ಮೂಗೇಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಲಿನ ಮೇಲ್ಭಾಗದಲ್ಲಿ ಮೊಂಡಾದ ವಸ್ತುವಿನಿಂದ ಉಂಟಾದ ಮೂಗೇಟು

ಮೂಗೇಟು (ಜಜ್ಜುಗಾಯ) ಅಂಗಾಂಶದ ಒಂದು ಬಗೆಯ ರಕ್ತದೂತ.[೧] ಇದರ ಅತ್ಯಂತ ಸಾಮಾನ್ಯ ಕಾರಣವೆಂದರೆ ಆಘಾತದಿಂದ ಹಾನಿಗೊಂಡ ಲೋಮನಾಳಗಳು. ಇದರಿಂದ ಸ್ಥಳೀಯವಾಗಿ ರಕ್ತಸ್ರಾವವಾಗಿ ಸುತ್ತಲಿನ ತೆರಪಿನ ಅಂಗಾಂಶಗಳೊಳಗೆ ಹೊರಹರಿಯುತ್ತದೆ. ಬಹುತೇಕ ಮೂಗೇಟುಗಳು ಚರ್ಮದ ಕೆಳಗೆ ಬಹಳ ಆಳವಾಗಿರುವುದಿಲ್ಲ. ಹಾಗಾಗಿ ರಕ್ತಸ್ರಾವವು ಗೋಚರವಾಗುವಂಥ ವಿವರ್ಣನವನ್ನು ಉಂಟುಮಾಡುತ್ತದೆ. ಆಮೇಲೆ ರಕ್ತವು ಅಂಗಾಂಶಗಳಿಂದ ಹೀರಿಕೊಳ್ಳಲ್ಪಡುವವರೆಗೆ ಅಥವಾ ಪ್ರತಿರಕ್ಷಾ ವ್ಯವಸ್ಥೆಯ ಕ್ರಿಯೆಯಿಂದ ಬರಿದು ಮಾಡಲ್ಪಡುವವರೆಗೆ ಮೂಗೇಟು ಗೋಚರವಾಗಿರುತ್ತದೆ. ಒತ್ತಡದಲ್ಲಿ ಬಿಳಿಚಿಕೊಳ್ಳದ ಮೂಗೇಟುಗಳು ಚರ್ಮ, ಚರ್ಮದಡಿಯ ಅಂಗಾಂಶ, ಸ್ನಾಯು ಅಥವಾ ಮೂಳೆಯ ಮಟ್ಟದಲ್ಲಿನ ಲೋಮನಾಳಗಳನ್ನು ಒಳಗೊಳ್ಳಬಹುದು.[೨][೩] ಮೂಗೇಟುಗಳನ್ನು ಇತರ ಇದೇ ರೀತಿ ಕಾಣುವ ಅಂಗಹಾನಿಗಳೆಂದು ತಪ್ಪು ತಿಳಿಯಬಾರದು.

ಉಲ್ಲೇಖಗಳು[ಬದಲಾಯಿಸಿ]

  1. "contusion" at Dorland's Medical Dictionary
  2. Harrison's Principles of Internal Medicine (17th ed.). McGraw-Hill Professional. 2008.
  3. "Easy Bruising Symptoms".
"https://kn.wikipedia.org/w/index.php?title=ಮೂಗೇಟು&oldid=956784" ಇಂದ ಪಡೆಯಲ್ಪಟ್ಟಿದೆ