ವಿಷಯಕ್ಕೆ ಹೋಗು

ಯೋಗೇಶ್ವರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ವಿಶೇಷಣದ ಪ್ರಾಥಮಿಕ ಧಾರಕನಾದ ದುರ್ಗೆಯ ಶಿಲ್ಪ

ಯೋಗೇಶ್ವರಿ (ಸಂಸ್ಕೃತದಲ್ಲಿ ಯೋಗೇಶ್ವರೀ ದೇವಿ) ಯನ್ನು ಕೆಲವು ಮೂಲಗಳಲ್ಲಿ[] ಜೋಗೇಶ್ವರಿ ಎಂದೂ ಕರೆಯಲಾಗುತ್ತದೆ. ಈಕೆ ಹಿಂದೂ ದೇವತೆ ದುರ್ಗಾದೇವಿಯ[] ಒಂದು ರೂಪ ಎಂದು ಹಲವರು ನಂಬುತ್ತಾರೆ. ಈ ಪದ ಯೋಗ-ಈಶ್ವರಿ, ಅಂದರೆ "ಯೋಗದ ದೇವತೆ" ಎಂಬುದರ ಸಂಕ್ಷಿಪ್ತ ರೂಪವಾಗಿದೆ.

ಪಶ್ಚಿಮ ಭಾರತದ ಅನೇಕ ಬ್ರಾಹ್ಮಣರು ಉದಾಹರಣೆಗೆ ಗುಜರಾತ್ ಮತ್ತು ರಾಜಸ್ಥಾನಗಳಲ್ಲಿನ ಬ್ರಾಹ್ಮಣರು ಯೋಗೇಶ್ವರಿಯನ್ನು ತಮ್ಮ ಕುಲದೇವಿಯಂತೆ ಪೂಜಿಸುತ್ತಾರೆ.

ಯೋಗೇಶ್ವರಿಯು ಮಹಾರಾಷ್ಟ್ರದ ಅನೇಕ ಚಿತ್ಪವನ್ ಬ್ರಾಹ್ಮಣ ಕುಟುಂಬಗಳು ಮತ್ತು 96 ಕುಲಿ ಮರಾಠ ಕುಟುಂಬಗಳ ಕುಲದೇವಿಯಾಗಿದ್ದಾರೆ. ಯೋಗೇಶ್ವರಿ ಆಯಿ ಎಂಬುದು ಶಿವನ ಸ್ತ್ರೀ ಶಕ್ತಿಯಾಗಿದೆ ಎಂದು ಮಹಾರಾಷ್ಟ್ರದಲ್ಲಿ ನಂಬುತ್ತಾರೆ.

ಪೌರಾಣಿಕ ಹಿನ್ನೆಲೆ

[ಬದಲಾಯಿಸಿ]

ಸ್ಕಂಧ ಪುರಾಣದ ೮೩ ನೇ ಅಧ್ಯಾಯದಲ್ಲಿ ಶಿವ ಯೋಗೇಶ್ವರಿ ದೇವಿಯ ಬಗ್ಗೆ ತಿಳಿಸುತ್ತಾನೆ ಎಂಬ ಉಲ್ಲೇಖವಿದೆ. ೧-೩. ತದ ನಂತರ, ಓ ದೇವಿಯೇ, ಒಬ್ಬ ಯಾತ್ರಿಯು ಇಲ್ಲಿಂದ ಪೂರ್ವಕ್ಕೆ ದೈತ್ಯಸೂದನದಲ್ಲಿರುವ ಮಹಾ ದೇವಿ ಯೋಗೇಶ್ವರಿಯ ಸನ್ನಿಧಾನಕ್ಕೆ ತೆರಳಬೇಕು.

೨.ಅಲ್ಲಿ ದೇವಿಯು ಯೋಗಿಕ ಶಕ್ತಿಗಳನ್ನು ಪ್ರಸಾದಿಸುತ್ತಾಳೆ. ನಾನು ಆ ಹಿನ್ನೆಲೆಯ ಬಗ್ಗೆ ತಿಳಿಸುತ್ತೇನೆ. ಧ್ಯಾನದಿಂದ ಕೇಳುವಂತವನಾಳು.

೩.ಒಂದಾನೊಂದು ಕಾಲದಲ್ಲಿ, ಅಲ್ಲಿ ಮಹಿಷನೆಂಬ ಶಕ್ತಿಶಾಲಿ ಅಸುರನಿದ್ದ. ಆತ ದಾನವರಲ್ಲಿ ಹುಲಿಯಂತೆ ಶಕ್ತಿಶಾಲಿಯಾಗಿದ್ದ. ಓ ದೇವಿಯೇ, ದೇವತೆಗಳ ಪಾಲಿಗೆ ಅತೀ ಭಯಂಕರನಾಗಿದ್ದ ಆತ ದಾನವರ ಮುಖ್ಯಸ್ಥನಾಗಿದ್ದ. ಆತ ತಾನು ಬಯಸಿದ ರೂಪ ಪಡೆಯಬಲ್ಲವನಾಗಿದ್ದ. ಮೂರು ಲೋಕಗಳನ್ನೂ ತನ್ನ ಸುಪರ್ದಿಗೆ ಪಡೆದ ಆತ ಸಂತಸದಿಂದಿದ್ದ.

೪. ಒಮ್ಮೆ ಸರಿಸಾಟಿಯಿಲ್ಲದ ಸೌಂದರ್ಯ ಹೊಂದಿದ್ದ ಹೆಣ್ಣನ್ನು ಸೃಷ್ಠಿಕರ್ತ ಬ್ರಹ್ಮದೇವರು ಸೃಷ್ಹಿಸಿದ.

೫. ಆಕೆ ಅತೀ ಘೋರವಾದ ತಪಸ್ಸುಗಳನ್ನು ಆಚರಿಸಿದಳು. ಹೇ ದೇವಿಯೇ ಒಮ್ಮೆ ಆ ಹೆಣ್ಣನ್ನು ದೇವರ್ಷಿ ನಾರದರು ನೋಡಿದರು.

೬. ಆ ಸೌಂದರ್ಯದಿಂದ ಸ್ಥಬ್ಧನಾದ ನಾರದರಿಗೆ ಹೀಗನ್ನಿಸಿತು." ಓ, ಎಂತಹ ಸೌಂದರ್ಯವತಿ ಇವಳು. ಎಂತಹ ಅದ್ಭುತ ಸೌಂದರ್ಯವಿದು. ಈ ವಯಸ್ಸಿಗೆ ಇಷ್ಟು ಸೌಂದರ್ಯದ ಖನಿ ಇವಳು"

೭. ಈ ತರಹ ಯೋಚಿಸಿದ ನಾರದರು ಆಕೆಗೆ "ಓ ಸುಂದರ ಹೆಣ್ಣೆ. ನಿನ್ನನ್ನು ನನಗೆ ಸಮರ್ಪಿಸಿಕೋ. ನಾನು ಇಲ್ಲಿಯವರೆಗೂ ಯಾರನ್ನೂ ಮದುವೆಯಾಗಿಲ್ಲ. ಆದರೆ ನಿನ್ನನ್ನು ನೋಡುತ್ತಿದ್ದರೆ, ಕಾಮನ ಅನೇಕ ಬಾಣಗಳು ನನಗೆ ನಾಟಿದಂತೆ ಆಗುತ್ತಿದೆ"

ಆಕೆ ಹೇಳಿದಳು ೮-೯. ಓ ಚಿತ್ತಚಾಂಚಲ್ಯಕ್ಕೆ ಒಳಗಾಗಿರುವ ಮುನಿವರ್ಯ. ನಾನು ಇಲ್ಲಿಗೆ ಪ್ರೀತಿಸಲು ಬಂದಿಲ್ಲ. ನಾನು ಸನ್ಯಾಸವನ್ನು ಸ್ವೀಕರಿಸಿದ್ದೇನೆ. ಆದ್ದರಿಂದ ತಾವು ಬೇಸರಕ್ಕೆ ಒಳಗಾಗದಿರಿ ಎಂದಳು. ನಾನು ನಿಮ್ಮನ್ನು ತಿರಸ್ಕರಿಸುತ್ತಿದ್ದೇನೆ ಎಂದೂ ಬೇಸರಿಸದಿರಿ ಎಂದಳು.

೯ಬಿ.೧೦. ಇದನ್ನು ಕೇಳಿದ ದೇವರ್ಷಿ ನಾರದರು ಸಮುದ್ರದೊಳಗೆ ಮಹಿಷಾಸುರನಿದ್ದ ಸುಂದರ ನಗರಿಗೆ ತೆರಳಿದರು. ಮಹಿಷಾಸುರನು ನಾರದರನ್ನು ಗೌರವಾದರಗಳಿಂದ ಸತ್ಕರಿಸಿದನು.

೧೧. ಓ ದೇವಿಯೇ, ನಾರದರಿಗೆ ತಕ್ಕನಾದ ಅರ್ಘ್ಯ ಪಾದ್ಯಗಳನ್ನು ಕೊಟ್ಟು ಅವರ ಯೋಗಕ್ಷೇಮಗಳ ಬಗ್ಗೆ ವಿಚಾರಿಸಿದ ಅಸುರನು ಅವರಿಗೆ ಕೈಗಳನ್ನು ಮುಗಿದು ನಿಂತು ಹೀಗೆ ಕೇಳಿದನು."ಓ ನಾರದರೆ, ಯಾವ ಕಾರಣದಿಂದ ತಾವು ಇಲ್ಲಿಗೆ ಆಗಮಿಸುವಂತಾಯಿತು. ತಮ್ಮ ಆಗಮನದ ಉದ್ದೇಶವೇನು ? ನಾನು ಅದಕ್ಕಾಗಿ ನನ್ನ ಕೈಲಾದದ್ದನ್ನು ಮಾಡಲು ಪ್ರಯತ್ನಿಸುತ್ತೇನೆ".

೧೨-೧೩. ಇದಾದ ನಂತರ ನಾರದ ಮುನಿಯು ದಾನಾವರ ಅರಸ ಮಹಿಷಾಸುರನಿಗೆ ಹೀಗೆ ತಿಳಿಸಿದರು: " ಓ ಅಸುರನೇ, ಸೌಂದರ್ಯದ ಗಣಿಯಾಗಿರುವ ಒಬ್ಬ ಹೆಣ್ಣು ಜಂಬೂದ್ವೀಪದಲ್ಲಿ ಜನಿಸಿದ್ದಾಳೆ. ದೇವ ಲೋಕದಲ್ಲಾಗಲಿ ಅಥವಾ ಬೇರೆ ಲೋಕಗಳಲ್ಲಾಗಲಿ ಅಂತಹ ಸುಂದರ ಹೆಣ್ಣನ್ನು ನಾನು ಕಂಡಿಲ್ಲ, ಕೇಳಿಲ್ಲ. ಆಕೆಯನ್ನು ಕಂಡ ನಾನು ಕಾಮನ ಹಲವು ಬಾಣಗಳಿಂದ ಜರ್ಝರಿತನಾದಂತೆ ಅನಿಸುತ್ತಿದೆ"

೧೪. ನಾರದರ ಈ ಮಾತುಗಳನ್ನು ಕೇಳಿದ ಮಹಿಷಾಸುರನಿಗೂ ಆ ದೇವಿಯ ಬಗ್ಗೆ ಕಾಮವುಂಟಾಯಿತು. ಆತ ಆ ದೇವಿಯಿದ್ದ ಪ್ರಭಾಷಿಕ ಕ್ಷೇತ್ರಕ್ಕೆ ಹೊರಟನು.

೧೫. ಆತನೊಂದಿಗೆ ದೊಡ್ಡ ಸೈನ್ಯವನ್ನೂ ಕರೆದೊಯ್ದನು. ಅಸುರ ಆಕೆಯೆದುರು " ಓ ಸುಂದರ ಹೆಣ್ಣೇ, ನನ್ನನ್ನು ವರಿಸಿ ಸುಖಗಳನ್ನು ಅನುಭವಿಸು. ನೀನು ಆಚರಿಸುತ್ತಿರುವ ತಪಸ್ಸು ನಿನ್ನ ಸೌಂದರ್ಯಕ್ಕೆ ತಕ್ಕುದಲ್ಲ"

೧೬-೧೭. ಮಹಿಷಾಸುರನ ಈ ಮಾತುಗಳನ್ನು ಕೇಳಿದ ಆ ದೇವಿ ನಕ್ಕಳು. ಆ ದೇವಿ ನಗುತ್ತಿದ್ದಂತೆಯೇ ಆಕೆಯ ನಗುವಿನಿಂದ, ಆಕೆಯ ಉಸಿರಿನಿಂದ ಸಾವಿರಾರು ಭಯಂಕರ ಆಯುಧಗಣನ್ನು ಧರಿಸಿದ ದೇವಿಯರು ಉದ್ಭವಿಸಿದರು. ಮಹಿಷಾಸುರನ ಸೈನ್ಯವನ್ನು ಅವರು ಸಂಹರಿಸಿದರು.

೧೮. ಒಂದೆಡೆ ದಾನವ ಸೈನ್ಯದ ಸಂಹಾರವಾಗುತ್ತಿದ್ದರೆ ಆ ದಾನವರಲ್ಲಿ ಘೋರವಾಗಿದ್ದ ಅಸುರರು ವ್ಯಗ್ರರಾಗಿ ದೇವಿಯತ್ತ ದೌಡಾಯಿಸಿದರು.

೧೯-೨೦. ಮಹಿಷಾಸುರನು ತನ್ನ ಘೋರವಾದ ಕೊಂಬುಗಳನ್ನು ಬಳಸುತ್ತಾ ದೇವಿಯೊಂದಿಗೆ ಉಘ್ರವಾದ ಹೋರಾಟದಲ್ಲಿ ತೊಡಗಿದನು. ಅಸುರನು ತನ್ನ ಕೊಂಬುಗಳಿಂದ ದೇವಿಯನ್ನು ಕೊಲ್ಲನು ಬಂದಾಗ ಆತನ ಮೇಲೆ ಹತ್ತಿ ನಿಂತ ದೇವಿಯು ಆತನನ್ನು ತನ್ನ ಶೂಲದಿಂದ ಸಂಹರಿಸಿದಳು.

೨೧. ಆತನ ತಲೆಯನ್ನು ಕಡಿದಾಗ ಆತನಂತೆಯೇ ಇದ್ದ ಮತ್ತೊಬ್ಬನು ಉದ್ಭವಿಸಿದನು. ದಾನವನು ಭಯಂಕರನಾಗಿದ್ದರೂ ದೇವಿಯ ಅಸ್ತ್ರಗಳಿಂದ ಕೊಲ್ಲಲ್ಪಟ್ಟಿದ್ದರಿಂದ ಆತ ಸ್ವರ್ಗದೆಡೆಗೆ ಪಯಣಿಸಿದನು.

೨೨. ಮಹಿಷನ ಸಾವಿನ ನಂತರ ದೇವೆಂದ್ರನನ್ನು ಸೇರಿಸಿ ಎಲ್ಲ ದೇವತೆಗಳು ದೇವಿಯನ್ನು ಸ್ತುತಿಸಿದರು.

ಉಲ್ಲೇಖಗಳು

[ಬದಲಾಯಿಸಿ]
  1. "श्री अंबेजोगाई भक्त निवास न्यास, पुणे". Archived from the original on 8 September 2019. Retrieved 25 July 2022.
  2. www.wisdomlib.org (2021-04-13). "Greatness of Yogeśvarī (Yoga-īśvarī) [Chapter 83]". www.wisdomlib.org (in ಇಂಗ್ಲಿಷ್). Retrieved 2022-10-02.