ವಿಷಯಕ್ಕೆ ಹೋಗು

ಮುಲಾವೊ ಜನರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಲಾವೋ ಜನರು
仫佬族
ಮೂಲಂ
ಒಟ್ಟು ಜನಸಂಖ್ಯೆ
277,233 (2020)
ಗಣನೀಯ ಜನಸಂಖ್ಯೆ ಹೊಂದಿರುವ ಪ್ರದೇಶಗಳು
Guangxi, China
ಭಾಷೆಗಳು
Mulam
ಧರ್ಮ
ಹೆಚ್ಚಾಗಿ ಬೌದ್ಧ, ಟಾವೊ ಅನುಯಾಯಿಗಳು ಬಲವಾದ ಅನಿಮಿಸ್ಟ್ ಪ್ರಭಾವದೊಂದಿಗೆ
ಸಂಬಂಧಿತ ಜನಾಂಗೀಯ ಗುಂಪುಗಳು
Dong, Zhuang

ಮುಲಾವೋ ಜನರು (ಚೀನೀ: 仫佬族; ಪಿನ್ಯಿನ್: Mùlǎo zú; ತಮ್ಮ ಭಾಷೆಯಲ್ಲಿ: Mulam) ಚೀನಾದ ಒಂದು ಜನಾಂಗೀಯ ಸಮುದಾಯ. ಚೀನಾದ ಜನತಾ ಗಣರಾಜ್ಯವು ಅಧಿಕೃತವಾಗಿ ಗುರುತಿಸಿರುವ 56 ಜನಾಂಗಗಳಲ್ಲಿ ಮುಲಾವೋ ಜನರೂ ಒಬ್ಬರು. ಅವರ ಹೆಸರಿನಲ್ಲಿರುವ “ಮು” (mu6) ಎಂಬುದು ಮನುಷ್ಯರನ್ನು ಸೂಚಿಸುವ ಒಂದು ವರ್ಗಪದವಾಗಿದೆ. “ಲಾಮ್” (lam1), ಕೆಲವು ಉಪಭಾಷೆಗಳಲ್ಲಿ “ಕ್ಯಾಮ್” (kyam1), ಎಂಬುದು ಡೊಂಗ್ (ಕಾಮ್) ಜನರು ಬಳಸುವ ಹೆಸರಿನ ಮತ್ತೊಂದು ರೂಪವಾಗಿದೆ. ಮುಲಾವೋ ಜನರು

ಇತಿಹಾಸ

[ಬದಲಾಯಿಸಿ]

ಚಿಂಗ್ ರಾಜವಂಶದ ಕಾಲದಲ್ಲಿ ಮುಲಾವೋ ಜನರು ವಾಸಿಸುತ್ತಿದ್ದ ಪ್ರದೇಶಗಳನ್ನು ಆಡಳಿತದ ದೃಷ್ಟಿಯಿಂದ ವಿಭಜಿಸಲಾಯಿತು. ಅವರ ಭೂಮಿಯನ್ನು “ಡಾಂಗ್” ಎಂಬ ಸಣ್ಣ ಘಟಕಗಳಾಗಿ ವಿಂಗಡಿಸಲಾಗಿತ್ತು. ಪ್ರತಿ ಡಾಂಗ್‌ನಲ್ಲಿ ಸುಮಾರು ಹತ್ತು ಮನೆಗಳು ಇರುತ್ತಿದ್ದವು. ಪ್ರತಿಯೊಂದು ಡಾಂಗ್‌ಗೂ ಒಬ್ಬ ಸ್ಥಳೀಯ ನಾಯಕನಿರುತ್ತಿದ್ದು, ಅವರು ಅಲ್ಲಿನ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಹಾಗೂ ತೆರಿಗೆಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಹೊಂದಿದ್ದರು. ಸಾಮಾನ್ಯವಾಗಿ ಒಂದೇ ಉಪನಾಮ ಹೊಂದಿರುವ ಕುಟುಂಬಗಳನ್ನು ಒಂದೇ ಡಾಂಗ್‌ನಲ್ಲಿ ಸೇರಿಸಲಾಗುತ್ತಿತ್ತು.

Qiongying Deng ಮತ್ತು Chuan-Chao Wang ಸೇರಿದಂತೆ ಇತರ ಸಂಶೋಧಕರು ನಡೆಸಿದ ಅಧ್ಯಯನಗಳ ಪ್ರಕಾರ, ಮುಲಾವೋ ಜನರ ತಂದೆಯ ವಂಶಾವಳಿ ಮತ್ತು ತಾಯಿಯ ವಂಶಾವಳಿಯಲ್ಲಿರುವ ಹೆಚ್ಚಿನ ಜೀನ್‌ಗಳು ದಕ್ಷಿಣ ಚೀನಾದ ಜನರಲ್ಲಿ ಸಾಮಾನ್ಯವಾಗಿ ಕಂಡುಬರುವ ಜನ್ಯ ಗುಂಪುಗಳಿಗೆ ಸೇರಿವೆ. ಮುಲಾವೋ ಜನರಲ್ಲಿ ಆಗ್ನೇಯ ಏಷ್ಯಾದ ಕೆಲವು ಪ್ರಾಚೀನ ಜನ್ಯ ಗುಂಪುಗಳೂ ಕಂಡುಬಂದಿವೆ. ಇವುಗಳಲ್ಲಿ Y-ಕ್ರೋಮೋಸೋಮ್‌ನ C ಮತ್ತು D ಹ್ಯಾಪ್ಲೋಗ್ರೂಪ್‌ಗಳು ಹಾಗೂ mtDNAಯ M*, M33, M74 ಮತ್ತು R* ಹ್ಯಾಪ್ಲೋಗ್ರೂಪ್‌ಗಳು ಸೇರಿವೆ.ಮುಲಾವೋ ಜನರ Y-ಕ್ರೋಮೋಸೋಮ್ ಮತ್ತು mtDNA ವೈವಿಧ್ಯತೆಗಳು ದಕ್ಷಿಣ ಚೀನಾದ ಇತರ ಜನಾಂಗಗಳಂತೆಯೇ ಇವೆ. ವಿಶೇಷವಾಗಿ ಕಾಮ್-ಸುಯಿ (Kam-Sui) ಜನಾಂಗಗಳೊಂದಿಗೆ ಇವು ಹೆಚ್ಚು ಸಾಮ್ಯತೆಯನ್ನು ಹೊಂದಿವೆ. ಇದು ಅವರ ಭಾಷಾ ವರ್ಗೀಕರಣಕ್ಕೂ ಹೊಂದಿಕೆಯಾಗುತ್ತದೆ. ಆದರೆ ಮುಲಾವೋ ಜನರ ಮೂಲವು ಸರಳವಾಗಿಲ್ಲ; ಅದು ಹಲವು ಜನಾಂಗಗಳ ಮಿಶ್ರಣದಿಂದ ರೂಪುಗೊಂಡಿದೆ ಎಂದು ಕಂಡುಬರುತ್ತದೆ.

ಮುಲಾವೋ ಜನರ ತಂದೆಯ ವಂಶಾವಳಿಯಲ್ಲಿ ಸಿನೋ-ಟಿಬೆಟನ್ ಜನಾಂಗಗಳಿಂದ ಬಂದಿರುವ ಜನ್ಯ ಪ್ರಭಾವವೂ ಕಂಡುಬಂದಿದೆ. ಉದಾಹರಣೆಗೆ, O3a1c-002611, O3a2c1*-M134 ಮತ್ತು O3a2c1a-M117 ಎಂಬ Y-ಕ್ರೋಮೋಸೋಮ್ ಹ್ಯಾಪ್ಲೋಗ್ರೂಪ್‌ಗಳು ಕಂಡುಬಂದಿವೆ. ಇವು ಹಾನ್ ಚೀನೀ ಜನರ ವಿಸ್ತರಣೆ ಮತ್ತು ವಲಸೆಯ ಮೂಲಕ ಮುಲಾವೋ ಜನರಲ್ಲಿ ಸೇರಿರಬಹುದು ಎಂದು ಅಂದಾಜಿಸಲಾಗಿದೆ. ತಾಯಿಯ ವಂಶಾವಳಿಯ ದೃಷ್ಟಿಯಿಂದಲೂ, ಮುಲಾವೋ ಜನರ ಹೆಚ್ಚಿನ mtDNA ಹ್ಯಾಪ್ಲೋಗ್ರೂಪ್‌ಗಳು ಹ್ಮಾಂಗ್-ಮಿಯನ್ (Hmong-Mien) ಜನರೊಂದಿಗೆ ಸಾಮ್ಯತೆಯನ್ನು ತೋರಿಸುತ್ತವೆ.

ಒಟ್ಟಿನಲ್ಲಿ, ಮುಲಾವೋ ಜನರ ಮೂಲವು ಮುಖ್ಯವಾಗಿ ಅವರ ಸುತ್ತಮುತ್ತಲಿನ ವಿವಿಧ ಜನಾಂಗಗಳೊಂದಿಗೆ ಸ್ಥಳೀಯ ಕಾಮ್-ಸುಯಿ ಜನರ ನಡೆದ ಜನ್ಯ ಮಿಶ್ರಣದ ಪರಿಣಾಮವಾಗಿದೆ ಎಂದು ಸಂಶೋಧನೆ.[೧]

ಚೀನಾದ ಮುಲಾವೋ ಜನಸಂಖ್ಯೆಯು 21ನೇ ಶತಮಾನದಲ್ಲಿ ಹೆಚ್ಚಾಗಿದೆ. 2000ರಲ್ಲಿ ಮುಲಾವೋ ಜನರ ಸಂಖ್ಯೆ 2,07,352 ಇತ್ತು. ನಂತರ ಅದು 2010ರಲ್ಲಿ 2,16,257ಕ್ಕೆ ಏರಿಕೆಯಾಯಿತು.[೨]: 1–6 [೩]: 2–1 

ಜನಸಂಖ್ಯಾಶಾಸ್ತ್ರ

[ಬದಲಾಯಿಸಿ]

2010ರ ಚೀನಾದ ಜನಗಣತಿಯ ಪ್ರಕಾರ, ಚೀನಾದಲ್ಲಿದ್ದ ಒಟ್ಟು 2,16,257 ಮುಲಾವೋ ಜನರಲ್ಲಿ 4 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರು 17,640 (8.16%) ಜನರು. 5ರಿಂದ 9 ವರ್ಷದವರು 13,879 (6.42%), 10ರಿಂದ 14 ವರ್ಷದವರು 13,842 (6.40%), 15ರಿಂದ 19 ವರ್ಷದವರು 15,653 (7.24%), 20ರಿಂದ 24 ವರ್ಷದವರು 22,221 (10.28%), 25ರಿಂದ 29 ವರ್ಷದವರು 21,190 (9.80%), 30ರಿಂದ 35 ವರ್ಷದವರು 17,868 (8.26%), 35ರಿಂದ 39 ವರ್ಷದವರು 18,320 (8.47%), 40ರಿಂದ 44 ವರ್ಷದವರು 17,989 (8.32%) ಮತ್ತು 45ರಿಂದ 49 ವರ್ಷದವರು 14,747 (6.82%) ಜನರು.

50ರಿಂದ 54 ವರ್ಷದವರು 9,496 (4.39%), 55ರಿಂದ 59 ವರ್ಷದವರು 10,053 (4.65%), 60ರಿಂದ 64 ವರ್ಷದವರು 6,950 (3.21%), 65ರಿಂದ 69 ವರ್ಷದವರು 5,489 (2.54%), 70ರಿಂದ 74 ವರ್ಷದವರು 4,694 (2.17%), 75ರಿಂದ 79 ವರ್ಷದವರು 3,341 (1.54%), 80ರಿಂದ 84 ವರ್ಷದವರು 1,845 (0.85%), 85ರಿಂದ 89 ವರ್ಷದವರು 716 (0.33%), 90ರಿಂದ 94 ವರ್ಷದವರು 230 (0.11%), 95ರಿಂದ 99 ವರ್ಷದವರು 82 (0.04%) ಮತ್ತು 100 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವರು 12 (0.01%) ಜನರು.[೨]: 2–1 

ವಿತರಣೆ

[ಬದಲಾಯಿಸಿ]

2010ರ ಚೀನಾದ ಜನಗಣತಿಯ ಪ್ರಕಾರ, ಚೀನಾದಲ್ಲಿ ಒಟ್ಟು 2,16,257 ಮುಲಾವೋ ಜನರು ವಾಸಿಸುತ್ತಿದ್ದರು. ಇವರಲ್ಲಿ ಹೆಚ್ಚಿನವರು ಗುವಾಂಗ್‌ಶಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಈ ಜನಸಂಖ್ಯೆಯಲ್ಲಿ 1,10,516 ಮಂದಿ ಪುರುಷರು ಮತ್ತು 1,05,741 ಮಂದಿ ಮಹಿಳೆಯರು.

ಮುಲಾವೋ ಜನರು ಇಂದಿಗೂ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. 2010ರ ಜನಗಣತಿಯ ಪ್ರಕಾರ, ಚೀನಾದಲ್ಲಿ 95,703 ಮುಲಾವೋ ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು. ಉಳಿದ 1,20,554 ಮಂದಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು.[೨]: 1–6c 

ಚೀನಾದಲ್ಲಿ ಮುಲಾವೊ ಜನರ ಹಂಚಿಕೆ[೨]: 1–6 
ಪ್ರಾಂತೀಯ ಮಟ್ಟದ ವಿಭಾಗ 2010
ಜನಸಂಖ್ಯೆ ಚೀನಾದಲ್ಲಿ ಒಟ್ಟು ಮುಲಾವೊದಲ್ಲಿ ಶೇ
ಗುವಾಂಗ್‌ಕ್ಸಿ 172,305 79.68%
ಗುಯಿಝೌ 24,956 11.54%
ಗುವಾಂಗ್‌ಡಾಂಗ್ 10,961 5.07%
ಝೆಜಿಯಾಂಗ್ 2,792 1.29%
ಹುನಾನ್ 906 0.42%
ಇತರರು 4,337 2.01%
ಒಟ್ಟು 216,257 100.00%

ಮುಲಾವೋ ಜನರು ಮುಲಾಮ್ (Mulam) ಭಾಷೆಯನ್ನು ಮಾತನಾಡುತ್ತಾರೆ. ಇದು ತೈ–ಕಡೈ (Tai–Kadai) ಭಾಷಾ ಕುಟುಂಬಕ್ಕೆ ಸೇರಿದ ಭಾಷೆಯಾಗಿದೆ. ಈ ಭಾಷೆಯನ್ನು ಬರೆಯುವಾಗ ಹಾನ್‌ಜಿ (ಚೀನೀ ಅಕ್ಷರಗಳು) ಬಳಸಲಾಗುತ್ತದೆ..

ಸಂಸ್ಕೃತಿ

[ಬದಲಾಯಿಸಿ]

ಮುಲಾವೋ ಜನರಲ್ಲಿ ಸಾಂಪ್ರದಾಯಿಕವಾಗಿ ಮದುವೆಗಳನ್ನು ತಂದೆ-ತಾಯಿಯೇ ನಿಶ್ಚಯಿಸುತ್ತಿದ್ದರು. ಮದುವೆಯಾದ ನಂತರ ಹೊಸದಾಗಿ ಮದುವೆಯಾದ ಹೆಂಡತಿಯರು ತಮ್ಮ ಗಂಡಂದಿರೊಂದಿಗೆ ತಕ್ಷಣವೇ ವಾಸಿಸುತ್ತಿರಲಿಲ್ಲ. ತಮ್ಮ ಮೊದಲ ಗಂಡು ಮಗುವಿನ ಜನನದ ನಂತರವೇ ಅವರು ಗಂಡನೊಂದಿಗೆ ಒಟ್ಟಿಗೆ ವಾಸಿಸಲು ಪ್ರಾರಂಭಿಸುತ್ತಿದ್ದರು.

ಮುಲಾವೋ ಜನರ ಮನೆಗಳನ್ನು ಸಾಮಾನ್ಯವಾಗಿ ಮಣ್ಣಿನಿಂದ ನಿರ್ಮಿಸಲಾಗುತ್ತಿತ್ತು ಮತ್ತು ಇಟ್ಟಿಗೆಯ ಛಾವಣಿಯನ್ನು ಹೊಂದಿರುತ್ತಿತ್ತು. ಈ ಮನೆಗಳಲ್ಲಿ ಸಾಮಾನ್ಯವಾಗಿ ಮೂರು ಕೋಣೆಗಳಿರುತ್ತವೆ. ಕುಟುಂಬ ವಾಸಿಸುವ ಸ್ಥಳದಿಂದ ದೂರದಲ್ಲಿ ಪ್ರಾಣಿಗಳನ್ನು ಸಾಕಲಾಗುತ್ತಿತ್ತು.

ಮುಲಾವೋ ಪುರುಷರ ಸಾಂಪ್ರದಾಯಿಕ ಉಡುಪಿನಲ್ಲಿ ದೊಡ್ಡ ಗುಂಡಿಗಳಿರುವ ಜಾಕೆಟ್, ಅಗಲವಾದ ಪ್ಯಾಂಟ್ ಮತ್ತು ಸ್ಯಾಂಡಲ್‌ಗಳು ಸೇರಿವೆ. ಅವಿವಾಹಿತ ಮಹಿಳೆಯರು ತಮ್ಮ ಕೂದಲನ್ನು ಎರಡು ಜಡೆಗಳಾಗಿ ಕಟ್ಟಿಕೊಳ್ಳುತ್ತಿದ್ದರು. ಮದುವೆಯಾದ ನಂತರ ಈ ಎರಡು ಜಡೆಗಳು ಸೇರಿ ಒಂದು ಕೂದಲಿನ ಗಂಟಿನ ರೂಪ ಪಡೆಯುತ್ತವೆ.

ಮುಲಾವೋ ಜನರ ದೈನಂದಿನ ಜೀವನದಲ್ಲಿ ಧರ್ಮವು ಈಗ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿಲ್ಲ. ಆದರೆ ಸಾಂಪ್ರದಾಯಿಕವಾಗಿ ಮುಲಾವೋ ಜನರು ಹೆಚ್ಚಾಗಿ ಪ್ರಕೃತಿ ಆರಾಧಕರು (ಆನಿಮಿಸ್ಟ್‌ಗಳು)

ಮುಲಾವೋ ಜನರ ಮತ್ತೊಂದು ಪ್ರಮುಖ ಹಬ್ಬವೆಂದರೆ ಡ್ರ್ಯಾಗನ್ ಬೋಟ್ ಹಬ್ಬ. ಇದನ್ನು ಚಾಂದ್ರಮಾನ ಪಂಚಾಂಗದ ಐದನೇ ತಿಂಗಳ ಐದನೇ ದಿನದಂದು ಆಚರಿಸಲಾಗುತ್ತಿತ್ತು. ಈ ಹಬ್ಬದ ಸಂದರ್ಭದಲ್ಲಿ ಶಾಮನರು ವಿಶೇಷ ವಿಧಿವಿಧಾನಗಳನ್ನು ನಡೆಸುತ್ತಿದ್ದರು. ಉತ್ತಮ ಬೆಳೆ ದೊರೆಯಲೆಂದು ಪ್ರಾರ್ಥಿಸುವುದು ಮತ್ತು ಬೆಳೆಗಳಿಗೆ ಹಾನಿ ಮಾಡುವ ಕೀಟಗಳನ್ನು ದೂರವಿಡುವುದು ಈ ವಿಧಿವಿಧಾನಗಳ ಮುಖ್ಯ ಉದ್ದೇಶವಾಗಿತ್ತು.

ಉಲ್ಲೇಖಗಳು

[ಬದಲಾಯಿಸಿ]
  1. ↑ Deng QY*, Wang CC*, Wang XQ*, Wang LX, Wang ZY, Wu WJ, Li H, the Genographic Consortium. Genetic affinity between the Kam-Sui speaking Chadong and Mulam people. J Syst Evol. 2013, 51(3):263-270.
  2. 1 2 3 4 中国2020年人口普查资料 [2010 China Population Census Data] (in ಚೈನೀಸ್). National Bureau of Statistics of China. 2010. Archived from the original on 2021-06-11. Retrieved 2021-08-19.
  3. ↑ 中国2000年人口普查资料 [2000 China Population Census Data] (in ಚೈನೀಸ್). National Bureau of Statistics of China. 2000. Archived from the original on 2021-06-16. Retrieved 2021-08-19.