ಮಾಂಟ್‌ಸ್ಟ್ಯು ಅರ್ಟ್ ಎಲ್ಫಿನ್ ಸ್ಟನ್

ವಿಕಿಪೀಡಿಯ ಇಂದ
Jump to navigation Jump to search
ಮಾಂಟ್‌ಸ್ಟ್ಯುವರ್ಟ್ ಎಲ್ಫಿನ್ಸ್‌ಟನ್

(ಜನನ : ಅಕ್ಟೋಬರ್ ೬, ೧೭೭೯, ಡಂಬರ್ ಟನ್, ಸ್ಕಾಟ್‍ಲ್ಯಾಂಡ್- ಮರಣ : ವವೆಂಬರ್ ೨೦, ೧೮೫೯, ಸರ್ರೆ , ಇಂಗ್ಲೆಂಡ್)

ಮಾಂಟ್‌ಸ್ಟ್ಯು ಅರ್ಟ್ ಎಲ್ಫಿನ್ ಸ್ಟನ್,[೧] ಮುಂಬಯಿನಗರದ ಸಾರ್ವತ್ರಿಕ ಬೆಳವಣಿಗೆಗೆ ಬಹಳ ಶ್ರಮವಹಿಸಿದರು. ಅವರ ದೂರದೃಷ್ಟಿ ಹಾಗೂ ಪರಿಶ್ರಮಗಳ ಫಲವಾಗಿ ಮುಂಬಯಿನಗರದ ಉಚ್ಚಶಿಕ್ಷಣ ಪದ್ಧತಿ, ಹಾಗೂ ಕುಡಿಯುವ ನೀರಿನ ವ್ಯವಸ್ಥೆಗಳು ಬಲಗೊಂಡವು. ಅವರು ಬರೆದ ಭಾರತದ ಚರಿತ್ರೆ, ಆಗಿನ ಕಾಲದ ಬ್ರಿಟಿಷ್ ಸಾಮಾಜ್ಯದ ಹಲವಾರು ಸಂಗತಿಗಳನ್ನು ಮತ್ತು ಮುಂಬಯಿನಗರದ ಆಡಳಿತ ವ್ಯವಸ್ಥೆಯನ್ನು ದರ್ಶಾಯಿಸುತ್ತದೆ.

'ಮಾಂಟ್‌ಸ್ಟ್ಯು ಅರ್ಟ್ ಎಲ್ಫಿನ್ ಸ್ಟನ್', ಭಾರತಕ್ಕೆ ಪಾದಾರ್ಪಣೆ[ಬದಲಾಯಿಸಿ]

೧೭೯೫ ರಲ್ಲಿ ಈಸ್ಟ್ ಇಂಡಿಯ ಕಂಪೆನಿಯವರ ರಾಜ್ಯಾಡಳಿತದ ಸಮಯದಲ್ಲಿ, ಕಲ್ಕತ್ತಾ ನಗರಕ್ಕೆ ಪಾದಾರ್ಪಣ ಮಾಡಿದ್ದರು. ೧೮೦೧ ರಲ್ಲಿ ಬ್ರಿಟಿಷ್ ಸರ್ಕಾರದ ಸಿವಿಲ್ ಸೇವೆಯಲ್ಲಿ ಸೇರಿದ್ದರು. ಆಗ ಸಂಭವಿಸಿದ ಬೆನಾರೆಸ್ ನಗರದ, ವಾಜಿಲ್ ಆಲಿ ಶಾ ರವರ ಮರಣದ ತರುವಾಯ ಆದ ದಂಗೆಯಲ್ಲಿ ಅವರು ಹೇಗೋ ತಪ್ಪಿಸಿಕೊಂಡರು. ೧೮೦೧ ರಲ್ಲಿ ಡಿಪ್ಲೊಮೇಟಿಕ್ ಸರ್ವೀಸ್ ಬಿಟ್ಟು ಕೊಟ್ಟು, ೨ ನೆ ಬಾಜಿರಾಯನ ಆಸ್ಥಾನಕ್ಕೆ ಅವರನ್ನು ನೇಮಕಾತಿಮಾಡಲಾಯಿತು. ೧೮೦೪ ರಲ್ಲಿ ನಾಗ್ ಪುರ್ ಕ್ಕೆ ರೆಸಿಡೆಂಟ್ ಆಗಿ ನೇಮಕವಾದರು. ತದನಂತರ, ೧೮೦೭ ರಲ್ಲಿ ಗ್ವಾಲಿಯರ್ ನಗರದಲ್ಲಿ ಮರಾಠಾ ಆಸ್ಥಾನದಲ್ಲಿ ಸೇರಿಕೊಂಡರು. ೧೮೦೮ ರಲ್ಲಿ ನೆಪೋಲಿಯನ್ ಭಾರತವನ್ನು ಆಕ್ರಮಿಸಲು, ಆಫ್ಘಾನಿಸ್ಥಾನದ 'ಶಾ ಶುಜ' ಎಂಬುವನ ಜೊತೆ ಸಂಧಾನದಲ್ಲಿದ್ದರು. ಅದನ್ನು ವಿಫಲ ಮಾಡುವ ನಿಟ್ಟಿನಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ನಂತರ ೧೮೧೧ ರಲ್ಲಿ ಪುಣೆಯ ಮರಾಠರ ಆಸ್ಠಾನಕ್ಕೆ ವಾಪಸ್ ಆದರು. ನವೆಂಬರ್ ೧೮೧೭,ರಲ್ಲಿ ಜರುಗಿದ ಬ್ಯಾಟಲ್ ಅಫ್ ಖಿರ್ಕಿ ಯಲ್ಲಿ ಪೇಷ್ವೆಯನ್ನು ಸೊಲಿಸಲು ಕಾರಣಕರ್ತರಾದರು. ೧೮೧೮ ರಲ್ಲಿ, ಧಕ್ಕನ್ ಗೆ ಕಮಿಶನರ್ ಆಗಿ ನೇಮಕರಾದರು. ನಂತರ, ೧೮೧೯ ಮತ್ತು ೧೮೨೭ ರವರೆಗೆ, ಬಾಂಬೆಯ ಗವರ್ನರ್ ಆಗಿ,ಸೇವೆಸಲ್ಲಿಸಿದರು. ಸತಾರ ರಾಜನಿಗೆ ಅವರ ಸಾಮ್ರಾಜ್ಯವನ್ನು ವಾಪಸ್ ಮಾಡಿದರು. ಹಲವು ಜಮೀನ್ದಾರರಿಗೆ ಜಮಿನ್ ವಾಪಸ್ ಕೊಟ್ಟಿದ್ದರು. ದೇವಸ್ಥಾನಗಳನ್ನು ಸಂಬಂಧಪಟ್ಟವರಿಗೆ ವಾಪಸ್ ಕೊಟ್ಟರು. ಹೀಗೆಮಾಡಿದ ಜನಹಿತ-ಕಾರ್ಯಗಳಿಂದ ಅವರ ಬಗ್ಗೆ ಗೌರವಾದರಗಳು ಹೆಚ್ಚಾದವು.

ಮುಂಬಯಿನಗರದಲ್ಲಿ, ಉಚ್ಚ ಶಿಕ್ಷಣ ಪದ್ಧತಿ ಪ್ರಾರಂಭ[ಬದಲಾಯಿಸಿ]

ಮುಂಬಯಿ ನಗರದಲ್ಲಿ ಉಚ್ಚ ಶಿಕ್ಷಣವನ್ನು ಪ್ರಥಮವಾಗಿ ಪ್ರಾರಂಭಿಸಿದರು. ಅದು ದೇಸಿ ಜನರಿಗೆ ಲಭ್ಯವಾಗುವಂತೆ ಮಾಡುವುದು ಅವರ ಆಸೆಯಾಗಿತ್ತು. ಆದರೆ, ಬ್ರಿಟಿಷ್ ಉನ್ನತ ಅಧಿಕಾರಿಗಳಿಗೆ ದೇಸಿಜನರಿಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ದೊರಕಿಸುವಲ್ಲಿ ಆಸಕ್ತಿಯಿರಲಿಲ್ಲ. ನಿಜವಾಗಿ ಹೇಳಬೇಕೆಂದರೆ, ಅವರು ಈ ವಿಚಾರವನ್ನು ತೀವ್ರವಾಗಿ ವಿರೊಧಿಸುತ್ತಿದ್ದರು. ಮುಂಬಯಿನಲ್ಲಿ ಪ್ರಾರಂಭವಾದ ಕಾಲೇಜಿನ ಹೆಸರನ್ನು ಗೌರವಾರ್ಥವಾಗಿ ಎಲ್ಫಿನ್ ಸ್ಟನ್ ಕಾಲೇಜ್ ಎಂದು ಕರೆಯಲಾಯಿತು.

"History of India," ಪುಸ್ತಕದ ರಚನಾಕಾರ,[ಬದಲಾಯಿಸಿ]

೧೮೨೭ ರಲ್ಲಿ ಯೂರೊಪ್ ಗೆ ವಾಪಸ್ಸಾದರು. ಮುಂಬಯಿನ ಗವರ್ನರ್ ಆಗಲು ಎರಡುಬಾರಿ ಕರೆಬಂದಾಗಲೂ ನಿರಾಕರಿಸಿದರು. ಅವರಿಗೆ ಮುಖ್ಯವಾಗಿ, ತಮ್ಮ ಪುಸ್ತಕ, " History of India " (1841) ( ೨ ಸಂಪುಟ) ಬರೆದು ಮುಗಿಸಲು ಆಸಕ್ತಿ ಹೆಚ್ಚಾಗಿತ್ತು. 'ಮಾಂಟ್ ಸ್ಟ್ಯು ಅರ್ಟ್ ಎಲ್ಫಿನ್ ಸ್ಟನ್' ರವರು ಅಂದಿನ ಮುಂಬಯಿನಗರದ ಬೆಳವಣಿಗೆಯಲ್ಲಿ ಸಕ್ರಿಯಪಾತ್ರವಹಿಸಿದ್ದರು.

ಮರಣ[ಬದಲಾಯಿಸಿ]

ನವೆಂಬರ್ ೨೦, ೧೮೫೯ ರಂದು,'ಮಾಂಟ್‌ಸ್ಟ್ಯು ಅರ್ಟ್ ಎಲ್ಫಿನ್ ಸ್ಟನ್' ರವರು ತಮ್ಮ ಇಂಗ್ಲೆಂಡ್ ದೇಶದ 'ಸರ್ರೆ', ಯಲ್ಲಿ ಮೃತರಾದರು.

ಉಲ್ಲೇಖಗಳು[ಬದಲಾಯಿಸಿ]

  1. Mountstuart Elphinstone ಮುಂಬಯಿನ ಗವರ್ನರ್, 'ಮಾಂಟ್‌ಸ್ಟ್ಯು ಅರ್ಟ್ ಎಲ್ಫಿನ್ ಸ್ಟನ್'

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  • [J.S. Cotton, Mountstuart Elphinstone, ("Rulers of India" series)(1892)],
  • [T.E. Colebrooke, Life of Mountstuart Elphinstone (1884)]
  • [G.W. Forrest, Official Writings of Mountstuart Elphinstone (1884)]
  • [Montstuart Elphinstone (GFDL site)]
  • [This article incorporates text from the Encyclopædia Britannica, Eleventh Edition, a * publication now in the public domain.]