ಮೇಘಸ್ಫೋಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇಘ ಸ್ಫೋಟವೆಂದರೆ ಅತಿ ದೊಡ್ಡ ಗಾತ್ರದ ನೀರಿನ ಮೋಡ ಭೂಮಿಯ ವಾತಾವರಣದಲ್ಲಿ ಶೇಖರಣೆಯಾಗಿ ಅದು ಒಮ್ಮಿಂದೊಮ್ಮೆಲೆ ಭೂಮಿಯ ಮೇಲೆ ಸುರಿಯುವುದು. ಈ ಸುರಿಯುವಿಕೆಗೆ ಕಾರಣವೆಂದರೆ, ಗುಡುಗು, ಸಿಡಿಲುಗಳಿಂದ ಹಾಗೂ ಕೆಲವು ಬಾರಿ ಆಲಿಕಲ್ಲುಗಳಿಂದ ಕೂಡಿದ ಭಾರೀ ಮಳೆ. ಸಾಮಾನ್ಯವಾಗಿ ಈ ರೀತಿಯ ಮಳೆ ಬೀಳುವುದು ಕೆಲವೇ ನಿಮಿಷಗಳು. ಆದರೆ ಇದರ ಪರಿಣಾಮ ಮಾತ್ರ ಭಾರಿ ಭೀಕರ. ಕೆಲವೇ ನಿಮಿಷಗಳ ಸುರಿಯುವಿಕೆಯಿಂದ ಇದು ಭಾರೀ ಪ್ರವಾಹದ ಪರಿಣಾಮ ಉಂಟುಮಾಡಬಲ್ಲುದು. ಸಾಮಾನ್ಯವಾಗಿ ಅನಿರೀಕ್ಷಿತವಾಗಿ ಬರುವ, ಸ್ವಲ್ಪವೇ ಕಾಲ ಇರುವ ಆದರೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೀಳುವ ಮಳೆಗೆ ಮೇಘ ಸ್ಫೋಟ ಎನ್ನಲಾಗುತ್ತದೆ.

ಲಕ್ಷಣಗಳು[ಬದಲಾಯಿಸಿ]

ಹವಾಮಾನ ತಜ್ಞರ ಪ್ರಕಾರ ಒಂದು ಘಂಟೆಯಲ್ಲಿ ೧೦೦ ಮಿಮೀ (೩.೯೪ ಇಂಚು)ಗಿಂತ ಹೆಚ್ಚಿನ ಮಳೆ ಬರುತ್ತದೆ

. ಈ ಮಳೆ ಸುರಿಸುವ ಮೋಡದ ಎತ್ತರ ಭೂಮಿಯಿಂದ ೧೪ ಕಿಮಿ ವರೆಗೂ ಇರುತ್ತದೆ. ಕೆಲವೊಮ್ಮೆ ಕೆಲವೇ ನಿಮಿಷಗಳಲ್ಲಿ ೨೦ಮಿಮೀ ಗಿಂತ ಹೆಚ್ಚಿನ ಮಳೆ ಸುರಿಯುತ್ತದೆ. ಇದರಿಂದಾಗಿ ನಿಮಿಷಗಳಲ್ಲೇ ಭಾರೀ ಪ್ರವಾಹದ ವಾತಾವರಣ ಉಂಟಾಗುವುದು.


ಮೇಘ ಸ್ಫೋಟದ ಪ್ರಕರಣಗಳು[ಬದಲಾಯಿಸಿ]

  • ಒಂದು ಅಂಗುಲ(inch)=೨೫.೪ ಮಿ.ಮೀ.
ಸಮಯ ಮಳೆಯ ಗಾತ್ರ ಸ್ಥಳ ದಿನಾಂಕ
೧ ನಿಮಿಷ 1.5 inches (38 mm)(೩೮.೧ಮಿ.ಮೀ) Basse-Terre, Guadeloupe ೨೬ November ೧೯೭೦
೫.೫ minutes 2.43 inches (62 mm)(೬೧.೭೨ಮಿ.ಮೀ) Port Bells, Panama ೨೯ November ೧೯೧೧
೧೫ minutes 7.8 inches (200 mm)(೧೯೮.೧೨ ಮಿ.ಮೀ) Plumb Point, ಜಮೈಕ ೧೨ May ೧೯೧೬
೨೦ minutes 8.1 inches (210 mm)(೨೦೫.೭೪ ಮಿ.ಮೀ) Curtea-de-Arges, Romania ೭ July ೧೯೪೭
೪೦ minutes 9.25 inches (235 mm)(೨೩೪.೯೫ ಮಿ.ಮೀ) Guinea, Virginia, USA ೨೪ August ೧೯೦೬
೧ hour 9.84 inches (250 mm)( ೨೫೦ ಮಿ.ಮೀ) Leh, Ladakh, India August ೫, ೨೦೧೦ [೧]
೧೦ hours 57.00 inches (1,448 mm)(೧೪೪೮ ಮಿ.ಮೀ) Mumbai, India July ೨೬, ೨೦೦೫
೧೩ hours 45.03 inches (1,144 mm)(೧೧೪೩.೭೬ ಮಿ.ಮೀ) Foc-Foc, La Réunion January ೮, ೧೯೬೬[೨]
೨೦ hours 91.69 inches (2,329 mm)(೨೩೨೮.೯ ಮಿ.ಮೀ) Ganges Delta, India -

ಉಲ್ಲೇಖ

  1. "Cloudburst in Ladakh". articles.economictimes.indiatimes.com. August 9, 2010. Retrieved 2011-09-25.
  2. "Records_clim". Meteo.fr. Archived from the original on 2010-06-06. Retrieved 2010-08-20.