ಮಧು ಸಿಂಘಾಲ್

ವಿಕಿಪೀಡಿಯ ಇಂದ
Jump to navigation Jump to search
'ಮಧು ಸಿಂಘಾಲ್'

ಕಣ್ಣಿನ 'ದೃಷ್ಟಿಮಾಂದ್ಯತೆ'ಯಿಂದ ನರಳುತ್ತಿರುವ 'ಮಧು ಸಿಂಘಾಲ್' ರವರು, 'ಮಿತ್ರ ಜ್ಯೋತಿಯೆಂಬ ಸಂಸ್ಥೆ'ಯ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಕೆಲಸಮಾಡುತ್ತಿದ್ದಾರೆ. ತಮ್ಮ ದುರದೃಷ್ಟವನ್ನೇ ಜರಿಯುತ್ತಾ ಜೀವನದುದ್ದಕ್ಕೂ ದುಃಖಮಯ ಜೀವನವನ್ನು ನಡೆಸುವ ಅನೇಕರಂತೆ ತಮ್ಮನ್ನು ವಿಧಿಯ ಶಾಪವೆಂದು,ಗೊಣಗದೆ, ಆ ಕಷ್ಟಗಳಿಂದ ಮೇಲೆದ್ದು, ಅವರಂತೆ ದುಃಕ ತಪ್ತರಾದ ಸಾವಿರಾರು ಜನರಿಗೆ ದಾರಿದೀಪವಾಗಿ ಜೀವನ ಸಂಘಷಣೆಯಲ್ಲಿ ಮುನ್ನುಗ್ಗುತ್ತಿರುವ 'ಮಧು ಸಿಂಘಾಲ್' ರನ್ನು ನೋಡಿ ಕಲಿಯಬೇಕಾದದ್ದು ಬಹಳವಿದೆ. ಮೊದಲು ಅವರು, 'ಬಿ.ಎ.ಪದವಿ'ಯನ್ನು ಗಳಿಸಿದರು. "The Best All Rounder Student" ಉಪಾಧಿಗೆ ಪಾತ್ರರಾದರು. ಸನ್, ೧೯೮೧ ರಲ್ಲಿ, ಹರ್ಯಾಣದ, ರೋಹ್ತಕ್ ನಲ್ಲಿರುವ, ಮಹರ್ಷಿ ದಯಾನಂದ್ ವಿಶ್ವವಿದ್ಯಾಲಯದ, 'ವೈಶ್ ಮಹಿಳೆಯರ ಕಾಲೇಜ್ ನಲ್ಲಿ, ೧೯೮೩ ರಲ್ಲಿ, ಅವರು, 'ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ'ದಲ್ಲಿ 'ಎಮ್.ಎ. ಪದವಿ'ಯಲ್ಲಿ ಮೊದಲ ವರ್ಷದಲ್ಲಿ ಪ್ರಧಮವಾಗಿ ತೇರ್ಗಡೆಯಾಗಿದ್ದಾರೆ. ಬೆಂಗಳೂರಿಗೆ ಹೋಗಿ, 'ಅಂಧರ ಅನೇಕ ತರಪೇತಿ ಕಮ್ಮಟ' ಗಳಲ್ಲಿ ಭಾಗವಹಿಸಿದರು. ಕರ್ನಾಟಕದ ರಾಜ್ಯಭಾಷೆ, ಕನ್ನಡವನ್ನು ಕಲಿತರು. ಸನ್. ೧೯೯೦ ರಲ್ಲಿ ಅವರಂತೆಯೇ ಅಂಧತ್ವದ ಅಭಿಶಾಪದಿಂದ ನೊಂದ ೮ ಜನ ಗೆಳೆಯರ ಜೊತೆ ಸೇರೆ, 'ಮಿತ್ರ ಜ್ಯೋತಿ ಸಂಸ್ಥೆ'ಯನ್ನು ಸ್ಥಾಪಿಸಿದರು. ಹೀಗೆ ಸೇವೆಯಲ್ಲಿ ತೊಡಗಿದ 'ಮಿತ್ರ ಜ್ಯೋತಿ ಸಂಸ್ಥೆ' ಸಂಸ್ಥೆಗೆ ಮತ್ತು 'ಮಧು ಸಿಂಘಾಲ್' ರಿಗೆ ಅನೇಕ ಪ್ರಶಸ್ತಿ ಸನ್ಮಾನಗಳು ಅರಸಿಕೊಂಡು ಬರತೊಡಗಿದವು.

ಪ್ರಶಸ್ತಿ ಸನ್ಮಾನಗಳು[ಬದಲಾಯಿಸಿ]

  • ಸನ್. ೨೦೦೮ ರ, ಡಿಸೆಂಬರ್ ತಿಂಗಳಿನಲ್ಲಿ, 'ಅಪಂಗರಿಗೆ ಸಹಾಯ,' ಮತ್ತು 'ಆತ್ಮ ನಿರ್ಭರತೆ'ಯನ್ನು ತುಂಬಿ, ಜೀವನದಲ್ಲಿ ಮುನ್ನುಗ್ಗಲು ನೆರವಾದ ಕೆಲಸಗಳನ್ನು ಗುರುತಿಸಿ, 'ರಾಷ್ಟ್ರೀಯ ಪ್ರಶಸ್ತಿ',ಯನ್ನು ಪ್ರದಾನಮಾಡಲಾಯಿತು.