ಮಾರುತ ಮಲೆ

ವಿಕಿಪೀಡಿಯ ಇಂದ
Jump to navigation Jump to search
Marudhamalai Temple-Coimbatore.jpg

ಮರುದಮಲೈ[ಬದಲಾಯಿಸಿ]

ಮಾರುತಮಲೆ ಕೊಯಂಬತ್ತೂರುನಿಂದ ೧೫ ಕಿಲೋಮೀಟರ್‍ ದೂರದಲ್ಲಿ ಪಶ್ಚಿಮಘಟ್ಟದಲ್ಲಿರುವ ಒಂದು ಬೆಟ್ಟ. ಈ ಬೆಟ್ಟದಲ್ಲಿ ಸುಬ್ರಹ್ಮಣ್ಯಸ್ವಾಮಿಯ ಗುಡಿಯಿದೆ. ಈ ಗುಡಿಯು ತಮಿಳುನಾಡಿನ ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ. ಈ ಬೆಟ್ಟದಲ್ಲಿ ಹಲವಾರು ವೈದ್ಯಕೀಯ ಗುಣಗಳುಳ್ಳ ಸಸ್ಯಗಳು ಲಭ್ಯವಿವೆ.

ಈ ಮಲೆಯನ್ನು ಹತ್ತಲು ಮೆಟ್ಟಿಲುಗಳು ಇವೆ. ತಳದಿಂದ ಮೇಲಕ್ಕೆ ಹೋಗಲು ದೇಗುಲದ ಬಸ್ಸುಗಳ ವ್ಯವಸ್ಥೆ ಹಾಗೂ ಸ್ವಂತ ವಾಹನದಲ್ಲಿ ಹೋಗಲು ರಸ್ತೆ ಇದೆ.