ಯರವರ ಕುಣಿತ
ಯರವರ ಕುಣಿತ ಇದನ್ನು ಒಂದು ದೇವರ ಶಕ್ತಿ ಎಂತಲೂ ಕರೆಯುತ್ತಾರೆ. ಅಮ್ಮತ್ತಿ, ಪೊನ್ನಂಪೇಟೆಯ, ಗೋಣಿಕೊಪ್ಪ ಮತ್ತು ಶ್ರೀಮಂಗಲವೂ ಸೇರಿದಂತೆ ವಿರಾಜಪೇಟೆಯ ಬಹುತೇಕ ಕಾಡುಗಳಲ್ಲಿ ಅಲ್ಲಲ್ಲೇ ನೆಲೆನಿಂತಿರುವ ಯರವರು ಒಂದು ವೈಶಿಷ್ಟ ಬುಡಕಟ್ಟು, ಕನ್ನಡ,ಕೊಡವ ಮತ್ತು ಮಳಿಯಾಳಿ ಭಾಷೆಗಳ ಪ್ರಭುತ್ವದ ನಡುವೆಯೂ ತಮ್ಮದೇ ಆದ 'ಯರವ' ಉಪಭಾಷೆಯನ್ನು ಉಳಿಸಿಕೊಂಡು ಬಂದಿರುವ ಈ ಜನಾಂಗ ಅದೇ ಭಾಷೆಯಲ್ಲಿ ಹಾಡು, ಕಥೆಗಳನ್ನು ಕಟ್ಟಿದ್ದಾರೆ.[೧],[೨] ಇವರ ಜನಾಂಗದ ಸಾಂಸ್ಕೃತಿಕ ವೀರನನ್ನು ಕುರಿತ ಮಹಾಕಾವ್ಯಗಳನ್ನು ಹಾಡುವ ಹಾಡುಗಾರರು ಇದ್ದಾರೆ.
ಹಿನ್ನೆಲೆ
[ಬದಲಾಯಿಸಿ]ದುಡಿ ಬಾರಿಸುತ್ತಾ ಹಾಡುವ ಈ ಕಾವ್ಯವನ್ನು 'ಪಟ್ಟೋರ್' ಎಂದು ಕೆಲವರು 'ಬಾಯನ' ಎಂದು ಕೆಲವರು ಕರೆಯುತ್ತಾರೆ. 'ಯರವ' ಶಬ್ದವು 'ಇರವುಳ' ಅಂದರೆ ಬೇಡುವವ ಎಂಬ ಶಬ್ದದಿಂದ ಬಂದುದಾಗಿರಬೇಕೆಂದೂ 'ಪರವ' (ಕೇರಳ) ಶಬ್ದವೇ ಯರವ ಆಗಿದೆ ಎಂದೂ ಊಹಿಸಲಾಗಿದೆ. ಪಶ್ಚಿಮ ಘಟ್ಟಗಳಲ್ಲಿ ವಾಸ ಮಾಡುತ್ತಿದ್ದ 'ಚಂಡಾಳ'ರ ಒಂದು ಭಾಗವೇ ಯರವರು ಎಂದೂ ಒಂದು ನಂಬಿಕೆ ಇದೆ. ಕೇರಳದ ವಯನಾಡು ಭಾಗದ 'ಪರವ'ರಿಗೂ ಇವರಿಗೂ ತುಂಬಾ ಹೋಲಿಕೆ ಇದ್ದು, ಹದಿನೆಂಟನೇ ಶತಮಾನದಲ್ಲಿ ಈ ಕಡೆ ವಲಸೆ ಬಂದಿರಬಹುದೆಂಬ ವಾದವೂ ಇದೆ. ಬೇರೆ ಬೇರೆ ಪ್ರದೇಶಗಳಲ್ಲಿ ಸೇರಿದ ಈ ಯರವರು ಕೊಡಗಿನ ಈ ನೆಲದಲ್ಲಿ ಒಟ್ಟಿಗೆ ಸೇರಿರಬಹುದೆಂಬ ವಾದವನ್ನು ಅವರಲ್ಲಿ ಈಗಿರುವ 'ಪಂಜರಿ ಯರವ', 'ಫಣಿ ಯರವ' ಹಾಗೂ ಬಡಗ ಎಂಬ ಪ್ರಭೇದಗಳಿಂದ ಪುಷ್ಠೀಕರಿಸಬಹುದೆಂದೂ ಹೇಳಲಾಗುತ್ತದೆ. ಒಟ್ಟಾರೆ ವೈನಾಡಿರಬಹುದು, ವಿರಾಜಪೇಟೆಯಿರಬಹುದು ಅಥವಾ ಸಹ್ಯಾದ್ರಿಯ ಯಾವುದೇ ಭಾಗದವರಿರಬಹುದು, ಇವರು ಬಹುದೂರದಿಂದ ಬಂದು ನೆಲೆಸಿದವರಂತೂ ಅಲ್ಲ. ಪಶ್ಚಿಮ ಘಟ್ಟಗಳ ಮಡಿಲಲ್ಲಿ ಬೆಳೆದು ವಿಕಾಸಗೊಂಡ ಜನಾಂಗವಿದು. ಇವರು ಯರವ ಭಾಷೆಯ ಜೊತೆಗೆ ಕನ್ನಡ, ಕೊಡವ ಮತ್ತು ಕೆಲವರು ಮಲಯಾಳಿ ಭಾಷೆಯನ್ನು ಬಲ್ಲವರಾಗಿದ್ದಾರೆ.
ಯರವರ ಹಿಮ್ಮಖವಾದ್ಯ
[ಬದಲಾಯಿಸಿ]ಯರವರು ದುಡಿತದ ದಣಿವಾರಿಸಿಕೊಳ್ಳಲು ನೋವುಗಳನ್ನು ಮರೆಯಲು ರಾತ್ರಿ ಹೊತ್ತು ಸಾಮೂಹಿಕ ಕುಣಿತ ಮತ್ತು ಹಾಡುಗಳಿಗೆ ಪರವಶರಾಗುತ್ತಾರೆ. ಯರವರ ಕುಣಿತದ ವಿಶೇಷವೆಂದರೆ ಕುಣಿತದಲ್ಲಿ ಇಷ್ಟೇ ಜನರಿರಬೇಕೆಂದಾಗಲೀ,ಇಂಥವರೇ ಇರಬೇಕೆಂದಾಗಲೀ ಯಾವುದೇ ಕಟ್ಟು ಪಾಡುಗಳಿಲ್ಲ. ಹಿನ್ನೆಲೆಗೆ ಪ್ರಧಾನವಾಗಿ ಬಳಸುವುದು 'ದುಡಿ' ಮತ್ತು 'ಜೀನಿ ವಾದ್ಯ'. ದುಡಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಕೊಡಗಿನ ಗಿರಿಜನರಲ್ಲಿ ಬಳಕೆಯಲ್ಲಿರುವ ಜನಪ್ರಿಯ ಚರ್ಮವಾದ್ಯ. ಆದರೆ ಯರವರ 'ಚೀನಿ ವಾದ್ಯ'ತುಂಬಾ ವಿಶೇಷವಾದ ಗಾಳಿವಾದ್ಯ. ಶ್ರುತಿ ಮೊದಲುಗೊಂಡು ಇದನ್ನು ಪೂರ್ತಿ ಮರದಿಂದಲೇ ಮಾಡಿರುತ್ತಾರೆ. ಒಂದು ರೀತಿಯ ಗುಂಗು ತುಂಬುವ ನಾದವಿಶೇಷ. ಇದನ್ನು ಯರವರೇ ತಯಾರು ಮಾಡಿಕೊಳ್ಳುತ್ತಾರೆ.
ಯರವರ ಕುಣಿತ ಹಾಡು
[ಬದಲಾಯಿಸಿ]ಪಲ್ಲವಿ:
ಯರವರ ಎಳೆಗೈಯಲಿ ಚಿಮ್ಮರಿ ನಾದ,
ಎಲ್ಲರೂ ಬನ್ನಿ ಕುಣಿಯೋಣ ಗೆಳೆಯರ ಜೊತೆ.
ತಾಳದ ಹೊಳೆಯಲಿ ದೋಳ್ಳು ಬಾರಿಸಿ,
ನಮ್ಮ ಹಬ್ಬದ ಸಂತೋಷ ತೋರಿಯೋಣ.
ಚರಣ:
ಬೆಟ್ಟದ ತಿರುವಿನಲ್ಲಿ ಹೆಂಗಸುಗಳು ಚೆಲುವೆಲಿ,
ಗಂಡಸರು ಡೊಳ್ಳು ತಾಳ ಬೀಸುತ್ತಾ,
ಹೋಯ್ ಹೋಯ್ ಯರವರ ಕುಣಿತ,
ನಮ್ಮ ಸಂಸ್ಕೃತಿ, ನಮ್ಮ ಪ್ರೀತಿ ತೋರಿಸೋಣ.
ಮುಗಿಯುವ ಭಾಗ:
ಗಾಳಿಯಲಿ ನಾದ ಹರಿದು ಬಂದು,
ನೃತ್ಯದ ಹೊಳೆಯಲಿ ಎಲ್ಲರೂ ಸಂತೋಷದಿಂದ ಕುಣಿಯೋಣ.
ಕುಣಿಯುವ ವಿಧಾನ
[ಬದಲಾಯಿಸಿ]ದುಡಿಯ ಲಯಬದ್ಧ ಬಡಿತಕ್ಕೆ ಬಾಗಿ ಬಾಗಿ ಜೋಲಿ ಹೊಡೆಯುತ್ತಾ ಕುಣಿಯುತ್ತಾರೆ. ಮಹಿಳೆಯರು ಮತ್ತು ಮಕ್ಕಳು, ಪುರುಷರನ್ನೊಳಗೊಂಡ ಒಟ್ಟಾಗಿ ಸೇರಿ ಮಾಡುವ ಸಾಮೂಹಿಕ ನೃತ್ಯವಿದು. ಯರವರ ಗಂಡಸರೇ ಕುಣಿಯುವ ಕೊಡವ ನೃತ್ಯದ ಮಾದರಿ ಯಾದ 'ಯರವಟ್' ನೃತ್ಯವೂ ಬಳಕೆಯಲ್ಲಿ ಇದೆ.