ಮೈಸೂರ್ ಅಸೋಸಿಯೇಷನ್, ಮುಂಬಯಿ

ವಿಕಿಪೀಡಿಯ ಇಂದ
Jump to navigation Jump to search
ಮೈಸೂರ್ ಅಸೋಸಿಯೇಷನ್, ಮಾಟುಂಗ, ಮುಂಬಯಿ
ಸಾಮಾನ್ಯ ಮಾಹಿತಿ
ಮಾದರಿಪ್ರಮುಖ ಸಭಾಂಗಣ,ಮಿನಿ-ಸಭಾಗೃಹ,ಹಾಗೂ ಲೈಬ್ರರಿ, ಟೆರೇಸ್ ಮೇಲೆ ಓಪನ್ ಜಾಗದಲ್ಲಿ ಊಟದ ವ್ಯವಸ್ಥೆಯ ಅಂಗಣ,
ಸ್ಥಳಮುಂಬಯಿ, ಭಾರತ
ವಿಳಾಸಮೈಸೂರ್ ಅಸೋಸಿಯೇಷನ್, ಭಾವುದಾಜಿ ರಸ್ತೆ, ಮಾಟುಂಗಾ, ಮುಂಬಯಿ-೪೦೦ ೦೧೯
ನಿರ್ಮಾಣ ಪ್ರಾರಂಭವಾದ ದಿನಾಂಕ೧೯೩೨ ರಲ್ಲಿ, 'ವಾಣೀವಿಲಾಸ್ ಹಾಲ್' ಎನ್ನುವ ಕಟ್ಟಡದಿಂದ ಶುರುವಾಗಿ ಹಂತ ಹಂತದಲ್ಲಿ ಈಗಿರುವ ಕಟ್ಟಡ ನಿರ್ಮಾಣವಾದದ್ದು,(೧೯೪೧, ೧೯೪೪, ೧೯೬೯,೧೯೭೮, ೧೯೯೮)
ತೆರೆಯುವ ದಿನಾಂಕ೧೯೯೯ ರಲ್ಲಿ, ಆಗಿನ ಮಹಾರಾಷ್ಟ್ರದ ಗವರ್ನರ್, ಶ್ರೀ.ಪಿ.ಸಿ.ಅಲೆಕ್ಸಾಂಡರ್ ಹಸ್ತದಿಂದ '೩೦೦ ಜನ ಕುಳಿತು ಕೊಳ್ಳುವ ಹವಾನುಕೂಲ, ಅತ್ಯಾಧುನಿಕ ಸುಸಜ್ಜಿತ ರಂಗಮಂದಿರದ ಉದ್ಘಾಟನೆ', ಜರುಗಿತು.
Technical details
ರಚನಾತ್ಮಕ ವ್ಯವಸ್ಥೆಪ್ರಮುಖ ಸಭಾಗೃಹದಲ್ಲಿ ಹಲವಾರು ಕಾರ್ಯಕ್ರಮಗಳು-ನಾಟಕ, ನೃತ್ಯ, ಸಂಗೀತ, ಕನ್ನಡವಲ್ಲದೆ, ಹಲವು ಭಾಷೆಗಳಲ್ಲಿ ನಡೆಯುತ್ತಲೇ ಇರುತ್ತವೆ. ಇದಲ್ಲದೆ ನೃತ್ಯ, ಸಂಗೀತ ಕಮ್ಮಟಗಳು, ಭಾಷಣಗಳು ನಿಯಮಿತವಾಗಿ ಆಯೋಜಿಸಲಾಗುತ್ತದೆ. ಮೈಸೂರ್ ಅಸೋಸಿಯೇಷನ್-ಮುಂಬಯಿವಿಶ್ವವಿದ್ಯಾಲಯದ ಕನ್ನಡ ವಿಭಾಗ ಸೇರಿ ನಡೆಸಿಕೊಡುವ,'ಮೈ.ಅಸೋ.ಬಂಗಾರದ ಹಬ್ಬದ ಏಂಡೋಮೆಂಟ್ ಉಪನ್ಯಾಸ ಶ್ರೇಣಿ' ಪ್ರಸಿದ್ಧವಾಗಿದೆ.
Design and construction
ಮುಖ್ಯ ಗುತ್ತಿಗೆದಾರಅಯ್ಯಂಗಾರ್ ಅಂಡ್ ಕಂಪೆನಿ, ಮುಂಬಯಿ
ಜಾಲ ತಾಣ
mysoreassociation.in

ಮೈಸೂರ್ ಅಸೋಸಿಯೇಷನ್ ೩೯೩, [೧] ಭಾವುದಾಜಿ ರಸ್ತೆ, ಮಾಟುಂಗಾ, ಮುಂಬಯಿಯಲ್ಲಿರುವ ಮುಂಬಯಿ ಕನ್ನಡಿಗರ ಹಿರಿಯ ಸಂಸ್ಥೆ. ಮುಂಬಯಿವಾಸಿ ಕನ್ನಡಿಗರ, ಕಲೆ, ಸಂಸ್ಕೃತಿ, ಭಾಷೆ, ಸಂಗೀತಗಳನ್ನು ರಕ್ಷಿಸಿ, ಪೋಷಿಸುವ, ಹಾಗೂ ಎಲ್ಲ ಕನ್ನಡಿಗರ ಭಾವನಾತ್ಮಕ ಸ್ಥಾನ. ಅಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಸೋಸಿಯೇಷನ್ ರಂಗ ಮಂದಿರಗಳಲ್ಲಿ ಆಯೋಜಿಸಲಾಗುತ್ತಿದೆ. ಮೈಸೂರ್ ಅಸೋಸಿಯೇಷನ್ ನ ಭವ್ಯ, ಆಧುನಿಕ ಸಭಾಂಗಣದಲ್ಲಿ, ಹಿಂದಿ, ಮರಾಠಿ, ತುಳು, ಬೆಂಗಾಲಿ, ಕನ್ನಡ, ಇತ್ಯಾದಿ, ಭಾಷೆಗಳಲ್ಲಿ ನಾಟಕಗಳು ದಿನ-ಪ್ರತಿ, ಪ್ರದರ್ಶನಗೊಳ್ಳುತ್ತವೆ.

ದ ಮೈಸೂರ್ ಅಸೋಸಿಯೇಷನ್ ಬೆಳವಣಿಗೆ[ಬದಲಾಯಿಸಿ]

೧೯೨೩ ರ ಸಮಯದಲ್ಲಿ ಕೆಲವು ಮೈಸೂರಿನಿಂದ ನೌಕರಿಗಾಗಿ ಬಂದ ಕನ್ನಡ ನಾಡಿನ ಹುಡುಗರು, ಮಾಟುಂಗ ಪ್ರದೇಶದ ನಪ್ಪೂ ಉದ್ಯಾನ ದ ಬಳಿಯ ವೇಲ್ಜಿಭಾಯಿ ಹಾಲ್, ನಲ್ಲಿ ಬಾಡಿಗೆ ಕೊಟ್ಟು ಒಂದು ಚಿಕ್ಕ ಕೊಠಡಿಯಲ್ಲಿ, ಒಟ್ಟುಗೂಡಿ, ಕನ್ನಡ ದೈನಂದಿಕಗಳನ್ನು ಓದುವುದು ಮತ್ತು ವಿಚಾರ-ವಿನಿಮಯ ಮಾಡಿಕೊಳ್ಳುತ್ತಿದ್ದರು. ೨೬, ಫೆಬ್ರವರಿ, ೧೯೨೬, ರಲ್ಲಿ ಮೈಸೂರ್ ಅಸೋಸಿಯೇಷನ್, ವಿಧ್ಯುಕ್ತವಾಗಿ ಪ್ರಾರಂಭವಾಯಿತು. ದಿವಾನ್ ಬಹದ್ದೂರ್ ರಾಮಸ್ವಾಮಿ ಆಗಿನ ಸಮಯದ, ಕನ್ನಡಿಗರ ಮುಖ್ಯಸ್ಥರು.ಅವರು,ಆಗಿನ ಬಾಂಬೆ ಪ್ರೆಸಿಡೆನ್ಸಿ ಯಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿದ್ದರು. ಚಂದ್ರಶೇಖರ ಶರ್ಮಒಳ್ಳೆಯ ಲೇಖಕರು. ಕನ್ನಡ ನವೋದಯ ಸಾಹಿತ್ಯದ ಆರಾಧಕರು 'ಪ್ರಭೋಧನ', ಎಂಬ ಮಾಸಪತ್ರಿಕೆಯನ್ನು ಸುಮಾರು ೩ ವರ್ಷಗಳಕಾಲ ನಡೆಸಿಕೊಂಡು ಬಂದರು. ಮುಂಬಯಿ ನಗರದ ಕನ್ನಡಿಗರ ಮಕ್ಕಳಿಗೆ, ಒಂದು ಶಾಲೆಯ ವ್ಯವಸ್ಥೆಯೂ ಆಯಿತು. ಮೊದಲು ಒಬ್ಬ ಶಿಕ್ಷಕಿ, ಹಾಗೂ ಜೊತೆಗೆ, ಒಬ್ಬ ಜವಾನನಿಂದ ಆರಂಭವಾದ ಈ ಶಾಲೆ, ಈಗ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳ ಕೇಂದ್ರ ಬಿಂದುವಾಗಿದೆ. ೧೯೨೯ ರಲ್ಲಿ ಶ್ರೀ. ಬಸವಪ್ಪ ಶಾಸ್ತ್ರಿ, ಬರೆದುಕೊಟ್ಟ ನಾಟಕವನ್ನು ಕನ್ನಡಿಗರನ್ನೆಲ್ಲಾ ಕೂಡಿಕೊಂಡು " ನಪ್ಪೂ ಹಾಲ್ " ನಲ್ಲಿ ಶ್ರೀ.ಗಂಗಾಧರಯ್ಯನವರ ಮುಂದಾಳತ್ವದಲ್ಲಿ, ನಾಟಕವನ್ನು ಪ್ರಸ್ತುತಪಡಿಸಿದರು.ಗಂಗಾಧರಯ್ಯ ಅಸೋಸಿಯೇಷನ್ ನ ೨ ನೇ ಅಧ್ಯಕ್ಷರು, ಸುಪ್ರಸಿದ್ಧ ಲಾಯರ್ ಆಗಿದ್ದರು. ಬಾಂಬೆ ಮ್ಯುನಿಸಿಪಲ್ ಕಾರ್ಪೊರೇಷನ್, ದಾದರ್-ಮಾಟುಂಗಾ ವಲಯವನ್ನು ವಿಸ್ತರಿಸಿ, ಅಭಿವೃದ್ಧಿ ಪಡಿಸುವ ಯೋಜನೆ ಹಾಕಿಕೊಂಡಿತ್ತು. ಅವರು ಬೇಕಾದ ಜನರಿಗೆ, ಕಲೆ, ಕ್ರೀಡೆಗಳನ್ನು ಬೆಳಸಿ ಅಭಿವೃದ್ಧಿಪಡಿಸುವ ಸಂಘ-ಸಂಸ್ಥೆಗಳಿಗೆ ಸ್ವಲ್ಪ ಜಾಗವನ್ನು ಮೀಸಲಾಗಿಟ್ಟಿದೆಯೆಂದು ತಿಳಿಸಿ, ಮೊದಲ ಕಂತಿನ ಹಣ ೨,೦೦೦ ಕೊಟ್ಟು, ಪ್ರತಿವರ್ಷವೂ ಲೀಸ್ ಹಣ ರು. ೧/- ರಂತೆ, ೯೯ ವರ್ಷಗಳವರೆಗೂ ಕೊಡಲು ತಿಳಿಸಿತು. ಹಣದ ಮುಗ್ಗಟ್ಟಿನಿಂದ ಅಸೋಸಿಯೇಷನ್, ಒಂದು ಸಿಂಗಲ್ ಪ್ಲಾಟನ್ನು ಮಾತ್ರ ಖರೀದಿಸಿತು. ಹಾಗಾಗಿ ೩೯೩, ಭಾವುದಾಜಿ ರಸ್ತೆ, 'ಅಸೋಸಿಯೇಷನ್' ನ ಒಂದು ಚಿರ-ಆಸ್ತಿಯಾಗಿ ಮುಂಬಯಿ ಕನ್ನಡಿಗರಿಗೆ ಮನರಂಜನೆ, ಹಾಗೂ ಬೇರೆ, ಬೇರೆ ಸೌಲಭ್ಯಗಳನ್ನು ಒದಗಿಸುತ್ತಾಬಂದಿದೆ. ಮಾನಸಿಕವಾಗಿ ಒಂದು ಸಂಘಟನೆ ನಮ್ಮೆಲ್ಲರ ಸಹಾಯಕ್ಕೆ ಸದಾ ಸಿದ್ಧವಿರುವ ಸಂಸ್ಥೆ. ನಾಟಕದಿಂದ ಸ್ಪೂರ್ಥಿಗೊಂಡ ಹಲವು ಕಲಾವಿದರು, ೧೯೨೨-೩೩ ರಲ್ಲಿ, ಒಂದು ಸ್ವಂತ-ಕಟ್ಟಡವನ್ನು ನಿರ್ಮಾಣಮಾಡುವ ಸಲುವಾಗಿ, ಹಣ ಸಂಗ್ರಹಿಸುವ ಬೃಹತ್ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಶ್ರೀ. ಆರ್.ನಾಗೇಂದ್ರರಾವ್, "ಶಕುಂತಲ, " ನಾಟಕದಲ್ಲಿ ಅಭಿನಯಿಸಿದ್ದರು. ಇವರು ಮುಂದೆ ನಾಟಕ ಕಂಪೆನಿಗಳಲ್ಲಿ ದುಡಿದು, ನಿಧಾನವಾಗಿ ಚಲನಚಿತ್ರದಲ್ಲೂ ಪಾದಾರ್ಪಣೆ ಮಾಡಿದರು. "ಬಾಂಬೆ ಸೆಂಟ್ರೆಲ್," ನಲ್ಲಿ ಪ್ರಾರಂಭಿಸಿದ್ದ, "ಯಮುನಾಬಾಯಿ ನಾಯರ್ ಆಸ್ಪತ್ರೆ "ಗೂ ಹಣ ಸಹಾಯವಾಯಿತು.

'ಉದ್ಯೋಗಪತಿ, ಶ್ರೀ.ಆರ್. ಡಿ. ಚಾರ್೫,೦೦೦ ರೂ.ಗಳನ್ನು ಕೊಟ್ಟು, ಮೈಸೂರ್ ಅಸೋಸಿಯೇಷನ್ ಕಟ್ಟಡದ ಕೆಲಸವನ್ನು ಸುಪ್ರಸಿದ್ಧ ಕಟ್ಟಡ ನಿರ್ಮಾಪಕ, 'ಮೆಸರ್ಸ್, ಅಯ್ಯಂಗಾರ್ ಅಂಡ್ ಕಂಪೆನಿ,'ಯ ಭಾಗೀದಾರ, ಶ್ರೀ. ಬಿ.ವಿ.ಎಸ್. ಅಯ್ಯಂಗಾರ್ ರವರಿಗೆ ವಹಿಸಿಕೊಟ್ಟರು.

ಬಿಲಿಯರ್ಡ್ಸ್ ಆಟದ ಟೇಬಲ್'

ಆಗಿನ ಮುಂಬಯಿನ ಹಲವಾರು ಸುಪ್ರಸಿದ್ಧ ಕಟ್ಟಡಗಳನ್ನು ನಿರ್ಮಿಸಿ ಹೆಸರಾಗಿದ್ದ ಇಂಜಿನಿಯರ್,ಶ್ರೀ.ಬಿ.ವಿ.ಎಸ್.ಐಯ್ಯಂಗಾರರು, ಸನ್.೧೯೩೪ ರ ಹೊತ್ತಿಗೆ, ಹಳೆಯ ಭವನವನ್ನು ಕೆಡವಿ,ಮೊದಲಿನ ಸ್ಥಳದಲ್ಲಿ ಒಂದು ಭವ್ಯ ಮಹಡಿ ಕಟ್ಟಡವನ್ನು ನಿರ್ಮಿಸಿದರು. ೧,೨೦೦ ಚ.ಅಡಿ.ಅಳತೆಯ, ಒಂದು ಪೋರ್ಟಿಕೊ,ವನ್ನೊಳಗೊಂಡ ಕಟ್ಟಡದ ಮುಂದೆ, ಹುಲ್ಲುಬೆಳಸಲು ಅನುಕೂಲವಿತ್ತು. ಮೈಸೂರಿನ ರಾಜಮಾತೆಯವರ ಹೆಸರಿನಲ್ಲಿ,ಶ್ರೀ. ವಾಣಿವಿಲಾಸ್ ಮೆಮೋರಿಯಲ್ ಹಾಲ್," ಎಂಬ ಹೆಸರಿನೊಂದಿಗೆ ಪ್ರಾರಂಭವಾಯಿತು. ಎಮ್.ಎನ್.ಅಯ್ಯಂಗಾರರು ಪುಸ್ತಕಗಳನ್ನೂ, ಕಪಾಟುಗಳನ್ನೂ ಕೊಟ್ಟರು.

'ಬಿಲಿಯರ್ಡ್ಸ್ ಟೇಬಲ್ ನಾನ್ಜಿಯವರ ಕೊಡುಗೆ'[ಬದಲಾಯಿಸಿ]

'ಶ್ರೀ ನಾನ್ ಜಿ, ಫ್ರೇಮ್ಜಿ ಡರ್ಸೆ, 'ಬಿಲಿಯರ್ಡ್ಸ್ ಟೇಬಲ್ಲನ್ನು ದಾನವಾಗಿ ನೀಡಿದರು'. ಅವರೇನು ಅಸೋಸಿಯೇಷನ್ ನ ಸದಸ್ಯರಾಗಿರಲಿಲ್ಲ. ಸನ್.೧೯೩೦ ರಲ್ಲಿ ಮುಂಬಯಿಗೆ ನೌಕರಿಗೆಂದು ವಲಸೆ ಬಂದಿದ್ದ ಯುವಕರೆಲ್ಲಾ ಸೇರಿ, 'ಒಂದು ವಾಲಿಬಾಲ್ ಕೋರ್ಟ್' ಮಾಡಿಕೊಂಡರು. ರಾಮನವಮಿ, ವಿಜಯದಶಮಿ, ಗಣೇಶಚತುರ್ಥಿ, ಯುಗಾದಿ ಮೊದಲಾದ ಭಾರತೀಯ ಹಬ್ಬಗಳನ್ನೂ, ಗೀತಾಪ್ರವಚನ ಶಾಲೆಗಳನ್ನೂ,'ಶ್ರೀ.ವೇ.ಬ್ರ.ಗೋಪಾಲಾಚಾರ್' ಶುರು ಮಾಡಿದರು. ಶಾಸ್ತ್ರೀಯ ಸಂಗೀತದ ಶಾಲೆಗಳು ಹುಟ್ಟಿಕೊಂಡವು.

ಕಟ್ಟಡದ ಬೆಳವಣಿಗೆ[ಬದಲಾಯಿಸಿ]

೧೯೩೬ ರಲ್ಲಿ ಕಟ್ಟಡಕ್ಕೆ ಮತ್ತೊಂದು ಅಂತಸ್ತನ್ನು ಸೇರಿಸಲಾಯಿತು. ೯೩೬ ರಲ್ಲಿ, ಮೈಸೂರಿನ ಹೆಸರಾಂತ ದಿವಾನರುಗಳು, ಮೈಸೂರ್ ಅಸೋಸಿಯೇಷನ್ ಗೆ ಭೇಟಿಕೊಟ್ಟರು. ೧೯೩೭ ರಲ್ಲಿ ಮೈಸೂರಿನ ದೊರೆ, ಜಯಚಾಮರಾಜ ಒಡೆಯರ್ ಅವರು, ತಮ್ಮ ಧರ್ಮಪತ್ನಿಯವರ ಜೊತೆ, ಬಂದು ಅಸೋಸಿಯೇಷನ್,ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ೧೯೩೭ರಲ್ಲಿ. ಸರ್ ಎಮ್.ವಿಶ್ವೇಶ್ವರಯ್ಯನವರು, ಬಿ. ಎಂ. ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್ರವರು, ದ.ರಾ.ಬೇಂದ್ರೆಯವರು, ತೀ ನಂ ಶ್ರೀ, ಪು.ತಿ.ನ, ಟಿ.ಪಿ.ಕೈಲಾಸಂ, ೧೯೪೮ರಲ್ಲಿ ಅಸೋಸಿಯೇಷನ್ ಕಲಾವಿದರು ನಾಟಕಗಳನ್ನು ಪ್ರಸ್ತುತಪಡಿಸಿದರು. ೧೯೩೭ ರಲ್ಲಿ, ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಿಕೊಟ್ಟಿತು.

ಕನ್ನಡ ಶಾಲೆಯ ಸ್ಥಾಪನೆ[ಬದಲಾಯಿಸಿ]

೧೯೨೭ ರಲ್ಲಿ, ಶುರುವಾದ ಕನ್ನಡ ಶಾಲೆ[೨] ೧೯೨೯ ರಲ್ಲಿ ಕೆಲವು ಕಾರಣಗಳಿಂದ, ಅಂದರೆ, ಹಣ ಹಾಗೂ ಜಾಗದ ಅಭಾವದಿಂದ ಸ್ಥಗಿತವಾಯಿತು. ೧೯೩೯ರಲ್ಲಿ ಅಸೋಸಿಯೇಷನ್ ಅಂಗಣ ದೊಳಗೆ, ಚಿಕ್ಕದಾಗಿ ಮತ್ತೆ ಶುರು ಮಾಡಲಾಯಿತು. ೧೯೪೮ರವರೆಗೆ ಇದು, ಇದೆ ರೀತಿ ನಡೆದುಕೊಂಡು ಹೋಯಿತು. ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ಸಯಾನ್ ನಲ್ಲಿ ಕಟ್ಟಿದ್ದ, "ಆರ್ಮಿ ಬ್ಯಾರಕ್," ಗಳನ್ನು ಸ್ಕೂಲ್ ನಡೆಸಲು ಬಾಡಿಗೆಯ ಮೇಲೆ ಕೊಡುತ್ತಿದ್ದರು. ಇದನ್ನು ಉಪಯೋಗಿಸಿಕೊಂಡು, ೧೯೫೮ ರಲ್ಲಿ, ಶ್ರೀ.ಬಿ.ನಾರಾಯಣಸ್ವಾಮಿ,[೩] ಆರ್. ಡಿ. ಚಾರ್,ಹಾಗೂ ಶ್ರೀ.ವೆಂಕಟೇಶಮೂರ್ತಿ, ಶ್ರೀ ಗೋಪಾಲಾಚಾರ್, ೧೯೫೮ರಲ್ಲಿ, ವಡಾಲ ಹೈಸ್ಕೂಲನ್ನು ಕಟ್ಟಿಸಿದರು. ಶ್ರೀ. ಬಿ. ವಿ. ಎಸ್. ಅಯ್ಯಂಗಾರ್ ನಿರ್ಮಿಸಿದ ಈ ಕಟ್ಟಡದಲ್ಲಿ, ಸುಮಾರು ೨,೫೦೦ ಜನ ಮಕ್ಕಳಿಗೆ, ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮಗಳಲ್ಲಿ ಶಿಕ್ಷಣವನ್ನು ಕೊಡಲಾಗುತ್ತಿದೆ. ೧೯೪೫ ರ ನಂತರ, ಹೊಸದಾಗಿ ಮುಂಬಯಿಗೆ ಯುವಕರು ಬರಲಾರಂಭಿಸಿದರು. "ವಾಲಿಬಾಲ್ ಆಟ" ದ ಬದಲು, "ಬ್ಯಾಸ್ಕೆಟ್ ಬಾಲ್" ಆಟದ ಗ್ರೌಂಡ್ ಸಿದ್ಧವಾಯಿತು. ೧೯೪೯, ೧೯೫೦, ಮತ್ತು ೧೯೫೨ ರಲ್ಲಿ, ಛಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಮುಂದಾಳು ಅಟಗಾರರು, ಶ್ರೀ.ಎಸ್.ಕೆ.ಅಯ್ಯಂಗಾರ್, ಶ್ರೀ. ಗೋಪಿನಾಥ್, ಶ್ರೀ.ಎಸ್.ಕೆ.ಸೀತಾರಾಂ, ಶ್ರೀ. ಬಾಬು ರಾಮಸ್ವಾಮಿ. ಶ್ರೀಮತಿ. ವಿಜಯರಾಜಗೋಪಾಲ್. ೧೯೫೦ರಲ್ಲಿ, 'ಟೇಬಲ್ ಟೆನ್ನಿಸ್ ಬೋರ್ಡ'ನ್ನು ಕೊಟ್ಟಮೇಲೆ, ೧೯೨೬ ರವರೆಗೆ, ಕೇರಂ, ಚೆಸ್ಆಟಗಳು ಪ್ರತಿ-ನಿತ್ಯದ ಕಾರ್ಯಕ್ರಮಗಳಾಗಿದ್ದವು.

ವಿ.ಕೆ.ಮೂರ್ತಿಯವರ ಕೊಡುಗೆ[ಬದಲಾಯಿಸಿ]

೧೯೪೮ ರಲ್ಲಿ, ಕೆಲವು ಸಿನೆಮಾಟೋಗ್ರಾಫರ್ ಗಳು, ಶ್ರೀ. ಜಯಚಾಮರಾಜೇಂದ್ರಪಾಲಿಟೆಕ್ನಿಕ್, ಬೆಂಗಳೂರಿನಿಂದ ಮುಂಬಯಿಗೆ ಬಂದರು.

 1. ಶ್ರೀಯುತ ಪುಟ್ಟಣ್ಣನವರು, ಒಳ್ಳೆಯ ನಾಟಕ ಕಲಾವಿದರು, ಹಾಗೂ ನಾಟಕಕಲೆಯ ಆಸಕ್ತರು.
 2. ಶ್ರೀ.ವಿ.ಕೆ.ಮೂರ್ತಿ [೪] ಯವರು ಅವರಲ್ಲಿ ಪ್ರಮುಖರು.

ವಿ.ಕೆ.ಮೂರ್ತಿಯವರು(ಕುಟ್ಟಿ) ಕನ್ನಡ ನಾಟಕಗಳನ್ನಾಡಿಸಿ, ನಾಟಕ-ಕಲೆಯನ್ನು ಅತ್ಯಂತ ಜನಪ್ರಿಯ ಮಾಡಿದರು. ಅಲ್ಲಿಯವರೆಗೆ ಹೆಣ್ಣುಪಾತ್ರಗಳನ್ನು ಗಂಡಸರೇ ಮಾಡುತ್ತಿದ್ದರು. ಆದರೆ ಮೂರ್ತಿಯವರು ಅದನ್ನು ತಪ್ಪಿಸಿ, ಹೆಣ್ಣುಪಾತ್ರಗಳನ್ನು ಮಾಡಲು ಹೆಣ್ಣು ಮಕ್ಕಳು ಮುಂದೆ ಬರುವಂತೆ ಪ್ರೋತ್ಸಾಹಿಸಿದರು. ಹಾಗೆ ಬಂದ ಪ್ರತಿಭಾವಂತರಲ್ಲಿ,

 1. ಶ್ರೀಮತಿ.ಮಧುರಕೃಷ್ಣಸ್ವಾಮಿ,
 2. ಶ್ರೀಮತಿ.ಸುಶೀಲರಾವ್,
 3. ಶ್ರೀಮತಿ.ಶಾರದಮ್ಮ ನಾರಾಯಣಸ್ವಾಮಿ,
 4. ಶ್ರೀಮತಿ. ಕುಂತಿ ದುಗ್ಗಪ್ಪಯ್ಯ,
 5. ಶ್ರೀಮತಿ. ಗೀತವಿಶ್ವನಾಥ್,
 6. ಶ್ರೀಮತಿ. ಉಮಾಪ್ರಭಾಕರ್,
 7. ಶ್ರೀಮತಿ. ಉಷಾ ಜೈರಾಮ್,
 8. ಶ್ರೀಮತಿ. ರಮಾ ಹರಿಹರನ್,
 9. ಶ್ರೀಮತಿ. ರಮಾವೆಂಕಟೇಶ್,
 10. ಶ್ರೀಮತಿ. ಭಾರತಿಪ್ರಸಾದ್,
 11. ಶ್ರೀಮತಿ. ಲಲಿತಬಾಲು (ದಿ),
 12. ಶ್ರೀಮತಿ. ಉಷಾಶ್ರೀಕಾಂತ್,
 13. ಕು.ಸರಿತ ಜೈರಾಂ,
 14. ಕು.ಶಾರ್ವರಿ,
 15. ಕು.ಸೌಮ್ಯ,
 16. ಶ್ರೀಮತಿ. ರತ್ನಾರಾವ್,
 17. ಶ್ರೀಮತಿ. ಉಮಾ ರಾವ್ ಪ್ರಮುಖರು.

ಅಂದಿನ ಪ್ರಮುಖ ನಾಟಕ ಕಾಲಾವಿದರು[ಬದಲಾಯಿಸಿ]

 1. ಶ್ರೀ.ದುಗ್ಗಪ್ಪಯ್ಯನವರು,
 2. ಶ್ರೀ ರವೀಂದ್ರ,
 3. ಶ್ರೀ.ಲಕ್ಷ್ಮಣ ಅಯ್ಯರ್,
 4. ಶ್ರೀ ಡಾ. ಶ್ರೀನಿವಾಸ್,
 5. ಶ್ರೀ ಅರ್ಜುನ್ ಬಾಲು,
 6. ಶ್ರೀ ಕೄಷ್ಣ,
 7. ಶ್ರೀ ಲಕ್ಷ್ಮಣ್ ರಾವ್,
 8. ಶ್ರೀ ರಾಘವೇಂದ್ರ,
 9. ಶ್ರೀ ದೇಸಾಯಿ, ಮೊದಲಾದವರು.

ಶ್ರೀ. ಜಯಚಾಮರಾಜೆಂದ್ರ ಒಡೆಯರ್ ಅವರಿಂದ ಉದ್ಘಾಟನೆ[ಬದಲಾಯಿಸಿ]

೧೯೫೧ ರಲ್ಲಿ ಅಸೋಸಿಯೇಷನ್ ಬೆಳ್ಳಿಹಬ್ಬವನ್ನು ಆಚರಿಸಿತು. ಶ್ರೀ. ಜಯಚಾಮರಾಜೇಂದ್ರ ಒಡೆಯರ್ ಅವರು ಅದನ್ನು ಉದ್ಘಾಟಿಸಿ, ಒಂದು ಅಶೋಕ ಗಿಡವನ್ನು ನೆಟ್ಟರು.

 1. ೧೯೭೦ ರಲ್ಲಿ ಶ್ರೀ. ಪರ್ವತವಾಣಿ, ಶ್ರೀ. ಕೈಲಾಸಂ ಮತ್ತು ಶ್ರೀ. ಕ್ಷೀರಸಾಗರರು ಬರೆದು ನಿರ್ದೇಶಿಸಿದ, ನಾಟಕಗಳು.
 2. ಅಸೋಸಿಯೇಷನ್ ನ ಕಲಾವಿದರಾದ, ಶ್ರೀ. ಬಿ.ಎನ್.ದುಗ್ಗಪ್ಪಯ್ಯ, ಡಾ.ಬಿ.ಆರ್.ಮಂಜುನಾಥ್, ಶ್ರೀಮತಿ.ಗೀತಾವಿಶ್ವನಾಥ್, ತಾವೇ ಬರೆದು ನಿರ್ದೇಶಿಸಿ, ಪಾತ್ರವಹಿಸಿದ್ದರು.

ಅಂದಿನ ಜನಪ್ರಿಯ ನಾಟಕಗಳು[ಬದಲಾಯಿಸಿ]

 1. ಬೆಕ್ಕಿನ ಕಣ್ಣು,
 2. ಬೆಳ್ಳಿಬೈಲು,
 3. ಬಿತ್ತಿ ಬೆಳೆದವರು,
 4. ಕೂಪಮಂಡೂಕ,
 5. ರಂಗೋಲಿ ನ್ಯಾಯ,
 6. ಹೂಗಿಡದಲ್ಲಿ ಹೂ ಅರಳಿತು
 7. ಪಪ್ಪಾ, ದೇವ್ರನ್ನ ನೋಡ್ಬೈಕು.

ಸಾಂಸ್ಕೃತಿಕ ಕಾರ್ಯಕ್ರಮಗಳು[ಬದಲಾಯಿಸಿ]

ಶ್ರೀಮತಿ.ಗೀತಾವಿಶ್ವನಾಥ್೧೯೬೦, ೭೦, ೮೦ ರಲ್ಲಿ, ಕೆಲವು ಕನ್ನಡದ ಬ್ಯಾಲೆ ಗಳನ್ನು, ತಂದು ಯಶಸ್ವಿಯಾಗಿ ರಂಗಮಂಚದ ಮೇಲೆ ಪ್ರದರ್ಶಿಸಿದರು ಕೃಷ್ಣಾಯ ತುಭ್ಯಂ, ಅಂತಃಪುರಗೀತೆಗಳು, ಕೋಳೂರು ಕೊಡಗೂಸು, ಭಜಗೋವಿಂದಂ,

ಅಸೋಸಿಯೇಷನ್ ನಲ್ಲಿ, ನೃತ್ಯವನ್ನು ಪ್ರದರ್ಶಿಸಿದ ಕೆಲವು ಪ್ರಖ್ಯಾತ ನರ್ತಕಿಯರು[ಬದಲಾಯಿಸಿ]

 1. ಪದ್ಮಿನಿ,
 2. ರಾಗಿಣಿ,
 3. ವೈಜಯಂತಿಮಾಲಾ,
 4. ಸುಧಾ ದೊರೈಸ್ವಾಮಿ,
 5. ವಿಜಿ ಜನ್ನ,
 6. ಶೆಟ್ಟಿಸಹೋದರಿಯರು,
 7. ಲಲಿತ ಶ್ರೀನಿವಾಸನ್,
 8. ವೆಂಕಟಲಕ್ಷಮ್ಮ,
 9. ಪದ್ಮಿನಿ ರವಿ,
 10. ನಂದಿನಿ ಅಳ್ವ ಮೊದಲಾದವರು.

ಹೆಸರಾಂತ ಕಲಾವಿದರ ಕೊಡುಗೆ[ಬದಲಾಯಿಸಿ]

 1. ಶ್ರೀ. ರಾಜರಾಜೇಶ್ವರಿ ಭರತನಾಟ್ಯ ಮಂಡಳಿ ಯವರು ಗುರುಗಳಾದ ಗೋವಿಂದರಾಜ ಪಿಳ್ಳೆ, ಮಹಾಲಿಂಗಮ್ ಪಿಳ್ಳೆ, ಕಲ್ಯಾಣಸುಂದರಮ್ ಪಿಳ್ಳೆ,
 2. ಶೃಂಗಾರ ಮ್ಯೂಸಿಕ್,#
 3. ವಿ.ಕೆ.ಮೂರ್ತಿಯವರು ಮ್ಯುಸಿಕ್ ಆರ್ಕೆಸ್ಟ್ರ,
 4. ಶ್ರೀಮತಿ ಚೊಕ್ಕಮ್ಮ,
 5. ನೀಲಮ್ಮ ಕದಂಬ,
 6. ಗಂಗುಬಾಯಿ ಹಾನಗಲ್,
 7. ಡಾ. ಸುಕನ್ಯಾ ಪ್ರಭಾಕರ್,
 8. ನಾಗಮಣಿ ಶ್ರೀನಾಥ್,
 9. ಟಿ. ಎಸ್. ಸತ್ಯವತಿ,
 10. ಕಿಶೋರಿ ಅಮೋನ್‍ಕರ್,
 11. ವಿಜಯಲಕ್ಷ್ಮೀನಾಥನ್,
 12. ಪಂ. ಭೀಮ್‍ಸೇನ್ ಜೋಶಿ,
 13. ಮಲ್ಲಿಕಾರ್ಜುನ ಮನ್ಸೂರ್,
 14. ಬಸವರಾಜ್ ರಾಜ್‍ಗುರು,
 15. ಕುಮಾರ ಗಂಧರ್ವ,
 16. ಕಾರ್ತಿಕ ಕುಮಾರ್,
 17. ಆರ್. ಕೆ. ಶ್ರೀಕಂಠನ್,
 18. ಆರ್. ಕೆ. ಪದ್ಮನಾಭ,
 19. ಶಂಕರ್,

'ಬಂಗಾರದ ಹಬ್ಬದ ಆಚರಣೆ'[ಬದಲಾಯಿಸಿ]

ಸನ್. ೧೯೭೬ ರಲ್ಲಿ, ಮೈಸೂರ್ ಅಸೋಸಿಯೇಷನ್ ನ ಬಂಗಾರದ ಹಬ್ಬ ಬಹಳ ಅದ್ಧೂರಿಯಿಂದ ನೆರವೇರಿತು. ವರ್ಷಪೂರ್ತಿ ನಡೆಸಿದ ಸಮಾರಂಭದ ಕಾರ್ಯಕ್ರಮಗಳ ಸಮಾರಂಭದ ಉದ್ಘಾಟನೆಯನ್ನು ಶ್ರೀ ದೇವರಾಜ್ ಅರಸು ರವರು,ಮಾಡಿದ್ದರು. ೨೦ ವರ್ಷಗಳ ಮೈಸೂರು ಅಸೋಸಿಯೇಷನ್ ಬಂಗಾರದ ಹಬ್ಬದ ನೆನಪಿನಲ್ಲಿ ಆಯೋಜಿಸಿದ ಭಾಷಣ ಮಾಲೆಯಲ್ಲಿ ಪಾಲ್ಗೊಂಡ ವ್ಯಕ್ತಿಗಳು :

 1. ಡಾ. ಶಿವರಾಮ ಕಾರಂತ
 2. ಡಾ.ಹಾ.ಮಾ.ನಾಯಕ
 3. ಡಾ.'ಚಂದ್ರಶೇಖರ ಕಂಬಾರ,
 4. ಡಾ.ಜಿ.ಎಸ್.ಶಿವರುದ್ರಪ್ಪ,
 5. ಡಾ. ಕೀರ್ತಿನಾಥ ಕುರ್ತುಕೋಟಿ,
 6. ಡಾ.ಎಸ್.ಕೆ.ರಾಮಚಂದ್ರ ರಾವ್,
 7. ಶ್ರೀರಂಗ,
 8. ಶ್ರೀ.ಮತ್ತೂರು ಕೃಷ್ಣಮೂರ್ತಿ,
 9. ಶ್ರೀ. ಶತಾವಧಾನಿ, ಡಾ. ಆರ್ ಗಣೇಶ್,
 10. ಡಾ.ಎಲ್.ಎಸ್.ಶೇಷಗಿರಿರಾಯರು,
 11. ಡಾ. ಎಸ್.ಎಲ್. ಭೈರಪ್ಪ,(೨೦೦೮)
 12. ಡಾ. ಚನ್ನವೀರ ಕಣವಿ',
 13. ಡಾ.'ಹಂ.ಪ.ನಾಗರಾಜಯ್ಯ',
 14. ಶ್ರೀಮತಿ.'ಕಮಲಾ ಹಂಪನಾ,
 15. ಡಾ.ಕೆ.ಎಸ್.ನಿಸಾರ್ ಅಹಮದ್,'
 16. ಡಾ.ಚಿದಾನಂದ ಮೂರ್ತಿ,'[೫]
 17. ಡಾ. ಎಚ್.ಎಸ್.ವೆಂಕಟೇಶಮೂರ್ತಿ(೨೦೧೩) [೬]
 18. ಡಾ. ಬಿ. ಎ. ವಿವೇಕ್ ರೈ (೨೦೧೪)
 19. ಯಶವಂತ ಚಿತ್ತಾಲ ಸಂಸ್ಮರಣೆ ಕಾರ್ಯಕ್ರಮ,'-೨೦೧೫(ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮ)[೭]
 20. ಡಾ. ಎಚ್. ಎಸ್. ರಾಘವೇಂದ್ರ ರಾವ್ ರವರಿಂದ ಸಮಾರಂಭದ ಉದ್ಘಾಟನೆ.
 21. ಜಯಂತ ಕಾಯ್ಕಿಣಿ, (೨೦೧೬) [೮][೯]
 22. ಬಿ. ಎನ್. ಶ್ರೀಕೃಷ್ಣ,(೨೦೧೭) [೧೦] ,[೧೧]
 23. ಎಂ. ಎ. ಜಯರಾಮ್ ರಾವ್, ೨೦೧೮, [೧೨], [೧೩]
 24. ನಾಗತಿಹಳ್ಳಿ ಚಂದ್ರಶೇಖರ್, ೨೦೧೯,[೧೪]

೧೯೮೬ ರಲ್ಲಿ ವಜ್ರಮಹೋತ್ಸವ[ಬದಲಾಯಿಸಿ]

ಮಹಾರಾಷ್ಟ್ರದ ಗವರ್ನರ್, ಆಗಿದ್ದ, 'ಡಾ. ಶ್ರೀ.ಶಂಕರದಯಾಳ್ ಶರ್ಮ', ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕನ್ನಡದ ಜೊತೆಗೆ, ಭಾರತೀಯ ಭಾಷೆಗಳ, ಸಂಸ್ಕೃತಿಗಳೆಲ್ಲದರ ಪರಿಚಯ ಮಾಡುವ ಉದ್ದೇಶಕ್ಕೆ ಒತ್ತು ಕೊಡಲಾಯಿತು. ೧೯೮೬ರಲ್ಲಿ ಕನ್ನಡ ಮರಾಠಿ ಜಾನಪದ ನೃತ್ಯ ಕಲಾಪ್ರಕಾರಗಳನ್ನು ಪ್ರಸ್ತುತ ಪಡಿಸಲಾಯಿತು. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್ ನಾಟಕಗಳ, ಒಂದು ಉತ್ಸವವನ್ನು ಏರ್ಪಡಿಸಲಾಯಿತು. ಈಗ ಇದನ್ನು ಪ್ರತಿ ವರ್ಷವೂ ಆಚರಿಸಲಾಗುತ್ತಿದೆ. ಗಿರೀಶ್ ಕಾರ್ನಾಡ್, ವಿಜಯ್ ತೆಂಡುಲ್ಕರ್, ಜಬ್ಬರ್ ಪಟೇಲ್, ಸತ್ಯದೇವ್ ದುಬೆ, ಎಮ್. ಎಸ್, ಸತ್ಯು, ನಾದಿರಾ ಬಬ್ಬರ್, ರಮೇಶ್ ತಲ್ವಾರ್, ರಾಮು ರಾಮಚಂದ್ರನ್, ಮತ್ತು ಇನ್ನೂ ಕೆಲವರು, ಬಂದು ಸಹಭಾಗಿಗಳಾಗಿ ಪಾಲುಗೊಂಡಿದ್ದಾರೆ. ಮೈಸೂರ್ ಅಸೋಸಿಯೇಷನ್ ಪ್ರಾಂಗಣದಲ್ಲಿ ಪ್ರತಿ ವರ್ಷದ ನವೆಂಬರ್ ತಿಂಗಳಲ್ಲಿ, ಹಿರಿಯ ಸಂಗೀತಗಾರರನ್ನು ಆಹ್ವಾನಿಸಿ, ಅವರಿಂದ ೧೫ ದಿನಗಳ ಸಂಗೀತ-ಕಮ್ಮಟಗಳನ್ನು ಏರ್ಪಡಿಸಲಾಗುವುದು. ಅದರಲ್ಲಿ, ಪ್ರಾದೇಶಿಕ ಸಂಗೀತಗಾರರನ್ನು ತರಭೇತು ಮಾಡಿ ಯೋಗ್ಯ ಪ್ರಶಿಕ್ಷಣ ಕೊಡುವ, ಕೆಲಸ ಪ್ರಧಾನವಾದದ್ದು. ಅನಂತರದಲ್ಲಿ ಸಿಮಿನಾರ್ ಗಳನ್ನು ಮಾಡಿ, ಯುವಜನರಲ್ಲಿ ಶಾಸ್ತ್ರೀಯಸಂಗೀತದ ಅಭಿರುಚಿಯನ್ನು ಬಿತ್ತಿ, ಅವರುಗಳಿಂದಲೇ ತಮ್ಮ ಯೋಗದಾನ ಮಾಡುವ ಪ್ರಯೋಗ, ಯಶಸ್ವಿಯಾಗಿ ಕಾಣಿಸುತ್ತಿದೆ. ಈ ಅಭಿಯಾನದಲ್ಲಿ ತಮ್ಮ ಅಮೋಘ ಕೊಡುಗೆಯನ್ನು ಕೊಟ್ಟ ಕಲಾವಿದರು : ವಿದ್ವಾನ್, ಆರ್. ಕೆ. ಶ್ರೀಕಂಠನ್, ಆರ್. ಕೆ. ಪದ್ಮನಾಭ, ಡಾ. ಸುಕನ್ಯಾ ಪ್ರಭಾಕರ್, ಡಾ. ಟಿ. ಎಸ್. ಸತ್ಯವತಿ, ಎಮ್.ಎಸ್.ಶೀಲ, ಶ್ಯಾಮಲಾ ಪ್ರಕಾಶ್, ಮೊದಲಾದವರು.

'ಅತ್ಯಾಧುನಿಕ ರಂಗಮಂಚದ ಉದ್ಘಾಟನೆ'[ಬದಲಾಯಿಸಿ]

'ಕರ್ನಾಟಕದ ಪರಂಪರೆಯ ಭಿತ್ತಿಚಿತ್ರ'
'ಅತ್ಯಾಧುನಿಕ ಸುಸಜ್ಜಿತ ರಂಗಮಂಚ'

೧೯೯೯ ರಲ್ಲಿ, ೩೦೦ ಜನ, ಕುಳಿತುಕೊಳ್ಳುವ ವ್ಯವಸ್ಥೆಯ, ಅತ್ಯಾಧುನಿಕ ಹವಾನಿಯಂತ್ರಿತ, ಭವ್ಯ ರಂಗಮಂಚದ ಉದ್ಘಾಟನೆಯನ್ನು, ಮಹಾರಾಷ್ಟ್ರದ ಗವರ್ನರ್, 'ಡಾ.ಪಿ.ಸಿ.ಅಲೆಕ್ಸಾಂಡರ್' ರವರ ಹಸ್ತದಿಂದ ನೆರವೇರಿಸಲಾಯಿತು. ೨೦೦೦ ದಲ್ಲಿ ಇದೇ ತರಹದ, ಒಂದು ಮಿನಿ ಆಡಿಟೋರಿಯಮ್ ನ್ನು ಕಟ್ಟಲಾಯಿತು. ೨೦೦೦ ದಲ್ಲಿ ಕರ್ನಾಟಕ ಸರ್ಕಾರವು, ೭೫ ವರ್ಷಗಳ ಭವ್ಯ ಕಲೆ, ನೃತ್ಯ, ಸಂಗೀತಗಳನ್ನು ಹೊರನಾಡಿನಲ್ಲಿ ಪ್ರದರ್ಶಿಸುತ್ತಿರುವ ಒಂದು ಅತ್ಯಂತ ಚಟುವಟಿಕೆಯ ಪ್ರಭಾವಿ ಹಿರಿಯ ಸಂಸ್ಥೆಯೆಂದು, ಗುರುತಿಸಿ, " ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ," ಯನ್ನು ಪ್ರದಾನಮಾಡಲಾಯಿತು. ಹೊರನಾಡಿನ, ಕನ್ನಡಸಂಸ್ಥೆಗಳಿಗೆ ದೊರಕಿದ ಪ್ರಪ್ರಥಮ ಪ್ರಶಸ್ತಿಯೆಂಬ ಹೆಗ್ಗಳಿಕೆಗೆ, ಮೈಸೂರ್ ಅಸೋಸಿಯೇಷನ್ ಪಾತ್ರವಾಯಿತು.

'೨೦೦೭ರ, ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಸಮಯದಲ್ಲಿ'[ಬದಲಾಯಿಸಿ]

ಮೈಸೂರ್ ಅಸೋಸಿಯೇಶನ್,[೧೫] ಸುವರ್ಣ ಕರ್ನಾಟಕೋತ್ಸವ ಹಬ್ಬದ ಸಂಭ್ರಮದಲ್ಲಿ ವಿಶೇಷ ನಾಟಕೋತ್ಸವ ಕಾರ್ಯಕ್ರಮಗಳನ್ನು ೨೦೦೭ ರ ನವೆಂಬರ್, ೨ರ ಶುಕ್ರವಾರ ಆಯೋಜಿಸಿತ್ತು. ಮೈಸೂರ್ ಅಸೋಸಿಯೇಷನ್ ಜೊತೆಗೆ, 'ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಾಂಸ್ಕ್ರುತಿಕ ವಿಭಾಗ' ಹಾಗೂ 'ಮುಂಬಯಿ ವಿಭಾಗದ ಮೈಸೂರ್ ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್' (MSIL) ಜಂಟಿಯಾಗಿ ನಾಟಕೋತ್ಸವದ ಆಯೋಜನೆಯನ್ನು ಮಾಡಿದ್ದರು. ಬೆಂಗಳೂರಿನಿಂದ ಆಗಮಿಸಿದ, 'ಕಲಾ ಗಂಗೋತ್ರಿ ತಂಡ' ದವರು ೩ ದಿನ ನಾಟಕಗಳನ್ನು ಹಮ್ಮಿಕೊಂಡಿದ್ದರು. ಈ ನಾಟಕಗಳನ್ನು ಸುಪ್ರಸಿದ್ಧ ನಿರ್ದೇಶಕ 'ಡಾ. ಬಿ. ವಿ. ರಾಜಾರಾಂ' ನಿರ್ದೆಶಿಸಿದರು.

ನಾಟಕಗಳು[ಬದಲಾಯಿಸಿ]

 • ಡಾ.ಎಸ್.ಎಲ್.ಭೈರಪ್ಪನವರ ಹೆಸರಾಂತ ಕೃತಿ, 'ಮಂದ್ರ' ವನ್ನು ಆಧರಿಸಿ ರಚಿಸಿದ ನಾಟಕದ ಪ್ರಸ್ತುತಿ.
 • ರಾಜೇಂದ್ರ ಕಾರಂತ್ ವಿರಚಿತ, 'ಮೈಸೂರ್ ಮಲ್ಲಿಗೆ', ನಾಟಕ.
 • ಟಿ. ಎಸ್. ಲೋಹಿತಾಶ್ವ ಬರೆದ, ರಣಜಿತ್ ಕಪೂರ್ ರವರ ಹಿಂದಿ ಕಥೆಯ ಕನ್ನಡ ಭಾಷಾಂತರ, 'ಮುಖ್ಯ ಮಂತ್ರಿ' ನಾಟಕ.

'ಕೈಲಾಸಂ ರವರ, 'ನಾಟಕೋತ್ಸವ ಸಮಾರಂಭ'[ಬದಲಾಯಿಸಿ]

ಸೆಪ್ಟೆಂಬರ್, ೨೫, ೨೦೦೯ ರಂದು, ಟಿ.ಪಿ.ಕೈಲಾಸಂ ನಾಟಕೋತ್ಸವವನ್ನು [೧೬] ಮೈಸೂರ್ ಅಸೋಸಿಯೇಷನ್ ಹಮ್ಮಿಕೊಂಡಿತ್ತು. ಸುತ್ತಮುತ್ತ' ನಾಟಕ ಪ್ರದರ್ಶಿಸಲ್ಪಟ್ಟಿತು. 'ಟಿ.ಪಿ.ಕೈಲಾಸಂ- ನಾಟಕಗಳ ಸರಮಾಲೆ', 'ಟಿ.ಪಿ.ಕೈಲಾಸಂ ಹಾಡುಗಳು', 'ಅಂತರಂಗ ನಾಟಕ ತಂಡ' ಬೆಂಗಳೂರಿನವರಿಂದ, ೨೭ ರಂದು, 'ವಿಚಾರ ಸಂಕಿರಣ-ಟಿ. ಪಿ. ಕೈಲಾಸಂರವರ ಬದುಕು-ಬರಹ, ಬವಣೆ'-ಖ್ಯಾತ ವಿಮರ್ಶಕ, ಶ್ರೀ. ಬಿ.ಎಸ್. ಕೇಶವರಾವ್ ಅವರಿಂದ ನಡೆಯಿತು. ಡಾ.ಬಿ.ಆರ್.ಮಂಜುನಾಥ್, ಮುಂಬಯಿನ ಖ್ಯಾತನಾಟಕಕಾರರು, ,ಡಾ. ಬಿ.ವಿ.ರಾಜರಾಂ, ನಿರ್ದೇಶನದಲ್ಲಿ, 'ಹುತ್ತದಲ್ಲಿ ಹುತ್ತ', ನಾಟಕ.

'ಘಝಲ್ ಕಾರ್ಯಕ್ರಮ'[ಬದಲಾಯಿಸಿ]

'ಮೈಸೂರ್ ಅಸೋಸಿಯೇಷನ್' ನ ಹವಾನಿಯಂತ್ರಣದಿಂದ ಸುಸಜ್ಜಿತ ರಂಗಮಂಚ' ದ 'ಸತತ ಒಂದು ದಶಕದ ಸೇವೆ' ಯನ್ನು ನೆನೆಯಲು ೨೦೦೯ ನೇ, ಅಕ್ಟೋಬರ್, ೨೪ ರ ಸಂಜೆ, ಹಮ್ಮಿಕೊಂಡಿದ್ದ, ಕಾರ್ಯಕ್ರಮದಲ್ಲಿ, ತಮ್ಮ 'ಘಝಲ್ ಸಂಗೀತ' ಕಾರ್ಯಕ್ರಮವನ್ನು 'ಶ್ರೀ. ಜಸ್ವಿಂದರ್ ಸಿಂಗ್' ನೀಡಿದರು.

'ಲಯಲಹರಿ' ಕಾರ್ಯಕ್ರಮ[ಬದಲಾಯಿಸಿ]

೨೦೦೯ ರಲ್ಲಿ ಮೈಸೂರ್ ಅಸೋಸಿಯೇಷನ್ ನ ಭವ್ಯ ಸಭಾಂಗಣದಲ್ಲಿ, 'ಬೆಂಗಳೂರಿನ ಅಯ್ಯನಾರ್ ಕಾಲೇಜ್ ಆಫ್ ಮ್ಯೂಸಿಕ್', 'ಲಯಲಹರಿ',[A Concert of Percussion instruments] ಕಾರ್ಯಕ್ರಮವನ್ನು ಗಾನಕಲಾಶ್ರೀ, ವಿದ್ವಾನ್, ಶೀ.ಆನೂರು ಅನಂತಕೃಷ್ಣ ಶರ್ಮ ಮತ್ತು ಅವರ ಸಂಗಡಿಗರು,

ಡಾ.ಶ್ರೀಲತಾರವರ ಸಂಗೀತ ಕಚೇರಿ[ಬದಲಾಯಿಸಿ]

೨೦೦೯ ರಲ್ಲಿ, ಡಾ.ಲತಾರವರು, ಮೈಸೂರ್ ಆಸೋಸಿಯೇಷನ್ ನಲ್ಲಿ ಸಂಗೀತಾಕಾಂಕ್ಷಿಗಳಿಗೆ ಸಂಗೀತ ಕಮ್ಮಟವನ್ನು ಹಮ್ಮಿಕೊಂಡಿದ್ದರು. [೧೭] ಡಾ. ಲತಾರವರ ಸಂಗೀತ.

ಕನ್ನಡ ರಂಗಭೂಮಿಯ, ಸಂಶೋಧನಾ ಸೌಕರ್ಯಗಳು[ಬದಲಾಯಿಸಿ]

೨೦೦೧ ರಲ್ಲಿ, ಪ್ಲಾಟಿನಮ್ ಜ್ಯುಬಿಲಿ, ಮಾರ್ಚ್ ೨೦೦೭ ರಲ್ಲಿ, 'ಸಹಸ್ರ ಚಂದ್ರ ದರ್ಶನ," ವನ್ನೂ ಕಂಡಿತು. ೮೧ ವರ್ಷಗಳ ಸತತ ಸೇವೆಯ ಕಾಲದಲ್ಲಿ, ಮುಂದೆ ಒಂದು,"Advanced Centre for Research and Learning Performing Arts "ಎನ್ನುವ ಆಸೆಯಿದೆ. ಇಂತಹ ವಾತಾವರಣದಲ್ಲಿ ದೇಶದ ವಿವಿಧ ಮೂಲೆಗಳಿಂದ ಸಂಗೀತ ವಿದ್ವಾಂಸರು, ನೃತ್ಯಪಟುಗಳು, ಗುರುಗಳು, ರಂಗಭೂಮಿಯ ವಿಶೇಷ ತಜ್ಞರು, ರಂಗ ನಾಟಕ ಲೇಖಕರು, ಒಂದುಗೂಡಲು ಸಹಾಯವಾಗುತ್ತದೆ. ಅಲ್ಲಿ ಪದವಿ, ಪದವಿಯೋತ್ತರ ಕೋರ್ಸ್ ಗಳಿಗೆ ವರ್ಷಪೂರ್ತಿ ನಡೆಸಲು ಸಹಾಯವಾಗುತ್ತದೆ. ಇದರಿಂದ ಮೈಸೂರು ಅಸೋಸಿಯೇಷನ್ ನ ನೂತನ ಕಟ್ಟಡ ನಿರ್ಮಾಣದ ಹಣದ ಪೂರೈಕೆಗಾಗಿ, ಪಂ.ಜಸ್ ರಾಜ್ , ರವರ ಸಂಗೀತ ಕಛೇರಿಯನ್ನು ನೆಹ್ರೂ ಸೆಂಟರ್ ಸಭಾಂಗಣದಲ್ಲಿ ಏರ್ಪಡುಮಾಡಲಾಗಿತ್ತು.

ಕರ್ನಾಟಕ ಸರ್ಕಾರದ ಪುಸ್ತಕ-ಪ್ರಾಧಿಕಾರದ ಮಳಿಗೆ[ಬದಲಾಯಿಸಿ]

'ಮೈಸೂರ್ ಅಸೋಸಿಯೇಷನ್ ನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದವರ ಮಳಿಗೆ'

ಮೈಸೂರ್ ಅಸೋಸಿಯೇಷನ್ ಪುಸ್ತಕ ಭಂಡಾರದಲ್ಲಿ, ಸುಮಾರು ಪುಸ್ತಕಗಳಿವೆ. ಕಾದಂಬರಿಗಳು, ವಿಶ್ವಕೋಶಗಳು, ಕಲಾಚಿತ್ರಗಳು, ಕವಿತೆ, ಕವನ, ಇತಿಹಾಸ, ನೃತ್ಯಕಲೆ, ಶಿಕ್ಷಣ,ನಾಟಕಗಳು, ಸಂಪಾದಿಸಿ ಪ್ರಕಟಿಸಿದ ಪುಸ್ತಕಗಳು, ಹಾಗೂ ಮುಂಬಯಿನ ಲೇಖಕರು ಪ್ರಕಟಿಸುವ/ಪ್ರಕಟಿಸಿರುವ, ಪುಸ್ತಕಗಳೂ ಇಲ್ಲಿ ದೊರೆಯುತ್ತವೆ. ಶ್ರೀಮತಿ. ಸುಮನ್ ಸುಬ್ಬಣ್ಣನವರ್, ಡಾ. ತಾಳ್ತಜೆ ವಸಂತಕುಮಾರ್ , ಡಾ.ಜಿ.ಎನ್.ಉಪಾಧ್ಯಾಯ, ಮತ್ತಿತರು ಪುಸ್ತಕಗಳನ್ನು ಉದಾರವಾಗಿ ದಾನಮಾಡಿದ್ದಾರೆ.

ಪ್ರತಿದಿನ ಕಾರ್ಯಕ್ರಮ[ಬದಲಾಯಿಸಿ]

ಪ್ರತಿದಿನವೂ, ಭಾರತೀಯ ಭಾಷೆಗಳಾದ ಹಿಂದಿ, ಮರಾಠಿ, ಗುಜರಾತಿ, ಕೊಂಕಣಿ, ಇಲ್ಲವೇ ತುಳು ನಾಟಕಗಳ, ಪ್ರದರ್ಶನವಿರುತ್ತದೆ.

"ನೇಸರು-ತಿಂಗಳೋಲೆ"[ಬದಲಾಯಿಸಿ]

ಸಂಸ್ಥೆಯ ಬಂಗಾರದ ಹಬ್ಬದ ಶುಭಸಂದರ್ಭದಲ್ಲಿ ೧೯೭೬ ರಲ್ಲಿನೇಸರು, ಅಸೋಸಿಯೇಷನ್ ನ ಮಾಸಿಕ ಮುಖ-ಪತ್ರಿಕೆಯಾಗಿ ಪಾದಾರ್ಪಣೆ ಮಾಡಿತ್ತು. ಡಿಸೆಂಬರ್ ತಿಂಗಳು, ೨೦೦೭ ರಲ್ಲಿ, ಒಂದು ವಿಶೇಷ ಸಂಚಿಕೆ ಯನ್ನು ಹೊರತಂದಿದೆ.

ವೆಬ್ ಸೈಟ್' ಪ್ರಾರಂಭ[ಬದಲಾಯಿಸಿ]

[೧೮] ೨೦೧೨ ರ,ಅಕ್ಷಯ ತೃತಿಯ ಹಬ್ಬದ ದಿನ, 'ಮೈಸೂರ್ ಅಸೋಸಿಯೇಷನ್ ವೆಬ್ ಸೈಟ್' ವಿಧ್ಯುಕ್ತವಾಗಿ ಅಸೋಸಿಯೇಷನ್ ನ್ನಿನ ಉಪಾಧ್ಯಕ್ಷ, 'ಶ್ರೀ ನಾರಾಯಣ ಜಾಗೀರ್ದಾರ್' ರವರಿಂದ ಉದ್ಘಾಟನೆ.

ಮೈಸೂರು ಅಸೋಸಿಯೇಷನ್ ಸದಸ್ಯರು[ಬದಲಾಯಿಸಿ]

ವರ್ಷ ೨೦೧೩ ರಲ್ಲಿ ಜರುಗಿದ ೮೬ ನೇ, ವಾರ್ಷಿಕ ಸಮಿತಿ ವರದಿಯ ಪ್ರಕಾರ, ಒಟ್ಟು ಸದಸ್ಯರ ಸಂಖ್ಯೆ : ೬೪೫. ಅಸೋಸಿಯೇಷನ್ ನ ಈಗಿನ ಸ್ಥಿತಿಯನ್ನು ತಲುಪಲು ಹಲವಾರು ಸದಸ್ಯರು ತನುಮನ ಧನಗಳನ್ನು ಸಮರ್ಪಿಸಿ ದುಡಿದಿದ್ದಾರೆ. ಸದಸ್ಯರಲ್ಲದ ಕನ್ನಡಿಗರನೇಕರು, ಸಹಕಾರ ನೀಡಿದ್ದಾರೆ. ಕಳೆದ ಸುಮಾರು ೨೫ ವರ್ಷಗಳು ಅಸೋಸಿಯೇಷ್ ನ ಕಾರ್ಯವಿಧಿಗಳ ದಿಕ್ಕನ್ನು ಬದಲಾಯಿಸಿ, ಸ್ವಯಂ ಸಿದ್ಧತೆಯನ್ನು ಕಾಣುವಲ್ಲಿ ಸಹಾಯಕವಾಗಿವೆ. ವಿಜ್ಞಾನದ ಕಮ್ಮಟಗಳು, ಕನ್ನಡಚಲನಚಿತ್ರ ಪ್ರದರ್ಶನಗಳು, ಜಾನಪದನೃತ್ಯ, ಭರತನಾಟ್ಯ, ಸಂಗೀತ, ನಾಟಕ, ಭಾಷಣ, ಹರಿಕಥಾ ಕಾಲಕ್ಷೇಪ, ಮುಂತಾದ ಮನರಂಜನೆಯ ಹಾಗೂ ಜ್ಞಾನವರ್ಧಕ ಕಾರ್ಯಕ್ರಮಗಳನ್ನು ನಡೆಸಲು ತನ್ನದೇ ಆದ ಒಂದು ಸಭಾಂಗಣವಿಲ್ಲದ, ಒಂದು ಅಸಹಾಯಕ ಪರಿಸ್ಥಿತಿಯಲ್ಲಿತ್ತು. ಅದನ್ನು ನೀಗಿ, ಆರ್ಥಿಕವಾಗಿ ತನ್ನಕಾಲ ಮೇಲೆ ನಿಲ್ಲುವಂತಹ ಒಂದು ದಿಟ್ಟ-ಪರಿಕ್ರಮ ನಡೆದದ್ದು, ೮೦-೯೦ ರ ದಶಕಗಳ ಅವಧಿಯಲ್ಲಿ. ಸಕ್ರಿಯವಾಗಿ ದುಡಿದ ಮಹನೀಯರು : ಡಾ.ಬಿ.ಆರ್.ಮಂಜುನಾಥ್, ಶ್ರೀ.ದೊರೆಸ್ವಾಮಿ, ಶ್ರೀ.ಕೆ.ಮಂಜುನಾಥಯ್ಯ, 'ಶ್ರೀ. ಎಮ್. ಎ. ಎನ್. ಪ್ರಸಾದ್', ಹಾಗೂ ಅಪಾರ ಮಿತ್ರ ವೃಂದ. ದಿವಂಗತ, ಶ್ರೀಮತಿಸೀತಮ್ಮರಾವ್, ಹಾಗೂ ಅವರ ಸಂಗಡಿಗರು.

ಸನ್.೨೦೧೩ ರ ಪ್ರಮುಖ ಕಾರ್ಯಕ್ರಮಗಳು[ಬದಲಾಯಿಸಿ]

 • ’ಬೆಂಗಳೂರು ಕಲಾಪ್ರೇಮಿ ಫೌಂಡೇಶನ್’ ಹಾಗೂ ’ಮುಂಬಯಿನ ಮೈಸೂರ್ ಅಸೋಸಿಯೇಷನ್’ ಹಮ್ಮಿಕೊಂಡ ’೩ ದಿನಗಳ ಕನ್ನಡ ನಾಟಕೋತ್ಸವ ಕಾರ್ಯಕ್ರಮ’ ಬೆಂಗಳೂರಿನಲ್ಲಿ.

ಜೂನ್ ೧ ರಂದು' ರವೀಂದ್ರ ಕಲಾಕ್ಷೇತ್ರದಲ್ಲಿ ’ಬೆಳ್ಳಿಬೈಲು ನಾಟಕ ಪ್ರದರ್ಶನ'[೧೯] ನಡೆಯಿತು. 'ಜೂನ್ ೨ ರಂದು', 'ಮಲ್ಲೇಶ್ವರದ ಸೇವಾಸದನ ಸಭಾಂಗಣ'ದಲ್ಲಿ ’ಸಾಕಾರ’ ವೆಂಬ ಸಂಗೀತ ನಾಟಕ ಪ್ರದರ್ಶನ ನಡೆಯಿತು. 'ಜೂನ್ ೩ ರಂದು' ಬೆಂಗಳೂರಿನ ಜಯನಗರದಲ್ಲಿರುವ್ 'ಎಚ್.ಎನ್.ಕಲಾಕ್ಷೇತ್ರ'ದಲ್ಲಿ 'ಅಂತರಂಗ ಏರ್ಪಡಿಸಿದ್ದ ವ್ಯವಸ್ಥೆಯಲ್ಲಿ 'ಬೆಳ್ಳಿಬೈಲು' ನಾಟಕ ಪ್ರದರ್ಶನ.

ಫೋಟೋ ಪ್ರದರ್ಶನ[ಬದಲಾಯಿಸಿ]

ಮುಂಬಯಿನ ಮೈಸೂರ್ ಅಸೋಸಿಯೇಶನ್ ಕನ್ನಡ ಕಲಾತಂಡ ತನ್ನ ಅಸ್ತಿತ್ವದಲ್ಲಿ ೭ ದಶಕಗಳ ಕಾಲ ಅರ್ಪಿಸಿದ 'ನಾಟಕಗಳ ಪಕ್ಷಿನೋಟ'ವನ್ನು ಛಾಯಾ ಚಿತ್ರಗಳ ಮೂಲಕ ತೋರಿಸಲಾಯಿತು.

ಕನ್ನಡ ವಿಕಿಪೀಡಿಯ ಸಂಪಾದನೆಯಲ್ಲಿ ಮುಂಬಯಿ ಮುಂದೆ[ಬದಲಾಯಿಸಿ]

ಮೈಸೂರ್ ಅಸೋಸಿಯೇಷನ್, ಮುಂಬಯಿ, ನ ಅಜೀವ ಸದಸ್ಯ, ಶ್ರೀ. ಎಚ್.ಆರ್.ಎಲ್.ರವರಿಗೆ ಬೆಂಗಳೂರಿನಲ್ಲಿ ೨೦೧೩ ರ ನವೆಂಬರ್ ನಲ್ಲಿ ಜರುಗಿದ ಕನ್ನಡ ವಿಕಿಪೀಡಿಯಾದ ೧೦ ವರ್ಷದ ಹಬ್ಬದ ಆಯೋಜನೆಯಲ್ಲಿ, ಸ್ಮರಣಿಕೆ ಹಾಗೂ ಟಿ-ಶರ್ಟ್ ಕೊಡುವುದರ ಮೂಲಕ ಗೌರವ ಸಮರ್ಪಿಸಲಾಯಿತು. ಅವರು, ಕನ್ನಡ ವಿಕಿಪೀಡಿಯ ವಲಯದಲ್ಲಿ ಆ ಸಮಯದಲ್ಲಿ ಆತ್ಯಂತ ಹೆಚ್ಚು ಲೇಖನಗಳ ಸಂಪಾದನೆಗೆ ಕಾರಣರಾಗಿದ್ದರು].[೨೦]

ಕನ್ನಡ ಸಾಹಿತ್ಯ ಪರಿಷತ್ (ಮಹಾರಾಷ್ಟ್ರ) : ಸಂಸ್ಥಾಪನಾ ದಿನಾಚರಣೆ[ಬದಲಾಯಿಸಿ]

೨೦೧೪ ರ ಮೇ, ೫ ನೆಯ ತಾರೀಖು, ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕದ ೨೦ ನೆಯ ವರ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ನ ಶತಮಾನೋತ್ಸವದ ಸಂಭ್ರಮದ ಆಚರಣೆಯ ಶುಭಾರಂಭವನ್ನು[೨೧] ಮೈಸೂರು ಅಸೋಸಿಯೇಷನ್ ನ ರಂಗಮಂಚದಮೇಲೆ ಮಾಡಲಾಯಿತು.[೨೨]

ಕುಮಾರಿ ಐಶ್ವರ್ಯ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ[ಬದಲಾಯಿಸಿ]

೨೦೧೪ ರ ಮಾರ್ಚ್ ೧೫ ರಂದು ಅಸೋಸಿಯೇಷನ್ ಸಭಾಂಗಣದಲ್ಲಿ ಕುಮಾರಿ ಐಶ್ವರ್ಯರಿಂದ [೨೩] ಕರ್ನಾಟಕ ಸಂಗೀತ ಕಚೇರಿಯ ಆಯೋಜನೆಯಾಗಿತ್ತು.

ಮೈಸೂರ್ ಅಸೋಸಿಯೇಷನ್, ಮುಂಬಯಿ, ಕನ್ನಡ ಸೌರಭ-೨೦೧೪[ಬದಲಾಯಿಸಿ]

[೨೪] 'ಕರ್ನಾಟಕ ರಾಜ್ಯೋತ್ಸವ ಸಮಾರಂಭ,(ಕನ್ನಡ ಸೌರಭ),' ನವೆಂಬರ್ ೨೧, ೨೨,೨೩, ರಂದು, ಕರ್ನಾಟಕ ಸರಕಾರದ ಸಂಸ್ಕೃತಿ ಶಾಖೆಯವರ ಪ್ರಸ್ತುತಿ.[೨೫]

೯೦ ನೇವರ್ಷದ ಹಬ್ಬ[ಬದಲಾಯಿಸಿ]

ಫೆಬ್ರವರಿ,೨೭,೨೦೧೬ ರಂದು, ಅಸೋಸಿಯೇಷನ್ನಿನ ಸುದೀರ್ಘ ಬೆಳವಣಿಗೆಯಲ್ಲಿ ಪಾತ್ರವಹಿಸಿದ ಹಳೆಯ ಸದಸ್ಯರನ್ನೆಲ್ಲಾ ಗೌರವಿಸಲಾಯಿತು.[೨೬]

ಸಂವಾದ ಕಾರ್ಯಕ್ರಮ[ಬದಲಾಯಿಸಿ]

"ಕರ್ನಾಟಕದ ಸಿರಿಗೆರೆ ಬೃಹನ್ ಮಠದ ಪೀಠಾಧಿಪತಿ, ಶ್ರೀ ತರಳಬಾಳು ಜಗದ್ಗುರು ೧೧೦೮ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಜೊತೆಗೆ ಸಂವಾದ ಕಾರ್ಯಕ್ರಮ"ವನ್ನು ತಾ.೧೭,ಡಿಸೆಂಬರ್,೨೦೧೭ ರಂದು ಅಸೋಸಿಯೇಷನ್ ನ ಕಿರುಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿತ್ತು. [೨೭]

ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳ ಆಶೀರ್ವಚನ[ಬದಲಾಯಿಸಿ]

೧, ಜನವರಿ, ೨೦೧೯ ರ ಸಾಯಂಕಾಲ ೫ ಘಂಟೆಗೆ ಮುಂಬಯಿನಗರದ ಮೈಸೂರ್ ಅಸೋಸಿಯೇಷನ್ ಸಭಾಗೃಹದಲ್ಲಿ ಶ್ರೀಗಳವರ ಪಾದಪೂಜಾ ಕಾರ್ಯಕ್ರಮವಿತ್ತು. [೨೮]

ಉಲ್ಲೇಖಗಳು[ಬದಲಾಯಿಸಿ]

 1. ಮೈಸೂರ್ ಅಸೋಸಿಯೇಷನ್ ಸ್ಮರಣ ಸಂಚಿಕೆ ೨೦೦೬
 2. ನ್ಯಾಷನಲ್ ಕನ್ನಡ ಎಜುಕೇಷನ್ ಸೊಸೈಟಿ, ವಡಾಲ, ಮುಂಬಯಿ
 3. ನೇಸರು,ಸೆಪ್ಟೆಂಬರ್,೨೦೦೮,ಪುಟ-೪, ಡಾ.ಬಿ.ಆರ್.ಮಂಜುನಾಥರು ಶ್ರೀಕೃಷ್ಭ,ಶಾರದಮ್ಮ,ಹಾಗೂ ಪೂರ್ಣಿಮಾಶ್ರೀಕೃಷ್ಣರ ಜೊತೆ ನಡೆಸಿದ ಸಂದರ್ಶನ.
 4. daijiworld.com, March 22, 2010, The Mysore Association Felicitates V K Murthi- Dada Saheb Phalke Recipient, News & Pics: Rons Bantwal
 5. ಡಾ.ಚಿದಾನಂದ ಸ್ವಾಮಿಯವರು ೨೦೧೨ ರ ದತ್ತಿ ಉಪನ್ಯಾಸದ ಪ್ರಮುಖ ಭಾಷಣಕಾರರಾಗಿದ್ದರು
 6. Dr. H. S. Venkatesh Murthy, Delivered The Mysore Association Golden Jubilee Endowment Lecture At Mumbai ಮೈಸೂರ್ ಅಸೋಸಿಯೇಷನ್, ಮುಂಬಯಿನ ಬಂಗಾರದ ಹಬ್ಬದ ದತ್ತಿ ಉಪನ್ಯಾಸಮಾಲೆಯಲ್ಲಿ ಡಾ.ಎಚ್ಚೆಸ್ವಿಯವರು ಭಾಷಣಮಾಡಿದರು
 7. ಯಶವಂತ ಚಿತ್ತಾಲ ಸಂಸ್ಮರಣೆ ಕಾರ್ಯಕ್ರಮ-ಮೈ.ಅಸೋ.ಮುಂಬಯಿ, ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ, ಹಾಗೂ ಕರ್ನಾಟಕ ಸಂಘ, ಮುಂಬಯಿ, ಸಂಯುಕ್ತ ಆಶ್ರಯದಲ್ಲಿ, ೦೪, ರವಿವಾರ, ಜನವರಿ, ೨೦೧೫, ಬೆಳಿಗ್ಯೆ, ೧೧ ಕ್ಕೆ
 8. daijiworld.com. January, 18th, 2016, Mumbai: Lecture held on memories of Kuvempu ews and pics: Rons Bantwal
 9. daijiworld.com, January 18, 2016, Rons Bantwal, Mumbai: 'Kathavarana' book by Jayanth Kaikini released
 10. ನೇಸರು ವಿಶೇಷ ಸಂಚಿಕೆ, ಫೆಬ್ರವರಿ,೨೦೧೭, ಪು.೫,ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಅವರೊಂದಿಗೆ ಸಂದರ್ಶನ-ವೈ.ವಿ.ಮಧುಸೂದನ ರಾವ್ ಹಾಗೂ ಕೆ.ಎಸ್.ರಾವ್
 11. ಮೈಸೂರು ಅಸೋಸಿಯೇಷನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ, ಉದಯವಾಣಿ,
 12. ೨೪, ಮತ್ತು ೨೫, ಫೆಬ್ರವರಿ, ೨೦೧೮ ರಂದು, ಮೈಸೂರು ಅಸೋಸಿಯೇಷನ್, ಮುಂಬಯಿ,,ಮುಂಬಯಿ ವಿಶ್ವವಿದ್ಯಾಲಯ,ಕನ್ನಡ ವಿಭಾಗ ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಡಾ.ಜಯರಾಮರಾವ್ ರವರ ಗಮಕ/ಅರ್ಥ ನಿರೂಪಣೆ ಯನ್ನು ಆಯೋಜಿಸಲಾಯಿತು.
 13. ಫೆ.೨೪, Bantwal times.com, ಮೈಸೂರ್ ಅಸೋಸಿಯೇಷನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ-೨೦೧೮,'ಕವಿ ಕಾಣದ್ದನ್ನು ಗಮಕಿ ಕಾಣುತ್ತಾನೆ', ಡಾ. ಎಮ್.ಎ. ಜಯರಾಮ್ ರಾವ್,ಚಿತ್ರ ವರದಿ : ರೋನ್ಸ್ ಬಂಟ್ವಾಳ್
 14. ಮೈಸೂರು ಅಸೋಸಿಯೇಷನ್ ಸಭಾಗೃಹದಲ್ಲಿ ದತ್ತಿ ಉಪನ್ಯಾಸ, ಕೃತಿ ಬಿಡುಗಡೆ. ೧೬ & ೧೭ ಫೆಬ್ರವರಿ, ೨೦೧೯,"ಭಾರವಾದ ಭಾವನೆಗಳಿಂದ ಹೊರಬರಲು ಕಥೆಗಳ ಪಾತ್ರ ಮುಖ್ಯ-ನಾಗತಿಹಳ್ಳಿ ಚಂದ್ರಶೇಖರ
 15. ೨೦೦೭ ರ ಸುವರ್ಣ ಕರ್ನಾಟಕ ರಾಜ್ಯೋತ್ಸವಾಚರಣೆ
 16. 'ಕನ್ನಡಕ್ಕೊಬ್ನೆ ಕೈಲಾಸಂ'
 17. ವಿದುಷಿ, ಡಾ. ಶ್ರೀಲತಾರವರ ಸಂಗೀತ, ಮುಂಬಯಿನಗರದಲ್ಲಿ
 18. '೨೦೧೨ ರ,ಏಪ್ರಿಲ್,೨೪ ರಂದು,ಮೈಸೂರ್ ಅಸೋಸಿಯೇಷನ್ ವೆಬ್ ಸೈಟ್ ವಿಧ್ಯುಕ್ತವಾಗಿ ಉದ್ಘಾಟಿಸಲ್ಪಟ್ಟಿತು'
 19. ಉದಯವಾಣಿ, ೧೮, ಜೂನ್, ೨೦೧೩, ಕಲಾಬಿಂಬ, ಪುಟ.೩ 'ಬೆಳ್ಳಿಬೈಲು,ಸಾರ್ವಕಾಲೀನ ಸಮಸ್ಯೆ'-ಸಮರ್ಥ ಅಭಿವ್ಯಕ್ತಿ
 20. ಕನ್ನಡ ವಿಕಿಪೀಡಿಯಾದ ಎಚ್.ಆರ್.ಎಲ್-ಶ್ರೀನಿವಾಸ ಜೋಕಟ್ಟೆ, ಸ್ನೇಹಸಂಬಂಧ, ಮಾರ್ಚ್, ೨೦೧೪, ಪುಟ.೨೯
 21. 'ನೂರರ ಹೆಜ್ಜೆಹಾಕಿದ ಕನ್ನಡ ಸಾಹಿತ್ಯ ಪರಿಷತ್ತು':ಪ್ರಕಾಶ ಬುರ್ಡೆ,೨೦೧೪ ರ,ಮೇ,೯ ರ, ಉದಯವಾಣಿ ಪತ್ರಿಕೆ ಪು.೩.
 22. ಉದಯವಾಣಿ ಇ-ಪತ್ರಿಕೆ,ಕನ್ನಡ ಸಾಹಿತ್ಯ ಪರಿಷತ್ (ಮಹಾರಾಷ್ಟ್ರ) : ಸಂಸ್ಥಾಪನಾ ದಿನಾಚರಣೆ, ಪುಟ.೧೦
 23. 'ಕು.ಐಶ್ವರ್ಯರವರಿಂದ ರಸಿಕರ ಮನರಂಜಿಸಿದ ಸಂಗೀತ'-ವಿದುಷಿ.ಶ್ಯಾಮಲಾ ಪ್ರಕಾಶ್
 24. ಕನ್ನಡ ಸೌರಭ,ಪು.9,10,11, ನೇಸರು, ಡಿಸೆಂಬರ್, ೨೦೧೪
 25. ಉದಯವಾಣಿ, ೯, ಡಿಸೆಂಬರ್, ೨೦೧೪, ಪುಟ ೩, 'ಮೈಸೂರ್ ಅಸೋಸಿಯೇಷನ್ ಕಳೆಗಟ್ಟಿದ ಕನ್ನಡ ಸೌರಭ'-'ಕಲಾಪ್ರಿಯ'
 26. ೯೦ ವಸಂತಗಳನ್ನು ಯಶಸ್ವಿಯಾಗಿ ಮುಗಿಸಿ,ದಾಪುಗಾಲು ಹಾಕುತ್ತಾ ಸಾಗುತ್ತಿರುವ, ಮೈಸೂರ್ ಅಸೋಸಿಯೇಷನ್ ಬೆಳೆಯಲು ಕಾರಣಕರ್ತರಾದ ಹಿರಿಯ ಸದಸ್ಯರನ್ನೆಲ್ಲಾ ಗೌರವಿಸಲಾಯಿತು
 27. ಸಂಸ್ಕೃತಿ, ಪರಂಪರೆಗಳ ಉಳಿವಿಗೆ ಶ್ರೀ ತರಳಬಾಳು ಮಠದ್ದು ಅನುಪಮ ಕೊಡುಗೆ-ಶಿವಮೂರ್ತಿ ಶಿವಾಚಾರ್ಯ, "ಕರ್ನಾಟಕ ಮಲ್ಲ, ೧೮ ಡಿಸೆಂಬರ್, ೨೦೧೭
 28. ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳ ಪಾದಪೂಜೆ ಮತ್ತು ಆಶೀರ್ವಚನ ಕಾರ್ಯಕ್ರಮ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

 1. 'ಮುಂಬಯಿ ಮೈಸೂರು ಅಸೋಸಿಯೇಷನ್ : ಒಂದು ಸವಿ ನೆನಪು','ನೇಸರು ವಿಶೇಷ ಸಂಚಿಕೆ', ಪು.೫-೯, ಜಿ. ಗೋಪಾಲಯ್ಯ, ಕೇಶವ ಮೂರ್ತಿ, ಮಧುರಾ ಕೃಷ್ಣಸ್ವಾಮಿ, ಟಿ.ಆರ್.ಎಸ್.ಆನಂದ್, ಸೀತಮ್ಮ.ಆರ್.ರಾವ್
 2. ಮುಂಬಯಿನ ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಕನ್ನಡಿಗರು :ಮೈಸೂರು ಅಸೋಸಿಯೇಷನ್ನಿನ ಪಾತ್ರ-ಡಾ.ಲೀಲಾ ಬಿ.ಮುಂಬಯಿ,ಕೃಪೆ: ಮೈಸೂರು ಸಾಂಸ್ಕೃತಿಕ ಸಂಕಥನ,ನೇಸರು, ವಿಶೇಷ ಸಂಚಿಕೆ, ಏಪ್ರಿಲ್,೨೦೧೬.ಪುಟ :೨೬-೩೦)
 3. note.taable.com
 4. 'ಮೈಸೂರು ಅಸೋಸಿಯೇಶನ್ ನ ಇತಿಹಾಸ' ನೇಸರು, ಫೆಬ್ರವರಿ, ೨೦೧೮ ರ ಸಂಚಿಕೆ, 'ಫೇಸ್ಬುಕ್' ನಲ್ಲಿ ಕೊಟ್ಟಿರುವ ಪುಟಗಳಿಂದ
 5. ಮೈಸೂರ್ ಅಸೋಸಿಯೇಷನ್, ಮುಂಬಯಿ ಹಾಗೂ ರಂಗಾಯಣ ಮೈಸೂರು, ಜೊತೆಗೂಡಿ ಆಯೋಜಿಸಿದ ೨ ದಿನಗಳ ನಾಟಕೋತ್ಸವ, ೧೬. ೧೭ ಜೂನ್, ೨೦೧೮
 6. Mumbai : Mysore association holds two day drama, Daijiworld.com, 21st, June, 2018, Rons Bantwal