ಮೀಟುಗೋಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೀಟುಗೋಲು (ಸನ್ನೆಕೋಲು) ಭದ್ರವಾದ ತಿರುಗಣೆ ಅಥವಾ ಆನಿಕೆಯ ಸುತ್ತ ತಿರುಗುವ ತೊಲೆ ಅಥವಾ ಬಾಗದ ಕೋಲನ್ನು ಹೊಂದಿರುವ ಒಂದು ಸರಳ ಯಂತ್ರ. ಮೀಟುಗೋಲು ತನ್ನ ಕಾಯದ ಮೇಲಿರುವ ಒಂದು ಬಿಂದುವಿನ ಸುತ್ತ ಸುತ್ತಲು ಸಮರ್ಥವಾಗಿರುವ ದೃಢ ಕಾಯ. ಆನಿಕೆಯ ಸ್ಥಾನ, ಭಾರ ಮತ್ತು ಶ್ರಮವನ್ನು ಆಧರಿಸಿ, ಮೀಟುಗೋಲನ್ನು ಮೂರು ಪ್ರಕಾರಗಳಾಗಿ ವಿಭಜಿಸಲಾಗುತ್ತದೆ. ನವೋದಯ ಕಾಲದ ವಿಜ್ಞಾನಿಗಳು ಗುರುತಿಸಿದ ಆರು ಸರಳ ಯಂತ್ರಗಳಲ್ಲಿ ಇದೂ ಒಂದಾಗಿದೆ. ಮೀಟುಗೋಲು ಆದಾನ ಬಲವನ್ನು ವರ್ಧಿಸಿ ಹೆಚ್ಚಿನ ಪ್ರದಾನ ಬಲವನ್ನು ಒದಗಿಸುತ್ತದೆ, ಹಾಗಾಗಿ ಮೀಟುಗೋಲು ಸನ್ನೆ ಶಕ್ತಿಯನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತದೆ. ಪ್ರದಾನ ಬಲ ಮತ್ತು ಆದಾನ ಬಲಗಳ ನಡುವಿನ ಅನುಪಾತವನ್ನು ಮೀಟುಗೋಲಿನ ಯಾಂತ್ರಿಕ ಅನುಕೂಲ ಎಂದು ಕರೆಯಲಾಗುತ್ತದೆ.

ಮುಂಚಿನ ಬಳಕೆ[ಬದಲಾಯಿಸಿ]

ಮೀಟುಗೋಲಿಗೆ ಸಂಬಂಧಿಸಿದಂತೆ ಉಳಿದಿರುವ ಅತ್ಯಂತ ಮುಂಚಿನ ಬರಹಗಳು ಕ್ರಿ.ಪೂ. ೩ನೇ ಶತಮಾನದ ಕಾಲದ್ದೆಂದು ನಿರ್ಧರಿಸಲಾಗಿದೆ ಮತ್ತು ಇವನ್ನು ಆರ್ಕಿಮಿಡೀಸ್ ಒದಗಿಸಿದ್ದನು. 'ಸಾಕಷ್ಟು ಉದ್ದವಾದ ಮೀಟುಗೋಲು ಮತ್ತು ಅದನ್ನು ಇಡಲು ಆನಿಕೆಯನ್ನು ನನಗೆ ನೀಡಿದರೆ ನಾನು ಜಗತ್ತನ್ನೇ ಚಲಿಸುವೆನು' ಎಂಬ ಅವನ ಹೇಳಿಕೆ ಬಹಳ ಪ್ರಸಿದ್ಧವಾಗಿದೆ. ಪ್ರಾಚೀನ ಈಜಿಪ್ಟ್‌ನಲ್ಲಿ, ೧೦೦ ಟನ್‍ಗಿಂತ ಹೆಚ್ಚಿನ ತೂಕದ ಕಂಬಗಳನ್ನು ಚಲಿಸಿ ಮೇಲೆತ್ತಲು ಕೆಲಸಗಾರರು ಮೀಟುಗೋಲನ್ನು ಬಳಸಿದರು ಎಂದು ಭಾವಿಸಲಾಗಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]