ವಿಷಯಕ್ಕೆ ಹೋಗು

ಮಹಿಳಾ ವೈಶಿಷ್ಟ್ಯ ಸೇವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Women's Feature Service
ಸ್ಥಾಪನೆಯ ಇಸವಿ1978
ದೇಶIndia
ಭಾಷೆEnglish
ಜಾಲತಾಣweb.archive.org/web/20061202205736/http://www.wfsnews.org/

ವುಮೆನ್ಸ್ ಫೀಚರ್ ಸರ್ವೀಸ್ (ಡಬ್ಲ್ಯುಎಫ್ಎಸ್) ಎಂಬುದು ಭಾರತದ ರಾಜಧಾನಿ ನವದೆಹಲಿಯಲ್ಲಿರುವ ಭಾರತೀಯ ಮಹಿಳಾ ಸುದ್ದಿ ಸಂಸ್ಥೆ ಮತ್ತು ನಿಯತಕಾಲಿಕ. ಯುನೆಸ್ಕೋ[] ದಿಂದ 1978ರಲ್ಲಿ ಸ್ಥಾಪಿಸಲ್ಪಟ್ಟ ಈ ಸಂಸ್ಥೆಯು ಚಲನಚಿತ್ರ ಮತ್ತು ಕಲೆಗಳಂತಹ ಜನಪ್ರಿಯ ಕ್ಷೇತ್ರಗಳಲ್ಲಿ ಮಹಿಳೆಯರು ಮತ್ತು ಮಹಿಳೆಯರಿಗೆ ಸಂಬಂಧಪಟ್ಟಂತಹ ಹಲವಾರು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ತನ್ನ ಗಮನಹರಿಸುತ್ತದೆ.

"ಮಹಿಳಾ ಪತ್ರಿಕಾ ಸಂಸ್ಥೆಗಳು" ಎಂಬ ಪುಸ್ತಕದ 1881-1999 ಅಧ್ಯಾಯದಲ್ಲಿ WFSಅನ್ನು "ಮಹಿಳೆಯರೇ ನಿರ್ವಹಿಸುವ ಜಾಗತಿಕ ಸುದ್ದಿ ಸಂಸ್ಥೆ" ಎಂದು ಪರಿಗಣಿಸುತ್ತದೆ. WFS ದಕ್ಷಿಣ ಗೋಳಾರ್ಧದ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಸುದ್ಧಿಗಳನ್ನು ಬಿತ್ತರಿಸುವಲ್ಲಿ ಪರಿಣತಿ ಹೊಂದಿದೆ" ಎಂದು ವಿವರಿಸುತ್ತದೆ.[]

ಪೀಪಲ್ & ಪ್ಲಾನೆಟ್ ಸಂಸ್ಥೆ WFS ಬಗ್ಗೆ ಹೀಗೆ ಅಭಿಪ್ರಾಯ ಪಡುತ್ತದೆ.

ದೆಹಲಿ ಮೂಲದ WFS ಮಹಿಳೆಯರ ಸಂತಾನೋತ್ಪನ್ನಕ್ಕೆ ಮತ್ತು ಸಂಬಂಧಿಸಿದ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗೆಗಿನ ಲೇಖನಗಳನ್ನು ಪ್ರಕಟಿಸುತ್ತದೆ.

WFS ಲಿಂಗ ತಾರತಮ್ಯವನ್ನು ನಿವಾರಿಸುವ ಮತ್ತು ಮಹಿಳೆಯರ ಸಬಲೀಕರಣಕ್ಕೆ ಸಂಬಂಧಿಸಿದ ಸುದ್ದಿಗಳು, ವಿಷಯಗಳು ಮತ್ತು ಅಭಿಪ್ರಾಯಗಳನ್ನು ಒಳಗೊಂಡ ಲೇಖನಗಳನ್ನು ಪ್ರಕಟಿಸುತ್ತದೆ. ಇದರಲ್ಲಿ ಪ್ರತೀ ವಾರ ವಿಶ್ವದ ಹಲವೆಡೆಯ ತಾಜಾ ಸುದ್ದಿಗಳನ್ನು ಬಿತ್ತರಿಸುತ್ತದೆ. WFS ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳನ್ನು ಬೇರೆ ಪ್ರಕಟಣೆಗಳು ಮತ್ತು ವೆಬ್ ತಾಣಗಳಿಗೆ ತಲುಪಿಸುತ್ತದೆ ಎಂದೂ ತಿಳಿಸುತ್ತದೆ.[]

ಡಬ್ಲ್ಯುಎಫ್ಎಸ್ ಪ್ರತೀ ವರ್ಷ ೨೫೦ ರಿಂದ ೩೦೦ ಸುದ್ದಿಗಳನ್ನು ಪ್ರಮುಖ ಸುದ್ದಿ ವಾಹಿನಿಗಳಿಗಾಗಿ ಉತ್ಪಾದಿಸುತ್ತದೆ. ಇದು ಸುದ್ದಿಯನ್ನು ಸರಬರಾಜು ಮಾಡುವ ಪ್ರಮುಖ ಸಂಸ್ಥೆಗಳೆಂದರೆ ಹಿಂದೂಸ್ತಾನ್ ಟೈಮ್ಸ್ ಆಫ್ ಇಂಡಿಯಾ, ಫಾರ್ ಈಸ್ಟರ್ನ್ ಎಕನಾಮಿಕ್ ರಿವ್ಯೂ ಆಫ್ ಹಾಂಗ್ ಕಾಂಗ್, ದಿ ಮೆನ್ಸ್ ಝೋನ್ ಆಫ್ ದಿ ಫಿಲಿಪೈನ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ನ ಚಿಕಾಗೊ ಟ್ರಿಬ್ಯೂನ್ ಮುಂತಾದವು.[]

ಉಲ್ಲೇಖಗಳು

[ಬದಲಾಯಿಸಿ]
  1. Dissertation abstracts international: The humanities and social sciences. University Microfilms International. 1991. Retrieved 18 June 2012.
  2. ೨.೦ ೨.೧ Byerly, Carolyn M. (2000). "Women's Feature Service, 1978–Present". In Burt, Elizabeth V. (ed.). Women's Press Organizations, 1881-1999. Greenwood Publishing Group. pp. 265–272. ISBN 978-0-313-30661-7.
  3. "Women's Feature Service". People & Planet. Archived from the original on 27 ಫೆಬ್ರವರಿ 2024. Retrieved 18 June 2012.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]