ಮಂಗಳೂರು ಚಿಕನ್ ಸುಕ್ಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಂಗಳೂರು ಚಿಕನ್ ಸುಕ್ಕ

ಮಂಗಳೂರು ಚಿಕನ್ ಸುಕ್ಕ ಅಥವಾ ಕೋರಿ ಸುಕ್ಕ (ತುಳು) ಮಂಗಳೂರು ಮತ್ತು ಉಡುಪಿ ಪ್ರದೇಶಕ್ಕೆ ಸೇರಿದ ಚಿಕನ್ ನ ಭಾರತೀಯ ಖಾದ್ಯ. "ಚಿಕನ್ ಸುಕ್ಕ" ಎಂದರೆ ತುಳುವಿನಲ್ಲಿ "ಕೋರಿ ಸುಕ್ಕ" ಎಂದರ್ಥ. ಇದನ್ನು ಸುಕ್ಕ ಮತ್ತು ಸೆಮಿ ಗ್ರೇವಿ ಎಂಬ ಎರಡು ಮಾರ್ಪಾಡುಗಳಲ್ಲಿ ತಯಾರಿಸಬಹುದು.[೧]

ಬೇಕಾಗುವ ಸಾಮಾಗ್ರಿಗಳು[ಬದಲಾಯಿಸಿ]

ಚಿಕನ್ ಸುಕ್ಕ ತಯಾರಿಸಲು ಬೇಕಾಗುವ ಪದಾರ್ಥಗಳು:[೨]

ಮಾಡುವ ವಿಧಾನ[ಬದಲಾಯಿಸಿ]

ಚಿಕನ್ ಸುಕ್ಕವನ್ನು ಮಾಡುವ ವಿಧಾನವನ್ನು ಕೆಳಗೆ ನೀಡಲಾಗಿದೆ.

  • ಚಿಕನ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ತೊಳೆಯಿರಿ. ನಂತರ ಅದಕ್ಕೆ ಅರಿಶಿನ, ಉಪ್ಪು, ಮತ್ತು ನಿಂಬೆ ರಸ ಸೇರಿಸಿ ಬೇಯಿಸಿ ಮತ್ತು ಪಕ್ಕಕ್ಕೆ ಇರಿಸಿ.
  • ಮಸಾಲಾ ಪುಡಿ: ಹುರಿದ ಒಣ ಕೆಂಪು ಮೆಣಸಿನಕಾಯಿ, ಕೊತ್ತಂಬರಿ, ಮೆಂತ್ಯ, ಜೀರಿಗೆ, ದಾಲ್ಚಿನ್ನಿ ಮತ್ತು ಲವಂಗ ಹಾಕಿ ಪುಡಿ ಮಾಡಿ.
  • ಮಸಾಲಾ ಪೇಸ್ಟ್: ೧ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಪೇಸ್ಟ್ ಆಗಿ ಪುಡಿಮಾಡಿ. ತುರಿದ ತೆಂಗಿನಕಾಯಿ ಸೇರಿಸಿ ಸ್ವಲ್ಪ ಹೊತ್ತು ಪುಡಿ ಮಾಡಿ.
  • ತುಪ್ಪ ಮತ್ತು ಎಣ್ಣೆಯನ್ನು ಬಿಸಿ ಮಾಡಿ ಕತ್ತರಿಸಿದ ಈರುಳ್ಳಿಯನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಫ್ರೈ ಮಾಡಿ, ಕತ್ತರಿಸಿದ ಟೊಮ್ಯಾಟೊ ಸೇರಿಸಿ ಮತ್ತು ಎಣ್ಣೆ ಬೇರ್ಪಡಿಸುವವರೆಗೆ ಹುರಿಯಿರಿ.
  • ಕರಿಬೇವಿನ ಎಲೆಗಳನ್ನು ಸೇರಿಸಿ ಸ್ವಲ್ಪ ಹೊತ್ತು ಫ್ರೈ ಮಾಡಿ. ಈಗ ಬೇಯಿಸಿದ ಚಿಕನ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಸ್ವಲ್ಪ ಹೊತ್ತು ಬೇಯಿಸಿ.
  • ಈಗ ಮಸಾಲಾ ಪೇಸ್ಟ್ ಮತ್ತು ಮಸಾಲ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಮತ್ತು ಈಗ ಚಿಕನ್ ಸುಕ್ಕ ತಯಾರಾಗಿದೆ.

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. http://cheriesstolenrecipes.blogspot.com/2011/06/kori-aajadina-chicken-sukka.html?m=1
  2. "ಆರ್ಕೈವ್ ನಕಲು". Archived from the original on 2018-06-22. Retrieved 2019-11-16.
  3. "ಆರ್ಕೈವ್ ನಕಲು". Archived from the original on 2019-11-16. Retrieved 2019-11-16.