ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ
ಮಿಸ್ಟರ್‌ ಅಂಡ್‌ ಮಿಸಸ್‌ ರಾಮಾಚಾರಿ
ನಿರ್ದೇಶನಸಂತೋಷ್‌ ಆನಂದ್‌ರಾಮ್‌
ನಿರ್ಮಾಪಕಜಯಣ್ಣ ಹಾಗೂ ಭೋಗೇಂದ್ರ
ಚಿತ್ರಕಥೆಸಂತೋಷ್‌ ಆನಂದ್‌ರಾಮ್‌
ಕಥೆಸಂತೋಷ್‌ ಆನಂದ್‌ರಾಮ್‌
ಸಂಭಾಷಣೆಸಂತೋಷ್‌ ಆನಂದ್‌ರಾಮ್‌
ಪಾತ್ರವರ್ಗಯಶ್ ರಾಧಿಕ ಪಂಡಿತ್ ಶ್ರೀನಾಥ್ ,ಅಚ್ಯುತ್ ಕುಮಾರ್,ಮಾಳವಿಕಾ,ಅಚ್ಯುತಕುಮಾರ್‌,ಸಾಧುಕೋಕಿಲ,ಹೊನ್ನವಳ್ಳಿ ಕೃಷ್ಣ,,ಅರುಣಾ ಬಾಲರಾಜ್‌,ಗಿರೀಶ್‌,ರಾಕಲೈನ್‌ ಸುಧಾಕರ್‌,ಮೈಸೂರು ನಾಯ್ಡು,ಅಶೋಕ್‌,ವಿಶಾಲ್‌ ಹೆಗ್ಡೆ
ಸಂಗೀತವಿ.ಹರಿಕೃಷ್ಣ
ಛಾಯಾಗ್ರಹಣವೈದಿ.ಎಸ್‌
ಸಂಕಲನಕೆ.ಎಂ.ಪ್ರಕಾಶ್‌
ಬಿಡುಗಡೆಯಾಗಿದ್ದು೨೦೧೪
ನೃತ್ಯಮುರಳಿ
ಸಾಹಸರವಿವರ್ಮ
ಚಿತ್ರ ನಿರ್ಮಾಣ ಸಂಸ್ಥೆಜಯಣ್ಣ ಹಾಗೂ ಭೋಗೇಂದ್ರ

ಯಶ್‌ ಹಾಗೂ ರಾಧಿಕಾ ಪಂಡಿತ್‌ ಅಭಿನಯದ 'ಮಿಸ್ಟರ್‌ ಅಂಡ್‌ ಮಿಸಸ್‌ ರಾಮಾಚಾರಿ ಚಿತ್ರ , ೨೦೧೪ ಡಿಸೆಂಬರ್ ೨೫ ರಂದು ತೆರೆ ಕಂಡಿದೆ. ಜಯಣ್ಣ ಹಾಗೂ ಭೋಗೇಂದ್ರ ಈ ಚಿತ್ರದ ನಿರ್ಮಾಪಕರು. ಸಂತೋಷ್‌ ಆನಂದ್‌ರಾಮ್‌ ನಿರ್ದೇ ಶಕರು. ಇವರಿಗಿದು ಮೊದಲ ಚಿತ್ರ. ವಿಶೇಷವೆಂದರೆ ಈ ಚಿತ್ರದಲ್ಲಿ ಯಶ್‌ ಹಾಡಿದ್ದಾರೆ. ಇದು ಯಶ್‌ ಹಾಡಿರುವ ಮೊದಲ ಚಿತ್ರ. ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿ¨ªಾರೆ. ವೈದಿ.ಎಸ್‌ ಛಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದ ಇತರ ತಾರಾಬಳಗದಲ್ಲಿ ಶ್ರೀನಾಥ್‌, ಮಾಳವಿಕ ಅವಿನಾಶ್‌, ಅಚ್ಯುತಕುಮಾರ್‌, ಸಾಧುಕೋಕಿಲ, ಹೊನ್ನವಳ್ಳಿ ಕೃಷ್ಣ, ಅರುಣಾ ಬಾಲರಾಜ್‌, ಗಿರೀಶ್‌, ರಾಕಲೈನ್‌ ಸುಧಾಕರ್‌, ಮೈಸೂರು ನಾಯ್ಡು, ಅಶೋಕ್‌, ವಿಶಾಲ್‌ ಹೆಗ್ಡೆ ಮುಂತಾದವರು ನಟಿಸಿದ್ದಾರೆ.

ಕಥೆ[ಬದಲಾಯಿಸಿ]

ತಮ್ಮ ಕಾದಂಬರಿ ಆಧಾರಿತ ಪುಟ್ಟಣ್ಣ ಕಣಗಲ್ ನಿರ್ದೇಶನದ 'ನಾಗರಹಾವು' ಸಿನೆಮಾ ನೋಡಿದ್ದ ಕಾದಂಬರಿಕಾರ ತರಾಸು, ಇದು ನಾಗರಹಾವಲ್ಲ, ಕೆರೆಹಾವು ಎಂದು ಪ್ರತಿಕ್ರಿಯಿಸಿದ್ದು ಜನಜನಿತ. ಆದಾಗ್ಯೂ ನಾಗರಹಾವು ಸಿನೆಮಾ ಜನರ ಮಧ್ಯ ಉಳಿದುಬಿಟ್ಟದ್ದು ಈಗ ಇತಿಹಾಸ. ತರಾಸು ಏನಾದರು ನಾಗರ ಹಾವು ಚಿತ್ರದ ರಾಮಾಚಾರಿ(ವಿಷ್ಣುವರ್ಧನ್) ಪಾತ್ರದಿಂದ ಸ್ಪೂರ್ತಿ ಪಡೆದ 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ' ಸಿನೆಮಾ ನೋಡಿದ್ದರೆ, ಇದನ್ನು ಯಾವ ಸರೀಸೃಪಕ್ಕೆ ಹೋಲಿಸುತ್ತಿದ್ದರೋ! ಸದ್ಯದ ಪರಿಸ್ಥಿತಿಯಲ್ಲಿ ನಾಯಕ ನಟ ಸಿನೆಮಾದ ಡೈಲಾಗ್ ಒಂದರಲ್ಲಿ "ನಾವು ಕ್ಲಾಸ್ ಅಲ್ಲ ಮಾಸ್" ಎಂದು ಹೇಳುವಂತೆ, 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ' ಸ್ವಲ್ಪ ಹಾಸ್ಯ, ಹೆಚ್ಚು ಆಕ್ಷನ್, ಸ್ವಲ್ಪ ಎಮೋಶನ್, ಹೆಚ್ಚು ಲವ್, ಸ್ವಲ್ಪ ಮ್ಯೂಸಿಕ್, ಹೆಚ್ಚು ಡೈಲಾಗ್ಸ್ ಇರುವ ಪಕ್ಕಾ ಮಾಸ್ ಮನರಂಜನಾ ಸಿನೆಮಾ. ನಾಗರಹಾವು ಸಿನೆಮಾದ ನಾಯಕ ಪಾತ್ರ ರಾಮಾಚಾರಿ(ವಿಷ್ಣುವರ್ಧನ್) ಅವನನ್ನು ಆರಾಧಿಸುವ ಈ ನೂತನ ರಾಮಾಚಾರಿ (ಯಶ್), ಮೂಲ ರಾಮಾಚಾರಿಯ ಸಿಟ್ಟನ್ನು ತನ್ನಲ್ಲಿ ಅವಗಾಹಿಸಿಕೊಂಡಿರುತ್ತಾನೆ. ಅವನ ರೀತಿಯಲ್ಲೆ ಪರೀಕ್ಷೆಯಲ್ಲಿ ಕಾಪಿ ಹೊಡೆದು ಸಿಕ್ಕಿ ಬಿದ್ದು ಪ್ಯಾಂಟ್ ಬಿಚ್ಚುವ ಶಿಕ್ಷೆ ಪಡೆಯುತ್ತಾನೆ. ಆ ಸಿಟ್ಟು ಮತ್ತು ಈ ಘಟನೆ ಬಿಟ್ಟರೆ ಹಳೆಯ ರಾಮಚಾರಿಗೂ ಈ ರಾಮಾಚಾರಿಗೂ ಹೆಚ್ಚೇನೂ ಸಾಮ್ಯತೆ ಇಲ್ಲ. ಇವನ ಅಣ್ಣ ಬುದ್ಧಿವಂತ. ಓದಿನಲ್ಲಿ ಚುರುಕು. ಇವರ ಅಪ್ಪನಿಗೆ ಚುರುಕು ಮಗನ ಮೇಲೆ ವಿಶೇಷ ಪ್ರೀತಿ. ಒರಟ ಮಗನನ್ನು ಕಂಡರೆ ಪೊಲೀಸ್ ಠಾಣೆಯಲ್ಲಿ ದೂರು ಕೊಡುವಷ್ಟು ಕೋಪ. ರಾಮಾಚಾರಿಗೆ ದತ್ತು ಮತ್ತು ಚಿಕ್ಕಪ್ಪ ಆತ್ಮೀಯ ಗೆಳೆಯರು. ತಾನು ವಿರಳವಾಗಿ ಹೋಗುವ ಕಾಲೇಜಿನಲ್ಲಿ ಮೊದಲ ನೋಟದಲ್ಲೇ ನಾಯಕ ನಟಿಯನ್ನು(ರಾಧಿಕಾ ಪಂಡಿತ್) ನೋಡಿ ಲವ್ ಆಗುತ್ತದೆ. ಅವಳನ್ನು ರ್ಯಾಗಿಂಗ್ ನಿಂದ ತಪ್ಪಿಸಲು ಒಂದು ಫೈಟ್. ನಾಯಕಿ ತನ್ನ ಆತ್ಮೀಯ ಗೆಳೆಯ ದತ್ತುವಿನ ತಂಗಿ ಎಂದು ತಿಳಿದು ಕೊನೆಗೆ ಸ್ನೇಹವೇ ದೊಡ್ದದು ಎಂದು ಸುಮ್ಮನಾಗುತ್ತಾನೆ. ಆದರೆ ನಾಯಕಿ ಅಣ್ಣನನ್ನು ಒಪ್ಪಿಸಿ, ತನ್ನ ತಾಯಿಯನ್ನು(ಮಾಳವಿಕ) ಎದುರು ಹಾಕಿಕೊಂಡು ತನ್ನ ಪ್ರೀತಿಯನ್ನು ಸಮರ್ಪಿಸುತ್ತಾಳೆ. ರಾಮಾಚಾರಿ 'ಬಾಗಿನ' ಕೊಟ್ಟು ಹುಡುಗಿಯ ಹತ್ತಿರ ಪ್ರೀತಿಯನ್ನು ಸಂವೇದಿಸಿಕೊಳ್ಳುತ್ತಾನೆ. ಇವನು ರಾಮಾಚಾರಿಯಾದ ಮೇಲೆ ನಾಯಕಿಯನ್ನು "ಮಾರ್ಗರೆಟ್" ಎಂದು ನಾಮಕರಣ ಮಾಡುತ್ತಾನೆ. ಇವರ ಮಧುರ ಪ್ರೀತಿಯ ನವಿರು ಕ್ಷಣಗಳು, ಹಾಡುಗಳೊಂದಿಗೆ ಮುಂದುವರೆಯುವ ಕಥೆ, ರಾಮಾಚಾರಿಯ 'ಮಿಸ್ ಕಮ್ಮ್ಯುನಿಕೇಶನ್' ನಿಂದ ಇಬ್ಬರಲ್ಲೂ ವಿರಸ ಉಂಟಾಗುತ್ತದೆ. ಈ ಮಧ್ಯದಲ್ಲಿ ರಾಮಾಚಾರಿಯ ಅಣ್ಣನನ್ನು ಓದಿಸಿದ್ದ, ತನ್ನ ಕುಟುಂಬ ಗೆಳೆಯನ(ಶ್ರೀನಾಥ್) ಮಗಳನ್ನು ತನ್ನ ಅಣ್ಣ ವರಿಸಬೇಕಿರುತ್ತದೆ. ಆದರೆ ಅಣ್ಣ ಓಡಿ ಹೋಗುತ್ತಾನೆ. ಇದರಿಂದ ನೊಂದ ಅಪ್ಪ ಆಸ್ಪತ್ರೆ ಸೇರುತ್ತಾನೆ. ಈ ಮಧ್ಯೆದಲ್ಲಿ ಮಾರ್ಗರೆಟ್ ಳ ಹುಟ್ಟು ಹಬ್ಬಕ್ಕೆ ವಿಶ್ ಮಾಡುವುದನ್ನು ಮರೆಯುತ್ತಾನೆ. ಇವರಿಂದ ವಿರಸ ವಿಪರೀತಗೊಂಡು, ಸಂಬಂಧ ಕಡಿತಗೊಳ್ಳುತ್ತದೆ. ಮಾರ್ಗರೆಟ್ ಮತ್ತೆ ದಿವ್ಯ(ಮೂಲ ಹೆಸರು) ಆಗಿಬಿಡುತ್ತಾಳೆ. ಆಗ ತನ್ನ ಅಣ್ಣ ವರಿಸಬೇಕಿದ್ದ ಹುಡುಗಿಯನ್ನು ತನ್ನ ತಂದೆಯ(ಈಗ ಸಂಬಂಧ ಉತ್ತಮಗೊಂಡಿರುತ್ತದೆ) ಒತ್ತಡದಿಂದ ರಾಮಾಚಾರಿ ವರಿಸಲು ಒಪ್ಪಿಕೊಳ್ಳುತ್ತಾನೆ. ಅಲ್ಲಿ ಮಾರ್ಗರೆಟ್ ಗೂ ಅಮೇರಿಕಾದ ಸಂಬಂಧ(ಧ್ಯಾನ್) ಒಲಿದು ಬರುತ್ತದೆ. ಚಿತ್ರದುರ್ಗದಲ್ಲಿ ಎರಡೂ ಸಂಬಂಧಗಳ ಮದುವೆ ಒಂದೇ ದಿನ ನಿಗದಿಯಾಗುತ್ತದೆ. ಮುಂದೇನಾಗುತ್ತದೆ? ಸಿನಿಮಾ ನೋಡಿ.

ಬಾಕ್ಸ್ ಆಫೀಸಲ್ಲಿ ಭರ್ಜರಿ ಓಪನಿಂಗ್[ಬದಲಾಯಿಸಿ]

ಚಿತ್ರ ಬಿಡುಗಡೆಯಾದ ಮೊದಲ ಆರು ದಿನಗಳಲ್ಲಿ ‘ರಾಮಾಚಾರಿ’ ಚಿತ್ರದ ಒಟ್ಟು ಗಳಿಕೆ 14 ಕೋಟಿ ರೂಪಾಯಿ. ರಾಜ್ಯದ ಒಟ್ಟು 200 ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಗುರುವಾರ (ಡಿ.25) ಚಿತ್ರ ಬಿಡುಗಡೆಯಾದ ಎರಡು ದಿನಕ್ಕೆ ಹತ್ತು ಚಿತ್ರಮಂದಿರಗಳು ಹೊಸದಾಗಿ ಸೇರ್ಪಡೆಯಾದವು.

ನಟಿಸಿರುವವರು[ಬದಲಾಯಿಸಿ]

  1. ಸಮಥ್೵
  2. [[ರಾಧಿಕ
  3. ಶ್ರೀನಾಥ್
  4. ಅಚ್ಯುತ್ ಕುಮಾರ್
  5. ಮಾಳವಿಕಾ