ಮಂಜಿಮಾ ಮೋಹನ್
ಮಂಜಿಮಾ ಮೋಹನ್ | |
---|---|
![]() ಸಂದರ್ಶನವೊಂದರಲ್ಲಿ ಮಂಜಿಮಾ ಮೋಹನ್ರವರು. | |
ಜನನ | ತಿರುವನಂತಪುರಂ, ಕೇರಳ, ಭಾರತ | 11 March 1993
Alma mater | ಸ್ಟೆಲ್ಲಾ ಮೇರಿಸ್ ಕಾಲೇಜು, ಚೆನ್ನೈ |
ಶಿಕ್ಷಣs | |
Years active | ೧೯೯೭–೨೦೦೧(ಬಾಲ ಕಲಾವಿದೆ); ೨೦೧೫–ಪ್ರಸ್ತುತ |
Spouse |
ಗೌತಮ್ ಕಾರ್ತಿಕ್ (ವಿವಾಹ:28 November 2022) |
Parents |
|
ಮಂಜಿಮಾ ಮೋಹನ್ ಇವರು ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿಯಾಗುದ್ದು, ಮಲಯಾಳಂ ಚಲನಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮಲಯಾಳಂನಲ್ಲಿ ಒರು ವಡಕ್ಕನ್ ಸೆಲ್ಫಿ (೨೦೧೫) ಮತ್ತು ತಮಿಳಿನಲ್ಲಿ ಅಚ್ಚಮ್ ಎನ್ಬಾದು ಮದಮೈಯಾದಾ (೨೦೧೬) ಚಿತ್ರದ ಮೂಲಕ ಅವರು ಪ್ರಮುಖ ನಟಿಯಾಗಿ ಪಾದಾರ್ಪಣೆ ಮಾಡಿದರು. ಅವರು ೨೦೧೭ ರಲ್ಲಿ, ದಕ್ಷಿಣದ ಅತ್ಯುತ್ತಮ ಮಹಿಳಾ ಚೊಚ್ಚಲ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗೆದ್ದರು.[೧][೨]
ವೈಯಕ್ತಿಕ ಜೀವನ
[ಬದಲಾಯಿಸಿ]ಮಂಜಿಮಾರವರು ಹಿರಿಯ ಛಾಯಾಗ್ರಾಹಕರಾದ ವಿಪಿನ್ ಮೋಹನ್ ಮತ್ತು ನೃತ್ಯಗಾರ್ತಿ ಕಲಾಮಂಡಲಂ ಗಿರಿಜಾ ಅವರ ಪುತ್ರಿ. ಕೇರಳದ ತಿರುವನಂತಪುರಂನ ನಿರ್ಮಲಾ ಭವನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ತಮಿಳುನಾಡಿನ ಚೆನ್ನೈನ ಸ್ಟೆಲ್ಲಾ ಮೇರಿಸ್ ಕಾಲೇಜಿನಿಂದ ಗಣಿತಶಾಸ್ತ್ರದಲ್ಲಿ ಬಿ.ಎಸ್ಸಿ ಪದವಿ ಪಡೆದರು. ಅವರು ೨೮ ನವೆಂಬರ್ ೨೦೨೨ ರಂದು ನಟ ಗೌತಮ್ ಕಾರ್ತಿಕ್ ಅವರನ್ನು ವಿವಾಹವಾದರು.[೩]
ವೃತ್ತಿಜೀವನ
[ಬದಲಾಯಿಸಿ]೨೦೦೦ ದ ದಶಕದ ಆರಂಭದಲ್ಲಿ, ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಪ್ರಮುಖ ಬಾಲ ಕಲಾವಿದೆಯಾಗಿದ್ದ ಮಂಜಿಮಾರವರು, ನಂತರ ಸೂರ್ಯ ಟಿವಿಯಲ್ಲಿ "ಹೈ ಕಿಡ್ಸ್" ಎಂಬ ಹೆಸರಿನ ಮಕ್ಕಳಿಗಾಗಿ ದೂರದರ್ಶನ ಕಾಲ್-ಇನ್ ಕಾರ್ಯಕ್ರಮವನ್ನು ಮೂರು ವರ್ಷಗಳ ಕಾಲ ನಡೆಸಿಕೊಟ್ಟರು. ಇದು ಮಲಯಾಳಿ ಪ್ರೇಕ್ಷಕರಲ್ಲಿ ಅವರ ಖ್ಯಾತಿಯನ್ನು ಹೆಚ್ಚಿಸಿತು.[೪][೫]
ನಟನೆಯ ಅನುಭವವನ್ನು ಹೊಂದಿದ್ದರೂ, ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದಾಗ ತಮಗೆ "ಸ್ವಲ್ಪವೂ ವಿಶ್ವಾಸವಿರಲಿಲ್ಲ" ಮತ್ತು ಆರಂಭಿಕ ದಿನಗಳು "ಭಯಾನಕ" ಎಂದು ಅವರು ಹೇಳಿದರು.[೬] ಜಿ.ಪ್ರಜಿತ್ರವರು ನಿರ್ದೇಶಿಸಿದ ಮತ್ತು ವಿನೀತ್ ಶ್ರೀನಿವಾಸನ್ರವರು ಚಿತ್ರಕಥೆ ಬರೆದ ಒರು ವಡಕ್ಕನ್ ಸೆಲ್ಫಿಯಲ್ಲಿ ಮಂಜಿಮಾ ಮೋಹನ್ರವರು ಮಹಿಳಾ ನಾಯಕಿಯಾಗಿ ಕಾಣಿಸಿಕೊಂಡರು.[೭]
ಒರು ವಡಕ್ಕನ್ ಸೆಲ್ಫಿ ಚಿತ್ರ ಬಿಡುಗಡೆಯಾದ ನಂತರ, ಮಂಜಿಮಾರವರು ತಮ್ಮ ಮೊದಲ ತಮಿಳು ಚಿತ್ರ ಅಚ್ಚಮ್ ಎನ್ಬಾದು ಮದಮೈಯಡವನ್ನು ಪಡೆದರು. ಇದರ ನಿರ್ದೇಶಕರಾದ ಗೌತಮ್ ವಾಸುದೇವ್ ಮೆನನ್,[೮] ಒರು ವಡಕ್ಕನ್ ಸೆಲ್ಫಿ ಚಿತ್ರದಲ್ಲಿನ ಅವರ ಕೆಲಸದಿಂದ ಪ್ರಭಾವಿತರಾದರು. ಅವರು ಆಡಿಷನ್ಗೆ ಒಳಗಾದ ನಂತರ, ಮಂಜಿಮಾ ಅವರನ್ನು ಮಹಿಳಾ ನಾಯಕಿಯಾಗಿ ಆಯ್ಕೆ ಮಾಡಿದರು.[೯]
೨೦೧೭ ರಲ್ಲಿ, ಅವರು ಎರಡು ತಮಿಳು ಚಲನಚಿತ್ರಗಳನ್ನು ಹೊಂದಿದ್ದರು. ಒಂದು ಉದಯನಿಧಿ ಸ್ಟಾಲಿನ್ ಎದುರು - ಇಪ್ಪಡೈ ವೆಲ್ಲುಮ್[೧೦] ಮತ್ತು ಇನ್ನೊಂದು, ವಿಕ್ರಮ್ ಪ್ರಭು ಎದುರು ಸತ್ಯನ್. ೨೦೧೯ ರಲ್ಲಿ, ಅವರು ನಿವಿನ್ ಪೌಲಿ ಎದುರು ಮಿಖೇಲ್ ಚಿತ್ರದಲ್ಲಿ ಅವರೊಂದಿಗೆ ಎರಡನೇ ಬಾರಿಗೆ ಮಲಯಾಳಂಗೆ ಮರಳಿದರು.[೧೧] ವಿಜಯ್ ಸೇತುಪತಿ ಅವರೊಂದಿಗೆ ತುಘಲಕ್ ದರ್ಬಾರ್ ಮತ್ತು ರಾಶಿ ಖನ್ನಾ ಸೇರಿದಂತೆ ಅವರ ವೃತ್ತಿಜೀವನದಲ್ಲಿ ಕೆಲವು ತಮಿಳು ಚಲನಚಿತ್ರಗಳಿವೆ.[೧೨][೧೩][೧೪] ೨೦೨೩ ರಲ್ಲಿ, ಬಿಡುಗಡೆಯಾದ ಅವರ ಮೊದಲ ಬಿಡುಗಡೆ ಎ.ಎಲ್.ವಿಜಯ್ ನಿರ್ದೇಶನದ ಭಯಾನಕ ಥ್ರಿಲ್ಲರ್ ಚಿತ್ರ ಬೂ, ಇದು ನೇರವಾಗಿ ಜಿಯೋ ಸಿನೆಮಾದಲ್ಲಿ ಪ್ರಥಮ ಪ್ರದರ್ಶನ ಕಂಡಿತು ಮತ್ತು ೨೦೨೫ ರಲ್ಲಿ, ಅವರು ಸುಝಲ್: ದಿ ವೊರ್ಟೆಕ್ಸ್ ಸೀಸನ್ ೨ ನಲ್ಲಿ, ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು.[೧೫]
ಚಲನಚಿತ್ರಗಳು
[ಬದಲಾಯಿಸಿ]† | ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ. |
ವರ್ಷ | ಶೀರ್ಷಿಕೆ | ಪಾತ್ರ | ಭಾಷೆಗಳು | ಟಿಪ್ಪಣಿಗಳು | ಉಲ್ಲೇಖ |
---|---|---|---|---|---|
೧೯೯೭ | ಕಲಿಯೂಂಜಲ್ | ಕಿರಿಯ ಅಮ್ಮು | ಮಲಯಾಳಂ | ಬಾಲ ಕಲಾವಿದೆ | |
೧೯೯೮ | ಮೈಲ್ಪೀಲಿಕ್ಕಾವು | ಗಾಯತ್ರಿಯ ಸಂಬಂಧಿ | ಮಲಯಾಳಂ | ||
೧೯೯೯ | ಸಾಫಲ್ಯಂ | ಶ್ರೀತುಮೋಳ್ | ಮಲಯಾಳಂ | ||
೨೦೦೦ | ಪ್ರಿಯಮ್ | ಅನು | ಮಲಯಾಳಂ | ||
ತೆಂಕಾಸಿಪಟ್ಟಣಂ | ಕಿರಿಯ ದೇವೂಟಿ | ಮಲಯಾಳಂ | |||
ಮಧುರನೊಂಬರಕಟ್ಟು | ಮಾಯಾ | ಮಲಯಾಳಂ | |||
ಕಾಬೂಲಿವಾಲಾ | ಮಲಯಾಳಂ | ||||
೨೦೦೧ | ಸುಂದರ ಪುರುಷ | ಸೂರ್ಯನಾರಾಯಣನ ಮಗಳು | ಮಲಯಾಳಂ | ||
೨೦೧೫ | ಒರು ವಡಕ್ಕನ್ ಸೆಲ್ಫಿ | ಡೈಸಿ ಜಾರ್ಜ್ | ಮಲಯಾಳಂ | ನಾಯಕನಾಗಿ ಚೊಚ್ಚಲ | |
೨೦೧೬ | ಅಚ್ಚಂ ಯೆನ್ಬದು ಮದಮೈಯಾದ | ಲೀಲಾ ರಾಮನ್ | ತಮಿಳು | ||
ಸಾಹಸಂ ಸ್ವಸಗ ಸಾಗಿಪೋ | ಲೀಲಾ | ತೆಲುಗು | |||
೨೦೧೭ | ಸತ್ರಿಯನ್ | ನಿರಂಜನ | ತಮಿಳು | ||
ಇಪ್ಪಡೈ ವೆಲ್ಲುಮ್ | ಭಾರ್ಗವಿ | ತಮಿಳು | |||
೨೦೧೯ | ಎನ್ಟಿಆರ್: ಕಥಾನಾಯಕುಡು | ನರ ಭುವನೇಶ್ವರಿ | ತೆಲುಗು | ||
ಎನ್ಟಿಆರ್: ಮಹಾನಾಯಕುಡು | ತೆಲುಗು | ||||
ಮಿಖೇಲ್ | ಮೇರಿ | ಮಲಯಾಳಂ | |||
ದೇವರಾಟ್ಟಂ | ಮಧು | ತಮಿಳು | |||
೨೦೨೧ | ಕಲತ್ತಿಲ್ ಸಂಧಿಪ್ಪೊಂ | ಕಾವ್ಯ | ತಮಿಳು | ||
ತುಘಲಕ್ ದರ್ಬಾರ್ | ಮಣಿಮೇಗಲೈ | ತಮಿಳು | [೧೬] | ||
೨೦೨೨ | ಎಫ್ಟಿಆರ್ | ಪ್ರಾರ್ಥನಾ ರಾಮನ್ | ತಮಿಳು | ||
೨೦೨೩ | ಬೂ | ನೀಲು | ತಮಿಳು/ತೆಲುಗು | ಜಿಯೋ ಸಿನಿಮಾ ರಂದು ಬಿಡುಗಡೆಯಾಗಿದೆ |
ದೂರದರ್ಶನ
[ಬದಲಾಯಿಸಿ]ವರ್ಷ | ಶೀರ್ಷಿಕೆ | ಪಾತ್ರ | ಟಿಪ್ಪಣಿಗಳು |
---|---|---|---|
೨೦೨೫ | ಸುಝಲ್: ದಿ ವೋರ್ಟೆಕ್ಸ್ | ನಾಗಮ್ಮ | ಸೀಸನ್ ೨ |
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
[ಬದಲಾಯಿಸಿ]ವರ್ಷ | ಪ್ರಶಸ್ತಿ | ವರ್ಗ | ಚಲನಚಿತ್ರ | ಫಲಿತಾಂಶ |
---|---|---|---|---|
೨೦೦೧ | ಏಷಿಯಾನೆಟ್ ಫಿಲ್ಮ್ ಅವಾರ್ಡ್ಸ್ | ಅತ್ಯುತ್ತಮ ಬಾಲ ಕಲಾವಿದ | ಪ್ರಿಯಮ್ | ಗೆಲುವು |
೨೦೦೧ | ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ | ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ಬಾಲನಟಿ | ಮಧುರನೊಂಬರಕಟ್ಟು | ಗೆಲುವು |
೨೦೦೧ | ಕೇರಳ ರಾಜ್ಯ ದೂರದರ್ಶನ ಪ್ರಶಸ್ತಿ | ಅತ್ಯುತ್ತಮ ಬಾಲನಟನಿಗೆ ಕೇರಳ ರಾಜ್ಯ ದೂರದರ್ಶನ ಪ್ರಶಸ್ತಿ | ಕಾಬುಲಿವಾಲಾ | ಗೆಲುವು |
೨೦೧೬ | ಎಸ್ಐಐಎಮ್ಎ | ಅತ್ಯುತ್ತಮ ಚೊಚ್ಚಲ-ಮಹಿಳೆ (ಮಲಯಾಳಂ) | ಒರು ವಡಕ್ಕನ್ ಸೆಲ್ಫಿ | Nominated |
೨೦೧೭ | ಫಿಲ್ಮ್ಫೇರ್ ಪ್ರಶಸ್ತಿ | ಅತ್ಯುತ್ತಮ ಮಹಿಳಾ ಚೊಚ್ಚಲ ಚಿತ್ರಕ್ಕಾಗಿ ಫಿಲ್ಮ್ಫೇರ್ ಪ್ರಶಸ್ತಿ – ದಕ್ಷಿಣ | ಅಚ್ಚಂ ಯೆನ್ಬದು ಮಡಮೈಯಾದ | ಗೆಲುವು |
೨೦೧೭ | ೬ನೇ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು | ಅತ್ಯುತ್ತಮ ಆರಂಭಿಕ ನಟಿ (ತಮಿಳು) | Nominated | |
೨೦೧೭ | ಎಡಿಸನ್ ಪ್ರಶಸ್ತಿಗಳು (ಭಾರತ) | ಅತ್ಯುತ್ತಮ ಚೊಚ್ಚಲ ನಟಿ | ಗೆಲುವು |
ಉಲ್ಲೇಖಗಳು
[ಬದಲಾಯಿಸಿ]- ↑ "64th Filmfare Awards South 2017: R Madhavan wins Best Actor, Suriya bags Critics Award". India Today. 18 June 2017. Archived from the original on 11 July 2017. Retrieved 14 July 2017.
- ↑ "Manjima is the new heroine for Simbu". 14 May 2015. Archived from the original on 4 March 2016. Retrieved 21 May 2015.
- ↑ "Gautham Karthik and Manjima Mohan are now married, see first photos". New Indian Express. 28 November 2022. Archived from the original on 29 November 2022. Retrieved 29 November 2022.
- ↑ "Manjima Mohan talks about women's safety on Independence Day; Says, 'It feels like a distant dream'". The Times of India. 2024-08-15. ISSN 0971-8257. Retrieved 2024-12-19.
- ↑ "People claimed that my father-in-law wasn't happy with our marriage: Manjima Mohan". People claimed that my father-in-law wasn't happy with our marriage: Manjima Mohan (in ಇಂಗ್ಲಿಷ್). Retrieved 2024-12-19.
- ↑ "She is Back!". Archived from the original on 24 November 2015. Retrieved 21 May 2015.
- ↑ Krishnakumar, G. (5 April 2015). "Selfie clicks, becomes year's first super-hit". The Hindu. Archived from the original on 5 December 2019. Retrieved 18 July 2018.
- ↑ "Manjima Mohan is STR's heroine in Gautham Menon film!". Sify. Archived from the original on 16 May 2015. Retrieved 21 May 2015.
- ↑ "Lady luck smiles on Manjima Mohan". 14 May 2015. Archived from the original on 4 March 2016. Retrieved 21 May 2015.
- ↑ "Lyca signs Udhayanidhi to be directed by Gaurav Narayanan". Sify. Archived from the original on 10 January 2017. Retrieved 11 May 2017.
- ↑ "Manjima Mohan cast opposite Vikram Prabhu". The Times of India. Archived from the original on 4 December 2017. Retrieved 11 May 2017.
- ↑ "Vijay Sethupathi's Tughlaq Durbar to get a direct OTT release?". Times Now. 22 April 2021. Archived from the original on 4 May 2021. Retrieved 4 May 2021.
- ↑ "Vijay Sethupathi announces release date for Laabam as Tughlaq Durbar goes the OTT way". The Indian Express. 22 April 2021. Archived from the original on 4 May 2021. Retrieved 4 May 2021.
- ↑ "Vijay Sethupathi's 'Tughlaq Durbar' skips theatrical release". The Times of India. 22 April 2021. Archived from the original on 4 May 2021. Retrieved 4 May 2021.
- ↑ "Director Vijay's horror thriller 'Boo' to premiere directly on OTT". The Times of India. 2023-05-26. ISSN 0971-8257. Archived from the original on 1 June 2023. Retrieved 2023-06-01.
- ↑ "Manjima Mohan onboard for Vijay Sethupathi's Tughlaq Darbar". Cinema Express (in ಇಂಗ್ಲಿಷ್). 5 August 2019. Archived from the original on 10 May 2021. Retrieved 10 May 2021.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಮಂಜಿಮಾ ಮೋಹನ್ ಐ ಎಮ್ ಡಿ ಬಿನಲ್ಲಿ