ವಿಷಯಕ್ಕೆ ಹೋಗು

ಮಂಟೂರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಂಟೂರ
ಮಂಟೂರ
village
Population
 (೨೦೧೨)
 • Total
೧೫೦೦೦

ಮಂಟೂರ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ ಇರುವ ಒಂದು ಗ್ರಾಮ ಹಾಗೂ ಪುಣ್ಯಕ್ಷೇತ್ರ. ಇಲ್ಲಿ ಸಿದ್ದಾರೂಢ ಮಠ ಒಂದು ಅದ್ಬುತ ಮಠವಾಗಿದೆ.

ಚರಿತ್ರೆ

[ಬದಲಾಯಿಸಿ]

ಮಂಟೂರದಲ್ಲಿ ಒಳ್ಳೆಯ ಶಿಕ್ಷಣ ಕೇಂದ್ರಗಳಿವೆ.

ದೇವಾಲಯಗಳು

[ಬದಲಾಯಿಸಿ]

ಶ್ರೀ ಮಹಾಲಕ್ಷ್ಮಿ ದೇವಸ್ಥಾನ

[ಬದಲಾಯಿಸಿ]

ಮಂಟೂರಿನ ಗ್ರಾಮ ದೇವತೆ ಮಹಾಲಕ್ಷ್ಮಿ ದೇವಸ್ಥಾನ ಇದು ಮಂಟೂರಿನ ನಡುವಿದೆ ಇಲ್ಲಿ ಪ್ರತಿಯೊಬ್ಬರು ಬಂದು ಈ ತಾಯಿ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ

ಸಿದ್ದಾರೂಢ ಮಠ

[ಬದಲಾಯಿಸಿ]

ಸಿದ್ದಾರೂಢ ಮಟ್ಟ ಇದು ಒಂದು ತುಂಬಾ ಹಳೆಯ ಎಲ್ಲಿ ಶಾಲಾ ಕಾಲೇಜುಗಳಿವೆ ಮತ್ತು ಇದು ಶ್ರೀ ಸದಾನಂದ ಮಹಾ ಸ್ವಾಮೀಜಿಯವರ ಪೀಠ ಪ್ರತಿ ವರ್ಷ ಇಲ್ಲಿ ಜಾತ್ರೆಯು ಅದ್ದೂರಿಯಾಗಿ ನಡೆಯುತ್ತದೆ ಎಲ್ಲಿ ಕ್ರೀಡೆ ಸಿನಿಮಾ ಸೆವೆನ್ ಡಿ ಸಿನಿಮಾ ವಾಟರ್ ಡಾನ್ಸ್ ಬೋಟಿಂಗ್ ಸೈನ್ಸ್ ಗ್ಯಾಲರಿ ಗ್ಯಾಲರಿ ದವಿನಮನೆ ಹೀಗೆ ಹಲವಾರು ಸ್ಥಾನಗಳನ್ನು ನೀವು 350 ಟಿಕೆಟ್ ಕರೆದುಸುವ ಮುಖಾಂತರ ನೋಡಬಹುದು.

ಶಿವನ ಪ್ರತಿಮೆ

[ಬದಲಾಯಿಸಿ]

ಶಿವನ ಮೂರ್ತಿಯನ್ನು 2002ರಲ್ಲಿ ಮಂಟೂರಿನ ಕೆರೆಯಲ್ಲಿ ನಿರ್ಮಿಸಲಾಗಿದೆ ಮೊದಲು ಇದು ಸಿದ್ಧಾರೂಢ ಮಠದ ಒಳಗಡೆ ಇತ್ಹು ಆದರೆ ಈಗ ಇದು ಸರ್ಕಾರದ್ದು ಎಂದರೆ ಪಂಚಾಯತಿಯದು ಆಗಿದೆ ಇಲ್ಲಿ ನೀವು ಉಚಿತವಾಗಿ ದೇವಸ್ಥಾನವನ್ನು ಭೇಟಿ ನೀಡಬಹುದು ಇರಲಿ ಬೋಟಿಂಗ್ ಸೌಲಭ್ಯ ಕೂಡ ಇದೆ ರೂ.50 ಗೆ ನೀವು ಈ ಕೆರೆಯಲ್ಲಿ ಒಂದು ರೌಂಡ್ ಬೋಟಿಂಗ್ ಎಂಜಾಯ್ ಮಾಡಬಹುದು ಈ ಕೆರೆಗೆ ಮಾನಸ ಸರೋವರ ಎಂದು ಹೆಸರಿಡಲಾಗಿದೆ

ರಾಮಲಿಂಗೇಶ್ವರ ದೇವಾಲಯ

[ಬದಲಾಯಿಸಿ]

ಇದು ರಾಮಲಿಂಗೇಶ್ವರ ದೇವಸ್ಥಾನ ಇದು ಕೊನ್ನೂರ ರಸ್ತೆ ಬದಿಗೆ ಇದೆ ಇಲ್ಲಿ ಶಿವಲಿಂಗವನ್ನು ಸ್ಥಾಪಿಸಲಾಗಿದೆ ಪ್ರತಿ ವರ್ಷ ಇಲ್ಲಿ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ ಮತ್ತು ಇದೇ ದೇವಸ್ಥಾನದ ಒಳಗೆ ಸೋಮವಾರ ಇಲ್ಲಿ ಸಂತೆ ಕೂಡ ಕೊಡುತ್ತದೆ

ನಂದಿ ದೇವಸ್ಥಾನ

[ಬದಲಾಯಿಸಿ]

ಇದು ನಂದಿ ವಿಗ್ರಹ ದೇವಸ್ಥಾನ ಇದನ್ನು ರಾಚೋಟೇಶ್ವರ ದೇವಸ್ಥಾನದ ಬದಿಗೆ ಇರುವ ಒಂದು ದೇವಸ್ಥಾನ ಇಲ್ಲಿ ನಂದಿ ವಿಗ್ರಹವನ್ನು ನೀವು ನೋಡಬಹುದು

ರಾಚೋಟೇಶ್ವರ ದೇವಸ್ಥಾನ

[ಬದಲಾಯಿಸಿ]

ಇದು ಗ್ರಾಮ ಪಂಚಾಯತಿ ಹತ್ತಿರವಿರುವ ಒಂದು ದೇವಸ್ಥಾನ ರಾಚೋಟೇಶ್ವರ ದೇವಸ್ಥಾನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ

ಶಿವಲಿಂಗ ದೇವಸ್ಥಾನ

[ಬದಲಾಯಿಸಿ]

ಹನುಮಾನ ದೇವಸ್ಥಾನ

[ಬದಲಾಯಿಸಿ]

ಈ ಊರಲ್ಲಿ ಎರಡು ಹನುಮಾನ್ ದೇವಸ್ಥಾನಗಳಿವೆ ಒಂದು ಹೊರಗಡೆ ಹನುಮಾನ್ ಮತ್ತು ಒಂದು ಒಳಗಡೆ ದೇವಸ್ಥಾನ

ಕರೆಮ್ಮ ದೇವಸ್ತಾನ ಮಂಟೂರ

[ಬದಲಾಯಿಸಿ]

ಇದು ಮಂಟೂರಿನಿಂದ 1.2 km ದೂರದಲ್ಲಿದೆ ಕಿಶೋರಿ ಹೋಗುವ ರಸ್ತೆಯಲ್ಲಿದೆ ಇಲ್ಲಿ ನೀವು ತಾಯಿಗೆ ಹುಂಜ, ಕುರಿ, ಮೇಕೆ ಕುರಿ ಬಲಿ ಕೊಟ್ಟರೆ ನಿಮ್ಮ ಎಲ್ಲ ಈಡೇರಿಕೆಗಳು ಪೂರ್ಣವಾಗುತ್ತವೆ ಎಂದು ನಂಬಿಕೆ ಇದೆ ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಇಲ್ಲಿ ದೂರ ದೂರ ಹಳ್ಳಿಯಿಂದ ಬಂದು ಪ್ರಾಣಿಗಳನ್ನು ಬಲಿಕೊಡುತ್ತಾರೆ ತಮ್ಮ ಇಚ್ಛೆಗಳನ್ನು ಪೂರೈಸಿಕೊಳ್ಳುತ್ತಾರೆ

ಮಸೀದಿಗಳು

[ಬದಲಾಯಿಸಿ]

ಮುಸ್ಲಿಂ ಸಮುದಾಯದ ಖಾಜಾ ಬಂದೇನವಾಜ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ

[ಬದಲಾಯಿಸಿ]

ಈ ಊರಿನಲ್ಲಿ ಭೂಮಿ ಕಾಲುವೆ,ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಕಲ್ಲಂಗಡಿ ರೇಷ್ಮೆ ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಹಬ್ಬಗಳು

[ಬದಲಾಯಿಸಿ]

ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ

[ಬದಲಾಯಿಸಿ]
  • ಸರಕಾರಿ ಕಿರಿಯ ಪ್ರಾಥಮಿಕ ಶಾಲೆ
  • ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
  • ಉರ್ದು ಶಾಲೆ
  • ಅಂಗನವಾಡಿ

ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ಮಂಟೂರ&oldid=1165723" ಇಂದ ಪಡೆಯಲ್ಪಟ್ಟಿದೆ