ ಪಡೆ" ಎಂಬ ತಂಡವನ್ನು ರಚಿಸಿದರು. ಈ ತಂಡವು ಇಬ್ಬರು ಮಹಿಳಾ ಪೊಲೀಸ್ ಉಪ-ತನಿಖಾಧಿಕಾರಿಗಳನ್ನು ಮತ್ತು ೧೦ ಮಹಿಳಾ ಪೊಲೀಸ್ ಪೇದೆಗಳನ್ನು ಒಳಗೊಂಡಿರುತ್ತದೆ. ಈ ತಂಡದ ಸದಸ್ಯರು ಮಹಿಳೆಯರನ್ನು ಹಿಂಬಾಲಿಸುವುದು, ಚುಡಾಯಿಸುವುದು, ಕಳಪೆ ಟೀಕೆಗಳನ್ನು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾರೆ[೪].
 3. ಸ್ವಯಂ ಸುರಕ್ಷತೆ ತರಬೇತಿ, ಜನ ಸ್ನೇಹಿ ಪೊಲೀಸ್ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು[೪].
 4. ಪೊಲೀಸ್ ಸಿಬ್ಬಂದಿಗೆ ಸಹಾಯ ಮಾಡಲು ಪೊಲೀಸ್ ಕ್ಯಾಂಟೀನ್ ಮತ್ತು ಪೊಲೀಸ್ ವೈದ್ಯಕೀಯ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು[೪].
 5. ರೈತರಿಗೆ ಸಹಾಯವಾಗಲೆಂದು "ನಮ್ಮೂರಲೊಬ್ಬ ಸಾಧಕ" ಯೋಜನೆಯನ್ನು ಪ್ರಾರಂಭಿಸಿದರು[೪].
 6. ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅವರು ಉಚಿತ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(ಯು.ಪಿ.ಎಸ್.ಸಿ) ಪರೀಕ್ಷೆಗೆ ತರಬೇತಿ ನೀಡಲು ಪ್ರಾರಂಭಿಸಿದರು[೪].

ಉಲ್ಲೇಖಗಳು[ಬದಲಾಯಿಸಿ]