ವಿಷಯಕ್ಕೆ ಹೋಗು

ಮಾಲಿಗುಡ ಸುರಂಗ

ನಿರ್ದೇಶಾಂಕಗಳು: 18°56′54″N 82°38′48″E / 18.948373°N 82.646585°E / 18.948373; 82.646585
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾಲಿಗುಡ ಸುರಂಗ
Overview
LineKothavalasa–Kirandul line
Locationಒಡಿಶಾ
StatusActive
Startಜೆಯ್ಪೊರ್
Endಕೋರಾಪುಟ್
Operation
Opened‌೧೯೬೮
Ownerಇಂಡಿಯನ್‌ ರೇಲ್ವೇಸ್
Operatorಇಂಡಿಯನ್‌ ರೇಲ್ವೇಸ್
Trafficರೈಲು
Technical
Line length4.42 km (2.75 mi)
No. of tracksಒಂದೇ ಹಳಿ
Track gauge೧,೬೭೬ mm (5 ft 6 in) (ಬ್ರಾಡ್‌ ಗೇಜ್)

ಒಡಿಶಾದ ಮಾಲಿಗುಡ ಸುರಂಗವು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ "ಬನಿಹಾಲ್ - ಕ್ವಾಜಿಗುಂಡ್ ಸುರಂಗ"ದ ನಂತರ ಭಾರತದ ನಾಲ್ಕನೇ ಅತಿದೊಡ್ಡ ಬ್ರಾಡ್-ಗೇಜ್ ರೈಲ್ವೆ ಸುರಂಗವಾಗಿದೆ. ಈ ಸುರಂಗವು ಜೆಯ್‌ಪೋರ್‌ ನಿಂದ ಪೂರ್ವಕ್ಕೆ ೧೩ಕಿ.ಮೀ. ಮತ್ತು ಕೊರಾಪುಟ್ ನಿಂದ ೨೭ಕಿ.ಮೀ. ದೂರದಲ್ಲಿದೆ. ಸುರಂಗದ ಮೂಲಕ ಹಾದುಹೋಗುವ ಸಂಪೂರ್ಣ ರೈಲುಮಾರ್ಗವು ೪೩೦ಕಿ.ಮೀ. ಉದ್ದವಿದ್ದು ಅದನ್ನು ಜಪಾನ್ ಎಂಜಿನಿಯರ್‌ಗಳು ೧೯೬೧-೧೯೬೮ರ ನಡುವೆ ಜಪಾನಿನ ಸಹಯೋಗದೊಂದಿಗೆ ಕಿರಂಡಲ್‌ನಿಂದ ವಿಶಾಖಪಟ್ನಂ ಬಂದರಿಗೆ ದಾಂತೇವಾಡ, ಜಗದಲ್‌ಪುರ, ಜೆಯ್‌ಪೋರ್, ಕೋರಾಪುಟ್‌, ಪಡುವಾ, ಅರಕು ಕಣಿವೆ, [[ಕೊತ್ತವಲಸ ಮೂಲಕ ಕಬ್ಬಿಣದ ಅದಿರನ್ನು ಸಾಗಿಸಲು ನಿರ್ಮಿಸಿದರು.

ಇತಿಹಾಸ

[ಬದಲಾಯಿಸಿ]

ಒಡಿಶಾದ ಕೊರಾಪುಟ್ ಜಿಲ್ಲೆಯಲ್ಲಿರುವ ಮಾಲಿಗುಡ ಸುರಂಗವು ೪೩೦ಕಿ.ಮೀ ಉದ್ದದ ಕಿರಂಡಲ್-ಕೊತ್ತವಲಸ ರೈಲು ಮಾರ್ಗದ ಭಾಗವಾಗಿದೆ. ಈ ಮಾರ್ಗವನ್ನು ೧೯೬೬-೬೭ರಲ್ಲಿ ಸೌತ್‌ ಈಸ್ಟರ್ನ್‌ ರೇಲ್ವೆ (ಆಗ್ನೇಯ ರೈಲ್ವೆ) ಯಡಿಯಲ್ಲಿ ತೆರೆಯಲಾಯಿತು. ಇದರ ಪ್ರಾಥಮಿಕ ಉದ್ದೇಶವು ಬೈಲಾಡಿಲಾ ಗಣಿಗಳಿಂದ ಜಪಾನ್‌ಗೆ ಕಬ್ಬಿಣದ ಅದಿರು ರಫ್ತು ಮಾಡಲು ವಿಶಾಖಪಟ್ಟಣಂ ಬಂದರಿಗೆ ಸಾಗಿಸುವುದಾಗಿತ್ತು. ಪೂರ್ವ ಘಟ್ಟಗಳ ಸವಾಲಿನ ಭೂಪ್ರದೇಶವು ಸುರಂಗಗಳು ಮತ್ತು ವಯಾಡಕ್ಟ್‌ಗಳ ನಿರ್ಮಾಣವನ್ನು ಬಲು ಕಷ್ಟಕರವಾಗಿಸಿತು ಮತ್ತು ಭಾರೀ ಪ್ರಮಾಣದ ಜೀವಹಾನಿಗೆ ಕಾರಣವಾಯಿತು. []

ʼʼʼಮಾಲಿಗುಡ ಸುರಂಗʼʼʼವು ಸುಮಾರು ೪.೪೨ ಕಿ.ಮೀ ಉದ್ದದ ಬ್ರಾಡ್-ಗೇಜ್ ರೈಲ್ವೆ ಸುರಂಗವಾಗಿದೆ. ಇದು ಭಾರತದ ಅತಿ ಉದ್ದದ ಬ್ರಾಡ್-ಗೇಜ್ ರೈಲ್ವೆ ಸುರಂಗಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಸುರಂಗವು ಪೂರ್ವ ಘಟ್ಟಗಳನ್ನು ಹಾದುಹೋಗುವ ಕಿರಂಡಲ್-ಕೊತ್ತವಲಸ ರೈಲ್ವೆ ಮಾರ್ಗದ ಭಾಗವಾಗಿದೆ. [] [] ಈ ಭೂಪ್ರದೇಶದ ಸಂಕೀರ್ಣತೆಯ ಕಾರಣ ಇಲ್ಲಿ ರೈಲ್ವೆ ಮಾರ್ಗದ ನಿರ್ಮಾಣವು ಸವಾಲಿನದಾಗಿತ್ತು. [] ಈ ಜೋಡಣೆಯು ಐದು ಡಿಗ್ರಿಗಳವರೆಗಿನ ಏರು ದಿಬ್ಬಗಳೊಂದಿಗೆ ಕಡಿದಾದ ಇಳಿಜಾರುಗಳು ಮತ್ತು ತಿರುವುಗಳನ್ನು ಹೊಂದಿದೆ. ಸುತ್ತಮುತ್ತಲಿನ ಪ್ರದೇಶವು ದಟ್ಟವಾದ ಕಾಡುಗಳು, ಬೆಟ್ಟಗಳು ಮತ್ತು ಜಲಪಾತಗಳಿಂದ ಕೂಡಿದೆ, ಒಂದಂತೂ ಸುರಂಗದೊಳಗೇ ಹರಿಯುತ್ತದೆ. ಮಾಲಿಗುಡ ಸುರಂಗ ಸೇತುವೆ ಒಡಿಶಾದಲ್ಲಿ ಪ್ರವಾಸಿಗರಿಗೆ ಆಸಕ್ತಿಯ ತಾಣಗಳಲ್ಲೊಂದು. []

  1. "The toil behind building tunnels". The Hindu. December 21, 2015. Retrieved 2025-07-13.
  2. ೨.೦ ೨.೧ "8 Longest Tunnels In India". Times Now. 2024-04-24. Retrieved 2025-07-13.
  3. "Maliguda Tunnel Bridge, Koraput - Odisha Tour". Odisha Tour. 2023-11-07. Retrieved 2025-07-13.
  4. "Tunnelling in challenging topography and geological conditions for a railway doubling project in Eastern Ghats India". ResearchGate. Retrieved 2025-07-13.


18°56′54″N 82°38′48″E / 18.948373°N 82.646585°E / 18.948373; 82.646585