ಮುಂಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಂಜ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
S. munja
Binomial name
Saccharum munja


ಮುಂಜವೆಂಬುದು ಒಂದು ಹುಲ್ಲಿನ ಜಾತಿ. ಭಾರತದಲ್ಲಿ ಇದು ನದಿಯ ಇಕ್ಕೆಲದಲ್ಲಿ ಬೆಳೆಯುವುದನ್ನು ಕಾಣಬಹುದು. ಮಳೆ ಹೆಚ್ಚು ಬೀಳ ಒಣ ಪ್ರದೇಶಗಳಲ್ಲಿಯೂ ಮುಂಜ ಬೆಳೆಯುತ್ತದೆ. ಇದರ ಶಾಸ್ತ್ರೀಯ ನಾಮ Saccharum munja (ಸ್ಯಾಕ್ಕರಂ ಮುಂಜಾ).

ಬಳಕೆ[ಬದಲಾಯಿಸಿ]

ಮುಂಜದಿಂದ ಹಗ್ಗವನ್ನು ಹೊಸೆಯುತ್ತಾರೆ. ಒಣಗಿದ ಹುಲ್ಲಿನಿಂದ ಬುಟ್ಟಿ, ಬೀಸಣಿಗೆ, ಚಾಪೆ, ಚಪ್ಪರಗಳನ್ನು ನೇಯುತ್ತಾರೆ. ಕಸಪೊರಕೆಯಾಗಿಯೂ ಬಳಸುತ್ತಾರೆ. ಮುಂಜವು ತನ್ನ ಬೇರುಗಳನ್ನು ನೆಲದೊಳಗೆ ಅಗಲವಾಗಿ ಹಬ್ಬಿಸಿ ಗಟ್ಟಿಯಾಗಿ ತಳವೂರಿ ನಿಲ್ಲುವ ಹುಲ್ಲು. ಅಂತಲೆ ಇದನ್ನು ಬೇಲಿಯಾಗಿಯೂ ಬೆಳೆಸಲು ಬರುತ್ತದೆ. ಮಳೆ ಗಾಳಿಗಳಿಗೆ ಮಣ್ಣು ಕೊಚ್ಚಿಹೋಗದಂತೆ ತಡೆಯಲು ಮುಂಜವನ್ನು ಬೆಳೆಸಬಹುದು.

ನದಿಯ ಗುಂಟ ಬೆಳೆದು ನಿಂತಿರುವ ಮುಂಜ

ಉಪನಯನ ಸಂಸ್ಕಾರದಲ್ಲಿ ಮುಂಜದಿಂದ ಹೊಸೆದ ಹಗ್ಗವನ್ನು ಉಡಿದಾರದಂತೆ ವಟುವಿನ ಸೊಂಟಕ್ಕೆ ಕಟ್ಟುತ್ತಾರೆ. ಈ ಹಗ್ಗವನ್ನು ಮೌಂಜೀ ಎನ್ನುತ್ತಾರೆ. ಅಂತಲೆ ಉಪನಯನಕ್ಕೆ ಮುಂಜಿ, ಮುಂಜಿವೆ ಎಂಬ ಪದಗಳು ಪರ್ಯಾಯವಾಗಿ ಬಳಕೆಯಾಗುತ್ತವೆ.

"https://kn.wikipedia.org/w/index.php?title=ಮುಂಜ&oldid=684540" ಇಂದ ಪಡೆಯಲ್ಪಟ್ಟಿದೆ