ಮೀನಾಕಾರಿ

ವಿಕಿಪೀಡಿಯ ಇಂದ
Jump to navigation Jump to search
ಚಿತ್ರ:MEENAKARI.jpg
'ಮೀನಾಕಾರಿ ಯ ಒಂದು ಉದಾಹರಣೆ'

ಬೆಳ್ಳಿ, ಚಿನ್ನ, ಹಾಗೂ ತಾಮ್ರದ ಆಭರಣಗಳನ್ನು ಬಣ್ಣದ ಚಿತ್ತಾರಗಳಿಂದ ಅಲಂಕರಿಸುವ ಪುರಾತನ ಭಾರತೀಯ ಕರಕುಶಲ ಕಲೆಗೆ ’ಮೀನಾಕಾರಿ' ಎನ್ನುತಾರೆ. ಈ ಕಲೆಗೆ 'ಮೊಘಲರ ಕಾಲ'ದಲ್ಲಿ ಹೆಚ್ಚು ಪ್ರೋತ್ಸಾಹ ದೊರೆಯಿತು. ಅವರೇ ಇದನ್ನು ಪ್ರಸಿದ್ಧಿಗೆ ತಂದರು ಎಂದು ತಿಳಿದುಬರುತ್ತದೆ. 'ಅಂಬೇರ್' ನ ದೊರೆ, 'ರಾಜಾ ಮಾನ್ ಸಿಂಗ್' ೧೭ ನೆಯ ಶತಮಾನದಲ್ಲಿಈ ಕಲಾ ಪ್ರಕಾರವನ್ನು ರಾಜಾಸ್ಥಾನಕ್ಕೆ ತಂದನು. ಲಾಹೋರ್ ನಿಂದ ನುರಿತ ಮೀನಾಕಾರಿ ಚಿತ್ರಾಕಾರರನ್ನು ಜೈಪುರಕ್ಕೆ ಕರೆಸಿಕೊಂಡು ಈ ಕಲೆಯನ್ನು ವ್ಯಾಪಕವಾಗಿ ಬೆಳೆಸಿ, ಅಭಿವೃದ್ಧಿಪಡೆಸಲಾಯಿತು. ೧೮ ನೆಯ ಸಹ್ತಮಾನದಲ್ಲಿ 'ವಾರಣಾಸಿ' ನಗರದಲ್ಲೂ ವಿಶೇಷ ಮೀನಾಕಾರಿ ಕಲೆ ಬೆಳೆಯಿತು. ಮೀನಾಕಾರಿ ಚಿತ್ರಕಾರರು ಆಭರಣಗಳ ಮೇಲೆ ಕೆಂಪು, ಹಸಿರು, ಬಿಳಿಬಣ್ಣದ ಚಿತ್ತಾರದ ವಿನ್ಯಾಸಗಳನ್ನು ಬೆರೆಯುತ್ತಾರೆ. ಇಂತಹ ರಂಗು-ರಂಗಿನ ಚಿತ್ತಾರಗಳು ಅಮೂಲ್ಯವಾದ ಹರಳುಗಳ ತರಹ 'ಥಳಥಳಿಸುತ್ತವೆ'. ಆಭರಣಗಳಿಗೆ ವಿಶೇಷ ಸೌಂದರ್ಯ, ಹಾಗೂ ಮೆರುಗು ಬರುತ್ತದೆ.[೧][೨][೩][೪][೫]

ಉಲ್ಲೇಖ[ಬದಲಾಯಿಸಿ]

  1. Meenakari-
  2. ಟ್ರೆಂಡಿಯಾದ ಮಲ್ಟಿಪಲ್‌ ಜುಮಕಿ
  3. ಫ್ಲೋರಲ್ ಗಾಗ್ರ;ಮೀನಾಕಾರಿ, ಕಲಾಂಕಾರಿ, ಕುಸುರಿ ಚಿತ್ತಾರವಿರುವ ಗಾಗ್ರಗಳು ಇಂದು ಹೊಸ ರೂಪ ಪಡೆದಿದ್ದು, ಫ್ಲೋರಲ್ ವಿನ್ಯಾಸದಿಂದ ಕಂಗೊಳಿಸುತ್ತಿವೆ.d:Jul 24, 2014,
  4. Kundan-Meena Jewelry, Jaipur; Oldest forms of Kundan jewelry
  5. Meenakari Jewelry - An Ancient Indian Jewelry Tradition