ಯಂತ್ರ ಮಂತ್ರ

ವಿಕಿಪೀಡಿಯ ಇಂದ
Jump to navigation Jump to search

ಜಂತರ್ ಮಂತರ್

ಜಂತರ್ ಮಂತರ್ ಒಂದು ವಿಷು ಆಧಾರಿತ ಕಾಲಮಾಪಕ. ಇದರ ಕರ್ಣ ರೇಖೆಯು ಭೂಮಿಯ ಅಕ್ಷಕ್ಕೆ ಸಮಾನಾಂತರವಾಗಿದ್ದು, ಒಂದು ದೊಡ್ಡ ತ್ರಿಕೋನಾಕಾರದ ಸಮಯ ಸೂಚಕ ಹೊಂದಿದೆ. ಈ ಸಮಯ ಸೂಚಕದ ಎರಡೂ ಬದಿಗೆ ಸಮಭಾಜಕ ವೃತ್ತದ ಸಮತಲಕ್ಕೆ ಸಮಾನಾಂತರವಾದ ವೃತ್ತದ ಕಾಲು ಭಾಗದ ಆಕಾರವಿದೆ. ಇದನ್ನು ಅರ್ಧ ಸೆಕೆಂಡಿನಷ್ಟು ನಿಖರವಾಗಿ ದಿನದ ಸಮಯವನ್ನು ಅಳೆಯಲು ಉಪಯೋಗಿಸಲಾಗುತ್ತಿತ್ತು.

ವ್ಯುತ್ಪತ್ತಿ[ಬದಲಾಯಿಸಿ]

ಉಪಕರಣ ಎಂಬ ಅರ್ಥ ಬರುವ ಯಂತ್ರ ಮತ್ತು ಸೂತ್ರ ಅಥವಾ ಲೆಕ್ಕಾಚಾರ ಎಂಬ ಅರ್ಥ ಬರುವ ಮಂತ್ರ - ಈ ಎರಡು ಪದಗಳಿಂದ ಯಂತ್ರ ಮಂತ್ರ ಎಂಬ ಹೆಸರು ಬಂದಿದೆ. ಹಾಗಾಗಿ, ಯಂತ್ರ ಮಂತ್ರ ಎಂದರೆ ಗಣಕೋಪಕರಣ ಎಂಬ ಅರ್ಥ ಬರುತ್ತದೆ.

ಇತಿಹಾಸ[ಬದಲಾಯಿಸಿ]

೧೮ನೇ ಶತಮಾನದ ಮೊದಲ ಭಾಗದಲ್ಲಿ ಜೈಪುರದ ಎರಡನೇ ಮಹಾರಾಜಾ ಜೈ ಸಿಂಗ್‌ನು ದೆಹಲಿ, ಜೈಪುರ, ಉಜ್ಜಯಿನಿ, ಮಥುರಾ ಮತ್ತು ವಾರಣಾಸಿ - ಈ ಐದು ಸ್ಥಳಗಳಲ್ಲಿ ಕಟ್ಟಿಸಿದನು. ಅವುಗಳನ್ನು ೧೭೨೪ ಮತ್ತು ೧೭೩೫ರ ನಡುವೆ ಕಟ್ಟಲಾಯಿತು. ಅವುಗಳಲ್ಲಿ ಮುಖ್ಯವಾದವು:

ಈ ಯಂತ್ರಗಳಿಗೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೆಕ್ಕಾಚಾರಗಳನ್ನು ಮಾಡಲು ಬಳಸುವ ಸಾಮ್ರಾಟ್ ಯಂತ್ರ, ಜಯ ಪ್ರಕಾಶ, ರಾಮ ಯಂತ್ರ, ನಿಯತಿ ಚಕ್ರ ಮುಂತಾದ ಹೆಸರುಗಳಿವೆ. ಈ ಕಟ್ಟಡದ ಮೂಲ ಉದ್ದೇಶ ಜ್ಯೋತಿಷ್ಯದ ಲೆಕ್ಕಾಚಾರಗಳನ್ನು ಮಾಡುವುದು ಮತ್ತು ಸೂರ್ಯ, ಚಂದ್ರ ಹಾಗೂ ಗ್ರಹಗಳ ಚಲನೆಯನ್ನು ಗುರುತಿಸುವುದಾಗಿತ್ತು.