ಮದ್ರಾಸ್‌ ರಬ್ಬರ್ ಫ್ಯಾಕ್ಟರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Expression error: Unexpected < operator.

Madras Rubber Factory
ಸಂಸ್ಥೆಯ ಪ್ರಕಾರPublic
ಸ್ಥಾಪನೆ1949 (Chennai)
ಮುಖ್ಯ ಕಾರ್ಯಾಲಯChennai, India
ಉದ್ಯಮManufacturing
ಉತ್ಪನ್ನTyres
ಜಾಲತಾಣwww.mrftyres.com

ಮದ್ರಾಸ್‌ ರಬ್ಬರ್ ಫ್ಯಾಕ್ಟರಿ ಯು ಎಂ.ಆರ್.ಎಫ್ ಎಂದೇ ಜನಜನಿತವಾಗಿದೆ. ಇದು ಒಂದು ಪ್ರಮುಖ ಟೈರ್‌ ಉತ್ಪಾದಕ ಕಂಪನಿಯಾಗಿದ್ದು, ತನ್ನ ತಯಾರಿಕಾ ಘಟಕವನ್ನು ಭಾರತ ದೇಶದ ತಮಿಳುನಾಡು ರಾಜ್ಯದ ಚೆನ್ನೈದಲ್ಲಿ ಹೊಂದಿದೆ. ಇದು ಮುಖ್ಯವಾಗಿ ವಾಹನಗಳ ಟೈರು‌ಗಳನ್ನು ತಯಾರಿಸುತ್ತದೆ. ಭಾರತ ದೇಶದಲ್ಲೇ ಅತ್ಯಂತ ದೊಡ್ಡ ಕಂಪನಿಯಾಗಿದ್ದು, ಜಗತ್ತಿನ ಅತ್ಯಂತ ದೊಡ್ಡ ಹನ್ನೆರಡು ಕಂಪನಿಗಳಲ್ಲಿ ಒಂದಾಗಿದೆ. ಇದು ತನ್ನ ಉತ್ಪನ್ನಗಳನ್ನು ೬೫ಕ್ಕೂ ಹೆಚ್ಚು ದೇಶಗಳಿಗೆ ರಪ್ತು ಮಾಡುತ್ತಿದೆ.

ಇತಿಹಾಸ[ಬದಲಾಯಿಸಿ]

೧೯೪೬
ಉತ್ಸಾಹಿ ಯುವ ಉದ್ಯಮಿಯಾದ ಕೆ.ಎಮ್.ಮಾಮ್ಮೆನ್ ಮಾಪ್ಪಿಲ್ಲೈ, ಇವರು ಮದ್ರಾಸ್‌(ಚೆನ್ನೈ)ನ ತಿರುವತ್ತೂರಿನಲ್ಲಿ ಒಂದು ಸಣ್ಣ ಗುಡಿಸಲಿನಂತಹ ಕಟ್ಟಡದಲ್ಲಿ ಪುಗ್ಗೆಯಂತಹ ಸಣ್ಣ ಆಟಿಕೆ ಸಾಮಾನುಗಳ ಉತ್ಪಾದನಾ ಘಟಕವನ್ನು ತೆರೆದರು.
೧೯೪೯
ಉತ್ಪಾದನಾ ಘಟಕವು ಸಣ್ಣ ಗುಡಿಸಲಿನಲ್ಲಿದ್ದು ಯಂತ್ರಗಳನ್ನು ಹೊಂದಿರದೇ ಇದ್ದರೂ ಕೂಡ ಸಣ್ಣ ಸಣ್ಣ ಪುಗ್ಗೆಗಳನ್ನು ಮತ್ತು ಮರದ ಮೇಣದಂತಹ ವಸ್ತುಗಳಿಂದ ಆಟದ ಸಾಮಗ್ರಿಗಳನ್ನು ತಯಾರಿಸುತ್ತಿತ್ತು. ಆ ಕಾಲದಲ್ಲಿ ಅವರು ತಮಿಳುನಾಡು ರಾಜ್ಯದ ಮದ್ರಾಸ್‌(ಚೆನ್ನೈ)ನ ತಂಬು ಚಟ್ಟಿ ರಸ್ತೆ ನಂ.೩೩೪ ರಲ್ಲಿ ತಮ್ಮ ಕಛೇರಿಯನ್ನು ತೆರೆದರು.
೧೯೫೨
ಆಗ ಎಂ.ಆರ್.ಎಫ್ ಚಕ್ರದ ಹೊರಮೈಯಲ್ಲಿರುವ ರಬ್ಬರ್ ತಯಾರಿಕೆಯಲ್ಲಿ ಧುಮುಕಿತು. ಅದರ ಮೂಲಕ ಪ್ರಪ್ರಥಮವಾಗಿ ರಬ್ಬರ್ ತಯಾರಿಕಾ ಯಂತ್ರವು ಅವರ ಕಛೇರಿಯಲ್ಲಿ ಸ್ಥಾಪಿಸಲ್ಪಟ್ಟಿತು. ತನ್ಮೂಲಕ ಕೆಲವರ ಕನಸಾದ ಚಕ್ರದ ಹೊರಮೈ ರಬ್ಬರ್ ತಯಾರಿಕಾ ರಂಗಕ್ಕೆ ಎಂ.ಆರ್.ಎಫ್‌ ಹೆಜ್ಜೆಯಿಟ್ಟಿತು.
೧೯೫೫
ಎಂ.ಆರ್.ಎಫ್ ಅತಿ ಬೇಗನೆ ಭಾರತೀಯ ಸ್ವಾಮ್ಯತ್ವದ ಕಂಪನಿಯಾಯಿತು ಮತ್ತು ಆಗಿನ ಕಾಲದಲ್ಲಿ ಅಂತರಾಷ್ಟ್ರೀಯ ಕಂಪನಿಗಳಿಗೆ ಪೈಪೋಟಿ ನೀಡುವ ಉದ್ದೇಶದಿಂದ ಬೇಗನೆ ಉಬ್ಬದ ಮತ್ತು ಉತ್ತಮ ಗುಣಮಟ್ಟದ ಹೊರಮೈ ರಬ್ಬರ್‌ಗಳನ್ನು ತಯಾರಿಸತೊಡಗಿತು.
೧೯೫೬
ಎಂ.ಆರ್.ಎಫ್ ಕಂಪನಿಯ ಹೊರಮೈ ರಬ್ಬರ್ ಉತ್ಪಾದನೆಗಳು ಎಷ್ಟು ಒಳ್ಳೆಯ ಗುಣಮಟ್ಟದ್ದಾಗಿತ್ತೆಂದರೆ, ೧೯೫೬ರ ಅಂತ್ಯದ ವೇಳೆಗೆ ಶೇ.೫೦ ರಷ್ಟು ಭಾರತದ ಮಾರುಕಟ್ಟೆಯನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಎಂ.ಆರ್.ಎಫ್ ಕಂಪನಿಯ ಪೈಪೋಟಿಯು ಎಷ್ಟರ ಮಟ್ಟಿಗೆ ಇತ್ತೆಂದರೆ ಬಹುಪಾಲು ಅಂತರಾಷ್ಟ್ರೀಯ ಕಂಪನಿಗಳಿಗೆ ವಿಧಿಯಿಲ್ಲದೇ ಭಾರತದಲ್ಲಿ ತಮ್ಮ ಬಂಡವಾಲುಗಳನ್ನು ವಾಪಸ್ ಪಡೆಯುವಂತಾಯಿತು.
೧೯೬೦
ಕಂಪನಿಯು ನವೆಂಬರ್ ೫ರಂದು ಖಾಸಗಿ ಕಂಪನಿಯಾಗಿ ಮಾರ್ಪಾಡಾಯಿತು. ಮತ್ತು ಮ್ಯಾನ್ಸಫಿಲ್ಡ್‌ ಟೈರ್‌ & ರಬ್ಬರ್ ಕಂಪನಿ, ಓಹಾಯೊ ಯು.ಎಸ್.ಎ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ವಾಹನದ ಬಿಡಿ ಭಾಗಗಳನ್ನು, ವಿಮಾನದ ಬಿಡಿಬಾಗಗಳನ್ನು, ದ್ವಿಚಕ್ರ ವಾಹನದ ಗಾಲಿಯ ರಬ್ಬರಗಳನ್ನು ತಯಾರಿಸತೊಡಗಿತು. ಇದರ ಉತ್ಪಾದನೆಗಳು ಮ್ಯಾನ್ಸಫಿಲ್ಡ್‌ ಟೈರ್‌ಸ್‌(ಎಂ.ಆರ್.ಎಫ್) ಚಿನ್ಹೆಯಡಿ ಮಾರಾಟವಾಗುತ್ತಿದ್ದವು. ಕಂಪನಿಯು ಇನ್ನಿತರ ರಬ್ಬರ್ನ ಸಾಮಗ್ರಿಗಳಾದ ಸಾಗಣೆ ಪಟ್ಟಿ (ಕಾನ್ವೆಯರ್ ಬೆಲ್ಟ್‌), ಕೊಳವೆಗಳಂತಹ ವಸ್ತುಗಳನ್ನೂ ಸಹ ಉತ್ಪಾದಿಸತೊಡಗಿತು. ಇದು ತನ್ನೆಲ್ಲಾ ವಹಿವಾಟುಗಳನ್ನು ಒಗ್ಗೂಡಿಸಿ ನವೆಂಬರ್ ೧೬ರಂದು ರೂ. ೨೫ಲಕ್ಷದ ವೆಚ್ಚದಲ್ಲಿ ಮದ್ರಾಸ್‌ ರಬ್ಬರ್ ಫ್ಯಾಕ್ಟರಿ ಎಂಬ ಹೆಸರಿನಡಿ ಅಸ್ಥಿತ್ವಕ್ಕೆ ಬಂದಿತು.
೧೯೬೧
ಮದ್ರಾಸ್‌ ರಬ್ಬರ್ ಫ್ಯಾಕ್ಟರಿ ಫ್ರೈ.ಲಿ.ಕಂಪನಿಯು ಎಪ್ರಿಲ್ ೧ರಿಂದ ನಿಯಮಿತ, ಕಂಪನಿಯಾಗಿ ರೂಪಾಂತರಗೊಂಡಿತು. ಮ್ಯಾನ್ಸಫಿಲ್ಡ್‌ ಟೈರ್‌ & ರಬ್ಬರ್ ಕಂಪನಿ, ಓಹಾಯೊ ಯು.ಎಸ್.ಎ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ವಾಹನದ ಬಿಡಿ ಬಾಗಗಳನ್ನು, ವಿಮಾನದ ಬಿಡಿಬಾಗಗಳನ್ನು, ದ್ವಿಚಕ್ರ ವಾಹನದ ಗಾಲಿಯ ರಬ್ಬರಗಳನ್ನು ತಯಾರಿಸುವ ಉದ್ದೇಶದಿಂದ ಹೆಚ್ಚವರಿ ಬಂಡವಾಲು ಸಂಗ್ರಹಣೆಗಾಗಿ ಶೇರುಗಳನ್ನು ಬಿಡುಗಡೆ ಮಾಡಿತು. ಮ್ಯಾನ್ಸಫಿಲ್ಡ್‌ ಚಿನ್ಹೆಯಡಿ ಅಮೇರಿಕಾ ಮತ್ತು ಕೆನಡಾ ದೇಶಗಳನ್ನು ಹೊರತುಪಡಿಸಿ ಇತರ ಎಲ್ಲ ದೇಶಗಳಿಗೆ ತನ್ನ ಉತ್ಪನ್ನಗಳನ್ನು ರಪ್ತು ಮಾಡುವ ಪರವಾನಗಿ ಪಡೆಯಿತು. ೨,೪೯,೬೫೦ ಶೇರುಗಳು ನಗದಿನ ರೂಪದ ಬದಲಾಗಿ ನೀಡಲ್ಪಟ್ಟವು. ೩೫೦ ಶೇರುಗಳನ್ನು ಮೆಮೊರಂಡಮ್ ಆಫ್‌ ಅಸೋಸಿಯೇಶನ್‌ನ ಅಡಿ ಸಹಿ ಮಾಡುವ ಅಧಿಕಾರ ಹೊಂದಿದವರಿಗೆ ನೀಡಲಾಯಿತು. ೨,೫೦,೦೦೦ ಶೇರುಗಳನ್ನು ಕಾಯ್ದಿರಿಸಲಾಯಿತು. ಮತ್ತು ಅವುಗಳನ್ನು ನಿರ್ದೇಶಕರುಗಳಿಗೆ ನೀಡಲಾಯಿತು ಎಪ್ರಿಲ್ ೧೯೬೧ರಲ್ಲಿ ೫,೦೦,೦೦೦ಶೇರುಗಳನ್ನು ಸಾರ್ವಜನಿಕರಿಗೆ ನೀಡಲಾಯಿತು.
೧೯೬೨
ಡಿಸೆಂಬರ್ ೪ರಂದು ಟೈರ್‌ ಮತ್ತು ಟ್ಯೂಬ್‌ಗಳ ಉತ್ಪಾದನೆಗಾಗಿ ಮುಖ್ಯ ಸ್ಥಳವನ್ನು ಖರೀದಿಸಿತು.
೧೯೬೩
ಹೊಸ ವಿನ್ಯಾಸದ ನೈಲಾನ್ ಹಾಟ್ ಸ್ಟ್ರೆಚ್ ಯುನಿಟ್‌ಗೆ ನವೆಂಬರ್‌ನಲ್ಲಿ ಅನುಮತಿ ದೊರೆಯಿತು.
೬,೨೫,೦೦೦ ರೈಟ್ ಇಕ್ವಿಟಿ ಶೇರುಗಳನ್ನು ೧:೨ರ ಅನುಪಾತದಲ್ಲಿ ಬಿಡುಗಡೆಗೊಳಿಸಿತು.
೧೯೬೪
೧೯೬೪ರಲ್ಲಿ ಮುಖ್ಯ ಉತ್ಪಾದನಾ ಘಟಕವನ್ನು ಹೊಂದುವುದರ ಮೂಲಕ ಟೈರ್‌‌ಗಳ ರಪ್ತು ವಹಿವಾಟಿನಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿತು. ಮಾರುಕಟ್ಟೆಯನ್ನು ವಿಸ್ತರಿಸುವ ಉದ್ದೇಶದಿಂದ

ಸಮುದ್ರದಾಚೆ ಬೀರೂಟ್‌(ಲೆಬನಾನ್)ನಲ್ಲಿ ತನ್ನ ಕಛೇರಿಯನ್ನು ತೆರೆಯಿತು. ಇದು ಭಾರತೀಯರ ಪ್ರಪ್ರಥಮ ಪ್ರಯತ್ನವಾಗಿತ್ತು. ಈ ವರ್ಷ ಈಗ ನಾವು ನೋಡುತ್ತಿರುವ ಎಂ.ಆರ್.ಎಫ್ ಮಸಲ್‌ಮನ್ ಹುಟ್ಟಿದ ವರ್ಷ ಎಂದೇ ಹೇಳಬಹುದು.

೧೯೬೭
ಎಂ.ಆರ್.ಎಫ್ ಕಂಪನಿಯು ಪ್ರಪ್ರಥಮ ಬಾರಿಗೆ ಟೈರ್‌ ತಂತ್ರಜ್ಞಾನದ ಉಗಮಸ್ಥಾನವಾದ ಅಮೇರಿಕಾ ದೇಶಕ್ಕೆ ಟೈರ್‌‌ಗಳ ರಪ್ತು ಮಾಡಿದ ಭಾರತೀಯ ಕಂಪನಿಯೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.
೧೯೭೦
ಮಾರ್ಚ್‌ ತಿಂಗಳಿನಲ್ಲಿ ೫,೬೨,೫೦೦ಇನಾಮು ಶೇರುಗಳನ್ನು ೩:೧೦ರ ಅನುಪಾತದಲ್ಲಿ ಬಿಡುಗಡೆ ಮಾಡಿತು.
೧೯೭೩
ಎಂ.ಆರ್.ಎಫ್ ಕಂಪನಿಯು ನೈಲಾನ ಟೈರುಗಳ ಉತ್ಪಾದನೆಯ ಮೂಲಕ ಭಾರತೀಯ ಪ್ರಥಮ ನೈಲಾನ್ ಟೈರು ಉತ್ಪಾದಕ ಕಂಪನಿಯೆಂಬ ಇತಿಹಾಸ ನಿರ್ಮಿಸಿತು.
೧೯೭೫
ಸೆಪ್ಟೆಂಬರ್ ತಿಂಗಳಲ್ಲಿ ೧೨,೧೮,೭೧೪ ಇನಾಮು ಶೇರುಗಳನ್ನು ೧:೨ರ ಅನುಪಾತದಲ್ಲಿ ಬಿಡುಗಡೆಗೊಳಿಸಿತು. (ಆದರೆ ಕೇವಲ ೧೨,೧೮,೬೮೯ ಶೇರುಗಳು ಮಾತ್ರ ಮಾರಾಟವಾದವು)
೧೯೭೮
ತಾಂತ್ರಿಕ ಸಲಹೆ ಸೂಚನೆಗಳಿಗಾಗಿ ೧೯೮೦-೮೧ರ ಪ್ರಾರಂಭದಲ್ಲಿ ಅಮೇರಿಕಾದ ಬಿ.ಎಫ್. ಗುಡ್ರಿಚ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿತು.

ಅದು ಮತ್ತೆ ಮುಂದಿನ ಐದು ವರ್ಷದ ಅವಧಿಗೆ ವಿಸ್ತರಿಸಲ್ಪಟ್ಟಿತು.

೧೯೭೯
ಮ್ಯಾನ್ಸ್‌ಫಿಲ್ಡ್‌ ಟೈರ್‌&ರಬ್ಬರ್ ಕಂಪನಿಯು ತನ್ನಲ್ಲಿರುವ ೩,೭೪,೨೫೦ ರೂ.೧೦ರ ಮುಖಬೆಲೆಯ ಶೇರುಗಳನ್ನು ರೂ.೪ರ ಹೆಚ್ಚುವರಿ ಮೊತ್ತದೊಂದಿಗೆ ಮಾರಾಟ ಮಾಡಲು ಬಯಸಿತು.

ಅದು ತನ್ನಲ್ಲಿರುವ ೩,೬೩,೭೮೬ ಶೇರುಗಳನ್ನು ಈಗಾಗಲೇ ಕಂಪನಿಯ ಶೇರು ಹೊಂದಿರುವ ಶೇರುದಾರರಿಗೆ ೧:೮ರ ಅನುಪಾತದಲ್ಲಿ ಮಾರಾಟಮಾಡಿತು. ಮತ್ತು ಉಳಿದ ೧೦,೪೬೪ ಶೇರುಗಳನ್ನು ಕಂಪನಿಯ ಕೆಲಸಗಾರರಿಗೆ ಮಾರಾಟಮಾಡಿತು.

೧೯೮೦
ಈ ವೇಳೆಗೆ ಕಂಪನಿಯು ತನ್ನ ಜೀವಿತದಲ್ಲಿ ಸಾಕಷ್ಟು ಮೈಲಿಗಲ್ಲುಗಳನ್ನು ದಾಟಿತ್ತು. ಇದು ಈ ವರ್ಷ ಅಮೇರಿಕಾದ ಬಿಎಫ್ ಗುಡ್‌ರಿಚ್ ಟೈರ್ ಕಂಪನಿಯೊಂದಿಗೆ ತಾಂತ್ರಿಕ ಸಹಯೋಗ ಹೊಂದಿತು.

ಇದೇ ವರ್ಷ ತನ್ನ ಹೆಸರನ್ನು ಮದ್ರಾಸ್‌ ರಬ್ಬರ್ ಕಂಪನಿ ಲಿ., ಎಂದಿದ್ದಿದ್ದನ್ನು ಎಂ.ಆರ್.ಎಫ್. ಲಿ., ಎಂದು ಬದಲಾವಣೆ ಮಾಡಿಕೊಂಡಿತು.

೧೯೮೧
ಮ್ಯಾನ್ಸ್‌ಫಿಲ್ಡ್‌ ಟೈರ್‌&ರಬ್ಬರ್ ಕಂಪನಿಯು ತನ್ನಲ್ಲಿ ಉಳಿದಿರುವ ೩,೫೫,೫೩೭ ರೂ.೧೦ರ ಮುಖಬೆಲೆಯ ಶೇರುಗಳನ್ನು ರೂ.೪ ರ ಹೆಚ್ಚುವರಿ ಮೊತ್ತದೊಂದಿಗೆ ಮಾರಾಟ ಮಾಡಲು ಬಯಸಿತು.

ಅದು ೩,೨೯,೫೮೭ಶೇರುಗಳನ್ನು ಭಾರತದಲ್ಲಿ ವಾಸವಾಗಿರುವ ಶೇರುದಾರಿಗೂ ಮತ್ತು ಸ್ವದೇಶಕ್ಕೆ ವಾಪಸಾಗದ ಒಪ್ಪಂದದ ಮೇರೆಗೆ ಹೊರದೇಶದಲ್ಲಿ ವಾಸವಾಗಿರುವ ಭಾರತೀಯ ಶೇರುದಾರರಿಗೂ ೧:೧೦ರ ಅನುಪಾತದಲ್ಲಿ ನೀಡಿತು. ಮತ್ತು ೨೫,೯೫೦ ಶೇರುಗಳನ್ನು ಭಾರತೀಯ ಕೆಲಸಗಾರರಿಗೆ ಮತ್ತು ಕಂಪನಿಯೊಂದಿಗೆ ವ್ಯಾವಹಾರಿಕವಾಗಿ ಸಂಬಂಧ ಹೊಂದಿರುವರಿಗೆ ನೀಡಿತು.

ಫೆಬ್ರುವರಿಯಲ್ಲಿ ಐ.ಎಫ್.ಸಿ.ಐಗೆ ೨,೦೦,೦೦೦ ಇಕ್ವಿಟಿ ಶೇರುಗಳು ರೂ. ೫ರಂತೆ ಹೆಚ್ಚಳದ ದರದಲ್ಲಿ ಸಾಲದ ರೂಪಾಂತರಕ್ಕಾಗಿ ನೀಡಲ್ಪಟ್ಟವು.
೧೯೮೩
ಕಂಪನಿಯು ಇಟಲಿಯ ಮೆ.ಮರಾನ್ಗೋನಿ ಟಿ.ಆರ್.ಎಸ್ ಎಸ್ಪಿಎ ಕಂಪನಿಯೊಂದಿಗೆ ಪುನಃ ಉಪಯೋಗಿಸಬಹುದಾದ ರಬ್ಬರ್ ತಯಾರಿಕಾ ತಂತ್ರಜ್ಞಾನ

ಒಪ್ಪಂದ ಮಾಡಿಕೊಂಡಿತು.

೧೯೮೪
ಮಾರಾಟವು ೨ಲಕ್ಷ ಕೋಟಿಗೂ ಮೀರಿತು. ಎಂ.ಆರ್.ಎಫ್ ಟೈರ್‌‌ಗಳು ಭಾರತದಲ್ಲಿ ನವೀನ ಕಾರಾದ

ಮಾರುತಿ ೮೦೦ನ ಟೈರ್‌ ಆಗಿ ಆಯ್ಕೆಯಾಯಿತು.

೧೯೮೫
ಔದ್ಯಮಿಕ ಪಿರೇಲಿ ಎಸ್ಪಿಯೆ ದೊಂದಿಗೆ ಹೊತ್ತೊಯ್ಯುವ ಪಟ್ಟಿಗಳು ಮತ್ತು ಕೊಳವೆಗಳ ತಯಾರಿಕೆಗಾಗಿ ಕೈ ಜೋಡಿಸುವ

ಪತ್ರವನ್ನು ಪಡೆಯಲಾಯಿತು. ಈ ಯೋಜನೆಯಲ್ಲಿ ಬಿ.ಎಫ್ ಗುಡ್ರಿಚ್&ಕಂಪನಿಯೊಂದಿಗೆ ಕೈಜೋಡಿಸಿ ವಿಮಾಗಳ ಟೈರ್‌‌ಗಳನ್ನು ತಯಾರಿಸುವುದು ಮತ್ತು ಅವುಗಳ ಮರುಉಪಯೋಗಿಸುವ ಕಾರ್ಖಾನೆಗಳನ್ನು ತೆರೆಯುವುದು ಸೇರಿತ್ತು.

೧೯೮೬
ಕಂಪನಿಯನ್ನು ನವೀಕರಿಸುವ ಉದ್ದೇಶದಿಂದ ಹಣ ಸಂಗ್ರಹಣೆಗಾಗಿ ತನ್ನ ಈಗಾಗಲೇ ಇರುವ ಶೇರುದಾರಿಗೆ ರೂ.೮ ಕೋಟಿ ಮೊತ್ತದ ಶೇರುಗಳನ್ನು ಈಗಾಗಲೇ ಇರುವ ಶೇರುದಾರರ ಅಧಿಕಾರವೆಂದು ಶೇ.೧೫% ಮರುಪಾವತಿಯ ಭರವಸೆಯ ಮೇಲೆ ವರ್ಗಾಯಿಸಲು ಬರಲಾರದ ರೂ. ೧೦೦ರ ಮುಖಬೆಲೆಯ ಸಾಲಪತ್ರಗಳನ್ನು ಎರಡನೇ ಬಾರಿಗೆ ಬಿಡುಗಡೆ ಮಾಡಿತು.

ಅದರ ಬಡ್ಡಿಯನ್ನು (ರೆಡಿಮೇಬಲ್) ಮೂರು ವರ್ಷದ ಮಿತಿಗೊಳಪಟ್ಟು ಕಂಪನಿಯು ಪಾವತಿಸಬಹುದಾಗಿತ್ತು. ಇಂತಹ ಸಾಲ ಪತ್ರಗಳನ್ನು ಶೇ.೫ ನ್ನು ಹೆಚ್ಚಿಗೆ ನೀಡಿ ಅಂದರೆ ರೂ. ೩೫ರ ಮೂರು ಕಂತುಗಳನ್ನು ೦೮ ಮೇ ೧೯೯೩ರಿಂದ ಜಾರಿಗೆ ಬರುವಂತೆ ತುಂಬುವ ಷರತ್ತಿನ ಆಧಾರದ ಮೇಲೆ ಪಡೆಯಬಹುದಾಗಿತ್ತು. ಅಥವಾ ಬಿಡಿಸಿಕೊಳ್ಳಲಾಗದ ಶೇರುಗಳನ್ನು ಬೇಕಾದಲ್ಲಿ ಶೇ.೫ರ ಹೆಚ್ಚುವರಿ ಹಣವನ್ನು ಪ್ರಥಮ ಕಂತಿನಲ್ಲಿ ತುಂಬಿ ರೂ.೨೦ರಂತೆ ಐದು ಕಂತುಗಳಲ್ಲಿ ಪಾವತಿಸುವಂತೆ ಪಡೆಯಬಹುದಾಗಿತ್ತು.

೧೯೮೭
ಕಂಪನಿಯು ಎಂ.ಆರ್.ಟಿ.ಪಿ ಕಾಯ್ದೆಯಡಿ ಶುದ್ಧತಾ ಪತ್ರ ಪಡೆದುಕೊಂಡಿತು ಮತ್ತು ವರ್ಷಕ್ಕೆ ೬೦೦೦ ಟನ್ ರಬ್ಬರ್‌ಗಳನ್ನು ಕಂಪನಿಯೇ ಅಭಿವೃದ್ಧಿಪಡಿಸಿದ ತಂತ್ರಜ್ಞಾನದಲ್ಲಿ ಪುನರುತ್ಪಾದಿಸುವ ಪರವಾನಗಿಯನ್ನೂ ಸಹ ಪಡೆಯಿತು.

ಆಂದ್ರಪ್ರದೇಶದ ಟಾಡಾದಲ್ಲಿ ವರ್ಷವೊಂದಕ್ಕೆ ೧.೫ಮಿಲಿಯನ್ ಟೈರ್‌ ಮತ್ತು ಟ್ಯೂಬ್‌ಗಳನ್ನು ಉತ್ಪಾದಿಸುವ ಉತ್ಪಾದನಾ ಘಟಕವನ್ನು ಸ್ಥಾಪಿಸಲೂ ಕೂಡ ಎಂ.ಆರ್.ಟಿ.ಪಿಯಿಂದ ಅನುಮತಿ ಪತ್ರವನ್ನು ಪಡೆಯಲಾಯಿತು. ಕಂಪನಿಯು ಆಸ್ಟ್ರೇಲಿಯಾದ ವಪೋಕ್ಯೂರ್ ಎಂಬ ಕಂಪನಿಯೊಂದಿಗೆ ಓಪ್ಪಂದ ಮಾಡಿಕೊಂಡು ಸಾಮಾನ್ಯ ವಾತಾವರಣಗಳಲ್ಲಿಯೂ ಒಣಗಬಹುದಾದ ಬಣ್ಣಗಳ ತಯಾರಿಕೆಯಲ್ಲಿ ತೊಡಗಿಕೊಂಡಿತು.

ಮತ್ತು ಒಡೆದರೂ ಚುಚ್ಚದ ಗಾಜುಗಳ ತಯಾರಿಕೆಯಲ್ಲಿ ತೊಡಗಿದರು. ತಮಿಳುನಾಡಿನ ಗೊಮ್ಮಿದಿಪುಂಡಿಯಲ್ಲಿ

ವರ್ಷಕ್ಕೆ ೧೦೦೦೦ ಟನ್ ಉತ್ಪಾದನಾ ಸಾಮಥ್ರ್ಯವುಳ ಘಟಕವೊಂದನ್ನು ತೆರೆಯಲಾಯಿತು. ಫನ್ಸ್ಕೂಲ್ ಇಂಡಿಯಾ ಕಂ. ಲಿ., ಮತ್ತು ಕ್ರಿಸ್ಟಾಲ್ ಹುಡಿಕೆ ಮತ್ತು ಪೈನಾನ್ಸ್‌ ಕಂ.ಲಿ., ಇವೆರಡು ಕಂಪನಿಗಳು ಎಂ.ಆರ್.ಎಫ್ ಕಂಪನಿಯ ಅಂಗ ಸಂಸ್ಥೆಗಳಾದವು.

ಫನ್ಸ್ಕೂಲ್ ಇಂಡಿಯಾ ಕಂ.ಲಿ.,ಯು ಅಮೇರಿಕಾದ ಪ್ರಸಿದ್ದ ಆಟಿಕೆ ತಯಾರಿಕಾ ಕಂಪನಿ ಹಸ್ಬ್ರೋ ಅಂತರಾಷ್ಟ್ರೀಯ ಕಂಪನಿಯ ಒಪ್ಪಂದದಿಂದಾಗಿ ಅಸ್ಥಿತ್ವಕ್ಕೆ ಬಂದಿತು. ಫನ್ಸ್ಕೂಲ್ ಇಂಡಿಯಾ ಕಂ.ಲಿ.,ಯು

ಜಗತ್ತಿನ ಅತಿದೊಡ್ಡ ಆಟಿಕೆ ಸಂಸ್ಥೆ ಅಮೇರಿಕಾದ ಹಾಸ್‌ಬ್ರೋ ಇಂಟರ್‌ನ್ಯಾಶನಲ್ ಸಹಯೋಗದೊಂದಿಗೆ ಪ್ರಚಾರಕ್ಕೆ ಬಂದಿತು.

೧೯೮೮
ಅಂತರಾಷ್ಟ್ರೀಯ ವೇಗಿ ಚೆಂಡು ಎಸೆತಗಾರರಾದ ಡೆನ್ನಿಸ್ ಲಿಲ್ಲಿಯವರ ನಿರ್ದೇಶಕತ್ವದಲ್ಲಿ ಎಂ.ಆರ್.ಎಫ್ ಫೇಸ್ ಪೌಂಡೆಶನ್ ಅಸ್ಥಿತ್ವಕ್ಕೆ ಬಂದಿತು. ಮತ್ತು ಅತೀ ಶೀಘ್ರದಲ್ಲಿ

ಅಲ್ಲಿ ತರಬೇತಿ ಪಡೆದ ಆಟಗಾರರು ಭಾರತೀಯ ಕ್ರಿಕೆಟ್ ತಂಡದಲ್ಲಿ ಆಯ್ಕೆಯಾದರು.

೧೯೮೯
ಕಂಪನಿಯು ಶ್ರೇಷ್ಠ ರಪ್ತು ಕಂಪನಿಯೆಂದು ಗುರುತಿಸಲ್ಪಟ್ಟಿತು. ಇದರಿಂದಾಗಿ ರಪ್ತು ತೆರಿಗೆ, ಭಾರತೀಯ ರಿಸರ್ವ ಬ್ಯಾಂಕ ಮುಂತಾದ ಕಡೆ ಮೊದಲ ಆದ್ಯತೆ ದೊರೆಯತೊಡಗಿತು.

ಅಮೇರಿಕಾದ ಬಿ.ಎಫ್ ಗುಡ್ರಿಚ್ ಕಂಪನಿಯ ವಿಮಾನ ಟೈರ್‌‌ಗಳ

ತಯಾರಿಕಾ ವಿಭಾಗವನ್ನು ಫ್ರಾನ್ಸನ ಮಿಕಲಿನ ಸಿ ಕಂಪನಿಯು ತೆಗೆದುಕೊಂಡಿತು.
ಸರ್ಕಾರವು ಮಿಕಲಿನ್ ಕಂಪನಿಯ ಅಂಗಸಂಸ್ಥೆಯಾದ ಬಿ.ಎಫ್ ಗುಡ್ರಿಚ್ ಕಂಪನಿಯೊಂದಿಗೆ

ವಿಮಾನ ಗಾಲಿಗಳ ನವೀನ ತಂತ್ರಜ್ಞಾನ ಪುರೈಕೆಗಾಗಿ ಮುಂದಿನ ೫ ವರ್ಷಗಳವರೆಗಿನ ಒಪ್ಪಂದಕ್ಕೆ ಮಂಜೂರಿ ನೀಡಿತು.

೧೯೯೦
ಅರುಣಾ ಲೆದರ್ಸ್‌&ರಪ್ತು ಕಂಪನಿಯು ಎಂ.ಆರ್.ಎಫ್ ಕಂಪನಿಯೊಂದಿಗೆ

ವಿಲೀನವಾಯಿತು. ಒಪ್ಪಂದದಂತೆ ರೂ.೧೦ ಮುಖಬೆಲೆಯ ಎಂ.ಆರ್ ಎಫ್ ಕಂಪನಿಯ ಒಂದು ಶೇರನ್ನು ಅರುಣಾ ಲೆದರ್ಸ್‌&ರಪ್ತು ಕಂಪನಿಯ ೧೦,೦೦೦ ಪೂರ್ಣ ಪಾವತಿಯಾದ ಶೇರಿಗೆ ನೀಡಲಾಯಿತು ಮತ್ತು ಅರುಣಾ ಲೆದರ್ಸ್‌&ರಪ್ತು ಕಂಪನಿಯ ಹಳೆಯ ಶೇರುದಾರರಿಗೆ ೨೫ ಇಕ್ವಿಟಿ ಶೇರುಗಳನ್ನು ನೀಡಲಾಯಿತು.

ಕಂಪನಿಯು ಗುಟ್ಟಾಗಿ ೧೫,೦೦,೦೦೦ ೧೪% ಮರುಪಾವತಿ ಭರವಸೆಯ, ವರ್ಗಾಯಿಸಲು ಬರಲಾರದ ರೂ.೧೦೦ ಮುಖಬೆಲೆಯ ಸಾಲಪತ್ರಗಳನ್ನು
ಮೂರನೇ ಕಂತಿನಲ್ಲಿ ಬಿಡುಗಡೆ ಮಾಡಿತು. ಶೇ.೫% ಹೆಚ್ಚಳದೊಂದಿಗೆ ಪ್ರತಿ ಕಂತು ರೂ.೩೫ ರಂತೆ ಪಾವತಿಸಬೇಕಾದ ಮೊತ್ತವು ೩೧ ಜುಲೈ ೧೯೯೭ರಿಂದ

ಜಾರಿಗೆ ಬರುವಂತೆ ಅನ್ವಯವಾಗುವುದು. ಕಂಪನಿಯು ನಾಲ್ಕನೇ ಕಂತಿನಲ್ಲಿ ಗುಟ್ಟಾಗಿ

ಎಸ್.ಬಿ.ಐದಿಂದ ರೂ.೧೦,೦೦,೦೦೦ ಶೇ.೧೪ ರ ಮರುಪಾವತಿ ಆಧಾರದ ಮೇಲೆ ಶೇ.೫% ಹೆಚ್ಚಳದ ರಿಡಿಮೇಬಲ್ ಸಾಲಪತ್ರಗಳನ್ನು ೨೬ ಜೂನ್ ೧೯೯೮ರಿಂದ ಅನ್ವಯವಾಗುವಂತೆ ನೀಡಿತು.

ಕಂಪನಿಯು ಅದೇ ವರ್ಷ

೫,೦೦,೦೦೦ ಶೇ.೧೪% ಮರುಪಾವತಿ ಆಧಾರದ ಮೇಲಿನ ಸಾಲಪತ್ರಗಳನ್ನು ಇನ್ಪ್ರಾಸ್ಟ್ರಕ್ಚರ್ ಲೀಸಿಂಗ್ &ಪೈನಾನ್ಸ್‌ಿಯಲ್ ಸವರ್ಿಸ್ ಲಿ., ಕಂಪನಿಗೆ ಗುಟ್ಟಾಗಿ ನೀಡಿತು.

ಈ ಸಾಲಪತ್ರವು ಶೇ.೫%ಹೆಚ್ಚಳ ಕಂತನ್ನು ಹೊಂದಿದ್ದು. ೨೩ಜುಲೈ೧೯೯೭ರಿಂದ ಅನ್ವಯವಾಗುವಂತೆ ಕಂತುಗಳು ಜಾರಿಗೆ ಬರುತ್ತವೆ.

೧೯೯೧
ಕಂಪನಿಯು ಅಂತರಾಷ್ಟ್ರೀಯ ರಪ್ತು ಹೆಚ್ಚಳದ ಉದ್ದೇಶದಿಂದ ಎಂ.ಆರ್.ಎಫ್ ಇಂಟರ್ನ್ಯಾಶನಲ್ ಲಿ.,ಎಂಬ ಹೊಸ ಹೆಸರಿನಿಂದ ಅಸ್ಥಿತ್ವಕ್ಕೆ ಬಂದಿತು.
೩,೮೫,೦೦೦ ಇಕ್ವಿಟಿ ಶೇರುಗಳನ್ನು ಪ್ರತೀ ಶೇರಿಗೆ ರೂ.೨೪೨ರ ಹೆಚ್ಚಳದ ದರದಲ್ಲಿ ಅಂತರಾಷ್ಟ್ರೀಯ ಒಪ್ಪಂದಕಾರರಾದ ಹಾಂಗ್‌ಕಾಂಗ್‌ನ ಏಷ್ಯಾ ಟ್ರೇಡಿಂಗ್ ಸರ್ವೀಸಸ್ ಕಂಪನಿಗೆ ಮಾರಾಟ ಮಾಡಿತು.
೧೯೯೨
ಕಂಪನಿಯು ಎಂ.ಆರ್.ಎಫ್ ಇಂಟರ್ನ್ಯಾಶನಲ್ ನಿ.,ಎಂಬ ಹೆಸರಿನಿಂದ ರೂಪಾಂತರಗೊಂಡಿತು ಮತ್ತು ಅದೇ ಹೆಸರಿನಲ್ಲಿ ಉದ್ಯೋಗ ಪ್ರಾರಂಭಮಾಡಲು

ಅನುಮತಿ ಪತ್ರ ಪಡೆಯಿತು.

೧೯೯೩
ಕೆ.ಎಂ.ಮಮ್ಮೆನ್ ಇವರನ್ನು ಇವರು ಕೈಗಾರಿಕೆಗೆ ನೀಡಿದ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯತು.

ಇವರು ಕೈಗಾರಿಕಾ ಕ್ಷೇತ್ರದಲ್ಲಿ ಪ್ರದ್ಮಶ್ರೀ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿಯಾಗಿದ್ದಾರೆ. ಕಂಪನಿಯು ಭಾರತದಲ್ಲಿ ೧೦ ಬಿಲಿಯನ್ ವಹಿವಾಟು ದಾಟಿದ ಮೊದಲ ಟೈರ್‌ ಕಂಪನಿಯಾಯಿತು. ಇದಲ್ಲದೇ, ಈಸ್ಟರ್ನ್ ಎಕಾನಾಮಿಕ್ ರಿವಿವ್ ಪತ್ರಿಕೆಯು ಎಂ.ಆರ್.ಎಫ್ ಕಂಪನಿಯನ್ನು ಭಾರತದ ಕೈಗಾರಿಕೆಗಳ ರಾಜ ಮತ್ತು ಏಷ್ಯಾದಲ್ಲೇ ಪ್ರಮುಖವಾದ ಕಂಪನಿಯೆಂದು ಕೊಂಡಾಡಿತು. ಎ&ಎಂ. ಪತ್ರಿಕೆಯಲ್ಲಿ ಭಾರತದಲ್ಲಿ ಅತ್ಯಂತ ಜನರ ವಿಶ್ವಾಸಗಳಿಸಿದ ಕಂಪನಿಯೆಂದು ಹೊಗಳಿತು.

೧೯೯೫
ರಬ್ಬರ್ ತಯಾರಿಕಾ ಸಂಘದಿಂದ ಉತ್ತಮ ರಬ್ಬರ್ ರಪ್ತು ಕಂಪನಿಯೆಂಬ ಬಹುಮಾನವನ್ನು ಗಳಿಸಿತು.
೧೯೯೬
ವರ್ಷದ ಅತ್ಯೂತ್ತಮ ರಪ್ತು ಸಾಧನೆಗಾಗಿ ಕಂಪನಿಯು ಸೆಪೆಕ್ಸಿಲ್(ಅಂಕಇಘಿಐ) ಪ್ರಮಾಣಪತ್ರವನ್ನು ಪಡೆಯಿತು.
ಮತ್ತು ಸತತ ನಾಲ್ಕನೇ ವರ್ಷದ ಅಭೂತಪೂರ್ವವಾದ ಸಾಧನೆಗಾಗಿ ಪಾರ್ ಈಸ್ಟರ್ನ ಎಕಾನಾಮಿಕ್ ಪ್ರಶಸ್ತಿ ಕೂಡ ದೊರೆಯಿತು.
೧೯೯೭
೧೦೦ ಕೋಟಿ ವಹಿವಾಟಿನ ಘನತೆಗಾಗಿ ಧನಾತ್ಮಕ ಗುಣಪರಿಶೀಲನಾ ಮತ್ತು ಅನ್ವೇಶಣೆ ಕಂ ನಿ.,(ಅಂಖಇ)ರಿಂದ ಅತ್ಯೂತ್ತಮ ಕಂಪನಿ(ಪಿಆರ್೧+)

ಗುಣಾಂಕವನ್ನು ಪಡೆಯಿತು.

ಎಂ.ಆರ್.ಎಫ್ ಕಂಪನಿಯು ರೇಡಿಯಲ್ ಟೈರ್‌‌ಗಳ ಉತ್ಪಾದನೆಗಾಗಿ ಚೆನ್ನೈನ ಪಾಂಡಿಚೇರಿಯಲ್ಲಿ ಹೊಸದಾಗಿ ಉತ್ಪಾದನಾ ಘಟಕವೊಂದನ್ನು ತೆರೆಯಿತು.
ಚೆನ್ನೈನ ಅರಾಕ್ಕೊಲಮ್‌ನಲ್ಲಿ ಸೈಕಲ್ ಟೈರ್‌ ಮತ್ತು ಟ್ಯೂಬ್‌ಗಳ ತಯಾರಿಯಾ ಘಟಕವೊಂದನ್ನು ತರೆಯತು.
ಅಮೇರಿಕಾದ ಮ್ಯಾನ್ಸಫಿಲ್ಡ್‌ ಟೈರ್‌ ಮತ್ತು ರಬ್ಬರ್ ಕಂಪನಿಯೊಂದಿಗೆ ತಾಂತ್ರಿಕ ಒಪ್ಪಂದ ಮಾಡಿಕೊಂಡು ಟೈರ್‌ ಮತ್ತು ಟ್ಯೂಬ್‌ಗಳ ತಯಾರಿಕಾ ಘಟಕವೊಂದನ್ನು ತೆರೆಯಿತು.
ನೈಲಾನಿನಿಂದ ಬಂದಿತವಾದ ನವೀನ ಮಾದರಿಯ ದ್ವಿಚಕ್ರ ವಾಹನದ ಟೈರ್‌‌ಗಳನ್ನು ಬಿಡುಗಡೆಗೊಳಿಸಿತು.
ಇದೇ ವರ್ಷ ಕಂಪನಿಯು ಪ್ರೆಂಚ್ ಟೈರ್‌ ಗೇಂಟ್ ಮಿಕೆಲಿನ್ ಕಂಪನಿಯ ಅಂಗಸಸ್ಥೆಯಾದ ಅಮೇರಿಕಾದ ಯುನಿರಾಯಲ್ ಟೈರ್‌ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿತು ಆ ಕಂಪನಿಯು ಎಂ.ಆರ್.ಎಫ್ ಕಂಪನಿಯ ಶೇ.೯.೮ರಷ್ಟು

ಪಾಲುದಾರಿಕೆಯನ್ನು ತೆಗೆದುಕೊಂಡಿತು.

೧೯೯೮
ಎಂ.ಆರ್ ಎಫ್ ಕಂಪನಿಯು ಸೀಲ್ ಹೊಂಡಾ ಮೋಟಾರ್ಸ್‌ ಮತ್ತು ಹಿಂದುಸ್ಥಾನ ಮೋಟಾರ್ಸ್‌ ಕಂಪನಿಯೊಂದಿಗೆ ಮೂಲ ವಸ್ತುಗಳ ತಯಾರಿಕಾ ಭಾಂದವ್ಯಕ್ಕಾಗಿ(ಔಇಒ)ನ ಒಪ್ಪಂದಕ್ಕೆ ಸಹಿ ಹಾಕಿತು.
ಎಂ.ಆರ್.ಎಫ್ ಜಿಗ್ಮಾ ಎಂಬ ಹೆಸರಿನ ತನ್ನ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಕ್ಷಾರ್ಥವಾಗಿ ಬಿಡುಗಡೆ ಮಾಡಿತು.
೧೯೯೯
ಉತ್ತರ ಮತ್ತು ಪಶ್ಚಿಮ ನಗರಪ್ರದೇಶಗಳಲ್ಲಿ ತನ್ನ ಕಛೇರಿಗಳನ್ನು ತೆರೆಯಲು ನಿರ್ಧರಿಸಿತು.
ಕಂಪನಿಯು ಈ ಮುಂದಿನ ಹುಡಿಕೆದಾರರೊಂದಿಗೆ ಒಪ್ಪಂದ ಮಾಡಿಕೊಂಡಿತು ಅವು ಯಾವುವೆಂದರೆ,ರಾಷ್ಟ್ರೀಯ ಭದ್ರತಾ ಠೇವು ಕಂ.,(ಓಖಆಐ). ಕೇಂದ್ರ ಠೇವು

ಸೇವಾ ಸಂಸ್ಥೆ (ಇಂಡಿಯಾ) ನಿ.,

೧೯೯೯ನೇ ಇಸವಿಯಲ್ಲಿ ವಾಹನ ಟೈರ್‌ ಮತ್ತು ಟ್ಯೂಬ್‌ಗಳ ಮಾರಾಟಕ್ಕೆ ಅತ್ಯಂತ ಹೆಚ್ಚು ರಪ್ತು ಮಾಡಿದವರಿಗೆ ನೀಡಲಾಗುವ ಎಐಆರ್‌ಐಎ ಹೈಯೆಸ್ಟ್ ಎಕ್‌ಪೋರ್ಟ್

ಪ್ರಶಸ್ತಿಯನ್ನು ಪಡೆಯಿತು.

೨೦೦೦
ರಪ್ತು ಮಹಸೂಲಿನ ಮೇಲಿನ ನಂಬಿಕೆ ರಕ್ಷಣೆಯ ಸಲುವಾಗಿ ದುಭೈದಲ್ಲಿ ಮಾರಾಟ ಮಳಿಗೆಯೊಂದನ್ನು ತೆರೆಯಿತು.
ಎಂ.ಆರ್.ಎಫ್ ಕಂಪನಿಯು ಉಕ್ಕಿನ ಪಟ್ಟಿಯಿಂದ ಕೂಡಿದ ಹೊಸ ವಿಧಾನದ ಟೈರ್‌‌ಗಳನ್ನು ಬಿಡುಗಡೆಗೊಳಿಸಿತು. ಅದನ್ನು ಎಂ.ಆರ್.ಎಫ್ ಜಿ.ವಿ.ಟಿ.ಎಸ್ ಎಂದು ಕರೆಯಲಾಗುವುದು.
೨೦೦೨
ಜೆ.ಡಿ.ಪವರ್ ಏಷ್ಯಾ ಫೆಸಿಪಿಕ್‌ನಿಂದ ನಡೆದ ಅಧ್ಯಯನದ ಪ್ರಕಾರ ಅಂತರಾಷ್ಟ್ರೀಯ ಬ್ರಿಡ್ಜಸ್ಟೋನ್ ಕಂಪನಿಗೆ ಸಮನಾಗಿ ಅತ್ಯಂತ ಹೆಚ್ಚು

ಬಳಕೆದಾರರ ಸಂತ್ರಪ್ತ ಸೇವೆ ನೀಡಿದ ಕಂಪನಿಯೆಂಬ ಅಗ್ರಪಟ್ಟಿಗೆ ಸೇರಲ್ಪಟ್ಟಿತು.

ಎಂ.ಆರ್.ಎಫ್ ಕಂಪನಿಯು ವಾಣಿಜ್ಯ ಟೈರ್‌‌ಗಳ ಮಾರಾಟದಲ್ಲಿ ಕುಸಿತವನ್ನು ಕಂಡಿತು. ಮತ್ತು ಸ್ವಂತ ಬಳಕೆಗೆ ಬಳಸಬಹುದಾದ ಕಾರ್‌ಗಳ ಮಾರಾಟದ ಅಭಿವೃದ್ಧಿಯೂ ಇಳಿಮುಖವಾಯಿತು.
ಕೆಲಸಗಾರರ ಒಕ್ಕೂಟದ ಅಧ್ಯಕ್ಷನನ್ನು ಕೆಲಸದಿಂದ ವಜಾ ಮಾಡಿದ್ದರ ಪರವಾಗಿ ಎಂ.ಆರ್.ಎಫ್ ಕಂಪನಿಯು ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಾಲಯ(ಹೈಕೋರ್ಟ)ವು ತಳ್ಳಿಹಾಕಿತು.

ಜೆ.ಕೆ. ಇಂಡಸ್ಟ್ರೀಸ್ನವರು ಹೊರಡಿಸಿದ ಪ್ರಕಟಣೆಯ ಪ್ರಕಾರ ಅವರೇ ಭಾರತದ ಅತ್ಯಂತ ಹೆಚ್ಚು(ನಂಬರ್೧)

ಟೈರ್‌ ಉತ್ಪಾದಕರೆಂಬ ಪ್ರಕಟಣೆಯ ವಿರುದ್ಧ ಎಂ.ಆರ್.ಎಫ್ ನವರು ಸಲ್ಲಿಸಿದ್ದ ಅಜರ್ಿಯನ್ನು ಭಾರತೀಯ ಜಾಹಿರಾತು ಗುಣಮಟ್ಟ ಸಲಹಾಸಮಿತಿಯು ವಜಾ ಮಾಡಿತು.
ಎಂ.ಆರ್.ಎಫ್ ಕಂಪನಿಯು ವಾಣಿಜ್ಯ ಮತ್ತು ಕೈಗಾರಿಕಾ ಸಂಯುಕ್ತ ಸಂಸ್ಥೆಯಿಂದ ಕೈಗಾರಿಕಾ ಆವಿಷ್ಕಾರಕ್ಕಾಗಿ ಪ್ರಶಸ್ತಿಯನ್ನು ಪಡೆಯಿತು.
೨೦೦೩
ಜೆ.ಡಿ.ಪವರ್ ಏಷ್ಯಾ ಫೆಸಿಪಿಕ್‌ನಿಂದ ನಡೆದ ಅಧ್ಯಯನದ ಪ್ರಕಾರ ಅಂತರಾಷ್ಟ್ರೀಯ ಬ್ರಿಡ್ಜ್‌ಸ್ಟೋನ್ ಕಂಪನಿಗೆ ಸಮನಾಗಿ ಅತ್ಯಂತ ಹೆಚ್ಚು ಬಳಕೆದಾರರ ಸಂತ್ರಪ್ತ ಸೇವೆ ನೀಡಿದ ಕಂಪನಿಯೆಂಬ ಅಗ್ರಪಟ್ಟಿಗೆ ಸೇರಲ್ಪಟ್ಟಿತು.
ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಶ್ರೀ ಕೆ ಎಂ ಮಮ್ಮೆನ್ ಮಾಪ್ಪಿಲ್ಲೈ ಮಾರ್ಚ್ ಎರಡರಂದು ತೀರಿಕೊಂಡರು.
ಸಿ.ಡಿ.ಕನ್ನಾರವರು ಎಂ.ಆರ್.ಎಫ್ ಮಂಡಳಿಯ ನಿರ್ದೇಶಕರಾಗಿ ಮುಂದುವರೆಯಲಿಲ್ಲ ಮತ್ತು ಕೆ.ಎಸ್. ನಾರಾಯಣರವರು ರಾಜಿನಾಮೆ ಸಲ್ಲಿಸಿದರು.
ಎನ್.ಕುಮಾರ ಮತ್ತು ರಂಜಿತ್ ಇಸಾಕ್ ಜೇಸುದಾಸನ್ರನ್ನು ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಆಯ್ಕೆಮಾಡಲಾಯಿತು.
ಕೆ.ಎಸ್ ನಾರಾಯಣರವರು ನೀಡಿದ ರಾಜಿನಾಮೆಗೆ ಪ್ರತಿಯಾಗಿ ಏಪ್ರಿಲ್ ೧೭ ೨೦೦೩ರಿಂದ ಜಾರಿಗೆ ಬರುವಂತೆ ಅವರನ್ನು ನಿರ್ದೇಶಕ ಸ್ಥಾನದಿಂದ ಇಳಿಸಿ ಡಿಸೆಂಬರ್ ೧೯ ೨೦೦೩ರಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಆಡಳಿತ ಮಂಡಳಿಗೆ

ಮರುರೂಪ ನೀಡಲಾಯಿತು.

ಏಪ್ರಿಲ್ ೧,೨೦೦೪ರಿಂದ ಅನ್ವಯವಾಗುವಂತೆ ಶ್ರೀ ಅರುಣ ಮಮ್ಮೆನ್ ಇವರನ್ನು

ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.

೨೦೦೪
ಜನವರಿ ೫, ೨೦೦೪ರಿಂದ ಅನ್ವಯವಾಗುವಂತೆ ಶ್ರೀ ರವಿ ಮನ್ನತ್ರವರು ಹೆಚ್ಚುವರಿ ವ್ಯವಸ್ಥಾಪಕರಾಗಿ ಆಯ್ಕೆಯಾಗಿದ್ದಾರೆಂದು ಕಂಪನಿ ಪ್ರಕಟಿಸಿತು.
ಎಂ.ಆರ್.ಎಫ್ ಕಂಪನಿಯು ಐದರಲ್ಲಿ ನಾಲ್ಕು ವಿಷಯಗಳಲ್ಲಿ ಅಂದರೆ ಟೈರ್‌‌ಗಳ ಸಂಪೂರ್ಣ ಗುಣಮಟ್ಟಕ್ಕಾಗಿ, ಬಾಳಿಗೆ, ಹಿಡಿತ,

ಮತ್ತು ಬಳಕೆಗಾಗಿ ಅಗ್ರಸ್ಥಾನವನ್ನು ಪಡೆಯಿತು.

೨೦೦೨-೦೩ನೇ ಸಾಲಿನ ಅತಿಹೆಚ್ಚು ನೈಸರ್ಗಿಕ ರಬ್ಬರ್ ಗ್ರಾಹಕ ಕಂಪನಿಯೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ವಾಹನಕ್ರೀಡೆಯನ್ನು ಉತ್ತೇಜಿಸಲು ಕ್ರಿಡಾ ವಾಹನಗಳ ಟೈರ್‌‌ಗಳ ಉತ್ಪಾದನೆಗಾಗಿ ಮಾರುತಿ ಉದ್ಯೋಗ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿತು.
೨೦೦೭
೫೦ಎಫ್ಎಸ್ ಹೆಸರಿನ ಹೊಸ ಟ್ರಕ್ ಟೈರ್‌‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು.

ವರ್ತಮಾನದಲ್ಲಿ[ಬದಲಾಯಿಸಿ]

ಎಂ.ಆರ್.ಎಫ್ ಕಂಪನಿಯು ಕೇವಲ ಕೈಗಾರಿಕೋದ್ಯದಲ್ಲಿ ಮಾತ್ರ ತೊಡಗಿಕೊಳ್ಳದೇ ಬಹುಮುಖವಾಗಿದೆ. ಫನ್ಸ್ಕೂಲ್ ಇಂಡಿಯಾ ಎಂಬ ಅಂಗಸಂಸ್ಥೆಯನ್ನು ಹೊಂದಿದೆ, ದೇಶದಲ್ಲಿ ಪ್ರಮುಖ ಆಟಿಕೆ ಸಾಮಾನುಗಳ ಅಂತರಾಷ್ಟ್ರೀಯ ಕಂಪನಿಯಾದ ಹಸ್ಬ್ರೋ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಎಂ.ಆರ್.ಎಫ್ ಕಂಪನಿಯು ಜಗತ್ತಿನಾದ್ಯಂತ ಉತ್ತಮ ಟೈರ್‌‌ಗಳ ರಪ್ತು ವಹಿವಾಟು ಹೊಂದಿದೆ. ಎಂ.ಆರ್.ಎಫ್ ಮಸಲ್ಪ್ಲೆಕ್ಷ ವಿಭಾಗವು ಹೊತ್ತೊಯ್ಯುವ ಪಟ್ಟಿ(ಕೊನ್ವೆಯರ್ ಬೆಲ್ಟ್‌)ಗಳ ತಯಾರಿಕೆಯಲ್ಲಿ ಅಗ್ರಗಣ್ಯವಾಗಿದೆ. ಈ ಕಂಪನಿಯು ಕೆ.ಎಂ.ಮಮ್ಮೆನ್ ಮಪ್ಪಿಲೈರವರ ಮಗನಾದ ವಿನೂ ಮಮ್ಮೆನ್ರವರ ಮುಂದಾಳತ್ವದಲ್ಲಿ ನಡೆಯುತ್ತಿದೆ.

ಕ್ರೀಡೆಗಳು[ಬದಲಾಯಿಸಿ]

ತನ್ನದೇ ಅಂಗಸಂಸ್ಥೆಯಾದ ಎಂ.ಆರ್.ಎಫ್ ಪೇಸ್ ಫೌಂಡೆಶನ್ ವತಿಯಿಂದ ಬಹಳಷ್ಟು ಕ್ರಿಕೆಟ್ ಆಟಗಳ ಪ್ರಾಯೋಜಕತ್ವದ ಹೊಣೆ ಹೊತ್ತಿದೆ. ಒಂದು ಸಮಯದಲ್ಲಿ ಎಂ.ಆರ್.ಎಫ್ ಕಂಪನಿಯು ಜಗತ್ಪ್ರಸಿದ್ಧ ಆಟಗಾರರಾದ ಸಚಿನ್ ತೆಂಡೂಲ್ಕರ್, ಬ್ರಿಯನ್ ಲಾರಾ, ಸ್ಟಿವ್ ವಾ ಇವರುಗಳ ಬ್ಯಾಟ್‌ಗಳ ಹೊಣೆ ಹೊತ್ತಿತ್ತು.

ಸ್ಟೀವ್ ವಾ ಮತ್ತು ಬ್ರಿಯೆನ್ ಲಾರಾ ಇವರು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಸಚಿನ್‌ ತೆಂಡೂಲ್ಕರ್ ಜೊತೆ ಕೂಡ ಸಂಬಂದವನ್ನು ಕಡಿದುಕೊಂಡಿತು. ಸದ್ಯ ಸಚಿನ್‌ ತೆಂಡೂಲ್ಕರ್ ಅವರು ಆಡಿದಾಸ್ ಬ್ಯಾಟಗಳನ್ನು ಉಪಯೋಗಿಸುತ್ತಾರೆ. ಈಗ ಎಂ.ಆರ್.ಎಫ್ ಕಂಪನಿಯು ಗೌತಮ್ ಗಂಭೀರ್, ರೋಹಿತ್ ಶರ್ಮಾ ಮತ್ತಿಬ್ಬರು ಭಾರತೀಯ ಆಟಗಾರರ ಬ್ಯಾಟ್ ಹೊಣೆಯನ್ನು ವಹಿಸಿಕೊಂಡಿದೆ.

ಐ.ಪಿ.ಎಲ್ ೨೦೧೦ರಲ್ಲಿ ಎಂ.ಆರ್.ಎಫ್ ಕಂಪನಿಯ ದೊಡ್ಡದಾದ ಪುಗ್ಗೆಯೊಂದನ್ನು ಅದರಲ್ಲಿ ಅತ್ಯಂತ[೧] ಶಕ್ತಿಶಾಲಿ ಕ್ಯಾಮರಾಗಳನ್ನು ಅಳವಡಿಸಿ ಕ್ರಿಕೆಟ್ ಆಟದ ಸವಿವರವಾದ ಚಿತ್ರಿಕರಣ ಮಾಡಲು ಬಳಸಲಾಯಿತು.

ಪ್ರಾಯೋಜಕತ್ವಗಳು[ಬದಲಾಯಿಸಿ]

[60] ಒನ್ ಇಂಡಿಯಾ[ಬದಲಾಯಿಸಿ]

  • ರೋಹಿತ್ ಶರ್ಮಾ
  • ಗೌತಮ್ ಗಂಭೀರ್

ವೆಸ್ಟ್‌ ಇಂಡೀಸ್‌[ಬದಲಾಯಿಸಿ]

ಎಚ್ಎಲ್೭ ಆಸ್ಟ್ರೇಲಿಯಾ[ಬದಲಾಯಿಸಿ]

  • ಸ್ಟೀವ್ ವಾ

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. http://en.wikipedia.org/wiki/Blimp