ಮಹಾಗನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಹಾಗನಿ
Tree in new leaves I IMG 6222.jpg
ಮಹಾಗನಿ ಮರ, ಭಾರತ
Conservation status
Egg fossil classification
Kingdom:
plantae
Division:
Class:
Order:
Family:
Genus:
Species:
S. mahagoni
Binomial nomenclature
ಸ್ವಿಟೆನಿಯ ಮಹಾಗನಿ

ಮಹಾಗನಿ ಮೂಲತಃ ಅಮೆರಿಕಾದ ಫ್ಲೋರಿಡ,ಜಮೈಕ,ಕ್ಯೂಬಪ್ರದೇಶಗಳ ಮರ.ಭಾರತದಲ್ಲಿ ಮೊದಲಿಗೆ ಕಲ್ಕತ್ತರಾಯಲ್ ಬಟಾನಿಕಲ್ ಗಾರ್ಡನ್ಸ್ನಲ್ಲಿ ಬೆಳೆಸಿದರು. ಈಗ ಭಾರತದೆಲ್ಲೆಡೆ ಸಾಲು ಮರಗಳಾಗಿ,ಸಾಮಾಜಿಕ ಅರಣ್ಯ ಕಾರ್ಯಕ್ರಮದಡಿಯಲ್ಲಿ ಹಲವೆಡೆ ಬೆಳೆಸಿರುತ್ತಾರೆ.

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಇದು ಮೆಲಿಯೆಸಿ ಕುಟುಂಬಕ್ಕೆ ಸೇರಿದ್ದು,ಸ್ವೆಟೆನಿಯ ಮಹಾಗನಿ (Swietenia Mahagoni)ಎಂದು ಸಸ್ಯಶಾಸ್ತ್ರೀಯ ಹೆಸರು.

ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]

ಇದು ದೊಡ್ಡ ಪ್ರಮಾಣದ ಮರ.ಚುರುಕು ಬೆಳವಣಿಗೆ ಇದೆ.ನೇರವಾದ ಬೆಳವಣಿಗೆ.ಇದರ ದಾರುವು ನಸುಗೆಂಪು ಬಣ್ಣ ಹೊಂದಿದ್ದು ಅಲಂಕಾರಯುತವಾಗಿರುತ್ತದೆ.ಒಳ್ಳೆಯ ಹೊಳಪು ಬರುತ್ತದೆ.ಮರಗೆಲಸಕ್ಕೆ ಸುಲಭವಾಗಿದೆ.

ಉಪಯೋಗಗಳು[ಬದಲಾಯಿಸಿ]

ಇದರ ದಾರುವು ಅಲಂಕಾರಯುತವಾಗಿರುವುದರಿಂದ ಒಳಾಂಗಣ ಅಲಂಕಾರದಲ್ಲಿ ಉಪಯೋಗಿಸಲ್ಪಡುತ್ತದೆ.ಪದರ ಹಲಗೆಗಳ ತಯಾರಿಕೆಯಲ್ಲಿ,ಪಿಠೋಪಕರಣಗಳ ತಯಾರಿಕೆಯಲ್ಲಿ ಉಪಯೋಗದಲ್ಲಿದೆ.

ಅಧಾರ ಗ್ರಂಥಗಳು[ಬದಲಾಯಿಸಿ]

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

"https://kn.wikipedia.org/w/index.php?title=ಮಹಾಗನಿ&oldid=1132685" ಇಂದ ಪಡೆಯಲ್ಪಟ್ಟಿದೆ