ಮೊಳಹಳ್ಳಿ ಶಿವರಾವ್
ಮೊಳಹಳ್ಳಿ ಶಿವರಾವ್ (೪ ಆಗಸ್ಟ್ ೧೧೮೦ -೧೯೬೭ ಅವರನ್ನು ಅವಿಭಜಿತ ದಕ್ಷಿಣ ಕನ್ನಡದ ಸಹಕಾರಿ ಪಿತಾಮಹ ಎಂದು ಕರೆಯಲಾಗುತ್ತದೆ. ಅವರು ತಮ್ಮ ಇಡೀ ಜೀವನವನ್ನು ಜನರ ಸೇವೆಗಾಗಿ ಮೀಸಲಿಟ್ಟರು.
ಬಾಲ್ಯ ಮತ್ತು ಜೀವನ
[ಬದಲಾಯಿಸಿ]ಶಿವರಾಯ ಮೂಲತಃ ಕುಂದಾಪುರದ ಬಳಿಯ ಮೊಳಹಳ್ಳಿಯವರು. ಹಿರಿಯರು ಪುತ್ತೂರಿಗೆ ಬಂದು ನೆಲೆಸಿದರು. ಅವರು ಬಹಳ ಶ್ರೀಮಂತ ಕುಟುಂಬಕ್ಕೆ ಸೇರಿದವರು. ಶಿವರಾಯರು ವಕೀಲರಾಗಿದ್ದರು. ಆಗಸ್ಟ್ 4, 1880 ರಂದು ಪುತ್ತೂರಿನಲ್ಲಿ ರಂಗಪ್ಪಯ್ಯ ಮತ್ತು ಮುಕಾಂಬಿಕಾ ಎಂಬ ಬ್ರಾಹ್ಮಣ ದಂಪತಿಗಳಿಗೆ ಜನಿಸಿದರು.[೧] ಅವರು ಮಡಿಕೇರಿಯಲ್ಲಿ ಶಾಲಾ ಶಿಕ್ಷಕರಾಗಿ ತಮ್ಮ ಜೀವನವನ್ನು ಪ್ರಾರಂಭಿಸಿದರು. ನಂತರ ಅವರು ಪುತ್ತೂರಿನಲ್ಲಿ ವಕೀಲರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಬಡವರ ವಕೀಲರಾಗಿ ಪ್ರಸಿದ್ಧರಾದರು. ಅವರು ತಮ್ಮ ಜೀವನದುದ್ದಕ್ಕೂ ಸಹಕಾರ ಚಳುವಳಿ, ಸ್ವಾತಂತ್ರ್ಯ ಚಳುವಳಿ ಮತ್ತು ಬಡವರ ಉದ್ಧಾರಕಾಗಿ ಕೆಲಸ ಮಾಡಿದರು.
ಸಹಕಾರಿ ಚಳುವಳಿ
[ಬದಲಾಯಿಸಿ]1904 ಬ್ರಿಟಿಷ್ ಸರ್ಕಾರ ಸಹಕಾರಿ ಸಂಸ್ಥೆಗಳ ಕುರಿತು ಒಂದು ಕಾನೂನನ್ನು ಜಾರಿಗೆ ತಂದಿತು. ಇದನ್ನು ಬಳಸಿಕೊಂಡು, ಶಿವ ರಾವ್ ಪುತ್ತೂರಿನಲ್ಲಿ ಪುತ್ತೂರು ಸಹಕಾರಿ ಪಟ್ಟಣ ಬ್ಯಾಂಕ್ ಅನ್ನು ಬಹಳ ಪ್ರಯತ್ನದಿಂದ ಸ್ಥಾಪಿಸಿದರು. ೧೯೧೪ ರಲ್ಲಿ, ಮಂಗಳೂರಿನಲ್ಲಿ SCDCC ಬ್ಯಾಂಕ್ ಅನ್ನು ಪ್ರಾರಂಭಿಸಲಾಯಿತು. ಅದಾದ ನಂತರ, ಮುಂದಿನ ೨೦-೨೫ ವರ್ಷಗಳಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಚಳುವಳಿ ಪ್ರವರ್ಧಮಾನಕ್ಕೆ ಬಂದಿತು. ಪ್ರತಿಯೊಂದು ಹಳ್ಳಿಯಲ್ಲೂ ವಿವಿಧ ಸಹಕಾರಿ ಸಂಘಗಳು ಪ್ರಾರಂಭವಾದವು. ಮೊಳಹಳ್ಳಿ ಶಿವರಾಯರು ಎಲ್ಲರಿಗೂ ಸ್ಫೂರ್ತಿಯಾಗಿದ್ದರು.
ಸ್ವಾತಂತ್ರ್ಯ ಹೋರಾಟ
[ಬದಲಾಯಿಸಿ]ಶಿವರಾಯರು ಗಾಂಧೀಜಿಯ ಮಹಾನ್ ಭಕ್ತರಾಗಿದ್ದರು. ಆ ಸಮಯದಲ್ಲಿ ಗಾಂಧೀಜಿ ಪ್ರಚಾರ ಮಾಡುತ್ತಿದ್ದ ತತ್ವಗಳನ್ನು ಶಿವರಾಯರು ತಮ್ಮ ಸಹಕಾರ ತತ್ವದೊಂದಿಗೆ ಈ ಪ್ರದೇಶದಲ್ಲಿ ಪ್ರಚಾರ ಮಾಡಿದರು. ಮಂಗಳೂರಿನಲ್ಲಿರುವ ಅವರ ಮನೆ ಸ್ವಾತಂತ್ರ್ಯ ಹೋರಾಟಗಾರರಿಗೆ ಒಂದು ದೊಡ್ಡ ಆಶ್ರಯ ತಾಣವಾಗಿತ್ತು. ಈ ಎಲ್ಲಾ ಸೇವೆ, ಚಟುವಟಿಕೆಯೊಂದಿಗೆ, ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ನೋಡಿಕೊಳ್ಳದೆ,ಶಿವರಾಯರು ತಮ್ಮ ಸಂಪತ್ತನ್ನು ಕಳೆದುಕೊಂಡು ಬಡತನಕ್ಕೆ ಜಾರಿದರು.
ಪ್ರಮುಖ ಸಾಧನೆಗಳು
[ಬದಲಾಯಿಸಿ]ಅವರು ಪುತ್ತೂರಿನಲ್ಲಿ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದರು. ಅದು ಈಗ ವಿವೇಕಾನಂದ ಕಾಲೇಜಾಗಿ ಬೆಳೆದಿದೆ.ಇವರ ಪ್ರೇರಣೆಯಿಂದ ಧಾನ್ಯ ಬ್ಯಾಂಕ್, ಜೇನು ಕೃಷಿ ಸಹಕಾರಿ ಸಂಘ, ಸಗಟು ಮಾರುಕಟ್ಟೆ ಸಂಘ ಮತ್ತು ಇತರ ಅನೇಕ ಸಂಸ್ಥೆಗಳು ಸ್ಥಾಪನೆಯಾಗಿವೆ. ಅವರು ತಮ್ಮ ಸ್ನೇಹಿತ ಶಿವರಾಮ ಕಾರಂತರ ಪ್ರೇರಣೆಯಿಂದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳನ್ನು ನಿರ್ಮಿಸುವಲ್ಲಿ ಮತ್ತು ಶಾಲೆಗಳಲ್ಲಿ ಮಕ್ಕಳ ಅಭಿವೃದ್ಧಿಗಾಗಿ ಚಟುವಟಿಕೆಗಳನ್ನು ವಿಸ್ತರಿಸುವಲ್ಲಿ ಸಕ್ರಿಯರಾಗಿದ್ದರು. ಅವರು ಪುತ್ತೂರಿನಲ್ಲಿ ದಸರಾ ಉತ್ಸವವನ್ನು ಪ್ರಾರಂಭಿಸಿದ್ದು ೧೮೯೦ ರಲ್ಲಿ. <ref name="Molahalli Shiva Rao">
ಗೌರವಗಳು
[ಬದಲಾಯಿಸಿ]ಶಿವರಾಯರು ಒಬ್ಬ ಮಹಾನ್ ಆತ್ಮಾಭಿಮಾನಿ ವ್ಯಕ್ತಿ. ಅವರು ಸರ್ಕಾರ ಅಥವಾ ಸಂಸ್ಥೆಗಳಿಂದ ಯಾವುದೇ ಗೌರವವನ್ನು ಸ್ವೀಕರಿಸಿಲ್ಲ. ಆದಾಗ್ಯೂ, ಶಿವರಾಮ ಕಾರಂತರು ಶಿವರಾಯರ ಜೀವನ ಚರಿತ್ರೆಯನ್ನು ಆಧರಿಸಿ "ಔದಾರ್ಯದ ಉರುಳಲ್ಲಿ" ಎಂಬ ಪುಸ್ತಕವನ್ನು ಬರೆದಿದ್ದಾರೆ. ಅವರ ಗೌರವಾರ್ಥವಾಗಿ ಆಗಸ್ಟ್ 4 ಅನ್ನು ಸಹಕಾರಿ ಸಂಘಗಳ ದಿನವೆಂದು ಆಚರಿಸಲಾಗುತ್ತದೆ. ಪುತ್ತೂರಿನ ಡಿಸಿಸಿ ಬ್ಯಾಂಕಿನಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಲಾಯಿತು.
ನಿಧನ
[ಬದಲಾಯಿಸಿ]ಶಿವರಾಯರು 1967 ರಲ್ಲಿ ಪುತ್ತೂರಿನಲ್ಲಿ ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]- ↑ "Molahalli Shiva Rao - Vishwa Konkani Kendra". https://www.vishwakonkani.org/ (in ಅಮೆರಿಕನ್ ಇಂಗ್ಲಿಷ್). Retrieved 2026-06-17.
{{cite web}}: External link in(help)|website=