ಯೋಸೆಫ್ ಕಾನ್ರಾಡ್
ಯೋಸೆಫ್ ಕಾನ್ರಾಡ್ | |
|---|---|
Conrad in 1904 by George Charles Beresford | |
| ಜನನ | Józef Teodor Konrad Korzeniowski ೩ ಡಿಸೆಂಬರ್ ೧೮೫೭ Berdychiv, Kiev Governorate, Russian Empire |
| ನಿಧನ | 3 August 1924 (aged 66) Bishopsbourne, Kent, England |
| ವಿಶ್ರಾಂತಿ ಸ್ಥಳ | Canterbury Cemetery, Canterbury |
| ಉದ್ಯೋಗ | Novelist, short-story writer, essayist |
| ರಾಷ್ಟ್ರೀಯತೆ | Polish,[೧] British |
| ಅವಧಿ | 1895–1923 |
| ಶೈಲಿ | Fiction |
| ಸಾಹಿತ್ಯ ಚಳವಳಿ | |
| ಪ್ರಮುಖ ಕೃತಿಗಳು | Heart of Darkness (1899) Lord Jim (1900) Nostromo (1904) The Secret Agent (1907) |
| ಸಂಗಾತಿ |
Jessie George (m. ೧೮೯೬) |
| ಮಕ್ಕಳು | 2 |
| ಪೋಷಕರುಗಳು | Apollo Korzeniowski Ewa Bobrowska |
| ಸಹಿ | |
ಯೋಸೆಫ್ ಕಾನ್ರಾಡ್1857-1924. ಸಮುದ್ರಯಾನಕ್ಕೆ ಸಂಬಂದಿಸಿದ ಸಾಹಸ ಕಥೆಗಳಿಂದ ಪ್ರಸಿದ್ದನಾದ ಕಾದಂಬರಿಕಾರ. ಪೂರ್ಣ ಹೆಸರು ಥಿಯೋಡೋರ್ ಯೋಸೆಫ್ ಕಾನ್ರಾಡ್ ಕಾರ್ಜೆನಿಯೊಸ್ಕಿ.
ಬಾಲ್ಯ
[ಬದಲಾಯಿಸಿ]ಉಕ್ರೇನಿನ ಸಣ್ಣ ಊರೊಂದರಲ್ಲಿ ಹುಟ್ಟಿದ. ಈತನ ತಂದೆತಾಯಿಯರು ಇಬ್ಬರೂ ಅಲ್ಲಿದ್ದ ಪ್ರಸಿದ್ಧ ದೇಶಪ್ರೇಮಿಗಳ ವಂಶದವರು. ತನ್ನ ಮೂರನೆಯ ವರ್ಷದಲ್ಲೇ ತಂದೆ ರಷ್ಯಾಕ್ಕೆ ಗಡೀಪಾರಾಗಿ ನಂತರ ಅನಾಥನಾದ ಈತ ಕ್ರಾಕೋದಲ್ಲಿದ್ದ ತನ್ನ ಸೋದರಮಾವನ ಬಳಿ ಬೆಳೆದ.
ಪ್ರಭಾವ
[ಬದಲಾಯಿಸಿ]ವಿಕ್ಟರ್ ಹ್ಯೂಗೊನ ಕಾದಂಬರಿ ಟಾಯ್ಲರ್ಸ್ ಆಫ್ ಸೀ ಓದಿದ ಬಳಿಕ ಸಮುದ್ರದ ಬಗ್ಗೆ ಈತನಲ್ಲಿ ಆಸಕ್ತಿ ಹುಟ್ಟಿತು.
ಜೀವನ
[ಬದಲಾಯಿಸಿ]ಮಾರ್ಸೇಲ್ಸಿಗೆ ನಾವಿಕನಾಗಲು ಹೋದ ಈತ ಅಲ್ಲಿ ಬೇರೆ ಮೂವರೊಡನೆ ಕೂಡಿ ಟ್ರೆಮೋಲಿನೊ ಎಂಬ ಹಡಗಿನಲ್ಲಿ ಕಳ್ಳ ಸಾಗಣಿಕೆಯಲ್ಲಿ ತೊಡಗಿದ. ಈ ಅನುಭವದ ಕೆಲವು ಅಂಶಗಳು ಈತನ ಮಿರರ್ ಆಫ್ ಸೀ (1906) ದಿ ಆರೋ ಆಂಡ್ ಗೋಲ್ಡ್ (1919) ಎಂಬ ಪುಸ್ತಕಗಳಲ್ಲಿ ನಿರೂಪಿತವಾಗಿವೆ. 1878 ರಲ್ಲಿ ಮೇವಿಸ್ ಎಂ ಹಡಗಿನಲ್ಲಿ ಮೊದಲ ಸಲ ಇಂಗ್ಲೆಂಡಿಗೆ ಬಂದ. ಅನಂತರ ಆಸ್ಟ್ರೇಲಿಯಕ್ಕೆ ತೆರಳಿ ಸಮುದ್ರಯಾನಕ್ಕೆ ಸಂಂಧಿಸಿದ ಅಗತ್ಯವಾದ ಕೆಲವು ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಹಿಂದೂ ಮಹಾಸಾಗರದ ಅನೇಕ ಹಡಗುಗಳಲ್ಲಿ ಕೆಲಸಮಾಡಿದ. ಅಲ್ಲಿಯ ತನ್ನ ಬಹುತೇಕ ಅನುಭವಗಳನ್ನು ದಿ ನಿಗ್ಗರ್ ಆಫ್ ನಾರ್ಸಿಸಸ್ (1897), ಲಾರ್ಡ್ ಜಿಮ್ (1900), ದಿ ಷ್ಯಾಡೋ ಲೈನ್ (1917), ದಿ ರೆಸ್ಕ್ಯೂ (1920) ಕೃತಿಗಳಲ್ಲಿ ವಿವರಿದ್ದಾನೆ. ಇವುಗಳಲ್ಲಿ ಒಂಟಿಜೀವನದ ಕಷ್ಟನಷ್ಟಗಳು, ಪ್ರಕೃತಿಯನ್ನು ಎದುರಿಸಿ ಹೋರಾಡುವ ಸಾಹಸಮಯ ಜೀವನ ಚಿತ್ರಿತಗೊಂಡಿವೆ. 1866ರಲ್ಲಿ ಈತ ಬ್ರಿಟಿಷ್ ಪ್ರಜೆಯಾಗಿ ಮಾಸ್ಟರ್ ಮ್ಯಾರಿನರ್ ಪ್ರಶಸ್ತಿಯನ್ನು ಪಡೆದ. ನಾಲ್ಕು ವರ್ಷಗಳ ಅನಂತರ ತನ್ನದೇ ಆದ ಹಡಗೊಂದರಲ್ಲಿ ಕಾಂಗೊಗೆ ಹೋದ. ಅಲ್ಲಿನ ಅನುಭವಗಳು ಈತನ ಹಾರ್ಟ್ ಆಫ್ ಡಾರ್ಕ್‍ನೆಸ್ ಕೃತಿಯಲ್ಲಿ ಅಡಕವಾಗಿವೆ. 1894 ರಲ್ಲಿ ನಾವಿಕ ವೃತ್ತಿತೊರೆದು ಬರವಣಿಗೆಯ ಕಡೆ ಪೂರ್ಣ ಗಮನ ನೀಡಿದ. ಅದೇ ವೇಳೆಯಲ್ಲಿ ಜೆಸ್ಸಿ ಜಾರ್ಜ್ ಎಂಬಾಕೆಯನ್ನು ಮದುವೆಯಾದ.ಇಂಗ್ಲಿಷ್ ಭಾಷೆಯ ಉತ್ತಮ ಶೈಲಿಗೆ ಹೆಸರಾದ ಈತನಿಗೆ ತನ್ನ 19ನೆಯ ವಯಸ್ಸಿನ ವರೆಗೂ ಇಂಗ್ಲಿಷ್ ಭಾಷೆಯ ಗಂಧವೇ ಇರಲಿಲ್ಲ ಎಂಬ ಮಾತು ಆಶ್ವರ್ಯ ತಂದರೂ ಸತ್ಯಸಂಗತಿ. ಸಮುದ್ರಯಾನಕ್ಕೆ ಸಂಂಧಿಸಿದ ಕೃತಿಗಳಲ್ಲದೆ ಅನೇಕ ಕಾದಂಬರಿಗಳನ್ನೂ ಈತ ಬರೆದಿದ್ದಾನೆ. ಅವುಗಳಲ್ಲಿ ನಾಸ್ಟ್ರೋಮೋ (1904), ದಿ ಸೀಕ್ರೆಟ್ ಏಜೆಂಟ್ (1907), ಚಾನ್ಸ್ (1913), ದಿ ರೋವರ್ (1923) ಮುಂತಾದವು ಮುಖ್ಯವೆನಿಸಿವೆ. ಸಣ್ಣ ಕತೆಗಳಲ್ಲಿ ಯೂಥ್ (1902), ಟೈಫೂನ್ (1903) ಮುಂತಾದವು ಮುಖ್ಯ. ಸಮ್ ರೆಮಿನಿಸೆನ್ಸ್‍ಸ್ (1912) ಈತನ ಆತ್ಮಕಥೆ.
ಉಲ್ಲೇಖಗಳು
[ಬದಲಾಯಿಸಿ]ಬಾಹ್ಯ ಸಂಪರ್ಕಗಳು
[ಬದಲಾಯಿಸಿ]
| Library resources about ಯೋಸೆಫ್ ಕಾನ್ರಾಡ್ |
Sources
- Works by ಯೋಸೆಫ್ ಕಾನ್ರಾಡ್ in eBook form at Standard Ebooks
- Works by Joseph Conrad at Project Gutenberg
- Works by Joseph Conrad at Faded Page (Canada)
- Works by or about ಯೋಸೆಫ್ ಕಾನ್ರಾಡ್ at Internet Archive
- Works by ಯೋಸೆಫ್ ಕಾನ್ರಾಡ್ at LibriVox (public domain audiobooks)

- Works by Joseph Conrad at Conrad First, an archive of every newspaper and magazine in which the work of Joseph Conrad was first published.
- Works by Joseph Conrad at The Online Books Page
- Josep Conrad reviewed by H.L. Mencken: The Smart Set, July, 1921
Portals and biographies
- The Joseph Conrad Society (UK)
- Joseph Conrad Society of America
- Biography of Joseph Conrad, at The Joseph Conrad Centre of Poland
- Biography of Joseph Conrad, at The Literature Network
Literary criticism
- Conrad's page at Literary Journal.com Archived 22 October 2006 ವೇಬ್ಯಾಕ್ ಮೆಷಿನ್ ನಲ್ಲಿ., a number of research articles on Conrad's work
- Chinua Achebe: The Lecture Heard Around The World
- Edward Said, "Between Worlds: Edward Said makes sense of his life", London Review of Books, vol. 20, no. 9, 7 May 1998, pp. 3–7.
Miscellanea
- "Archival material relating to ಯೋಸೆಫ್ ಕಾನ್ರಾಡ್". UK National Archives.
- Archival material at
- Joseph Conrad ಐ ಎಮ್ ಡಿ ಬಿನಲ್ಲಿ
- Newspaper clippings about ಯೋಸೆಫ್ ಕಾನ್ರಾಡ್ in the 20th Century Press Archives of the ZBW

ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
- ↑ Brownstone & Franck 1994, p. 397
- Harv and Sfn no-target errors
- Commons category link from Wikidata
- Articles with Project Gutenberg links
- Articles with Internet Archive links
- Articles with LibriVox links
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Portal templates with redlinked portals
- Pages with empty portal template
- Articles needing additional references
- All articles needing additional references
- Pages needing interwikilinks
- ಬರಹಗಾರರು
- ಕಾದಂಬರಿಕಾರರು
- ಆಂಗ್ಲ ಸಾಹಿತ್ಯ