ಮಲೆಯೂರು ಗುರುಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಲೆಯೂರು ಗುರುಸ್ವಾಮಿ ಕನ್ನಡ ಸಾಹಿತ್ಯದಲ್ಲಿ ವಿಮರ್ಶಕ, ಕಾದಂಬರಿಕಾರ ಮತ್ತು ಸಂಪಾದಕರಾಗಿ ಹಲವಾರು ಗ್ರಂಥಗಳನ್ನು ಸಂಪಾದನೆ ಮಾಡಿರುತ್ತಾರೆ.

ಪರಿಚಯ[ಬದಲಾಯಿಸಿ]

  • ಮಲೆಯೂರು ಗುರುಸ್ವಾಮಿಯವರು ಚಾಮರಾಜನಗರ ಜಿಲ್ಲೆಯ ಮಲೆಯೂರು ಗ್ರಾಮದಲ್ಲಿ 1947ರಲ್ಲಿ ಹುಟ್ಟಿದವರು. ನಂತರ ಚಾಮರಾಜನಗರದಲ್ಲಿ ತಮ್ಮ ಮುಂದಿನ ಶಿಕ್ಷಣವನ್ನು ಮಾಡಿ ನಂತರ ಉನ್ನತ ಶಿಕ್ಷಣವನ್ನು ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಕನ್ನಡದಲ್ಲಿ ಉನ್ನತ ಶಿಕ್ಷಣ ಪದವಿಯನ್ನು ಪಡೆದು ನಂತರ ಜೆ.ಎಸ್.ಎಸ್. ಶಿಕ್ಷಣ ಸಂಸ್ಧೆಯಲ್ಲಿ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಿ ಸದ್ಯ ನಿವೃತ್ತಿ ಜೀವನವನ್ನು ಮೈಸೂರು ನಗರದಲ್ಲಿ ಕಳೆಯುತ್ತಿದ್ದು.
  • ಕನ್ನಡ ಸಾಹಿತ್ಯದಲ್ಲಿ ಹಲವಾರು ಗ್ರಂಥಗಳನ್ನು ಸಂಪಾದನೆ ಮಾಡಿರುತ್ತಾರೆ ಹಲವು ಲೇಖನಗಳನ್ನು ಬರೆದಿರುತ್ತಾರೆ. ಇವರು ಬಹಳ ವರುಷ ಚಾಮರಾಜನಗರ ಮೈಸೂರು ನಂಜನಗೂಡುಗಳಲ್ಲಿ ಕೆಲಸ ಮಾಡಿರುತ್ತಾರೆ. ನಂಜನಗೂಡಿನಲ್ಲಿ ತಾಲ್ಲೂಕಿನ ಸಾಂಸ್ಕ್ರತಿಕ ಇತಿಹಾಸದ ಬಗ್ಗೆ ಜಂಗಮ ಎಂಬ ಕೃತಿಯನ್ನು ಸಂಪಾದನೆಯನ್ನು ಮಾಡಿ ಅಪಾರ ಅಬಿಮಾನಿಗಳನ್ನು ಪಡೆದಿದ್ದಾರೆ.
  • ವಿಶೇಷವೆಂದರೆ ಇವರು ಯಾವುದೇ ವಿಷಯದ ಬಗ್ಗೆ ಮಾತನಾಡಲು ಪ್ರಾರಂಭಿಸಿದರೆ ಆ ಮೂಲಕ ಜನರನ್ನು ಮಂತ್ರ ಮುಗ್ದಗೂಳಿಸುತ್ತಾರೆ. ಇವರ ಅನೇಕ ಶಿಷ್ಯರು ಕೂಡ ಗುರುವಿನ ರೀತಿಯಲ್ಲಿಯೇ ಅನೇಕ ಶಿಕ್ಷಣ ಸಂಸ್ಧೆಗಳಲ್ಲಿ ಉಪನ್ಯಾಸಕ ರಾಗಿರುತ್ತಾರೆ. ಪ್ರಸ್ತುತ ಅವರು ವಿಶ್ರಾಂತ ಪ್ರಾಧ್ಯಾಪಕರು.
  • ಮಲೆ ಮಹದೇಶ್ವರ ಬೆಟ್ಟದ ಜಾನಪದ ಸಂಶೋಧನಾ ಕೇಂದ್ರದ ಸದಸ್ಯರು, ಕರ್ನಾಟಕ ರಾಜ್ಯ ಗೆಜೆಟಿಯರ್ಸ್‌ದಸ್ಯರು, ಗ್ರಾಮ ವಿಶ್ವಕೋಶದ ಜಿಲ್ಲಾ ಸಂಪಾದಕರು. ಮೈಸೂರು ವಿಶ್ವವಿದ್ಯಾನಿಲಯದ ಬಸವ ಪೀಠದ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ.

ಜನನ/ಜೀವನ[ಬದಲಾಯಿಸಿ]

  • ಪ್ರೊ.ಮಲೆಯೂರು ಗುರುಸ್ವಾಮಿ ಅವರು 1947ರ ಆಗಸ್ಟ್ 1ರಂದು ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದ ನಿವಾಸಿಗಳಾದ ಮರಮ್ಮ ಹಾಗು ಶಿವಣ್ಣ ದಂಪತಿಗಳ ಮಗನಾಗಿ ಜನಿಸಿದರು. ಪತ್ನಿ ಕೆ.ಎಸ್.ಜಯಂತಿ, ಪುತ್ರಿ ಜಿ.ಅನನ್ಯ ಇದ್ದಾರೆ. ಪ್ರಸ್ತುತ ಮೈಸೂರಿನ ಹಿನಕಲ್‌ನ ಆಶ್ರಮ ರಸ್ತೆಯ ಮಹಾಮನೆಯಲ್ಲಿ ವಾಸವಿರುವ ಗುರುಸ್ವಾಮಿ ಅವರು, ಎಂ.ಎ. ವ್ಯಾಸಂಗ ಮಾಡಿದ್ದು, ಜೆಎಸ್‌ಎಸ್ ಸಂಸ್ಥೆಯಲ್ಲಿ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
  • ಗುರುಸ್ವಾಮಿ ಅವರ ಸೃಜನಶೀಲ ಕೃತಿಗಳಾದ ಮಹಾಯಾತ್ರಿಕ, ಅಪ್ರತಿಮವೀರ, ಚರಿತ್ರೆಯ ಪುಟಕ್ಕೆ ಒಂದು ಟಿಪ್ಪಣಿ ಕಾದಂಬರಿಗಳು, ಮಾತೆಂಬುದು ಜ್ಯೋತಿರ್ಲಿಂಗ ವಚನ ಸಾಹಿತ್ಯ, ಶ್ರೀ ಕಾರ್ಯಸ್ವಾಮಿ ಮಠದ ಕ್ಷೇತ್ರ ಚರಿತ್ರೆ, ಶರಣ ಕಿರಣ ವ್ಯಕ್ತಿ ಚಿತ್ರ, ಪ್ರಭುಲಿಂಗ ಲೀಲೆ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ.
  • ಮೂಡಲ ಸೀಮೆಯ ಕಥೆಗಳು, ಕಾಡಂಚಿನ ಕೋಗಿಲೆಗಳ ಕಲರವ, ಕಪಿಲಾ ನದಿಯ ಎಡಬಲದಿ, ಹೆಜ್ಜಿಗೆ ಅಕ್ಕ, ಛಂದೋನಿಜಗುಣ, ರಾಜಪಥ, ಸೋಮಸಿರಿ, ಶಿವಪ್ರಭೆ, ಶಿವಯೋಗ, ಹೊನ್ನಹೊಳೆ, ಶಿವಸಂಪದ ಸೇರಿದಂತೆ ಅನೇಕ ಅತ್ಯುತ್ತಮ ಕೃತಿಗಳನ್ನು ಮಲೆಯೂರು ಗುರುಸ್ವಾಮಿ ಅವರು ಸಂಪಾದಿಸಿದ್ದಾರೆ.[೧]

ಸಾಹಿತ್ಯ ಕೃತಿಗಳು[ಬದಲಾಯಿಸಿ]

ಕಾದಂಬರಿ[ಬದಲಾಯಿಸಿ]

  1. ಮಹಾಯಾತ್ರಿಕ,
  2. ಅಪ್ರತಿಮವೀರ,
  3. ಚರಿತ್ರೆಯ ಪುಟಕ್ಕೆ ಒಂದು ಟಿಪ್ಪಣಿ
  4. ಕಪಿಲೆ ಹರಿದಳು ಕಡಲಿಗೆ
  5. ಸಂಸ

ವಿಮರ್ಶಾ ಕೃತಿಗಳು[ಬದಲಾಯಿಸಿ]

  1. ಮಾತೆಂಬುದು ಜ್ಯೋತಿರ್ಲಿಂಗ ವಚನ ಸಾಹಿತ್ಯ,
  2. ಶ್ರೀ ಕಾರ್ಯಸ್ವಾಮಿ ಮಠದ ಕ್ಷೇತ್ರ ಚರಿತ್ರೆ,
  3. ಶರಣ ಕಿರಣ ವ್ಯಕ್ತಿ ಚಿತ್ರ,
  4. ಪ್ರಭುಲಿಂಗ ಲೀಲೆ

ಸಂಪಾದನೆ[ಬದಲಾಯಿಸಿ]

  1. ಮೂಡಲ ಸೀಮೆಯ ಕಥೆಗಳು,
  2. ಕಾಡಂಚಿನ ಕೋಗಿಲೆಗಳ ಕಲರವ,
  3. ಕಪಿಲಾ ನದಿಯ ಎಡಬಲದಿ,
  4. ಹೆಜ್ಜಿಗೆ ಅಕ್ಕ,
  5. ಛಂದೋನಿಜಗುಣ,
  6. ರಾಜಪಥ,
  7. ಸೋಮಸಿರಿ,
  8. ಶಿವಪ್ರಭೆ,
  9. ಶಿವಯೋಗ,
  10. ಹೊನ್ನಹೊಳೆ,
  11. ಶಿವಸಂಪದ

ಪ್ರಶಸ್ತಿ/ಪುರಸ್ಕಾರ[ಬದಲಾಯಿಸಿ]

ಮಲೆಯೂರು ಗುರುಸ್ವಾಮಿ ಅವರ ಸಾಹಿತ್ಯ ಕೃಷಿಗಾಗಿ ಅನೇಕ ಪ್ರಶಸ್ತಿ/ ಪುರಸ್ಕಾರಗಳು ದೊರೆತಿವೆ. ಅವುಗಳೆಂದರೆ-

  1. ಮಹಾಮನ, ಮಹಾಕವಿ ಷಡಕ್ಷರ ದೇವ ಸ್ಮಾರಕ ಪ್ರಶಸ್ತಿ,
  2. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,
  3. ರೋಟರಿ ರಾಜ್ಯೋತ್ಸವ ಪ್ರಶಸ್ತಿ,
  4. ೨೦೧೦ - ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.
  5. ೨೦೧೪ - ಚಾಮರಾಜನಗರ ಜಿಲ್ಲಾ ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಪ್ರೊ. ಮಲೆಯೂರು ಗುರುಸ್ವಾಮಿ ಆಯ್ಕೆಯಾಗಿದ್ದರು.
  6. 2017 ರ ಅಕ್ಟೋಬರ್ 22 ರಂದು 'ಮಲೆಯೂರು ನಮ್ಮವರು' ಮಗು 70' ಎಂಬ ಶೀರ್ಷಿಕೆಯಡಿ ಕಲಾಮಂದಿರ, ಮೈಸೂರುಇಲ್ಲಿ ಅಭಿನಂದನಾ ಕಾರ್ಯಕ್ರಮ.