ವಿಷಯಕ್ಕೆ ಹೋಗು

ರಣಜಿತ್ ಸಿಂಹ ಡಿಸಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಂಜಿತ್‌ಸಿಂಹ ಡಿಸಲೆ
ಜನನ
ಪರಿತೆವಾಡಿ, ಮಹಾರಾಷ್ಟ್ರ
ರಾಷ್ಟ್ರೀಯತೆಭಾರತೀಯ
ವೃತ್ತಿಶಿಕ್ಷಕ
ಗಮನಾರ್ಹ ಕೆಲಸಗಳುಜಾಗತಿಕ ಶಿಕ್ಷಕರ ಪ್ರಶಸ್ತಿ
ಪ್ರಶಸ್ತಿಗಳುಜಾಗತಿಕ ಶಿಕ್ಷಕರ ಪ್ರಶಸ್ತಿ, ವರ್ಷದ ನವೀನ ಸಂಶೋಧಕ

ರಂಜಿತ್‌ಸಿಂಹ ಡಿಸಲೆ ಮಹಾರಾಷ್ಟ್ರದ ಒಬ್ಬ ಭಾರತೀಯ ಶಿಕ್ಷಕ. ಅವರು 3 ಡಿಸೆಂಬರ್ 2020 ರಂದು ಘೋಷಿಸಲಾದ $1 ಮಿಲಿಯನ್ ವಾರ್ಷಿಕ ಗ್ಲೋಬಲ್ ಟೀಚರ್ ಪ್ರೈಜ್ ಪಡೆದರು[]. ಬೋಧನೆಗಾಗಿರುವ ನೋಬೆಲ್ ಪ್ರಶಸ್ತಿ ಎಂದು ಪತ್ರಕರ್ತರಿಂದ ಉಲ್ಲೇಖಿಸಲ್ಪಟ್ಟಿರುವ ಗ್ಲೋಬಲ್ ಟೀಚರ್ ಪ್ರೈಸ್, ಪ್ರಪಂಚದಾದ್ಯಂತ ಶಿಕ್ಷಕರ ಉತ್ತಮ ಕೆಲಸಕ್ಕೆ ಮನ್ನಣೆಯನ್ನು ನೀಡುತ್ತಿದೆ. ಡಿಸಲೆ ತನ್ನ ವಿಜೇತ ಭಾಷಣದಲ್ಲಿ ತನ್ನ ಒಂಬತ್ತು ಸಹವರ್ತಿ ಫೈನಲಿಸ್ಟ್‌ಗಳೊಂದಿಗೆ ಅರ್ಧದಷ್ಟು ಬಹುಮಾನದ ಹಣವನ್ನು ಹಂಚಿಕೊಳ್ಳುವುದಾಗಿ ಹೇಳಿದರು.[] [] ಅವರು ಶೈಕ್ಷಣಿಕ ಕಾರ್ಯಕ್ರಮಗಳ ಸಲಹೆಗಾರರಾಗಿ ವಿಶ್ವ ಬ್ಯಾಂಕ್‌ನೊಂದಿಗೆ ಕೆಲಸ ಮಾಡುತ್ತಿದ್ದಾರೆ.[] []

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಡಿಸಲೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪರಿತೆವಾಡಿ ಗ್ರಾಮದವರು. ಆರಂಭದಲ್ಲಿ ಐಟಿ ಇಂಜಿನಿಯರ್ ಆಗಬೇಕೆಂದು ನಿರ್ಧರಿಸಿ ಎಂಜಿನಿಯರಿಂಗ್ ಕಾಲೇಜಿಗೆ ಸೇರಿಕೊಂಡಿದ್ದರು. ಆದರೆ ಅದು ಅವರಿಗೆ ಸರಿಹೊಂದುವುದಿಲ್ಲವೆಂದಾದಾಗ, ಅವರ ತಂದೆ ಅವರನ್ನು ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ತೆಗೆದುಕೊಳ್ಳುವಂತೆ ಮನವೊಲಿಸಿದರು. ಡಿಸಲೆ ಅವರಿಗೆ ಇದು ಆರಂಭದಲ್ಲಿ ಇಷ್ಟವಿಲ್ಲದಿದ್ದರೂ, ಜಗತ್ತಿನಲ್ಲಿ ನಿಜವಾದ ಬದಲಾವಣೆಯನ್ನು ತರುವರು ಶಿಕ್ಷಕರೆಂದು ಅವರಿಗೆ ಅಲ್ಲಿ ಅರಿವಾಯಿತು.[]

ವೃತ್ತಿ

[ಬದಲಾಯಿಸಿ]

ಡಿಸಲೆ ಅವರು ತಮ್ಮ ನವೀನ ಬೋಧನಾ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ನಿರ್ಮಿಸಿದ ವಿಜ್ಞಾನ ಪ್ರಯೋಗಾಲಯಗಳ ಮೂಲಕ ವೈಜ್ಞಾನಿಕ ಪ್ರಯೋಗಗಳನ್ನು ಮಾಡಿ ತೋರಿಸುತ್ತಾರೆ. ಪ್ರಾಥಮಿಕ ವರ್ಗದ ಪುಸ್ತಕಗಳಿಗೆ QR ಕೋಡ್‌ಗಳನ್ನು ಸೇರಿಸಿ ಅವರು ವಿದ್ಯಾರ್ಥಿಗಳಿಗೆ ಆಡಿಯೊ ಕವಿತೆಗಳು, ವೀಡಿಯೊ ಉಪನ್ಯಾಸಗಳು, ಕ್ರಿಯಾಯೋಜನೆಗಳು ಮತ್ತು ಕಥೆಗಳಿಗೆ ಕೊಂಡಿಗಳು ದೊರೆಯುವಂತೆ ಮಾಡಿದ್ದಾರೆ. ಪಠ್ಯಪುಸ್ತಕಗಳಲ್ಲಿ ಕ್ಯೂಆರ್ ಕೋಡ್‌ಗಳನ್ನು ಅಳವಡಿಸುವ ಅವರ ಕಲ್ಪನೆಯನ್ನು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ ಅಳವಡಿಸಿಕೊಂಡಿದೆ.[] []

ಅವರ ಹಳ್ಳಿಯಲ್ಲಿ, ಅವರು ಹದಿಹರೆಯದ ಮಕ್ಕಳ ವಿವಾಹಗಳನ್ನು ತೊಡೆದುಹಾಕಲು ಮತ್ತು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುನ್ನು ಪ್ರೋತ್ಸಾಹಿಸಲು ಪ್ರಚಾರ ಮಾಡಿದ್ದಾರೆ.[]

ಪ್ರಶಸ್ತಿಗಳು

[ಬದಲಾಯಿಸಿ]
ವರ್ಷ ಶೀರ್ಷಿಕೆ ಫಲಿತಾಂಶ ಪ್ರಸ್ತುತ ಪಡಿಸುವವರು ಉಲ್ಲೇಖ
2016 ವರ್ಷದ ನವೀನ ಸಂಶೋಧಕ ಗೆಲುವು ಭಾರತ ಸರ್ಕಾರ []
2020 ಜಾಗತಿಕ ಶಿಕ್ಷಕರ ಪ್ರಶಸ್ತಿ ಗೆಲುವು ವರ್ಕಿ ಫೌಂಡೇಶನ್ [೧೦]

ಉಲ್ಲೇಖಗಳು

[ಬದಲಾಯಿಸಿ]
  1. DelhiDecember 4, India Today Web Desk New. "Govt school teacher Ranjitsinh Disale wins Global Teacher Prize, makes history by sharing half with other finalists". India Today (in ಇಂಗ್ಲಿಷ್). Retrieved 6 December 2020.{{cite news}}: CS1 maint: numeric names: authors list (link)
  2. "Ranjitsinh Disale 2020 -The 2020 Global Teacher Prize winner". Global Teacher Prize (in ಇಂಗ್ಲಿಷ್). Archived from the original on 10 ಜನವರಿ 2022. Retrieved 6 December 2020.
  3. "Maharashtra teacher Ranjitsinh Disale wins 2020 Global Teacher Prize, rewarded over Rs 7 crore". DNA India (in ಇಂಗ್ಲಿಷ್). Reuters. 4 December 2020. Retrieved 21 December 2020.
  4. "Ranjitsinh Disale Appointed As World Bank Education Advisor". NDTV.com (in ಇಂಗ್ಲಿಷ್). Retrieved 2021-06-03.
  5. author/lokmat-english-desk (2021-06-03). "Ranjitsinh Disale appointed as World Bank Education Advisor | english.lokmat.com". Lokmat English (in ಇಂಗ್ಲಿಷ್). Retrieved 2021-06-03. {{cite web}}: |last= has generic name (help)
  6. "Govt school teacher Ranjitsinh Disale wins Global Teacher Prize, makes history by sharing half with other finalists" (in ಇಂಗ್ಲಿಷ್). Retrieved 6 December 2020.
  7. ೭.೦ ೭.೧ "Govt school teacher Ranjitsinh Disale wins Global Teacher Prize, makes history by sharing half with other finalists". India Today (in ಇಂಗ್ಲಿಷ್). Retrieved 6 December 2020."Govt school teacher Ranjitsinh Disale wins Global Teacher Prize, makes history by sharing half with other finalists". India Today. Retrieved 6 December 2020.
  8. "Maharashtra zilla parishad educator first in India to win $1-million teacher prize". Hindustan Times (in ಇಂಗ್ಲಿಷ್). Retrieved 6 December 2020.
  9. "Maharashtra Zilla Parishad teacher makes it to top 50 of global prize - Times of India". The Times of India. Retrieved 2020-12-09.
  10. "To Sir With Love - Winner of $1 million teacher prize changed girls' lives in India". Reuters (in ಇಂಗ್ಲಿಷ್). 2020-12-04. Retrieved 2020-12-09.