ಮೋಹನ್ ಆಳ್ವ

ವಿಕಿಪೀಡಿಯ ಇಂದ
(ಮೋಹನ್ ಆಳ್ವ ರ ಜೀವನ ಚರಿತ್ರೆ ಇಂದ ಪುನರ್ನಿರ್ದೇಶಿತ)
Jump to navigation Jump to search
Side.jpg

ಮೂಡಬಿದಿರೆ ಒಂದು ಸಣ್ಣ ಪಟ್ಟಣ, ಇಲ್ಲಿನ ಜನರಿಗೆ ವೃತ್ತಿಪರ ಮತ್ತು ವೃತ್ತಿಪರವಲ್ಲದ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಲು ಕಷ್ಟವಾಗಿತ್ತು. ಅವರು ಉನ್ನತ ಶಿಕ್ಷಣಕ್ಕಾಗಿ 40-50 ಕಿ.ಮೀ ದೂರ ಪ್ರಯಾಣಿಸುತ್ತಿದ್ದರು.ಜನರ ಸಹಾಯಕ್ಕೆಂದೆ ಮುಂದಾಗಿದ್ದ ಆಳ್ವರವರು ಇವರ ತೊಂದರೆಗಳನ್ನು ಅರಿತು, ೧೯೯೫ ರಲ್ಲಿ "ಆಳ್ವ ಶಿಕ್ಷಣ ಫೌಂಡೇಶನ್ " ಸ್ಥಾಪಿಸಿ ಮೂಲಭೂತ ಶಿಕ್ಷಣ ನೀಡುವ ಯೋಜನೆ ಇಟ್ಟುಕೊಂಡು ಇದರ ಅಡಿಯಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣಗಳಾದ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಶಿಕ್ಷಣ ಒದಗಿಸಿ ನಂತರ ಅವರು ವೈದ್ಯಕೀಯ ವಿಜ್ಞಾನ ಸಂಸ್ಥೆಗಳಾದ ಆಯುರ್ವೇದ, ಹೋಮಿಯೋಪತಿ, ನ್ಯಾಚುರೋಪತಿ ಮತ್ತು ಯೋಗ ಪದವಿ ಹಾಗು ಉನ್ನತ ಶಿಕ್ಷಣಕ್ಕಾಗಿ ಆಯುರ್ವೇದ ಮತ್ತು ಪ್ಯಾರಾ ಮೆಡಿಕಲ್ ಶಿಕ್ಷಣದಡಿಯಲ್ಲಿ ನರ್ಸಿಂಗ್, ಫಿಸಿಯೋಥೆರಪಿ ಮತ್ತು ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನವನ್ನು ಸ್ಥಾಪಿಸಿ, ಇಂಜಿನಿಯರಿಂಗ್ & ಟೆಕ್ನಾಲಜಿ ಆಳ್ವ ಇನ್ಸ್ಟಿಟ್ಯೂಟ್ ಎಂಬ ಪೂರ್ಣ ಪ್ರಮಾಣದ ಇಂಜಿನಿಯರಿಂಗ್ ಕಾಲೇಜನ್ನು ಆರಂಭಿಸಿದರು.[೧]

ಪರಿಚಯ[ಬದಲಾಯಿಸಿ]

ಡಾ.ಎಂ.ಮೋಹನ್ ಆಳ್ವ ಮೂಡುಬಿದಿರೆ ಸಮೀಪದ ಮಿಜಾರು ಎಂಬ ಸಣ್ಣ ಹಳ್ಳಿಯಲ್ಲಿ ಮೇ 31, 1952 ರಂದು ಕೃಷಿಕ ಕುಟುಂಬದಲ್ಲಿ ಜನಿಸಿದರು. ಇವರು ತಮ್ಮ ಸ್ಥಳೀಯ ಹಳ್ಳಿಯಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದು ನಂತರ ಅವರು ಉನ್ನತ ಶಿಕ್ಷಣವನ್ನು ಉಡುಪಿಯ ಆಯುರ್ವೇದ ಔಷಧದಲ್ಲಿ ಪದವಿ ಪಡೆದುಕೊಂಡರು. ತಮ್ಮ ಪರಿಶ್ರಮದಿಂದ ಅವರು ಶಿಕ್ಷಣ, ಭಾರತೀಯ ವೈದ್ಯಕೀಯ, ಕ್ರೀಡಾ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿದ್ದರು. ಡಾ. ಆಳ್ವ ರವರು ಸ್ವಯಂ ಮತ್ತು ನಿಸ್ವಾರ್ಥ ಸೇವೆಯ ಸಾಕಾರ. ಈ ಮೌಲ್ಯಗಳಿಂದ ಅವರು 8,500 ಕ್ಕೂ ಹೆಚ್ಚು ಯುವ ವಿದ್ಯಾರ್ಥಿಗಳಿಗೆ ಆಳ್ವ ಶಿಕ್ಷಣ ಪ್ರತಿಷ್ಠಾನದ ವಿವಿಧ ಸಂಸ್ಥೆಗಳಲ್ಲಿ ಅಧ್ಯಯನವನ್ನು ಕಲ್ಪಿಸಿಕೊಟ್ಟಿದ್ದಾರೆ. ತಮ್ಮ ಉದಾರತೆ ಮತ್ತು ಜಾತಿ, ಜನಾಂಗ, ಲೈಂಗಿಕ ಮತ್ತು ಧರ್ಮಗಳನ್ನು ಪರಿಗಣಿಸದೆ ನಿಜವಾದ ಅರ್ಥದಲ್ಲಿ ಬಡವರಿಗಾಗಿ ಶ್ರಮಿಸಿದರು. ಪ್ರಮುಖವಾಗಿ ಅವರು ಎಚ್ಐವಿ ಪೀಡಿತರತ್ತ ಕಾಳಜಿವಹಿಸುತ್ತಿದ್ದರು. ಭಾರತೀಯ ಶಾಸ್ತ್ರೀಯ ಮತ್ತು ಸಾಂಪ್ರದಾಯಿಕ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನರಲ್ಲಿ ಇವುಗಳ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದ್ದಾರೆ. ಇವರು ಒದು ಬರಹವಲ್ಲದೆ ನೃತ್ಯಗಳತ್ತ ಸಹ ಆಸಕ್ತಿಯನ್ನು ಹೊಂದಿದ್ದಾರೆ.[೨]

Kenchu.jpg

ಆಳ್ವಾಸ್ ಶಿಕ್ಷಣ ವ್ಯವಸ್ಥೆ[ಬದಲಾಯಿಸಿ]

೨೦,೦೦೦ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಸಂಸ್ಥಾಪಕ ಅಧ್ಯಕ್ಷರು ಡಾ ಎಂ ಮೋಹನ್ ಆಳ್ವ ನಾಯಕತ್ವದ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಡಿಯಲ್ಲಿ ವಿವಿಧ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇಲ್ಲಿ ಬೋಧನಾ ವಿಧಾನ ಪಠ್ಯಕ್ರಮದ ಮಿತಿ ಇಲ್ಲದೆ, ವ್ಯಕ್ತಿತ್ವ ಬೆಳವಣಿಗೆ, ಸಾಂಸ್ಕೃತಿಕ ಚಟುವಟಿಕೆಗಳು, ಕ್ರೀಡೆಗಳು ಮತ್ತು ಆಟಗಳು, ಫೈನ್ ಆರ್ಟ್ಸ್ ಮತ್ತು ತರಬೇತಿ ಪಡೆದ ಶಿಕ್ಷಕರ ಅಡಿಯಲ್ಲಿ ರಾಷ್ಟ್ರೀಯ ಏಕೀಕರಣ ಕಡೆಗೆ ಇತರ ಸಾಮಾಜಿಕ ತರಬೇತಿಯನ್ನು ಪರಿಪೂರ್ಣವಾಗಿ ವಿಸ್ತರಿಸಿದೆ. ಆಳ್ವ ಸ್ ಎಜುಕೇಶನ್ ಫೌಂಡೇಶನ್ ಅಡಿಯಲ್ಲಿ ಶಿಕ್ಷಣ ಒದಗಿಸುವುದು ಒಂದು ಅನನ್ಯ ಯೋಜನೆಯನ್ನು ಹೊಂದಿದೆ. 1995 ರಿಂದ ಅವರು ಆರಂಭಿಸಿದೆ ಆಳ್ವಾಸ್ ಎಜುಕೇಶನ್ ಸಂಸ್ಥೆಗಳು ಅಂತಾರಾಷ್ಟ್ರೀಯ ಶೈಕ್ಷಣಿಕ ಟೌನ್ಶಿಪ್ ಒಳಗೆ ಮೂಡಬಿದಿರೆಯನ್ನು ವರ್ಗಾಯಿಸಲ್ಪಡುತ್ತದೆ.[೩]

ಮೆಡಿಕಲ್ ವಿಜ್ಞಾನ ಸಂಸ್ಥೆಗಳು[ಬದಲಾಯಿಸಿ]

ಆಳ್ವ ಸ್ ಎಜುಕೇಶನ್ ಫೌಂಡೇಶನ್ ಅಡಿಯಲ್ಲಿ ಏಳು ಸಂಸ್ಥೆಗಳು ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ, ಬೆಂಗಳೂರು ಸಂಸ್ಥೆಯ ನೋಂದಣಿಯ ಆಳ್ವಾಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ (1996 ರಲ್ಲಿ ಸ್ಥಾಪನೆ), ಆಳ್ವಾಸ್ ನರ್ಸಿಂಗ್ ಕಾಲೇಜ್ (1996 ರಲ್ಲಿ ಸ್ಥಾಪನೆ); ಆಳ್ವ ಸ್ ಪ್ರಕೃತಿ ಚಿಕಿತ್ಸಾ ಪದ್ಧತಿ ಮತ್ತು ಯೋಗ ರೀತಿಯ ವಿಜ್ಞಾನ ಕಾಲೇಜ್ - (1998 ರಲ್ಲಿ ಸ್ಥಾಪನೆ); ಆಳ್ವಾಸ್ ವೈದ್ಯಕೀಯ ಲ್ಯಾಬ್ ಟೆಕ್ನಾಲಜಿ ಕಾಲೇಜ್ (2000 ರಲ್ಲಿ ಸ್ಥ ಪನೆ), ಆಳ್ವಾಸ್ ಹೋಮಿಯೋಪತಿ ವೈದ್ಯಕೀಯ ಕಾಲೇಜು[೪] (2005 ರಲ್ಲಿ ಸ್ಥಾಪನೆ) ಮತ್ತು ಆಳ್ವಾಸ್ ಆಸ್ಪತ್ರೆಯನ್ನು ಪ್ರಾರಂಬಿಸಿದರು. ಆಳ್ವಾಸ್ ಇಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ ( 2008-09) ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ನೋಂದಾಹಿಸಲಾಗಿದೆ.

ತಾಂತ್ರಿಕ, ಪದವಿ, ಶಿಕ್ಷಣ ಪದವಿ, ಪದವಿಪೂರ್ವ ಮತ್ತು ಪ್ರೌಢ, ಪ್ರಾಥಮಿಕ ಸಂಸ್ಥೆಗಳು[ಬದಲಾಯಿಸಿ]

ಹಲವಾರು ಆಳ್ವ ಸ್ ಸಂಸ್ಥೆಗಳು ಮಂಗಳೂರು ವಿವಿಯಲ್ಲಿ ನೋಂದಾಹಿಸಲಾಗಿದೆ ಅದರಲ್ಲಿ ಆಳ್ವ ಸ್ ಕಾಲೇಜ್ - 1998 (B.Sc. ಪದವಿ - ಸಿಬಿಝಡ್, ಜೈವಿಕ ತಂತ್ರಜ್ಞಾನ, ಬೂ-ರಸಾಯನಶಾಸ್ತ್ರ, ಮೈಕ್ರೋಬಯಾಲಜಿ, ಕಂಪ್ಯೂಟರ್ ಸೈನ್ಸ್,, ಹಾಸ್ಪಿಟಲ್ ಸೈನ್ಸ್,, ಬಿ.ಎಪ್.ಎನ್.ಡಿ), (ಬಿಎ - ಇಂಗ್ಲೀಷ್, ಪತ್ರಿಕೋದ್ಯಮ, ಕನ್ನಡ, ಬಿ.ಎಹ್.ಆರ್,ಡಿ, ಕಂಪ್ಯೂಟರ್ ಸೈನ್ಸ್,, ದೈಹಿಕ ಶಿಕ್ಷಣ, B.Com, B.CA, ಬಿಬಿಎಂ), ಆಳ್ವ ಸ್ ಸಮಾಜ ಸೇವೆ ಕಾಲೇಜ್ -2000 (BSW, MSW ಇದು), ಆಳ್ವ ಸ್ ಶಿಕ್ಷಣ ಕಾಲೇಜ್ - 2005 (B.Ed.) ಮತ್ತು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜ್ - 2005 (BPEd.). ಆಳ್ವ ಸ್ ಪದವಿ ಪೂರ್ವ ಕಾಲೇಜ್ - 1999 (ಕಲೆ, ವಿಜ್ಞಾನ, ವಾಣಿಜ್ಯ) ಸ್ಥಾಪಿಸಲಾಗಿದೆ. ಆಳ್ವ ಸ್ ಎಜುಕೇಶನ್ ಸಂಸ್ಥೆಯು ಮೊತ್ತ ಮೋದಲ ಬಾರಿಗೆ ಪಿಜಿ ಇನ್ ( M.Sc. ಬಯೋಟೆಕ್ನಾಲಜಿ, M.Sc.ಗಣಿತ, MHRD, ಮತ್ತು M.Com.) ಪ್ರಾರಂಬಿಸಿದ ಮೊದಲ ಶೈಕ್ಷಣಿಕ ಸಂಸ್ಥೆಯಾಗಿದೆ.[೫]

ಆಳ್ವಾಸ್ ಸಂಸ್ಥೆಯ ಸೇವೆಗಳು[ಬದಲಾಯಿಸಿ]

  1. ಡಾ ಆಳ್ವ ರವರ ವಿಶೇಷ ವೆಕ್ತಿತ್ವದಿಂದ ಮಾನಸಿಕ ಸವಾಲು ಎದರಿಸುವ ಮಕ್ಕಳಿಗೆ ಗುಣಮಟ್ಟದ ಜೀವನ ಮತ್ತು ಶಿಕ್ಷಣ ಒದಗಿಸುವ ದೃಶ್ಟಿಯಿಂದ ಮೋಹಿನಿಯ ಅಪಾಜಿ ನಾಯಕ್ ಸ್ಮಾರಕ ವಿಶೇಷ ಸ್ಕೂಲನ್ನು ದತ್ತು ಪಡೆದರು. ಶ್ರೀಮತಿ ಲೇಟ್ ಮೋಹಿನಿಯ ಅಪಾಜಿ ನಾಯಕ್‍ರವರು ವಿಶೇಷ ಅಗತ್ಯವುಳ್ಳ ಮಕ್ಕಳ ಸೇವೆಗಾಗಿ ತನ್ನ ಸಂಪೂರ್ಣ ಜೀವನವನ್ನು ಕಳೆದರು.ಡಾ ಆಳ್ವ ರವರು ಪವಿತ್ರ ಮದರ್ ತೆರೇಸಾ ಸ್ಮರಣಾರ್ಥವಾಗಿ ಮೂಡಬಿದಿರೆಯ ಸುಮಾರು 700 ವಿಕಲಾಂಗ ಮಕ್ಕಳಿಗೆ ಸ್ಕಲ್ರ್ ಶಿಪ್ ನಿಡುತ್ತ ಬಂದ್ದಿದಾರೆ. 2008 ರಲ್ಲಿ ಆಳ್ವ ರವರ ಬೆಳವಣಿಗೆಯ ಅಸಾಮರ್ಥ್ಯ ಮಕ್ಕಳಿಗೆ ಗುಣಮಟ್ಟದ ಜೀವನ ಮತ್ತು ಶಿಕ್ಷಣ ಒದಗಿಸುವ ಸಲುವಾಗಿ ಒಂದು ಶಾಲೆಯ ಆರಂಭಿಸಲು ನಿರ್ಧರಿಸಿದ್ದರು. ಪ್ರಸ್ತುತ 25 ಮಕ್ಕಳು,ವಿಶೇಷವಾಗಿ ತರಬೇತಿ ಪಡೆದ ಶಿಕ್ಷಕರು ಮತ್ತು ಸಾಮಾಜಿಕ ಕೆಲಸಗಾರರ ಮೂಲಕ.ತರಬೇತಿ ಪಡೆಯುತ್ತಿದ್ದಾರೆ. ಯಾವುದೆ ಹಣಕಾಸಿನ ನೆರವು ಅಥವಾ ಬೆಂಬಲವಿಲ್ಲದೆ ಇವರು ಈ ಶಾಲೆಯನ್ನು ನಡೆಸುತ್ತಿದ್ದರೆ. ಮೂಡಬಿದ್ರೆ ಮತ್ತು ಸುಮಾರು ಬಡ ಗ್ರಾಮೀಣ ಶಾಲೆಗಳಿಗೆ ಶಿಕ್ಷಕರ ತುರ್ತು ಅವಶ್ಯಕತೆ ಅರಿತ 25-30 ಶಿಕ್ಷಕರನು ಒದಗಿಸಿ, ಶಿಕ್ಷಕರ ಮಾಸಿಕ ವೇತನವನ್ನು ನೋಡಿಕೊಳ್ಳುತ್ತಿದ್ದಾರೆ. ಈ ವರ್ಷವು 30 ಶಿಕ್ಷಕರನ್ನು ಡಾ ಆಳ್ವರವರು ಹಿಂದುಳಿದ ಗ್ರಾಮೀಣ ಶಾಲೆಗಳಿಗೆ ಉಚಿತವಾಗಿ ನೀಡ್ಡಿದ್ದಾರೆ.
  2. ಡಾ ಮೋಹನ್ ಆಳ್ವರವರು ಮೊಟ್ಟ ಮೊದಲ ಬಾರಿಗೆ ವಿದ್ಯಾರ್ಥಿ ದತ್ತು ಯೋಜನೆಯಡಿಯಲ್ಲಿ ರಾಜ್ಯದ ಈ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಆಹಾರ ಮತ್ತು ವಸತಿ ಜೊತೆ 'ಉಚಿತ ಶಿಕ್ಷಣ', ಮತ್ತು ಒಟ್ಟು ಶುಲ್ಕ ವಿನಾಯಿತಿ ಒದಗಿಸುತ ಬಂದಿದ್ದಾರೆ. 8,500 ವಿದ್ಯಾರ್ಥಿಗಳಲ್ಲಿ 700 ವಿದ್ಯಾರ್ಥಿಗಳು ಈ ಯೋಜನೆಯಡಿಯಲ್ಲಿ ತರಲಾಗುತ್ತಿದೆ. ಈ ಯೋಜನೆ ಯಾವುದೆ ಜಾತಿ, ಮತ, ಧರ್ಮ, ಸಮುದಾಯ ತಾರತಮ್ಯವಿಲ್ಲದೇ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಕಲ್ಪಿಸಲಾಗಿದೆ.

ಕ್ರೀಡೆ ಪ್ರೋತ್ಸಾಹ[ಬದಲಾಯಿಸಿ]

ಡಾ ಮೋಹನ್ ಆಳ್ವರವರು ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರೋತ್ಸಾಹ ಉಪಕ್ರಮಗಳಿಗೆ ಹೆಸರುವಾಸಿಯಾಗಿದೆ.ಅವರ ಕಾಲೇಜು ದಿನಗಳಲ್ಲಿ ಉತ್ತಮ ಕ್ರೀಡಾಪಟು, ಅವರ ಉತ್ಸಾಹ ಮತ್ತು ಪ್ರಬಲ ದೃಷ್ಟಿಯಿಂದ ಯುವಕ ಯುವತಿಯರನ್ನು ಪ್ರೋತ್ಸಾಹಿಸಲು 'ಏಕಲವ್ಯ ಸ್ಪೋರ್ಟ್ಸ್ ಕ್ಲಬ್.1984 ರಲ್ಲಿ ಸ್ಥಾಪಿಸಿದರು. ನಂತರ ಸುಮಾರು 600 ಗೆ 650 ವಿದ್ಯಾರ್ಥಿಗಳು ಈ ಯೋಜನೆಯಡಿಯಲ್ಲಿ ಸರಿಯಾಗಿ ತರಬೇತಿ ನೀಡಿ ಉಚಿತ ಆಹಾರ ಮತ್ತು ವಸತಿಯನ್ನು ಕಲ್ಪಿಸಲಾಗಿದೆ.ಈಗ ಸುಮಾರು 100 ಕ್ರೀಡಾ ಪುರುಷರು ಮತ್ತು ಮಹಿಳೆಯರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಳ್ವಸ್ ಶಿಕ್ಷಣ ಸಂಸ್ಥೆಗೆ ಉತ್ತಮ ಹೆಸರು ತಂದುಕೊಟ್ಟಿದಾರೆ ಮತ್ತು ಈಗ ಅವರು ಚೆನ್ನಾಗಿ ಜೀವನದಲ್ಲಿ ಮುಂದುವರಿಯುತ್ತಿದಾರೆ, 2008 ರಲ್ಲಿ ಸುಮಾರು 200 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಆಹಾರ ಮತ್ತು ಸೌಕರ್ಯಗಳನ್ನು ಕ್ರೀಡಾ ವಿಭಾಗದಲ್ಲಿ ಕಲ್ಪಿಸಿಕೋಟ್ಟಿದ್ದಾರೆ.

ಆರೋಗ್ಯ ಸೇವೆ[ಬದಲಾಯಿಸಿ]

ಡಾ ಆಳ್ವರು ಅನುಭವಿಸಿದ ಅಪಾಯಗಳು ಮತ್ತು ಅನಿಶ್ಚಿತತೆ ಹೊರತಾಗಿಯೂ ದಿಟ್ಟ ನಡೆಯಿಂದ ವಿಶೇಷ ವೈದ್ಯಕೀಯ ಸೇವೆಗಳನ್ನು, ಸುಸಜ್ಜಿತ 300 ಹಾಸಿಗೆಯ 'ಆಲ್ವಾಸ್ ಆರೋಗ್ಯ ಕೇಂದ್ರ 'ದಲ್ಲಿ ಅನುಭವಿ ವೈದ್ಯರು ಮತ್ತು ಬಹು ವಿಶೇಷ ವೈದ್ಯಕೀಯ ಸೇವೆಯನ್ನು ಕಲ್ಪಿಸಿದ್ದಾರೆ. ಇಲ್ಲಿನ ಜನರು ವೈದ್ಯಕೀಯ ಸೇವೆಗಾಗಿ 35-40 ಕಿ ದೂರ ದಣಿದು ಮಂಗಳೂರು ತೆರಳಬೇಕಿತ್ತು, ಇಲ್ಲಿನ ಜನರ ಸೇವೆ ಮಾಡಲು ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದ್ದರು. ಅವರು ಮೂಡಬಿದ್ರೆ ಜಿಲ್ಲೆಯಲ್ಲಿ ಮೊದಲ ಹಾವು ಕಡಿತದ ಚಿಕಿತ್ಸ ಕೇಂದ್ರವನ್ನು ಸ್ಥಾಪಿಸಿದರು. ಅನನ್ಯ ಪ್ರಕರಣಗಳಲ್ಲಿ ಇದುವರೆಗೂ 2 ಅಥವಾ 3 ಸಾವಿನ ಪ್ರಕರಣಗಳು ಹೊರತುಪಡಿಸಿ ಹಾವು ಕಡಿತದಿಂದ ಸುಮಾರು 6000 ಪ್ರಕರಣಗಳಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. 1990 ರಲ್ಲಿ ಅವರು ಸ್ಥಾಪಿಸಿದ ಉಚಿತ ಬರ್ತ್ ಕಂಟ್ರೋಲ್ ಸೆಂಟರ್ ಅಲ್ಲಿ, ಸಾವಿರಾರು ಜನರು ಆಳ್ವಾಸ್ಆ ರೋಗ್ಯ ಕೇಂದ್ರದಲ್ಲಿ ಉಚಿತ ಬರ್ತ್ ಕಂಟ್ರೋಲ್ ಟ್ರೀಟ್ಮೆಂಟ್ ಪಡೆದ್ದಿದ್ದಾರೆ. 2003 ರಲ್ಲಿ ಸುಮಾರು 450ಮಾತ್ರ ಅಂತಹ ಚಿಕಿತ್ಸೆಯನ್ನು ಪಡೆದ್ದಿದ್ದಾರೆ. ಈ ಸೆಂಟರ್ ಮತ್ತಷ್ಟು ವಿನ್ಯಾಸಗೋಳಿಸಿ ಸಮಾಜದಲ್ಲಿ ಒಂದು ಶೋಚನೀಯ ಜೀವನವನ್ನು, HIV ಪಾಸಿಟಿವ್ ರೋಗಿಗಳು ಎದುರಿಸುವ ತೊಂದರೆಗಳನ್ನು ಅರಿತ ಎಚ್ಐವಿ ಉಚಿತ ಚಿಕಿತ್ಸೆ ಕೇಂದ್ರವಾಗಿ ಉನ್ನತೀಕರಿಸಲಾಯಿತು. ಡಾ ಆಳ್ವರವರು ಸುಮಾರು 300 AIDS ರೋಗಿಗಳು ಕೌನ್ಸೆಲಿಂಗ್ ಕೆಲಸವನ್ನು ಪ್ರಾರಂಭಿಸಿ, ಔಷಧಿಗಳ ವೆಚ್ಚ ಹೊರತುಪಡಿಸಿ ನೈತಿಕ ಬೆಂಬಲವನ್ನು ನೀಡುತ್ತಿದ್ದಾರೆ. ಹೀಗೆ ಅವರು ಅನೆಕ ಸಂಸ್ತೆಗಳನ್ನು ಸ್ಥಾಪಿಸಿ ಹೆಸರುವಾಸಿಯಾಗಿದ್ದಾರೆ. ಮೂಡುಬಿದರೆಯ ಜನರು ಇವರನ್ನು ದೇವರೆಂದು ಪೂಜಿಸುತ್ತಾರೆ. ಪ್ರಾಮಾಣಿಕತೆಯಿಂದ ದುಡಿಯುವುದು, ಇವರ ನಿತ್ಯ ಜೀವನದ ಗುಟ್ಟಾಗಿ ಉಳಿದಿದೆ.

ಉಲ್ಲೇಖ[ಬದಲಾಯಿಸಿ]

  1. https://www.alvasayurveda.com/dr-mohan-alva/
  2. https://www.mangalorean.com/dr-mohan-alva-mangalorean-star/
  3. http://alvascollege.com/
  4. http://www.alvashomoeopathic.com/about.html
  5. http://www.aiet.org.in/chairman.html