ವಿಷಯಕ್ಕೆ ಹೋಗು

ಮಲೆ ಕುಡಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಲೆಕುಡಿಯ ಜನಾಂಗವು ಪ್ರಾಚೀನ ಜನಾಂಗಗಳಲ್ಲಿ ಒಂದು,ತುಳುನಾಡಿನ ಮೂಲ ನಿವಾಸಿಗಳು ಮಲೆಕುಡಿಯರು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹೆಚ್ಚಾಗಿ ಈ ಸಮುದಾಯದ ಜನರು ವಾಸವಾಗಿದ್ದಾರೆ ದಕ್ಷಿಣಕನ್ನಡ ಉಡುಪಿ, ಚಿಕ್ಕಮಗಳೂರು, ಮಡಿಕೇರಿ, ಕಾಸರಗೋಡು ಭಾಗಗಳಲ್ಲಿ ಮಲೆಕುಡಿಯ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕುಕ್ಕೆ ಸುಬ್ರಮಣ್ಯದಲ್ಲಿ ರಥ ಕಟ್ಟುವ ಕೆಲಸವನ್ನು ತುಳುನಾಡಿನ ಪ್ರಮುಖ ದೇವಾಲಯಗಳಲ್ಲಿ ದೇವರ ಸೇವೆಯನ್ನು ಮಾಡುವುದು ಕೂಡ ಇದೇ ಸಮುದಾಯದ ಜನರು, ಕುಕ್ಕೆ ಸುಬ್ರಮಣ್ಯದಲ್ಲಿ ದೇವರು ಸಿಕ್ಕಿದ್ದೇ ಮಲೆಕುಡಿಯರಿಗೆ ಎಂಬ ಪ್ರತೀತಿ ಕೂಡ ಇದೆ ಹಾಗಾಗಿ ಮಲೆಕುಡಿಯರು ಇಲ್ಲದೆ ಅಲ್ಲಿ ಯಾವುದೇ ದೇವತಾ ಕಾರ್ಯ ರಥೋತ್ಸವ ನಡೆಯುವುದಿಲ್ಲ. ಶ್ರಮ ಜೀವಿಗಳಾದ ಇವರು ಕಾಡೋತ್ಪತ್ತಿ ಸಂಗ್ರಹ, ನಾಟಿ ಮದ್ದು ನೀಡುವುದು, ಮತ್ತು ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಇತ್ತೀಚಿನ ದಿನಗಳಲ್ಲಿ  ಈ ಸಮಾಜವು ಅನೇಕ ಮುಂದುವರಿದ ಸಮುದಾಯಗಳಿಗೆ ಪೈಪೋಟಿ ನೀಡುವಂತೆ ಅಭಿವೃದ್ಧಿ ಆಗುತ್ತಿದೆ ಬ್ಯಾಂಕ್ ಉದ್ಯೋಗಿಗಳು,ಸರಕಾರಿ ನೌಕರರು, ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಸದಸ್ಯರು ಈ ಸಮುದಾಯದಲ್ಲಿ ಇದ್ದಾರೆ, ಹುಲಿ ಯೋಜನೆಯಂತಹ ಜನವಿರೋಧಿ ಯೋಜನೆಗಳು ಪ್ರಸ್ತಾಪ ಆದಾಗ ಶ್ರೀಧರ್ ಗೌಡ ರಂತಹ ಮಲೆಕುಡಿಯ ಸಮುದಾಯದ ಮುಖಂಡರು ದೊಡ್ಡ ಮಟ್ಟದಲ್ಲಿ ಧ್ವನಿಯೆತ್ತಿದ್ದಾರೆ.  

ಪರಿವಿಡಿ

[ಬದಲಾಯಿಸಿ]

೧)ಕಲೆ ೨)ನಂಬಿಕೆ ೩)ಆಚರಣೆ ೪)ಪಂಗಡ