ಮಹಾದೇವಿತಾಯಿ

ವಿಕಿಪೀಡಿಯ ಇಂದ
Jump to navigation Jump to search

ಮಹಾದೇವಿತಾಯಿಯವರು ಭಾರತದ ಸ್ವಾತಂತ್ರ ಹೋರಾಟಗಾರರಲ್ಲಿ ಒಬ್ಬರು.

ಬದುಕು[ಬದಲಾಯಿಸಿ]

೧೯೦೬ರಲ್ಲಿ ಉತ್ತರ ಕನ್ನಡದ ಸಿದ್ದಾಪುರದಲ್ಲಿ ಜನಿಸಿದರು. ಮಹಾತ್ಮಾ ಗಾಂಧಿಯವರಿಂದ ಪ್ರೇರಿತರಾಗಿ, ಅವರ ಅನುಯಾಯಿಯಾಗಿ ೧೯೩೦ರಲ್ಲಿ ಇವರು ಸ್ವಾತಂತ್ರ ಚಳುವಳಿಯಲ್ಲಿ ಪಾಳ್ಗೊಂಡರು. ೧೦೧ ವರ್ಷಗಳ ತುಂಬು ಜೀವನ ನಡೆಸಿದ ಇವರು, ಆಗಸ್ಟ್ ೬,೨೦೦೬ರಲ್ಲಿ ನಿಧನರಾದರು. ಇವರು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆಯವರ ಸೋದರಿ.(ರಾಮಕೃಷ್ಣ ಹೆಗಡೆ ಅವರ ದೊಡ್ಡಪ್ಪ ಕೃಷ್ಣಯ್ಯ ಸುಬ್ಬಣ್ಣ ಹೆಗಡೆ ಅವರ ಮಗಳು). .


ತಮ್ಮ ಒಂಬತ್ತನೇ ವಯಸ್ಸಿಗೆ ವಿಧವೆಯಾದ ಮಹಾದೇವಿತಾಯಿ, ಮಹಾತ್ಮಾ ಗಾಂಧೀಜಿಯವರ ಅನುಯಾಯಿಯಾಗಿ ೧೯೩೦ರಲ್ಲಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಆಚಾರ್ಯ ವಿನೋಬಾ ಭಾವೆ ಕೈಗೊಂಡಿದ್ದ ಭೂದಾನ ಚಳವಳಿಯಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸ್ವಾತಂತ್ರಾನಂತರ ಇವರು ಸಮಾಜ ಸೇವಕಿಯಾಗಿ ಸೇವೆಸಲ್ಲಿಸಿದರು.

ನಿಧನ[ಬದಲಾಯಿಸಿ]

ಇವರು ೬.೮.೨೦೦೬ ರಂದು ನಿಧನರಾದರು.ರಾಮಕೃಷ್ಣ ಹೆಗಡೆ ಅವರು ವಿನೋಬಾ ಭಾವೆ ಅವರ ಆಶ್ರಮದ ಪ್ರಭಾವಕ್ಕೆ ಒಳಗಾಗುವಲ್ಲಿ ಮಹಾದೇವಿತಾಯಿ ಪ್ರೇರಣೆಯಾಗಿದ್ದರು. ೨೦೦೬ ಜನವರಿ ೧೦ರಂದು ಅವರಿಗೆ ನೂರು ತುಂಬಿತ್ತು. ಮೃತರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಪೀಣ್ಯ ಸಮೀಪವಿರುವ ವಿನೋಬಾ ಆಶ್ರಮ ವಿಶ್ವನೀಡಂ ಟ್ರಸ್ಟ್ನಲ್ಲಿ ನೆರವೇರಿತು.

ಪ್ರಶಸ್ತಿಗಳು[ಬದಲಾಯಿಸಿ]

  • ಲಕ್ಷ್ಮಮ್ಮ ಸ್ಮಾರಕ ಪ್ರಶಸ್ತಿ
  • ಭರತ ಭೂಮಿ ಸೇವಾಶ್ರೀ ಬಿರುದು
  • ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ
  • ಸ್ವಾತಂತ್ರ್ಯ ಪ್ರಶಸ್ತಿ
  • ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಎಂಬ ಬಿರುದು

ಸನ್ಮಾನಗಳು[ಬದಲಾಯಿಸಿ]

  • ಮಹಿಳಾ ಹಿಂದಿ ಪ್ರಚಾರ ಸಭಾ, ಮಾನವ ಧರ್ಮ ಅಂತರರಾಷ್ಟ್ರೀಯ ಪ್ರತಿಷ್ಟಾನ, ದಿ.ತಾಳೆಕೆರೆ ಸುಬ್ರಹ್ಮಣ್ಯ ಜನ್ಮಶತಾಬ್ದಿ ಉತ್ಸವಗಲಲ್ಲಿ ಸನ್ಮಾನಿಸಲಾಗಿದೆ.

ಕೃತಿಗಳು[ಬದಲಾಯಿಸಿ]

ದೇವತಾತ್ಮ(ಪ್ರವಾಸ ಸಾಹಿತ್ಯ)

ಹೊರಸಂಪರ್ಕಗಳು[ಬದಲಾಯಿಸಿ]