ಭಾವನಾ (ಚಲನಚಿತ್ರ)
| ಭಾವನಾ | |
|---|---|
| ನಿರ್ದೇಶನ | ಪ್ರವೀಣ್ ಭಟ್ |
| ನಿರ್ಮಾಪಕ | ದೇವಿ ದತ್ |
| ಲೇಖಕ | ಮುಷ್ತಾಕ್ ಜಾಲಿಲಿ |
| ಕಥೆ | ಪ್ರವೀಣ್ ಭಟ್ |
| ಪಾತ್ರವರ್ಗ |
|
| ಸಂಗೀತ | ಬಪ್ಪಿ ಲಾಹಿರಿ |
| ಛಾಯಾಗ್ರಹಣ | ಪ್ರವೀಣ್ ಭಟ್ |
| ಸಂಕಲನ | ಬಿ. ಪ್ರಸಾದ್ |
| ಬಿಡುಗಡೆಯಾಗಿದ್ದು |
|
| ದೇಶ | ಭಾರತ |
| ಭಾಷೆ | ಹಿಂದಿ |
ಭಾವನಾ 1984 ರ ಹಿಂದಿ ಚಲನಚಿತ್ರವಾಗಿದ್ದು, ಛಾಯಾಗ್ರಾಹಕ ಪ್ರವೀಣ್ ಭಟ್ ನಿರ್ದೇಶಿಸಿದ ಮೊದಲ ಚಿತ್ರವಾಗಿದೆ.[೧] ಈ ಚಿತ್ರದಲ್ಲಿ ಶಬಾನಾ ಅಜ್ಮಿ, ಮಾರ್ಕ್ ಜುಬರ್, ಕನ್ವಾಲ್ಜಿತ್ ಸಿಂಗ್, ಸಯೀದ್ ಜಾಫ್ರಿ, ರೋಹಿಣಿ ಹಟ್ಟಂಗಡಿ, ಸತೀಶ್ ಷಾ ಮತ್ತು ಊರ್ಮಿಳಾ ಮಾತೋಂಡ್ಕರ್ (ಬಾಲ ಕಲಾವಿದೆಯಾಗಿ) ನಟಿಸಿರುತ್ತಾರೆ. ಚಿತ್ರದ ಸಂಗೀತ ನಿರ್ದೇಶನವನ್ನು ಬಪ್ಪಿ ಲಾಹಿರಿ ಮಾಡಿರುತ್ತಾರೆ.[೧]
ಕಥಾವಸ್ತು
[ಬದಲಾಯಿಸಿ]"ಭಾವನಾ" ಚಿತ್ರವು ಕಡಿಮೆ ಸೌಲಭ್ಯ ಹೊಂದಿರುವ ಮಹಿಳೆಯ ಕಥೆಯಾಗಿದೆ. ನಗರದಲ್ಲಿ ಒಂಟಿಯಾಗಿ ವಾಸಿಸುವ ಭಾವನಾ ಸಕ್ಸೇನಾ ಎಂಬ ಅನಾಥ ಯುವತಿ ಒಂದು ತೋಟದಲ್ಲಿ ಅಜಯ್ ಕಪೂರ್ ಎಂಬ ವ್ಯಕ್ತಿಯನ್ನು ಭೇಟಿಯಾಗುತ್ತಾಳೆ, ಆಕೆಯ ಭಾವಚಿತ್ರವನ್ನು ಚಿತ್ರಿಸುತ್ತಾನೆ. ಅವರು ಸ್ನೇಹಿತರಾಗುತ್ತಾರೆ ಮತ್ತು ನಂತರ ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆ. ಅಂತಿಮವಾಗಿ ಅವರು ವಿವಾಹವಾಗುತ್ತಾರೆ, ಆದಾಗ್ಯೂ, ಕಪೂರ್‌ನ ತಂದೆ ಈ ಮದುವೆಗೆ ಅನುಮತಿ ನೀಡಿರಲಿಲ್ಲ. ಅಜಯ್ ಒಬ್ಬ ಕಲಾವಿದ, ಅವನ ಹತ್ತಿರ ಜೀವನ ನಡೆಸಲು ಸಾಕಷ್ಟು ಹಣ ಇರುವುದಿಲ್ಲ. ಭಾವನಾ ತನ್ನ ವರ್ಣಚಿತ್ರಗಳನ್ನು ಮನೆಯಿಂದ ಮನೆಗೆ ಹೋಗಿ ಮಾರಾಟ ಮಾಡಲು ಪ್ರಯತ್ನಿಸುತ್ತಾಳೆ, ಆದರು ಅವರ ಆರ್ಥಿಕ ಸ್ಥಿತಿ ಕಳಪೆಯಾಗಿರುತ್ತದೆ. ಈ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯ ಮಧ್ಯೆ, ಭಾವನಾ ತಾನು ಅಜಯ್‌ನ ಮಗುವನ್ನು ಹೊಂದಿದ್ದಾಳೆಂದು ಅರಿತುಕೊಳ್ಳುತ್ತಾಳೆ. ಮಗುವನ್ನು ಬೆಳೆಸುವ ವೆಚ್ಚವನ್ನು ಭರಿಸಲಾಗದೆ ಅಜಯ್ ಬೇರೆ ನಗರದಲ್ಲಿ ವಾಸಿಸುವ ತನ್ನ ಶ್ರೀಮಂತ ಕೋಟ್ಯಾಧಿಪತಿ ತಂದೆಯನ್ನು ಸಂಪರ್ಕಿಸಲು ನಿರ್ಧರಿಸುತ್ತಾನೆ. ಅವನು ಒಂದೆರಡು ದಿನಗಳಲ್ಲಿ ಹಿಂತಿರುಗುತ್ತೇನೆ ಎಂದು ಭಾವನಾಗೆ ಹೇಳುತ್ತಾನೆ. ಅಜಯ್ ಭಾವನಾಳನ್ನು ಒಂಟಿಯಾಗಿ ಬಿಟ್ಟು ಹಲವು ತಿಂಗಳುಗಳಾದರು ಅಜಯ್‌ನ ಯಾವುದೇ ಸುದ್ದಿ ಇರುವುದಿಲ್ಲ. ಭಾವನಾ ಅಜಯ್‌ನ ತಂದೆಯ ವಿಳಾಸವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾಳೆ ಮತ್ತು ಅಜಯ್‌ನನ್ನು ಹುಡುಕುತ್ತಾ ಹೋಗುತ್ತಾಳೆ. ಅಜಯ್ ತನ್ನ ತಂದೆಯ ಇಚ್ಛೆಯಂತೆ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿರುವುದನ್ನು ನೋಡಿ ಭಾವನಾ ಬೆರಗಾಗುತ್ತಾಳೆ. ನಿರಾಶೆಗೊಂಡ ಭಾವನಾ ತನ್ನ ಆತ್ಮೀಯ ಸ್ನೇಹಿತೆ ಶೋಭಾಳ ಬಳಿ ತನ್ನ ದುಃಖವನ್ನು ಹೇಳಿಕೊಳ್ಳುತ್ತಾಳೆ. ಆದರೆ ಇದು ಅವಳ ಜೀವನದ ಹೋರಾಟಗಳ ಅಂತ್ಯವಾಗುವುದಿಲ್ಲ.[೧]
ಪಾತ್ರ ಪರಿಚಯ
[ಬದಲಾಯಿಸಿ]- ಶಬಾನಾ ಅಜ್ಮಿ ಭಾವನಾ ಸಕ್ಸೇನಾ ಆಗಿ
- ಮಾರ್ಕ್ ಜುಬರ್ ಅಜಯ್ ಕಪೂರ್ ಆಗಿ
- ಕನ್ವಾಲ್ಜಿತ್ ಸಿಂಗ್ ಡಾ. ಅನಿಲ್ ಬಿ. ಸಕ್ಸೇನಾ ಆಗಿ
- ಊರ್ಮಿಳಾ ಮಾತೋಂಡ್ಕರ್ ರಾಮ್ ಕಿಶನ್ ಅವರ ಮಗಳಾಗಿ (ಬಾಲ ಕಲಾವಿದೆ)
- ರೋಹಿಣಿ ಹಟ್ಟಂಗಡಿ ಶೋಭಾ ಪಾತ್ರದಲ್ಲಿ
- ಸಯೀದ್ ಜಾಫ್ರಿ ರಾಮ್ ಕಿಶನ್ ಆಗಿ
- ಆಶಾಲತಾ ವಾಬ್ಗಾಂವ್ಕರ್ ಶ್ರೀಮತಿ ರಾಮ್ ಕಿಶನ್ ಆಗಿ
- ವಿಕಾಸ್ ಆನಂದ್ ನವಾಬನಾಗಿ
- ಸತೀಶ್ ಷಾ ಶ್ರೀ ಸಿನ್ಹಾ ಆಗಿ
- ರಾಜೇಶ್ ಪುರಿ ರಾಜು (ಅಜಯ್‌ನ ಸ್ನೇಹಿತ)[೧]
ಸುಮಧುರ ಸಂಗೀತದ ಹಾಡುಗಳು
[ಬದಲಾಯಿಸಿ]ಗೀತರಚನೆಕಾರ: ಕೈಫಿ ಅಜ್ಮಿ
- "ತು ಕಹಾನ್ ಆ ಗಯಿ ಜಿಂದಗಿ" - ಲತಾ ಮಂಗೇಶ್ಕರ್
- "ತು ಕಹಾನ್ ಆ ಗಯಿ ಜಿಂದಗಿ" (v2) - ಬಪ್ಪಿ ಲಾಹಿರಿ
- "ಪಹೇಲಿ ಛೋಟಿ ಸಿ" - ಕವಿತಾ ಪೌಡ್ವಾಲ್, ವನಿತಾ ಮಿಶ್ರಾ, ಗುರುಪ್ರೀತ್ ಕೌರ್, ಆಶಾ ಭೋಂಸ್ಲೆ
- "ದೇಖೋ ದಿನ್ ಯೇ ನಾ ಧಲ್ನೆ ಪಾಯೆ, ಹರ್ ಪಾಲ್ ಇಕ್ ಸಾದಿ ಹೋ ಜಾಯೆ" - ಆಶಾ ಭೋಂಸ್ಲೆ, ಕವಿತಾ ಪೌಡ್ವಾಲ್
- "ಮೇರೆ ದಿಲ್ ಮೈ ಟೂ ಹೀ ಟೂ ಹೈ" - ಚಿತ್ರಾ ಸಿಂಗ್, ಜಗ್ಜಿತ್ ಸಿಂಗ್[೧]
ಪ್ರಶಸ್ತಿಗಳು
[ಬದಲಾಯಿಸಿ]32ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು:
- ಅತ್ಯುತ್ತಮ ನಟಿಗಾಗಿ ಶಬಾನಾ ಅಜ್ಮಿಯವರಿಗೆ ಫಿಲ್ಮ್‌ಫೇರ್ ಪ್ರಶಸ್ತಿ
- ನಾಮನಿರ್ದೇಶಿತ: ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ – ರೋಹಿಣಿ ಹಟ್ಟಂಗಡಿ[೧]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ೧.೪ ೧.೫ Subhash K Jha (16 January 2004). "Playing the 'hard' woman on screen". Sify.com, Movies. Archived from the original on 9 December 2015. Retrieved 10 February 2013.