ಮಲ್ಲಿಕಾರ್ಜುನ ಮನ್ಸೂರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ. ಮಲ್ಲಿಕಾರ್ಜುನ ಮನಸೂರ’ ಭಾರತದ ಸರ್ವೋಚ್ಚ ಹಿಂದುಸ್ಥಾನಿ ಗಾಯಕರಲ್ಲಿ ಅಗ್ರಗಣ್ಯರು ಅವರು ಈ ಶತಮಾನದ ಸ್ವರಯೋಗಿ.ಆರು ದಶಕಗಳಿಗೂ ಮಿಕ್ಕಿ ಸಂಗೀತ ಲೋಕವನ್ನಾಳಿದ ಸ್ವರ ಚಕ್ರವರ್ತಿ ‘ಫಕೀರ ಆಫ್‌ ಖಯ್ಯಲ್‌’, ‘ಗಾಣ್ಯಾತ ರಾಹಣಾರ ಮಾಣೂಶ’ ಎಂಬ ಏಗ್ಗಳಿಕೆಗೆ ಪಾತ್ರರಾದವರು.ರಾಷ್ಟ್ರಮಟ್ಟದಲ್ಲಿ ಕರ್ನಾಟಕಕ್ಕೆ ಕೀರ್ತಿತಂದ ರಾಷ್ಟ್ರೀಯ ಕನ್ನಡಿಗ. ಸಂಗೀತಾಲಾಪವೇ ಜೀವನದುಸಿರೆಂದು ಬಗೆದ ‘ಸಂಗೀತಗಾರರ ಸಂಗೀತಗಾರ.ಪಂ. ಮಲ್ಲಿಕಾರ್ಜುನರು ಜನಿಸಿದ್ದು ಧಾರವಾಡ ಸಮೀಪದ ‘ಮನಸೂರ’ ಎಂಬ ಗ್ರಾಮದಲ್ಲಿ ೧೯೧೧ರ ಡಿಸೆಂಬರ್ ೩೧ ರಂದು.ತಂದೆ ಭೀಮರಾಯಪ್ಪ ಊರಿನ ಗೌಡರು. ನಾಟಕ-ಸಂಗೀತದ ಪರಮಭಕ್ತರು. ತಾಯಿ ನೀಲಮ್ಮ ಜನಪದ ಗೀತೆಗಳ ಭಕ್ತೆ.

ಗ್ರಾಮದಲ್ಲಿ ನಡೆದ ನಾಟಕ ತಾಲೀಮಿನತ್ತ ಬಾಲಕ ಮಲ್ಲಿಕಾರ್ಜುನನ ಲಕ್ಷ್ಯ ಹರಿಯಿತು. ಅಣ್ಣ ಬಸವರಾಜನೊಡನೆ ಶಾಲೆಗೆ ವಿದಾಯ ಹೇಳಿ ವಾಮನರಾವ್‌ ಮಾಸ್ತರ ನಾಟಕ ಕಂಪೆನಿಯಲ್ಲಿ ಸೇರ್ಪಡೆಯಾದ. ಮಧುರ ಕಂಠದಿಂದ ಗ್ವಾಲಿಯರ್ ಘರಾಣಿಯ ಪಂ. ನೀಲಕಂಠ ಬುವಾರ ಮನಗೆದ್ದ. ಮಿರಜಿಗೆ ಬಂದು ಅವರಲ್ಲಿ ನಾಲ್ಕಾರು ವರ್ಷ ಸಂಗೀತ ಕಲಿತ. ಮುಂದೆ ಮುಂಬೈಗೆ ಹೋದ ಮಲ್ಲಿಕಾರ್ಜುನ ಎಚ್‌.ಎಂ.ವಿ. ಕಂಪನಿಗೆ ಅನೇಕ ರಾಗ ಹಾಡಿದ ಜೈಪುರ ಕಿರಾಣಿಯ ವಿಖ್ಯಾತ ಗಾಯಕ ಉಸ್ತಾದ್‌ ಅಲ್ಲಾದಿಯಾ ಖಾನ್‌ ಮಕ್ಕಳಾದ ಮಂಜಿಖಾನ್‌ ನಂತರ ಬುರ್ಜಿಖಾನರಲ್ಲಿ ಸಂಗೀತದ ಉನ್ನತ ಶಿಕ್ಷಣ ಪಡೆದು ವಿಖ್ಯಾತ ಜೈಪುರು – ಅತ್ರೌಲಿ ಗಾಯಕರೆನಿಸಿದರು.

ಶೈಲಿಯ ಮೌಲಿಕತೆಗಾಗಿ, ವಿಶಿಷ್ಟ ರಾಗಗಳ ಆಯ್ಕೆ ಭಾವಾಭಿವ್ಯಕ್ತತೆಯ ಅಸಾಧಾರಣ ಸಾಮರ್ಥ್ಯ, ಪರಿಶುದ್ಧ ಹಾಗೂ ಸೂಕ್ಷ್ಮತೆಗಳಿಗೆ ಪಂ. ಮಲ್ಲಿಕಾರ್ಜುನ ಮನಸೂರ ಅವರ ಗಾಯನ ಹೆಸರು ಪಡೆದಿದೆ. ಗ್ವಾಲಿಯರ್ ಘರಾಣಿಯ ದೃಢ ಖಚಿತತೆಯೊಂದಿಗೆ ಅತ್ರೋಲಿ ಘರಾಣಿಯ ಸೂಕ್ಷ್ಮಲಯ ಗತಿಗಳ ಸಂಕೀರ್ಣತೆಯ ಸಮಿಲಾಪವಿದೆ. ಅವರು ಹಾಡುವ ರಾಗಗಳು ತಾಲದ ಜೀವಂತ ಅಸ್ತಿವಾರದ ಮೇಲೆ ಅಸಂಖ್ಯ ಶಿಲ್ಪಗಳಿಂದ ಮೆರೆಯುವ ಸ್ವರಸೌಧಗಳು

ಪ್ರಶಸ್ತಿಗಳು[ಬದಲಾಯಿಸಿ]

ಅವರಿಗೆ ದೊರೆತ ಪ್ರಶಸ್ತಿ ಪುರಸ್ಕಾರಗಳು ಅನಂತ. ಗದುಗಿನ ಸಂಗೀತಾಸಕ್ತರ ಬಳಗದ ‘ಸಂಗೀತ ರತ್ನ (೧೯೩೦), ‘ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ’ ಪಡೆದ ‘ಮೊದಲ ಹಿಂದುಸ್ಥಾನಿ ಗಾಯಕ’ (೧೯೬೦) ‘ಕರ್ನಾಟಕ ಸಾರ್ವಜನಿಕ ಸೇವಾ ಪ್ರಶಸ್ತಿ’ (೧೯೬೮), ‘ಪದ್ಮಶ್ರೀ’ (೧೯೭೦), ‘ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ’ (೧೯೭೬), ‘ಪದ್ಮಭೂಷಣ’ (೧೯೭೬), ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ (೧೯೭೫), ಮಧ್ಯ ಪ್ರದೇಶ ಸರ್ಕಾರದ ಕಾಳಿದಾಸ ಸಮ್ಮಾನ’ (೧೯೮೧), ಕೋಲ್ಕತ್ತಾದ ವಿಶ್ವಭಾರತಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ (೧೯೭೫), ಮಧ್ಯ ಪ್ರದೇಶ ಸರ್ಕಾರದ ಕಾಳಿದಾಸ ಸಮ್ಮಾನ’ (೧೯೮೧), ಕೋಲ್ಕತ್ತಾದ ವಿಶ್ವಭಾರತಿ ವಿಶ್ವವಿದ್ಯಾಲಯದ ಪ್ರಪ್ರಥಮ ‘ದೇಶಿಕೋತ್ತಮ ಪ್ರಶಸ್ತಿ’ (೧೯೮೮), ‘ಉಸ್ತಾದ್‌ ಹಾಫೀಜ್‌ ಅಲಿಖಾನ್‌ ಪ್ರಶಸ್ತಿ’ (೧೯೯೧) ಕರ್ನಾಟಕ ಸರ್ಕಾರದ ‘ವಿಧಾನ ಪರಿಷತ್‌ ಸದಸ್ಯತ್ವದ ಗೌರವ ‘ಪದ್ಮ ವಿಭೂಷಣ ಪ್ರಶಸ್ತಿ- ಮುಂತಾದ ಪ್ರಶಸ್ತಿ ಪುರಸ್ಕಾರ ಅವರಿಗೆ ಸಂದಿವೆ. ಅ.ನ.ಕೃ. ಹಾಘೂ ಶಿ.ಶಿ. ಬಸವನಾಳರ ಪ್ರೇರಣೆ ಧಾರವಾಡ ಮುರುಘಾ ಮಠದ ಪೂಜ್ಯ ಶ್ರೀ ಮೃತ್ಯುಂಜಯ ಅಪ್ಪಗಳ ಆಶೀರ್ವಾದದ ಬಲದಿಂದ ಬಯಾಲದಷ್ಟೇ ಎತ್ತರವನ್ನು ವಚನಗಾಯನದಲ್ಲೂ ಪಡೆದವರು. ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ‘ಸಂಗೀತ ರತ್ನ’ ಗೌರವ ಗ್ರಂಥ ಅರ್ಪಿಸಿದೆ. ‘ನನ್ನ ರಸ ಯಾತ್ರೆ’ ಅವರ ಆತ್ಮಚರಿತ್ರೆ ಗ್ರಂಥ. ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ಅಧ್ಯಯನ ಪೀಠದ ಮೊದಲ ನಿರ್ದೇಶಕರಾಗಿ ಸೇವೆ. ೧೯೯೨ರ ಸೆಪ್ಟೆಂಬರ್ ೧೨ರಂದು ಲಿಂಗೈಕ್ಯರಾದ ಡಾ. ಮಲ್ಲಿಕಾರ್ಜುನ ಮನಸೂರ ಅವರ ಶಿಷ್ಯ ಸಂಪತ್ತು ಅಪಾರ. ಅವರ ಶಿಷ್ಯರಲ್ಲಿ ಪಂ ಸಿದ್ಧರಾಮ ಜಂಬಲದಿನ್ನಿ ಪಂ. ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ. ಡಾ. ರಾಜಶೇಖರ ಮನಸೂರ (ಮಗ), ಶ್ರೀಮತಿ ನೀಲಮ್ಮ ಕೊಡ್ಲಿ (ಮಗಳು) ಪ್ರೊ. ಅಜ್ಜಣ್ಣ ಪಾಟೀಲ (ಅಳಿಯ), ಬಿ.ಸಿ. ಪಾಟೀಲ, ಪ್ರೊ. ರಾಜೀವ ಪುರಂದರೆ, ಗೀತಾ ಕುಲಕರ್ಣಿ, ಶಂಕರ ಮೊಕಾಶಿ ಪುಣೆಕರ, ಗೋದೂತಾಯಿ ಹಾನಗಲ್ಲ, ವಾಯ್‌, ಎಫ್‌, ಬಂಗ್ಲೇದ ಮುಂತಾದವರು ಸಂಗೀತ ಕ್ಷೇತ್ರದಲ್ಲಿ ಹೆಸರು ಪಡೆದಿದ್ದಾರೆ. ಕರ್ನಾಟಕ ಸರ್ಕಾರ ಧಾರವಾಡದಲ್ಲಿ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸ್ಥಾಪಿಸಿ, ಪ್ರತಿ ವರ್ಷ ರಾಷ್ಟ್ರ ಮಟ್ಟದ ಸಂಗೀತಗಾರರ ಮನಸೂರ ಸಮ್ಮಾನ ಪ್ರಶಸ್ತಿ ನೀಡುತ್ತಿದೆ.