ವಿಷಯಕ್ಕೆ ಹೋಗು

ಮ್ಯಾಕಲಝೇರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ಚಿಕ್ಕದಾದರೂ ಚೊಕ್ಕಾಗಿರಬೆಕು" ಎನ್ನುವ ನಾಣ್ಣುಡಿಗೆ  ಅರ್ಥಪೂರ್ಣ ಗ್ರಾಮ ಮ್ಯಾಕಲಝೇರಿ. ಇದು ಒಂದು ರೋಣ ತಾಲುಕಿನ ಚಿಕ್ಕ ಗಡಿ ಗ್ರಾಮವಾಗಿದ್ದು ಗದಗ -ಇಲಕಲ್ಲ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ.ಇದರ ಹೇಸರೆ ಹೇಳುವಂತೆ ಅತ್ಯಂತ ಎತ್ತರದ ಪ್ರದೇಶದಲ್ಲಿ (ಮ್ಯಾಕ) ಇದ್ದು ಅದೇಷೇ ಮಳೇ ಬಿದ್ದರು ಒಂದು ಹನಿ ನೀರು ಗ್ರಾಮದಲ್ಲಿ ನಿಲ್ಲದೆ ತನ್ನಷ್ಟಕ್ಕೇ ತಾನೇ ಹರಿದುಹೊಗುತ್ತದೆ. ಈ ಗ್ರಾಮದ ಭೂಮಿಯ ತಳಮಟ್ಟ ಸಂಪೂರ್ಣ ಕಲ್ಲಿನ ಜರಿಯಿಂದ ಕೂಡಿದೆ (ಕಲ+ಝೇರಿ). ಆದ್ದರಿಂದ ಈ ಗ್ರಾಮಕ್ಕೆ ಮ್ಯಾಕಲಝೇರಿ ಎಂದು ಹೇಸರು ಬಂದಿದೆ ಎಂದು ಪ್ರತೀತ ಇದೆ.

ಗ್ರಾಮದ ವೈಶಿಷ್ಟ್ಯಗಳು:

ಒಟ್ಟು ಮತದಾರರು: ೪೯೨ ( ೨೦೧೩ ಚುನಾವಣಾ ಅಂಕಿಅಂಶ). ೨೦೧೫ರ ವರೆಗೆ ಇದು ಕೇವಲ ಒಬ್ಬ ಗ್ರಾಮ ಪಂಚಾಯತಿ ಸದಸ್ಯರಿಂದ ಒಳಗೊಂಡಿತ್ತು. ೨೦೧೬ ರಿಂದ ಎರಡು ಗ್ರಾಮ ಪಂಚಾಯತಿ ಸದಸ್ಯರನ್ನು ಒಳಗೊಂಡಿದ್ದು ಕುಂಟೋಜಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರತ್ತದೆ. ಈ ಊರಿನ ಭೂಮಿ ಅತಿ ಹೆಚ್ಚು ಕೆಂಪುಮಣ್ಣಿನಿಂದ (ಮಸಾರಿ) ಕೂಡಿದ್ದು, ಮೂಲ ಉದ್ಯೋಗ ಕೃಷಿಯಾಗಿದ್ದು ಎಲ್ಲಾ ತರಹದ ಆಹಾರ ಧಾನ್ಯಗಳಾದ ಜೋಳ, ಸಜ್ಜೆ, ತೊಗರಿ, ಶೆಂಗಾ, ಮೆಕ್ಕೆಜೋಳ (ಮುಸುಕಿನ ಜೋಳ), ಭತ್ತ ಮತ್ತು ಸೂರ್ಯಕಾಂತಿ ಇಲ್ಲಿನ ಮುಖ್ಯ ಬೆಳೆಗಳಾಗಿವೆ ಇಂದು. ರೇಷ್ಮೆ ಕೃಷಿ ಅತಿಹೆಚ್ಚಾಗಿದ್ದು, ಗುಡು ಮಾರಾಟಕ್ಕೆ ರಾಮನಗರ ಮುಖ್ಯ ಮಾರುಕಟ್ಟೆಯಾಗಿದೆ. ಈ ಬೆಳೆಗಳನ್ನು ಬೇಳೆಯಲು ಅಂತರ್ಜಲವೇ ಮುಖ್ಯ ನೀರಿನ ಮೂಲವಾಗಿದೆ, ಏಕೆಂದರೆ ಯಾವುದೇ ನೈಸರ್ಗಿಕ ನೀರಿನ ಮೂಲಗಳು ಸೌಕರ್ಯಗಳಿಲ್ಲದಿರುವುದು.

ಕಳೆದ ೧೦ ವರ್ಷಗಳಲ್ಲಿ ಅನೇಕ ಬದಲಾವಣೆಗಳನ್ನು ಕಡ್ಡಿದ್ದು ರಾತ್ರಿ ವಿದ್ಯುತ್ ಇಲ್ಲವಾದರೆ ಸೌರ  ದಿಪಗಳಿಂದ ಬೆಳಗುತ್ತದೆ. ಅಂತರ್ಜಲದ ಸಮಸ್ಯೆಯಿಂದಾಗಿ ಇಂದು ಹೈನುಗಾರಿಕೆ ಇಲ್ಲಿನ ಮೂಲ ಕಸುಬಾಗಿ ಕಂಡುಬರುತ್ತಿದೆ. ಈ ಗ್ರಾಮದ ಸುತ್ತಮುತ್ತ ಅನೇಕ ದಾರ್ಶನಿಕ ಸ್ಥಳಗಳಿಂದ ಕೂಡಿದೆ, ಮೂಖ್ಯವಾಗಿ ಕಾಲಾಕಾಲೇಶ್ವರ, ಮಳಿಯಮ್ಮ, ಗಜೇಂದ್ರಗಡ ಇತ್ಯಾದಿ.

ನಮ್ಮೂರು ಹಾಗು ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಂದಿಗೂ ವರ್ಷಕೊಂದಾದರು ರಂಗಭೂಮಿಯ ಕಲೆಯ ಪ್ರದರ್ಶನವನ್ನು ಗ್ರಾಮದ ಯುವಕರು ಪ್ರದರ್ಶಿಸಿವರು.