ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ೧೯೩೩ರಲ್ಲಿ ಶುರುವಾಯಿತು. ವಿಶ್ವವಿದ್ಯಾನಿಲಯದ ಪ್ರಕಟಣೆಗಳನ್ನು ಹೊರತರುವುದು ಇದರ ಮುಖ್ಯಧ್ಯೇಯ. ಈ ಸಂಸ್ಥೆ ತನ್ನ ನೆಲದ ಅನಕ್ಷರಸ್ಥರಿಗಾಗಿ ಪ್ರಚಾರೋಪನ್ಯಾಸ ಮಾಲೆ ಎಂಬ ವಿಶಿಷ್ಟಸೇವೆಯನ್ನು ಆರಂಭಿಸಿತು. ಈ ಕುರಿತು ಶ್ರೀಯುತಕುವೆಂಪು ಅವರ ಮಾತಿನಲ್ಲಿ ಹೇಳುವುದಾದರೆ - 'ದೇಶದಲ್ಲಿರುವ ಎಲ್ಲರೂ ವಿಶ್ವವಿದ್ಯಾನಿಲಯಕ್ಕೆ ಹೋಗಲಾರರಷ್ಟೇ! ಆದರೆ ವಿಶ್ವವಿದ್ಯಾನಿಲಯ ಎಲ್ಲರ ಮನೆ ಬಾಗಿಲಿಗೂ ಹೋಗಬಲ್ಲದು.' ಈ ರೀತಿ ವಿಶ್ವವಿದ್ಯಾನಿಲಯದ ತಜ್ಞರು ಹಳ್ಳಿ ಹಳ್ಳಿಗೆ ತೆರಳಿ, ರೈತಾಪಿ ಜನರಿಗೆ ಉಪನ್ಯಾಸ ನೀಡುವುದು ಹಾಗೂ ಈ ಉಪನ್ಯಾಸವನ್ನು ಕಿರು ಪುಸ್ತಕರೂಪದಲ್ಲಿ ಪ್ರಕಟಿಸಿ, ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರುವುದಾಗಿದೆ. ಈ ಯೋಜನೆಯ ಉದ್ದೇಶ ದುಡ್ಡು ಮಾಡುವುದಲ್ಲ. ವಿಶ್ವವಿದ್ಯಾನಿಲಯದ ಜನತೆಯ ನಡುವೆ ಜ್ಞಾನ೮ಪ್ರಸಾರ ಮಾಡುವುದು. ಹಾಗಾಗಿ ಆರಂಭದಲ್ಲಿ ಪುಸ್ತಕದ ಮುಖಬೆಲೆ ಎರಡಾಣೆಯಾಗಿತ್ತು. ಇದುವರೆವಿಗೂ ಸಾವಿರಾರು ವಿಷಯಗಳ ಕುರಿತು, ಲಕ್ಷಾಂತರ ಪುಸ್ತಕಗಳು ಬಿಕರಿಯಾಗಿವೆ. ಆಧುನಿಕ ವಿಜ್ಷಾನದ ವಿಷಯಗಳಿಂದ ಹಿಡಿದು, ವೈದ್ಯಕೀಯ ವಿಷಯಗಳು, ಕಣ್ಣು ಮತ್ತು ಅದರ ರಕ್ಷಣೆ, ಹೆರಿಗೆ ಮತ್ತು ಶಿಶುಸಂರಕ್ಷಣೆಯಂಥ ಪುಸ್ತಕಗಳು ಈ ಯೋಜನೆಯಲ್ಲಿ ಪ್ರಕಟವಾಗಿವೆ. ಇದು ೧೯೩೪ ರಲ್ಲಿ ಆಕ್ಸ್ ಫರ್ಢ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾನಿಲಯಗಳ ಸಮ್ಮೇಳನದಲ್ಲಿ ಗಮನಸೆಳೆಯಿತು. ಮುಂದೆ ಜಾಗತಿಕವಾಗಿ ' ಮೈಸೂರು ವಿಶ್ವವಿದ್ಯಾನಿಲಯ ಪ್ರಯೋಗ' ಎಂದೇ ಪ್ರಸಿದ್ಧಿಯಾಯಿತು.

ಉದ್ದೇಶ[ಬದಲಾಯಿಸಿ]

ಪ್ರಕಟಣೆಗಳು[ಬದಲಾಯಿಸಿ]

  • ಅಂಚೆ ಮೂಲಕ ಬೋಧನೆ-ಅನು:ಜೆ.ಆರ್.ನಂಜುಂಡೇಗೌಡ
  • ಅಂಟಿಗೆ ಪಂಟಿಗೆ ಪದಗಳು-ಸಂ:ಕೆ.ಶ್ರೀಕಂಠಕೂಡಿಗೆ
  • ಅಂತರರಾಷ್ಟ್ರೀಯ ಕಾನೂನು-ಎಂ.ವಿ.ಆರ್.ರಾವ್
  • ಅಂತರ್ಜಲ ಸಮಸ್ಯೆಗಳು-ಡಾ.ಎಚ್.ಎಸ್.ನಾಗಭೂಷಣಯ್ಯ
  • ಅಕಾರಾದಿಯಲ್ಲಿ ಕುವೆಂಪು ಕವನಗಳು-ಡಾ.ಎಚ್.ತಿಪ್ಪೇರುದ್ರಸ್ವಾಮಿ
  • ಅಕಾರಾದಿ ನಿಘಂಟು ಮತ್ತು ವೈದ್ಯನಿಘಂಟು-ಡಾ.ವೈ.ಸಿ.ಭಾನುಮತಿ
  • ಅಳಿಯ ಲಿಂಗರಾಜ ವಿರಚಿತ ಯಕ್ಷಗಾನ ಸಾಹಿತ್ಯಸಂ.1-ಸಂ:ಡಿ.ಸಿದ್ಧಗಂಗಯ್ಯ
  • ಅಳಿಯ ಲಿಂಗರಾಜ ವಿರಚಿತ ಯಕ್ಷಗಾನ ಸಾಹಿತ್ಯಸಂ.2-ಜಿ.ಜಿ.ಮಂಜುನಾಥನ್
  • ಅಳಿಯ ಲಿಂಗರಾಜ ವಿರಚಿತ ಯಕ್ಷಗಾನ ಸಾಹಿತ್ಯಸಂ.3-ಬಿ.ಎಸ್.ಸಣ್ಣಯ್ಯ
  • ಅಳಿಯ ಲಿಂಗರಾಜ ವಿರಚಿತ ಯಕ್ಷಗಾನ ಸಾಹಿತ್ಯಸಂ.4-ಬಿ.ಎಸ್.ಸಣ್ಣಯ್ಯ
  • ಅಳಿಯ ಲಿಂಗರಾಜ ವಿರಚಿತ ಯಕ್ಷಗಾನ ಸಾಹಿತ್ಯ-ಜಿ.ಜಿ.ಮಂಜುನಾಥನ್
  • ಅನಂತಕುಮಾರಿ ಚರಿತೆ-ಸಂ:ಜಿ.ಜಿ.ಮಂಜುನಾಥ್
  • ಅನಾವೃತ ಬೀಜ ಸಸ್ಯಗಳು-ಡಾ.ಎನ್.ಎಸ್.ರಾಮಸ್ವಾಮಿ
  • ಅಬ್ಬಲೂರು ಚರಿತೆ-ಸಂ:ಎನ್.ಬಸವಾರಾಧ್ಯ
  • ಅಭಿಮುಖಿ-ಸಂ:ಡಾ.ಜೆ.ಸೋಮಶೇಖರ್
  • ಅಭಿವೃದ್ಧಿಶೀಲ ದೇಶಗಳಿಗೆ ವಿಶ್ವವಿದ್ಯಾನಿಲಯದ ಗ್ರಂಥಾಲಯಗಳು-ಅನು:ಟಿ.ವಿ.ಸುಬ್ರಮಣ್ಯಂ
  • ಅಮರ ಕೋಶ-ಸಂ:ಲೂಯಿರೈಸ್,ಅನು:ಎಸ್.ಬಾಲಸುಬ್ರಮಣ್ಯಂ
  • ಅರಿವಿನ ಮಾರಿತಂದೆ ವಚನಗಳು-ಸಂ:ಬಿ.ಎಸ್.ಸಣ್ಣಯ್ಯ
  • ಅರ್ಥಶಾಸ್ತ್ರ ಪರಿಚಯ ಭಾಗ-2-ಡಾ.ಜಿ.ಟಿ.ಹುಚ್ಚಪ್ಪಮತ್ತುವೀರರಾಘವಾಚಾರ್
  • ಅಶ್ವಶಾಸ್ತ್ರ-ಸಂ:ಜಿ.ಜಿ.ಮಂಜುನಾಥನ್
  • ಅಹಿಂಸಾ ಚರಿತೆ-ಸಂ:ಡಾ.ಅಕ್ಕಮಹಾದೇವಿ
  • ಆಕಾಶವಾಣಿ-60-ಸಂ:ಎಚ್ಕೆಸ್ಕೆ
  • ಆದಿಪರ್ವ-ಸಂ:ಕೆ.ಆರ್.ಶೇಷಗಿರಿಉತ್ತಮ
  • ಆಧುನಿಕ ಕನ್ನಡ ಕಾವ್ಯ(ಹಿಂದಿ)-ಸಂ:ಜೆ.ಎಸ್.ಕುಸುಮಗೀತ
  • ಆಧುನಿಕ ಕನ್ನಡ ಬರಹಗಾರರು-ಕನ್ನಡಗ್ರಂಥಸೂಚಿವಿಭಾಗ
  • ಆಧುನಿಕ ಜಪಾನಿನ ಸಂಕ್ಷಿಪ್ತ ಆರ್ಥಿಕ ಇತಿಹಾಸ-ಅನು:ಎ.ಪಿ.ಶ್ರೀನಿವಾಸಮೂರ್ತಿಉತ್ತಮ
  • ಆದಿಪುರಾಣ ಸಂಗ್ರಹ-ಎಲ್.ಗುಂಡಪ್ಪ
  • ಆಧುನಿಕ ಹಿಂದಿ ಕಾವ್ಯ-ಪ್ರೊ.ಜೆ.ಎಸ್.ಕುಸುಮಗೀತ
  • ಆಧುನಿಕ ಬೀಜಗಣಿತ ಪರಿಚಯ-ಡಿ.ವಿ.ರಾಮಣ್ಣ
  • ಆರಾಧ್ಯಚಾರಿತ್ರ-ಸಂ:ಎನ್.ಬಸವಾರಾಧ್ಯ
  • ಆರ್ಥಿಕ ರಚನೆ-ಜಿ.ಟಿ.ಹುಚ್ಚಪ್ಪಮತ್ತುಇತರರು
  • ಆರ್ಥಿಕಾಭಿವೃದ್ಧಿ:ಕೆಲವುಸಮಸ್ಯೆಗಳು-ಎ.ಪಿ.ಶ್ರೀನಿವಾಸಮೂರ್ತಿಉತ್ತಮ
  • ಇಂಗ್ಲಿಷೇತರ ಸಾಹಿತ್ಯ-ಡಾ.ಶಿರಗಾನಹಳ್ಳಿಶಾಂತನಾಯ್ಕ
  • ಇಂಜಿನಿಯರಿಂಗ್‍ ವಸ್ತುಗಳು:ಒಂದುಪರಿಚಯ-ಕೆ.ಎನ್.ಶಿವಶಂಕರರಾವ್‍ಉತ್ತಮ
  • ಇತಿಹಾಸಶಾಸ್ತ್ರ ಮತ್ತು ಸಿದ್ಧಾಂತ-ಡಾ.ಬಾ.ರಾ.ಗೋಪಾಲ
  • ಇನಾರ್ಗ್ಯಾನಿಕ್‍ ರಸಾಯನಶಾಸ್ತ್ರ ಭಾಗ-1-ಕೆ.ಸುಬ್ಬಾಭಟ್ಟ

ಪ್ರಸಾರಾಂಗದ ನಿರ್ದೇಶಕರ ಪಟ್ಟಿ[ಬದಲಾಯಿಸಿ]

ಪ್ರಸಕ್ತ ಡಾ. ಎಂ.ಜಿ. ಮಂಜುನಾಥ ಪ್ರಸಾರಾಂಗದ ನಿರ್ದೇಶಕರಾಗಿದ್ದಾರೆ.

ಉಲ್ಲೇಖ[ಬದಲಾಯಿಸಿ]