ಯಶ್‌ ಪಾಲ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಿಂದಿಯ ಪ್ರಸಿದ್ಧ ಕಾದಂಬರಿಕಾರ, ಕತೆಗಾರ, ಚಿಂತಕ. ಪ್ರಗತಿಶೀಲ ಆಂದೋಲನದ ನೇತಾರ ಹಾಗೂ ಕ್ರಾಂತಿಕಾರಿ ಯಶಪಾಲ್ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ.
ಯಶ್ ಪಾಲ್
Yash Pal
2006 ರಲ್ಲಿ ಐಯುಸಿಎಎ ಗಿರಾವಾಲಿ ಅಬ್ಸರ್ವೇಟರಿ ಉದ್ಘಾಟನೆಯಲ್ಲಿ ಪ್ರೊಫೆಸರ್ ಯಶ್ ಪಾಲ್
ಜನನಯಶ್ ಪಾಲ್
(೧೯೨೬-೧೧-೨೬)೨೬ ನವೆಂಬರ್ ೧೯೨೬
ಝಾಂಗ್, ಬ್ರಿಟಿಷ್ ಇಂಡಿಯಾ
(ಈಗ ಪಂಜಾಬ್, ಪಾಕಿಸ್ತಾನ
ಮರಣ24 July 2017(2017-07-24) (aged 90)
ನೋಯ್ಡಾ, ಉತ್ತರ ಪ್ರದೇಶ, ಭಾರತ
ಪೌರತ್ವಭಾರತೀಯ
ಕಾರ್ಯಕ್ಷೇತ್ರಭೌತಶಾಸ್ತ್ರ, ಆಸ್ಟ್ರೋಫಿಸಿಕ್ಸ್
ಸಂಸ್ಥೆಗಳುಟಿಐಎಫ್ಆರ್, ಮುಂಬೈ, ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್, ಅಹಮದಾಬಾದ್, ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (ಭಾರತ)
ಅಭ್ಯಸಿಸಿದ ವಿದ್ಯಾಪೀಠಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢ
ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
ಡಾಕ್ಟರೇಟ್ ಸಲಹೆಗಾರರುಬ್ರೂನೋ ರೊಸ್ಸಿ
ಗಮನಾರ್ಹ ವಿದ್ಯಾರ್ಥಿಗಳುಶ್ಯಾಮ್ ಟಂಡನ್
ಪ್ರಸಿದ್ಧಿಗೆ ಕಾರಣಸ್ಪೇಸ್ ಸೈನ್ಸ್, ಎಜುಕೇಶನ್, ಟೆಲಿವಿಷನ್ ಆಂಕರ್, ಪಬ್ಲಿಕ್ ಔಟ್ರೀಚ್
ಗಮನಾರ್ಹ ಪ್ರಶಸ್ತಿಗಳುಪದ್ಮ ವಿಭೂಷಣ (2013)
ಪದ್ಮಭೂಷಣ (1976)
ಮಾರ್ಕೊನಿ ಪ್ರಶಸ್ತಿ ಟೆಂಪ್ಲೇಟು:ಸಣ್ಣ
ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಪ್ರಶಸ್ತಿ
ಕಲಿಂಗ ಪ್ರಶಸ್ತಿ

ಯಶ್‌ ಪಾಲ್ ಅಥವಾ‌ ಯಶ್‌ ಪಾಲ್‌ ಸಿಂಗ್‌ ಭಾರತದ ವಿಜ್ಞಾನಿ, ಶಿಕ್ಷಣ ತಜ್ಞ, ಆಡಳಿಗಾರ, ಮಾತುಗಾರ, ಅವರು ನೇರ ನಡೆ, ನುಡಿಗಳಿಗಾಗಿ ಹೆಸರಾಗಿದ್ದರು.ಅವರು ಸೂರ್ಯನಿಂದ ಹೊರಹೊಮ್ಮವ ವಿಶ್ವ ಕಿರಣಗಳ (ಕಾಸ್ಮಿಕ್ ರೇಸ್‌) ಅಧ್ಯಯನ ಕ್ಷೇತ್ರದಲ್ಲಿ  ಕೆಲಸ ಮಾಡಿದ್ದಾರೆ. ಮತ್ತು ಸದಾ ಜನರ ಮಧ್ಯೆ ಇರುತ್ತಿದ್ದ ಅಪರೂಪದ ವಿಜ್ಞಾನಿ ಅವರಾಗಿದ್ದರು.[೧]. ಡಾ. ಹೋಮಿ ಜಹಾಂಗೀರ್‌ ಭಾಭಾ, ಡಾ. ವಿಕ್ರಂ ಸಾರಾಭಾಯ್‌, ಸತೀಶ್‌ ಧವನ್‌ ರಂತಹ ವ್ಯಕ್ತಿಗಳ ಜೊತೆ ಅವರ ಒಡನಾಟವಿತ್ತು.

ಟಾಟಾ ಸಂಸ್ಥೆ[ಬದಲಾಯಿಸಿ]

ದೆಹಲಿ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದಾಗಲೇ ದೇಶದ ಪ್ರತಿಷ್ಠಿತ ಮುಂಬೈ ಟಾಟಾ ಸಂಸ್ಥೆಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿಕೊಂಡರು. ಅದು ಅವರ ಜೀವನದ ದೊಡ್ಡ ತಿರುವು.ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌ ಸಂಸ್ಥೆಯಲ್ಲಿ ವಿಶ್ವಕಿರಣಗಳ ಬಗ್ಗೆ ಅಧ್ಯಯನ ನಡೆಸಿದರು.ಇನ್ನೂ ಎಂ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಪಾಲ್‌ ಅವರಿಗೆ ನಿಯಮಾವಳಿ ಪ್ರಕಾರ ಪ್ರವೇಶ ನೀಡುವಂತಿರಲಿಲ್ಲ. ಆದರೆ, ಟಾಟಾ ಸಂಸ್ಥೆ ಪಾಲ್‌ ಅವರಿಗಾಗಿಯೇ ಮೊದಲ ಬಾರಿಗೆ ನಿಯಮಾವಳಿ  ಸಡಿಲಿಸಿತ್ತು.ಹಿರಿಯ ವಿಜ್ಞಾನಿ ಸತೀಶ್‌ ಧವನ್‌ ಅವರು ಭಾರತದ ಬಾಹ್ಯಾಕಾಶ ಯೋಜನೆಯಲ್ಲಿ ಕೆಲಸ ಮಾಡಲು ಆಹ್ವಾನ ನೀಡಿದರು. ಧವನ್‌ ಅವರ ನಿರೀಕ್ಷೆ ಹುಸಿಯಾಗಲಿಲ್ಲ. ಅಹಮದಾಬಾದ್‌ನಲ್ಲಿ ಪ್ರತಿಷ್ಠಿತ ಬಾಹ್ಯಾಕಾಶ  ಕೇಂದ್ರವನ್ನು ಸ್ಥಾಪಿಸಿದ ಪಾಲ್‌ ಅವರು ಉಪಗ್ರಹ ಆಧಾರಿತ  ಸಂವಹನ ವ್ಯವಸ್ಥೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ನಂತರ ಯೋಜನಾ ಆಯೋಗ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಮತ್ತು ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಅಧ್ಯಕ್ಷರಂಥ   ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ನಿವೃತ್ತಿಯ ನಂತರ ಸುಮ್ಮನೆ ಕೂರುವ ಜಾಯಮಾನ ಅವರದ್ದಾಗಿರಲಿಲ್ಲ.

ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸಕ್ಕೆ ಅಣಿಯಾದರು.  ದೂರದರ್ಶನದ ಮೂಲಕ ವಿಜ್ಞಾನವನ್ನು  ಜನರ ಮನೆಗೆ ತಲುಪಿಸಿದರು. ಟಿ.ವಿಗಳಲ್ಲಿ ವಿಜ್ಞಾನ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಪಾಲ್ಗೊಂಡು ಪರಿಚಿತರಾಗಿದ್ದರು. ಇವರು ನಕಲಿ ವಿಶ್ವವಿದ್ಯಾಲಯಗಳ ವಿರುದ್ಧ  ಕಾನೂನು ಸಮರ ಸಾರಿದ್ದರು. ಅಂತಿಮವಾಗಿ ಅದರಲ್ಲಿ ಜಯ ಸಾಧಿಸಿದರು.[೨]

ಅವರ ಹೋರಾಟದ ಫಲವಾಗಿ ಛತ್ತೀಸಗಡದಲ್ಲಿಯ 112 ನಕಲಿ ವಿಶ್ವವಿದ್ಯಾಲಯಗಳು ಬಾಗಿಲು ಮುಚ್ಚಬೇಕಾಯಿತು.

ಬಾಲ್ಯ[ಬದಲಾಯಿಸಿ]

ಯಶ್‌ ಪಾಲ್‌ ಹುಟ್ಟಿದ್ದು (1926) ಝಾಂಗ್‌ ಎಂಬ ಹಳ್ಳಿಯಲ್ಲಿ. ಅದು ಈಗ ಪಾಕಿಸ್ತಾನದಲ್ಲಿದೆ. ಪಾಲ್‌ ತಮ್ಮ ಬಾಲ್ಯ, ಶಾಲಾ ದಿನಗಳನ್ನು ಕಳೆದದ್ದೆಲ್ಲ ಪಾಕಿಸ್ತಾನ ಮತ್ತು ಬಲೂಚಿಸ್ತಾನದ ಕ್ವೆಟ್ಟಾದಲ್ಲಿ. ಒಮ್ಮೆ ಬಾಲಕ ಯಶ್‌ ಹಾಗೂ ಸಹೋದರ ಭೂಕಂಪದ ಅವಶೇಷಗಳ ಅಡಿ ಸಿಲುಕಿ ಸಾವಿನ ದವಡೆಯಿಂದ ಪಾರಾಗಿದ್ದರು. ಶಾಲೆಯಲ್ಲಿ ಶಿಕ್ಷಕರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಪಟಪಟನೇ ಉತ್ತರಿಸುತ್ತಿದ್ದ. ಆತನ ಜಾಣತನ ಆತನಿಗೆ ‘ಮೋಟಾ ಸಿರ್‌’ (ದೊಡ್ಡ ತಲೆ) ಎಂಬ ಅಡ್ಡ ಹೆಸರು ತಂದು ಕೊಟ್ಟಿತು. ಪಸ್ತೂನ್‌ ಹಾಗೂ ಹಜಾರಾದಲ್ಲಿಯ ಶಾಲಾ ಸಹಪಾಠಿಗಳು ಪ್ರೀತಿಯಿಂದ ‘ಮೋಟಾ ಸಿರ್‌’ ಎಂದು ಛೇಡಿಸುತ್ತಿದ್ದರು. ಪಾಕಿಸ್ತಾನದಲ್ಲಿ ಪದವಿ ಶಿಕ್ಷಣ ಪೂರೈಸಿದ ನಂತರ ಭಾರತದ ವಿಭಜನೆ ವೇಳೆ ಅವರು ಉನ್ನತ ವ್ಯಾಸಂಗಕ್ಕೆ ಭಾರತಕ್ಕೆ ಬಂದರು. ಹಾಗೆ ಬಂದವರು ಪಾಕಿಸ್ತಾನಕ್ಕೆ ಮರಳಲಿಲ್ಲ. ಭಾರತದಲ್ಲಿ ಬದುಕು ಕಟ್ಟಿಕೊಂಡರು.

ಪ್ರಶೆಸ್ತಿಗಳು[ಬದಲಾಯಿಸಿ]

ವಿಜ್ಞಾನ ಕ್ಷೇತ್ರಕ್ಕೆ ಪಾಲ್ ಅವರ ಕೊಡುಗೆಗಾಗಿ ಸರ್ಕಾರ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮ ವಿಭೂಷಣ’ ನೀಡಿ ಗೌರವಿಸಿದೆ.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]