ಯಾದಗಿರಿ ಜಿಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಯಾದಗೀರ್ ಜಿಲ್ಲೆ ಇಂದ ಪುನರ್ನಿರ್ದೇಶಿತ)
ಯಾದಗಿರಿ ಜಿಲ್ಲೆ
ಯಾದಗಿರಿ (ಯಾದವಗಿರಿ)
city
Population
 (2001)
 • Total೫೮,೮೦೨

ಯಾದಗಿರಿ ಇತಿಹಾಸ[ಬದಲಾಯಿಸಿ]

ಈ ಹಿಂದೆ ಈ ಪ್ರದೇಶವನ್ನು "ಯಾದವ" ಎಂಬ ರಾಜವಂಶದವರು ಆಳುತ್ತಿದ್ದರಂತೆ . "ಯಾದವರ" ಈ ವಂಶವನ್ನು ಕೆಲವು ಕಡೆ ಯದುವಂಶ ಎಂದು ಕೂಡಾ ಕೆಲವು ಕಡೆ ಉಲ್ಲೆಖಿಸಲಾಗಿದೆ ಎಂಬುವದು ಬಲ್ಲ ಮೂಲಗಳಿಂದ ತಿಳಿಯುತ್ತದೆ. ಯಾದಗಿರಿ, ಕ್ರಿ. ಪೂ ೧೩೪೭ ರಿಂದ ೧೪೨೫ ರ ವರೆಗೆ ಯಾದವರ ರಾಜಧಾನಿಯಾಗಿತ್ತು. ಆಕಾಲದ ಪ್ರಮುಖರಾದ ಸಂತವರು, ಚಾಲುಕ್ಯರು, ರಾಷ್ಟ್ರಕೂಟರು, ಶಾಹಿಗಳು, ಆದಿಲ್ ಶಾಹಿಗಳು, ನಿಜಾಮ್ ಶಾಹಿಗಳು ಯಾದಗಿರಿಯನ್ನ ಆಳಿದ್ದಾರೆ. ಯಾದಗಿರಿಯಲ್ಲಿ ಒಂದು ಭವ್ಯ ವಾದ ಗುಡ್ಡ ಯಾದಗಿರಿಯ ಹೃದಯ ಭಾಗದಲ್ಲಿದೆ ಇದನ್ನು ಬೆಟ್ಟವೆಂತಲು ಕರೆಯಬಹುದಾಗಿದೆ. ಯಾದವರು ಆಳುತ್ತಿದ್ದ ಈ ನಾಡಿಗೆ ಬೆಟ್ಟ ಅಂದರೆ ಗಿರಿ ಸೇರಿರುವದರಿಂದ ಇದನ್ನು ಮುಂದೆ ಯಾದಗಿರಿ ಎಂದು ಕರೆಯಲಾಯಿತು . ಯಾದವನ ಗಿರಿ’, ಯಾದವ ಗಿರಿ’,ಯಾದಗಿರಿ’, ಯಾದ್ಗೀರ್’ ಎಂದು ಸರಳೀಕೃತಗೊಂಡಿದೆ. ಹೀಗೆ ಹಲವು ನಾಮಗಳಿಂದ ಕರೆಯಲಾಗುತ್ತಿದೆ.

ಯಾದಗಿರಿ ನಗರ[ಬದಲಾಯಿಸಿ]

ರಾಜ್ಯದ ೩೦ನೇ ಜಿಲ್ಲೆಯಾಗಿ ಯಾದಗಿರಿ ಡಿಸೆಂಬರ ೩೦ ೨೦೦೯ ರಿಂದ ಅಸ್ತಿತ್ವಕ್ಕೆ ಬಂದಿದೆ . ಶಹಾಪುರ ಮತ್ತು ಸುರಪುರ ತಾಲ್ಲೂಕುಗಳನ್ನು ಸೇರಿಸಿ ಹೊಸ ಜಿಲ್ಲೆ ರಚನೆಯಾಗಿದೆ . ಸಂಪುಟ ಸಭೆಯಲ್ಲಿ ಆ. ೨೭ ೨೦೦೮ ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗುಲ್ಬರ್ಗಾ ಜಿಲ್ಲೆ�ಯನ್ನು ವಿಭಜಿಸಿ ಯಾದಗಿರಿ ಪಟ್ಟಣವನ್ನು ಕೇಂದ್ರವಾಗಿಸಿಕೊಂಡು ಹೊಸ ಜಿಲ್ಲೆ ರಚಿಸಲು ಅಂತಿಮ ನಿರ್ಣಯ ಕೈಗೊಂಡು, ಈ ಸಂಬಂಧ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು . ಈ ವಿಚಾರವನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡಿಸೆಂಬರ ೨೩ ೨೦೦೯ ಬುಧವಾರ ವಿಧಾನಸಭೆಯಲ್ಲಿ ಘೋಷಿಸಿದರು.

ಯಾದಗಿರಿ ಜಿಲ್ಲೆ[ಬದಲಾಯಿಸಿ]

ಯಾದಗಿರಿ ಕರ್ನಾಟಕ ರಾಜ್ಯದ ೩೦ನೇ ಜಿಲ್ಲೆ . ಯಾದಗಿರಿ ತಾಲೂಕಿನ ಉತ್ತರದಲ್ಲಿ ಸೇಡಂ, ವಾಯುವ್ಯದಲ್ಲಿ ಚಿತ್ತಾಪುರ, ಪಶ್ಚಿಮದಲ್ಲಿ ಶಹಾಪುರ ಮತ್ತು ಪೂರ್ವದಲ್ಲಿ ಆಂಧ್ರ ಪ್ರದೇಶಮಹಬೂಬನಗರಮಖ್ತಲ್ ತಾಲೂಕುಗಳಿವೆ.

ಶಿಕ್ಷಣ[ಬದಲಾಯಿಸಿ]

ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ೧,೦೨೪ ಪ್ರಾಥಮಿಕ ಶಾಲೆಗಳು, ೧೪೯ ಪ್ರೌಢ ಶಾಲೆಗಳು, ೪೦ ಪದವಿ ಪೂರ್ವ ಕಾಲೇಜುಗಳು, ಮತ್ತು ೬ ಪದವಿ ಕಾಲೇಜುಗಳಿವೆ. ಇಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಡೆಸಲ್ಪಡುವ ಒಟ್ಟು ೧೨೨೩ ಅಂಗನವಾಡಿ ಶಾಖೆಗಳಿವೆ.

ವೈದ್ಯಕೀಯ ಸೌಲಭ್ಯಗಳು[ಬದಲಾಯಿಸಿ]

ಈ ಜಿಲ್ಲೆಯಲ್ಲಿ ೩ ಆಸ್ಪತ್ರೆಗಳು, ೩ ಆಯುರ್ವೇದ ಆಸ್ಪತ್ರೆಗಳು, ೩೭ ಜನಸಾಮಾನ್ಯ ಆರೋಗ್ಯ ಕೇಂದ್ರಗಳು ಮತ್ತು ೧೨೦ ಕುಟುಂಬ ಕಲ್ಯಾಣ ಕೇಂದ್ರಗಳಿವೆ .

ಜಿಲ್ಲೆಯ ರಚನೆ[ಬದಲಾಯಿಸಿ]

ಯಾದಗಿರಿ ಜಿಲ್ಲೆಯೂ ಹಲವು ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದೆ. ಯಾದಗಿರಿಯಲ್ಲಿ ಹರಿಯುವ ಪ್ರಮುಖ ನದಿಗಳೆಂದರೆ ಕೃಷ್ಣ ಮತ್ತು ಭೀಮ. ಔದ್ಯೋಗಿಕರಣಕ್ಕೆ ಉತ್ತಮ ಅವಕಾಶಗಳಿದ್ದು, ಈಗಾಗಲೇ ಅಲ್ಲಿನ ಹಿರೆತುಮಕೂರು ಹಳ್ಳಿಯ ಹತ್ತಿರ ಸಕ್ಕರೆ ಮತ್ತು ಇಂಧನ ಕಾರ್ಖಾನೆಗಳು ಆರಂಭವಾಗಿವೆ.

ಯಾದಗಿರಿ ಜಿಲ್ಲೆಯ ತಾಲ್ಲೂಕುಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]