ಮಿನರ್ವ ಸರ್ಕಲ್, ವಿಶ್ವೇಶ್ವರಪುರಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'ವಿಶ್ವೇಶ್ವರಪುರಂ'ನಲ್ಲಿ ಈಗ 'ಮಿನರ್ವ ಸರ್ಕಲ್' ಎಂದು ಕರೆಯಲ್ಪಡುವ ಸ್ಥಳದಲ್ಲಿ ಒಂದು ಮಳಿಗೆ ಇದೆ. ಅದರಲ್ಲಿ ಹಲವಾರು ಮಳಿಗೆಗಳ ತಾಣವಿದೆ. ಮೊದಲು ಸುಮಾರು ೩ ದಶಕಗಳ ಹಿಂದೆ ಇಲ್ಲಿ,'ಮಿನರ್ವ ಟಾಕೀಸ್' ಎಂಬ ಚಿತ್ರಮಂದಿರವಿತ್ತು. ಅಷ್ಟೇನೂ 'ಪಾಶ್' ಎನ್ನದಿದ್ದರೂ ವಿಶಾಲವಾದ ಎಲ್ಲವರ್ಗದ ಜನರಿಗೂ ಕೈಗೆಟುಕುವ ಟಿಕೆಟ್ ದರಗಳಿದ್ದು, ಚಿತ್ರಪ್ರಿಯರಿಗೆ ಬಹಳ ಮುದಕೊಡುವ ಜಾಗವಾಗಿತ್ತು. ಮೆಜೆಸ್ಟಿಕ್ ಅಥವಾ ಕಂಟೋನ್ಮೆಂಟ್ ಗೆ ಚಿತ್ರವನ್ನು ವೀಕ್ಷಿಸಲೆಂದೇ ಹೋಗುತ್ತಿದ್ದ ರಸಿಕರಿಗೆ ಇದು ಒಂದು ಸುಲಭವಾದ ಹತ್ತಿರದಲ್ಲಿದ್ದ ಚಿಕ್ಕ ಚೊಕ್ಕ ಸಿನಿಮಾ ಮಂದಿರವಾಗಿತ್ತು. ನಂತರ ಬಂದ ಮಾಲ್ ಅಥವಾ ಮಾರುಕಟ್ಟೆಯ ಸಂಸ್ಕೃತಿಯಿಂದಾಗಿ ಹಲವಾರು ಚಿತ್ರಮಂದಿರಗಳು ಮಳಿಗೆಗಳಾಗಿ ಪರಿವರ್ತಿತಗೊಂಡಾಗ, 'ಮಿನರ್ವ ಸಿನಿಮಾ ಮಂದಿರ'ವೂ ತನ್ನ ಸ್ಥಾನವನ್ನು ಸುಧಾರಿಸಬೇಕಾಗಿ ಬಂತು. ಇಲ್ಲಿಗೆ 'ತೆಲುಗು' ಮತ್ತು'ಕನ್ನಡ'ಚಿತ್ರಗಳು ಹೆಚ್ಚಾಗಿ ಬರುತ್ತಿದ್ದವು. ಮಿನರ್ವ ಸರ್ಕಲ್ ಬಳಿ ಪಂಜಾಬ್ ನಾಷನಲ್ ಬ್ಯಾಂಕ್ ಇದೆ.