ಭಿಮ್

ವಿಕಿಪೀಡಿಯ ಇಂದ
Jump to navigation Jump to search

ಭಿಮ್(ಭಾರತ್ ಇಂಟರ್ಫೇಸ್ ಫಾರ್ ಮನಿ) ಎನ್ನುವುದು ಏಕೀಕೃತ ಪಾವತಿ ವ್ಯವಸ್ಥೆ (ಉನಿಫೈಡ್ ಪೆಮೆಂಟ್ ಇಂಟರ್ಫೇಸ್(Unified Payment Interface (UPI))) ಆಧಾರಿತ ಭಾರತೀಯ ರಾಷ್ಟ್ರೀಯ ಪಾವತಿ ಸಂಸ್ಥೆ(ನ್ಯಾಷನಲ್ ಪೆಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ(National Payments Corporation of India (NPCI)))ಯಿಂದ ಅಭಿವೃದ್ಧಿಸಲ್ಪಟ್ಟ ಒಂದು ಮೊಬೈಲ್ ಆಪ್ ಅಗಿದೆ. ಈ ಆಪ್ ನ್ನು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ದಿ. ೩೦.೧೦.೨೦೧೬ ರಂದು ನವದೆಹಲಿಯ ಟಲ್ಕೊಟರ ಸ್ಟೇಡಿಯಂನಲ್ಲಿ ಒಂದು ಡಿಜಿಧನ್ ಕಾರ್ಯಕ್ರಮದಲ್ಲಿ ಬಿಡುಗಡೆಮಾಡಿದರು. ಈ ತಂತ್ರಾಂಶ ಕ್ಕೆ ಶ್ರೀ ಬಿ.ಆರ್.ಅಂಬೇಡ್ಕರ್ ಅವರ ಹೆಸರಿಡಲಾಗಿದೆ. ಭಿಮ್ ಆಪ್ ಭಾರತೀಯ ಬ್ಯಾಂಕ್ ನೋಟುಗಳ ಅನಾಣ್ಯೀಕರಣ ೨೦೧೬ ದ ಭಾಗವಾಗಿರುವುದಲ್ಲದೇ, ನೇರವಾಗಿ ಬ್ಯಾಂಕುಗಳ ಮೂಲಕ ಮತ್ತು ಹಣವಿಲ್ಲದ ವ್ಯವಹಾರದ ಕಡೆಗೆ ಈ-ಬಟಾವಡೆ(e-payments)ಯನ್ನು ಸುಗಮವಾಗಿ ನಡೆಸುವತ್ತ ಉದ್ದೇಶಿತವಾಗಿದೆ.[೧]

ಬಿಮ್ ಆಪ್ ಲೋಗೋ

ಭಿಮ್ ಕಿರುತಂತ್ರಾಂಶ(ಆಪ್)
BhimAppLogo.jpg
ಅಭಿವೃದ್ಧಿ ಮಾಡಿದವರುಭಾರತೀಯ ರಾಷ್ಟ್ರೀಯ ಪಾವತಿ ಸಂಸ್ಥೆ(ನ್ಯಾಷನಲ್ ಪೆಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ
ಪ್ರಾಥಮಿಕ ಬಿಡುಗಡೆ30 December 2016
PlatformGoogle Play (Available),
App Store (Under Development)
ಲಭ್ಯತೆEnglish, Hindi, Bengali, Tamil, Telugu, Kannada, Malayalam, Odia, Gujarati[೨]
ವರ್ಗಪಾವತಿ
ಜಾಲತಾಣNPCI Portal


ಈ ಕಿರುತಂತ್ರಾಂಶ(ಆಪ್)ವು ತಕ್ಷಣದ ಪಾವತಿ ಸೇವೆ(Immediate Payment Service)ಮೂಲಸೌಕರ್ಯದ ಮೇಲೆ ಕಟ್ಟಲ್ಪಟ್ಟಿದ್ದು,ಈ ವೇದಿಕೆಯನ್ನು ಉಪಯೋಗಿಸುವ ಎಲ್ಲಾ ಭಾರತೀಯ ಬ್ಯಾಂಕ್‍ಗಳನ್ನು ಬೆಂಬಲಿಸುವುದು ಮತ್ತು ಬಳಕೆದಾರನ ಮತ್ತು ಇನ್ನೊಂದು ವ್ಯಕ್ತಿಯ ಯಾವುದೇ ಬ್ಯಾಂಕ್ ಖಾತೆಗಳ ನಡುವೆ ತಕ್ಷಣ ಹಣ ವರ್ಗಾಯಿಸಲು ಅನುಮತಿಸುತ್ತದೆ.[೩]ಇದನ್ನು ಎಲ್ಲಾ ಮೊಬೈಲ್ ಸಾಧನಗಳಲ್ಲಿ ಬಳಸಬಹುದು.[೪]

ಪ್ರಯೋಜನಗಳು[ಬದಲಾಯಿಸಿ]

ಭಿಮ್ ಬಳಕೆದಾರರು ಇತರ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ(UPI)) ಯ ಪಾವತಿ ವಿಳಾಸಗಳಿಗೆ ಅಥವಾ ಸ್ಕ್ಯಾನ್ ಆದ ಕ್ಯುಆರ್ ಕೋಡ್(QR code) ಗಳಿಗೆ ಹಣ ಕಳುಹಿಸಲು ಅಥವಾ ಅವುಗಳಿಂದ ಸ್ವೀಕರಿಸಲು ಅವಕಾಶವಿದೆ. ಅದಲ್ಲದೆ,ಯುಪಿಐ(UPI) ಆಧಾರದ ಮೇಲೆ ಹೊಂದಿಲ್ಲದಿರುವ, ಐಎಫ್‍ಎಸ್‍ಸಿ(IFSC) ಅಥವಾ ಎಂ‍ಎಂ‍ಐ‍ಡಿ(MMID (ಮೊಬೈಲ್ ಮನಿ ಐಡೆಂಟಿಫೈಯರ್)) ಬ್ಯಾಂಕ್ ಖಾತೆಯಿರುವ ಬಳಕೆದಾರರು ಕೂಡ ಉಪಯೋಗಿಸಬಹುದು.[೫]

ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಪ್ರಸಕ್ತ ಹಣದ ಮೊತ್ತವನ್ನು ಪರಿಶೀಲಿಸಬಹುದು. ಯಾವುದೇ ಸಮಯದಲ್ಲಿ ಒಂದು ಬ್ಯಾಂಕ್ ಖಾತೆ ಮಾತ್ರ ಸಕ್ರಿಯವಾಗಿದ್ದರೂ, ಬಳಕೆದಾರರು ತಮಗೆ ಬೇಕೆನಿಸಿದ ಬ್ಯಾಂಕ್ ಖಾತೆಯನ್ನು ವ್ಯವಹಾರ ನಡೆಸಲು ಉಪಯೋಗಿಸಬಹುದು.

ಬಳಕೆದಾರರು ಸ್ಥಿರ ಮೊತ್ತಕ್ಕೆ ಕ್ಯುಆರ್ ಕೋಡ್(QR code)ನ್ನು ಸೃಷ್ಟಿಸುವುದು, ವ್ಯಾಪಾರಿ - ಮಾರಾಟಗಾರ - ಖರೀದಿದಾರ ವ್ಯವಹಾರದಲ್ಲಿ ಉಪಯೋಗವಾಗುವುದು. ಅದಲ್ಲದೆ, ಬಳಕೆದಾರರು ಒಂದಕ್ಕಿಂತ ಹೆಚ್ಚು ಪಾವತಿ ವಿಳಾಸ ಹೊಂದಬಹುದು.

ಬಿಮ್ ತಂತ್ರಾಂಶದಲ್ಲಿ, ೧೨ ಅಂಕಿಯ ಆಧಾರ್ ಸಂಖ್ಯೆಯನ್ನು ಪಾವತಿ ಗುರುತನ್ನಾಗಿ (ID) ಇಟ್ಟು ಕೊಂಡರೆ, ಯಾವುದೇ ಬಯೋಮೆಟ್ರಿಕ್ ದೃಢೀಕರಣ ಅಥವಾ ಬ್ಯಾಂಕ್ ನ ಜತೆಗೆ ಮೊದಲು ನೋಂದಣಿ ಅಥವಾ ಏಕೀಕೃತ ಪಾವತಿ ವ್ಯವಸ್ಥೆಯ (UPI) ಅಗತ್ಯವಿರುವುದಿಲ್ಲ.[೬]

ಕೇಂದ್ರ ಬಜೆಟ್ 2017 ಸಮಯದಲ್ಲಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸರ್ಕಾರದ ಭೀಮ್ ಅಪ್ಲಿಕೇಶನ್ ಬಳಕೆಯನ್ನು ಉತ್ತೇಜಿಸಲು ಎರಡು ಹೊಸ ಯೋಜನೆ ಆರಂಭಿಸುವುದಾಗಿ ಹೇಳಿದರು. ಇದರಲ್ಲಿ ಒಂದು, ವ್ಯಕ್ತಿಗಳಿಗೆ 'ಉಲ್ಲೇಖಿತ ಪಾವತಿ', ಮತ್ತು ಎರಡನೆಯದು, ಬಿಮ್‍ ನಿಂದ ಹಣ ಸ್ವೀಕರಿಸುವ ವ್ಯಾಪಾರಿಗಳಿಗೆ 'ನಗದು ವಾಪಾಸು'.[೭]

ಮನ್ನಣೆ[ಬದಲಾಯಿಸಿ]

ಕೇಂದ್ರ ಬಜೆಟ್ 2017 ಸಮಯದಲ್ಲಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಿಮ್‍ನ್ನು ಪ್ರಸ್ತುತ 125 ಲಕ್ಷ ಭಾರತೀಯ ಪೌರರು ಬಳಸಲಾಗುತ್ತಿದ್ದಾರೆ ಎಂದು ಹೇಳಿದರು.[೮]

ಇವುಗಳನ್ನೂ ಓದಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಹೆಚ್ಚಿನ ಓದು[ಬದಲಾಯಿಸಿ]

"https://kn.wikipedia.org/w/index.php?title=ಭಿಮ್&oldid=893384" ಇಂದ ಪಡೆಯಲ್ಪಟ್ಟಿದೆ