ಮಧುಮೇಹ ಮತ್ತು ಬಾಯಾರಿಕೆ

ವಿಕಿಪೀಡಿಯ ಇಂದ
Jump to navigation Jump to search

ಮಧುಮೇಹದ ಒಂದು ಲಕ್ಷಣ ಎಂದರೆ ಬಾಯಾರಿಕೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಇದರಲ್ಲಿ ಯಾವುದೇ ವಿವಾದಾಂಶಗಳಿಲ್ಲ. ಆದರೆ ಮಧುಮೇಹ ರೋಗಿಗಳಿಗೆ ಬಾಯಾರಿಕೆ ಏಕೆ ಬರುತ್ತದೆ ಎಂದು ಸಾಮಾನ್ಯವಾಗಿ ನಾವು ಯೋಚಿಸುವ ಗೋಜಿಗೆ ಹೋಗುವುದಿಲ್ಲ. ಆದರೆ ನಿಜವಾದ ವಿಷಯ ಏನೆಂದರೆ ಬಾಯಾರಿಕೆ ಕೇವಲ ಮಧುಮೇಹದ ಲಕ್ಷಣ ಮಾತ್ರ ಅಲ್ಲ. ರಕ್ತದಲ್ಲಿ ಆಮ್ಲೀಯತೆಯ ಪ್ರಮಾಣ ಹೆಚ್ಚಿದರೆ ಅಂದರೆ ರಕ್ತದ ಜಯಾನುಸ್ಥಿತಿಯಲ್ಲಿ ಸಾಕಷ್ಟು ಇಳಿತ ಉಂಟಾದರೆ ಅದರ ಒಂದು ಲಕ್ಷಣವಾಗಿ ಬಾಯಾರಿಕೆ ಕಾಣಿಸಿಕೊಳ್ಳುತ್ತದೆ.