ಮಾಗಡಿಯ ಬಳಿ ನೆಲೆಸಿರುವ ಸುಂದರ ಪಕ್ಷಿಲೋಕ

ವಿಕಿಪೀಡಿಯ ಇಂದ
Jump to navigation Jump to search

ಗದಗ ಜಿಲ್ಲೆಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಕೆರೆ - ವಿದೇಶಿ ಹಕ್ಕಿಗಳಿಗೆ ವಲಸೆ ತಾಣವಾಗಿದೆ . ಛಳಿಗಾಲಕ್ಕೆ ವಿವಿಧ ಪ್ರದೇಶಗಳಿಂದ ಇಲ್ಲಿಗೆ ಬರುವ ಬಣ್ಣ ಬಣ್ಣದ ಸಹಸ್ರಾರು ಬಾನಾಡಿಗಳು ಸ್ವಚ್ಛಂಧವಾಗಿ ವಿಹರಿಸುತ್ತ ವರ್ಣರಂಜಿತ ಪಕ್ಷಿ ಲೋಕವನ್ನೇ ಸೃಷ್ಟಿಸುತ್ತವೆ

ಪ್ರತಿ ವರ್ಷದ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆಯೇ ಮಾಗಡಿ ಕೆರೆಯಲ್ಲಿ ವಿದೇಶಿ ಪಕ್ಷಿಗಳ ಕಲರವ ಪ್ರಾರಂಭವಾಗುತ್ತದೆ . ಸ್ಥಳೀಯ ಗ್ರಾಮದ ಜನರಿಗೆ ಅಪ್ಯಾಯಮಾನ ಅನುಭವ ನೀಡುವ ಈ ಬಾನಾಡಿಗಳು, ಆಕರ್ಷಕ ಪಕ್ಷಿಧಾಮವನ್ನೇ ರಚಿಸುತ್ತವೆ. ಹಲವಾರು ಪ್ರಭೇದಗಳ ಈ ಹಕ್ಕಿಗಳ ಆಶ್ರಯ ತಾಣದಿಂದಾಗಿ ಜಿಲ್ಲೆಯ ಈ ಕೆರೆ ಆಕರ್ಷಕ ಪ್ರವಾಸಿ ತಾಣವಾಗಿ ರೂಪಗೊಂಡಿದೆ .

ಮಾಗಡಿ ಗೂಡು; ಬನ್ನಿ, ಈ ಪಕ್ಷಿಧಾಮದಲ್ಲಿ ಒಮ್ಮೆ ಸುತ್ತಾಡಿ ಬಾನಾಡಿಗಳ ದಿನಚರಿಯನ್ನು ಅಂತುಕೊಳ್ಳೊಣ, ಗದಗದಿಂದ ಹಾವೇರಿ ಗೆ ತೆರಳುವ ಮಾರ್ಗದಲ್ಲಿ ೨೬ ಕಿ. ಮಿ. ಸಂಚರಿಸಿದರೆ ಮಾಗಡಿ ಗ್ರಾಮ ದೊರೆಯುತ್ತದೆ . ತಾಲೂಕು ಮಾಗಡಿ ಕೆರೆಯ ಬಾನಾಡಿಗಳು...ಕೇಂದ್ರವಾದ ಶಿರಹಟ್ಟಿಯಿಂದ ಕೆವಲ ೮ ಕಿ. ಮಿ. ಹಾಗೂ ಇತಿಹಾಸ ಪ್ರಸಿದ್ಧ ಲಕ್ಷ್ಮೇಶ್ವರದಿಂದ ೧೧ ಕಿ. ಮಿ. ಪಯಣಿಸಿದರೆ ಮಾಗಡಿ ಕೆರೆ ದೊರೆಯುತ್ತದೆ . ಈ ಕೆರೆಯ ಒಟ್ಟು ವಿಸ್ತೀರ್ಣ ೧೩೪. ೧೫ ಎಕರೆಯಷ್ಟು ವಿಶಾಲವಾದುದು . ಮಾಗಡಿ ಹಾಗೂ ಹೊಳಲಾಪುರ ಗ್ರಾಮದಲ್ಲಿ ಮೈಚಾಚಿದ ಈ ಕೆರೆಯ ಜಲಾನಯನ ಪ್ರದೇಶ ಪಕ್ಷಿಗಳ ಬಿಡಾರಕ್ಕೆ ಹೇಳಿ ಮಾಡಿಸಿದಂತಿದೆ .

ದೂರದ ಜಮ್ಮು - ಕಾಶ್ಮಿರ್, ಲಡಾಕ್, ಟಿಬೇಟ್ , ಮಲೇಷಿಯಾ,ಶ್ರೀಲಂಕಾ, ಪಾಕಿಸ್ತಾನ, ಅಪಘಾನಿಸ್ತಾನ, ಆಸ್ಟ್ರಿಯಾ, ನೇಪಾಳ, ಬಾಂಗ್ಲಾ ಹಾಗೂ ಹಿಮಾಲಯ ಸರೋವರಗಳಿಂದ ಆಗಮಿಸುವ ಈ ಬಾನಾಡಿಗಳು ಈ ಕೆರೆಯಲ್ಲಿ ಐದಾರು ತಿಂಗಳು ನೆಲೆಯೂರಿ ನಂತರ ಪುನಃ ತಮ್ಮ ತವರಿಗೆ ತೆರಳುತ್ತವೆ . ಪಕ್ಷಿ ತಜ್ಞರ ಪ್ರಕಾರ ಇಂತಹ ಪಕ್ಷಿಗಳು ತಾವು ವಾಸಿಸುವ ಪ್ರದೇಶಗಳಲ್ಲಿ ಹೆಪ್ಪುಗಟ್ಟುವಂತಹ ಶೀತದಿಂದಾಗಿ ಇವುಗಳು ವಲಸೆ ಹೊರಟು ಉಷ್ಣ ಪ್ರದೇಶಗಳತ್ತ ಪಯಣಿಸುತ್ತವಂತೆ ತಮ್ಮ ಪ್ರವಾಸ ಕಾಲದಲ್ಲಿ ಸೂಕ್ತವೆನಿಸುವ ತಾಣವನ್ನು ಆಯ್ದುಕೊಂಡು ಅಲ್ಲಿ ಕೆಲ ಕಾಲ ಇದ್ದು ಮರಳಿ ಮಾರ್ಚ್ ಹೊತ್ತಿಗೆ ತಮ್ಮ ಗೂಡಿಗೆ ಸೇರುತ್ತವೆ . ಹೀಗೆ ಇವುಗಳು ಆಯ್ದುಕೊಂಡ ಸಮಶೀತೋಷ್ಣ ಸ್ಥಳವೇ ಮಾಗಡಿ ಕೆರೆ .

ಇವ ಯಾಊರಾವ ; ನಮ್ಮ ದೇಶದ ಬಾತುಕೋಳಿಗಳಿಗಿಂತ ಚಿಕ್ಕ ಗಾತ್ರದಲ್ಲಿರುವ ಹಂಸಗಳ ಜಾತಿಗೆ ಸೇರುವ ಈ ಪಕ್ಷಿಗಳ ಒಡನಾಟದಿಂದ ಮಾಗಡಿ ಕೆರೆ ಕಂಗೋಳಿಸುತ್ತದೆ . ಈಗಾಗಲೇ ಸಾವಿರಾರು ಪಕ್ಷಿಗಳು ಕೆರೆಗೆ ಅತಿಥಿಗಳಾಗಿ ಆಗಮಿಸಿವೆ . ಇಲ್ಲಿಗೆ ವಲಸೆ ಬರುವ ಈ ವೈವಿಧ್ಯಮಯ ಪಕ್ಷಿಗಳ ಪ್ರಭೇದ ಸಹ ಸಾಕಷ್ಟಿದೆ . ಸಾಮಾನ್ಯವಾಗಿ ಅಕ್ಟೋಬರ್ ಬಾನಾಡಿಗಳ ಹಾರಾಟತಿಂಗಳಾಂತ್ಯಕ್ಕೆ ಇಲ್ಲಿಗೆ ೧೩೦ ಕ್ಕೂ ಹೆಚ್ಚು ಜಾತಿಯ ಹಕ್ಕಿಗಳು ವಲಸೆ ಬರುವದಾಗಿ ಗುರುತಿಸಲಾಗಿದೆ . ಅವುಗಳಲ್ಲಿ ೧೬ ಪ್ರಭೇದದ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಆಪೈಕಿ ಗೀರು ತಲೆಯ ಬಾತುಕೋಳಿಗಳು ( ಬಾರ್ ಹೆಡೆಡ್ ಗೂಸ್ ) ಪಕ್ಷಿಗಳ ಸಂಖ್ಯೆ ಅಧಿಕವಾಗಿದ್ದು , ನಂತರದ ಸ್ಥಾನಗಳಲ್ಲಿ ಬ್ರಾಹ್ಮಿಣಿ ಡಕ್, ಬ್ಲಾಕ್ ಐಬಿಸ್, ಪೈಂಟೆಡ್ ಸ್ಟಾರ್ಕ್ ಹಾಗೂ ಸ್ಪೂನ್ ಬಿಲ್ ಜಾತಿಯ ಹಕ್ಕಿಗಳು ಈ ಕೆರೆಯನ್ನು ಆಶ್ರಯಿಸುತ್ತವೆ. ನಾವು ಕಾಣದ ಕೇಳದ ನಾರ್ದನ್ ಶೆಲ್ವರ್ , ಲಿಟ್ಲ್ ಕಾರ್ಪೋರಲ್ಸ್ , ಅಟಲ್‌ರಿಂಗ್ ಪ್ಲೋವರ್ , ಲೊಮನ್ ಡೇಲ್, ವುಡ್ ಸ್ಟಾಂಡ್ , ಪೈಪರ, ಗ್ರಿವನ್ ಟೇಲ್, ಬ್ಲಾಕ್ ಡ್ರಾಂಗೋ , ರೆಡ್ ಢ್ರೋಟ್, ಪೆಡ್ಡಿ ಪ್ರೀಪೆಟ್ ಹೀಗೆ ಅನೇಕ ಜಾತಿಯ ಪಕ್ಷಿಗಳು ಕೆರೆಗೆ ವಲಸೆ ಬಂದಿರುವದನ್ನು ಗುರುತಿಸಲಾಗಿದೆ .

ವಾಕಿಂಗ್ ಪ್ರವೀಣರು ; ಕೆರೆಯಲ್ಲಿ ವಾಸವಾಗುವ ಈ ವಲಸೆ ಹಕ್ಕಿಗಳು ವಾಕಿಂಗ್ ಪ್ರವೀಣರೆಂದರೆ ತಪ್ಪಾಗದು. ಇವುಗಳ ದೈನಂದಿನ ಚಟುವಟಿಕೆ ಬಹು ವಿಶಿಷ್ಟವಾದರು. ಪ್ರತಿದಿನ ನಸುಕಿನ ವೇಳೆಗೆ ಮೈದಡವಿಕೊಂಡು ಆಹಾರ ಅರಸುತ್ತ ಸುತ್ತಲಿನ ಪ್ರದೇಶಗಳತ್ತ ಸಾಕಷ್ಟು ದೂರ ಸಂಚರಿಸುವ ಈ ಪಕ್ಷಿಗಳು ಎಳೆ ಬಿಸಿಲು ಆರಂಭವಾಗುವ ೮ ರಿಂದ ೯ ಗಂಟೆ ಹೊತ್ತಿಗೆ ಕೆರೆ ಅಂಗಳಕ್ಕೆ ವಿಮಾನಗಳಂತೆ ಕಾಲಿಡುತ್ತವೆ . ಸಂಜೆಯವರೆಗೆ ಕೆರೆಯಲ್ಲಿ ಸ್ವಚ್ಛಂದವಾಗಿ ವಿಹರಿಸಿ, ವಿರಮಿಸುವ ಈ ಸಂಕುಲ , ಸಂಜೆ ೬ ರ ಹೊತ್ತಿಗೆ ಪುನಃ ಆಹಾರ ಅರಸುತ್ತ ಮತ್ತೊಮ್ಮೆ ವಾಕಿಂಗ್ ಪ್ರಾರಂಭಿಸುತ್ತವೆ . ಒಕ್ಕಲಾದ ಹೊಲದಲ್ಲಿಯ ಅಳಿದುಳಿದ ಕಾಳು , ಕೆರೆಯಲ್ಲಿರುವ ಚಿಕ್ಕ ಜಲಚರಗಳನ್ನು ಹೆಕ್ಕಿ ತಿನ್ನುವ ಈ ಪಕ್ಷಿಗಳು ರಾತ್ರಿ ಕೆರೆಯಲ್ಲಿ ತಂಗುತ್ತವೆ .

ಕೆರೆಯಲ್ಲಿ ಹಕ್ಕಿಗಳ ರಂಗೋಲಿ..ಕೆರೆಯಲ್ಲಿ ರಂಗೋಲಿ ; ಕೆರೆಯಲ್ಲಿ ಗುಂಪು ಗುಂಪಾಗಿ ವಿಹರಿಸುವ ಬಣ್ಣ ಬಣ್ಣದ ಈ ಹಕ್ಕಿಗಳನ್ನು ಕಂಡಾಗ ನೀರಲ್ಲಿ ರಂಗೋಲಿ ಹಾಕಿದಂತೆ ಬಾಸವಾಗುತ್ತದೆ . ಬಂಗಾರ ವರ್ಣದ ಬಾಹ್ಮಿಣಿ ಡಕ್, ಬೂದು ಕೆಂಪು ನೆರಳೆ, ಕಪ್ಪು ಬಣ್ಣದ ಕುತ್ತಿಗೆ ಕೊಕ್ಕರೆಗಳು , ಹೊಟ್ಟೆ ಭಾಗದಲ್ಲಿ ಬಿಳಿ ಹಾಗೂ ಬೂದು ಬಣ್ಣದ ರೆಕ್ಕೆಗಳು, ಕೇಸರಿ ಬಣ್ಣದ ನೀಳ ಕಾಲುಗಳನ್ನು ಹೊಂದಿರುವ ಈ ಪಕ್ಷಿಗಳು ನೀರಲ್ಲಿ ಗಂಭೀರವಾಗಿ ಚಲಿಸುವದನ್ನು ಕಂಡಾಗ ಮೈಯೆಲ್ಲಾ ಪುಳಕಗೊಂಡು ಸ್ಮರಣೀಯ ಅನುಭವವಾಗುತ್ತದೆ .

ಬರದ ಛಾಯೆಯಲ್ಲಿದ್ದ ಈ ಕೆರೆಗೆ ಅದೃಷ್ಟವಶಾತ್ ಬಂದ ಮಳೆಯಿಂದ ಕೆರೆ ತುಂಬಿದೆ . ಹೀಗಾಗಿ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಬಂದಿಳಿದಿರುವ ಈ ಹಕ್ಕಿಗಳು, ಪಕ್ಷಿ ಪ್ರೀಯರನ್ನು ಸೆಳೆಯುತ್ತಿವೆ . ಐದರಿಂದ ಹತ್ತು ಸಾವಿರದ ವರೆಗೂ ಬರುವ ಚಳಿಗಾಲದ ಈ ಖಾಯಂ ಅತಿಥಿಗಳಿಂದಾಗಿ ಮಾಗಡಿ ಕೆರೆ ಪಕ್ಷಿ ಧಾಮವಾಗಿ ರೂಪಗೊಂಡ ನಿಸರ್ಗ ಪ್ರೇಮಿಗಳನ್ನು , ಶಾಲಾ ಮಕ್ಕಳನ್ನು ಆರ್ಕಷಿಸುತ್ತದೆ . ಮಾಗಡಿ ಗ್ರಾಮದ ಪಕ್ಷಿ ಪ್ರೀಯ ಯುವಕರ ಪಡೆ ಸಂಘವೊಂದನ್ನು ಸ್ಥಾಪಿಸಿ ಪಕ್ಷಿಗಳ ರಕ್ಷಣೆ ಮುಂದಾಗಿದೆ . ಈ ಕೆರೆಯನ್ನು ಅಧಿಕೃತ ಪಕ್ಷಿ ಧಾಮವನ್ನಾಗಿ ಘೋಷಿಸಿ ಪಕ್ಷಿ ಸಂರಕ್ಷಣೆ ಪೂರಕ ವಾತಾವರಣ ಕಲ್ಪಿಸಬೇಕೆಂಬುದು ಅವರ ಬೇಡಿಕೆಯಾಗಿದೆ .

ವೀಕ್ಷಣಾ ಗೋಪುರ, watch towerಪಕ್ಷಿ ವೀಕ್ಷಣೆ ; ಕೆಂದ್ರ ಸರ್ಕಾರ ಈ ಕೆರೆ ಅಭಿವೃಧ್ಧಿಗಾಗಿ ಅರಣ್ಯ ಇಲಾಖೆಯ ಯೋಜನೆಗೆ ಒಪ್ಪಿಗೆ ಸೂಚಿಸಿ , ೬೬. ೩೫ ಲಕ್ಷ ರೂ. ಗಳನ್ನು ಕೆರೆ ಪ್ರದೇಶಾಭಿವೃಧ್ಧಿಗಾಗಿ ಮಂಜೂರಾತಿ ನೀಡಿದೆ . ಕೆರೆಯ ಸಂರಕ್ಷಣೆ ಹಾಗೂ ನಿರ್ವಹಣೆಗೆ ಇಲಾಖೆ ಕ್ರಿಯಾ ಯೋಜನೆ ತಯಾರಿಸಿ ಅದರ ಅನುಷ್ಠಾನಕ್ಕೆ ಇಲಾಖೆ ಮುಂದಾಗಿದೆ . ಕೆರೆಯ ಉದ್ದಕ್ಕೂ ಪಕ್ಷಿ ವೀಕ್ಷಕರಿಗೆ ಅನುಕೂಲವಾಗುವದಕ್ಕಾಗಿ ಬೇಲಿ ಹಾಕಿದ್ದು ಇದರಿಂದಾಗಿ ವಲಸೆ ಪಕ್ಷಿಗಳಿಗೆ ಸಂರಕ್ಷಣೆ ದೊರೆತ್ತಿದ್ದು ಅವು ಮುಕ್ತವಾಗಿ ಕೆರೆಯಲ್ಲಿ ವಿಹರಿಸಲು ಸಾಧ್ಯವಾಗಿದೆ . ಪಕ್ಷಿಗಳು ಹೆಚ್ಚಾಗಿರುವ ಸ್ಥಳದಲ್ಲಿ ವೀಕ್ಷಣಾ ಗೋಪುರ ನಿರ್ಮಿಸಲಾಗಿದ್ದು , ಪಕ್ಷಿಗಳ ಮಾಹಿತಿ ಫಲಕಹಾಕಿ , ವಿಶ್ರಾಂತಿ ತಾಣ ( ಪರ ಗೋಲಾ ) ನಿರ್ಮಿಸಿರುವುದು ಕೆರೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನಕೂಲವಾಗಿದೆ . ಅರಣ್ಯ ಇಲಾಖೆ ಪಕ್ಷಿಗಳ ನೇರವಿಗಾಗಿ ೮ . ೫ ಕಿ. ಮಿ. ಉದ್ದದ ಕೆರೆ ರಸ್ತೆ ಬದಿ ಸಸ್ಯರೋಪಣ ಹಾಗೂ ರೈತರ ೧೫೬ ಹೆಕ್ಟೇರುಗಳಲ್ಲಿ ನೆಡು ತೋಪು ಮುಂತಾದವುಗಳನ್ನು ಅಭಿವೃಧ್ಧಿಗೊಳಿಸಿದೆ . ಸಣ್ಣ ನೀರಾವರಿ ಇಲಾಖೆಯು ಕರೆ ಅಭಿವೃಧ್ಧಿಗೆ ಮುಂದಾಗಿದೆ . ಇದರಿಂದಾಗಿ ಕೆರೆಯಲ್ಲಿ ನಡೆಯುವ ಈ ಪಕ್ಷಿ ಜಾತ್ರೆಗೆ ಬರುವ ಪ್ರೇಕ್ಷಕರ ಸಂಖ್ಯೆ ಹೆಚ್ಚಿದ್ದು, ವಿವಿಧ ಶಾಲಾ - ಕಾಲೇಜು - ವಿದ್ಯಾರ್ಥಿಗಳಿಗೆ ಇದು ಪಿಕ್‌ನಿಕ್ ಸ್ಥಳವಾಗಿದೆ . ಮಾಗಡಿ ಕೆರೆಯ ವಲಸಿಗರ ಕಲರವ ಕೇಳಲು ನಯನ ಮನೋಹರ ದೃಶ್ಯ ನೋಡಲು ಮನಸ್ಸು ಕಾತರಗೊಂಡಿರಬೇಕು. ಮತ್ತೇಕೆ ತಡ ಕಣ್ಣಿಗೆ ಹಬ್ಬ ನೀಡುವ , ಮಕ್ಕಳ ಮನ ಮುಗ್ದಗೊಳಿಸುವ ಪಕ್ಷಿಧಾಮ ದತ್ತ ನಿಮ್ಮ ಪಯಣ ಸಾಗಲಿ.