ಭಾರತೀಯ ಉಪಖಂಡದಲ್ಲಿ ಮುಸ್ಲಿಮ್ ವಿಜಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ಉಪಖಂಡದಲ್ಲಿ ಮುಸ್ಲಿಮ್ ವಿಜಯಗಳು ಮುಖ್ಯವಾಗಿ ೧೨ನೇ ಶತಮಾನದಿಂದ ೧೬ನೇ ಶತಮಾನದವರೆಗೆ ನಡೆದವಾದರೂ, ಮುಂಚಿನ ಮುಸ್ಲಿಮ್ ವಿಜಯಗಳು ಆಧುನಿಕ ಅಫ್ಘಾನಿಸ್ತಾನ್ ಮತ್ತು ಪಾಕಿಸ್ತಾನದಲ್ಲಿ ೭ನೇ ಶತಮಾನದಲ್ಲಿನ ರಾಜ್‍ಪುತ್ ರಾಜ್ಯಗಳ ಕಾಲದಷ್ಟು ಹಿಂದೆಯೇ ಸೀಮಿತ ಅತಿಕ್ರಮಣಗಳನ್ನು ಮಾಡಿದವು. ದೆಹಲಿ ಸಲ್ತನತ್‍ನ ಸ್ಥಾಪನೆಯೊಂದಿಗೆ ಇಸ್ಲಾಮ್ ಉಪಖಂಡದ ಹೆಚ್ಚಿನ ಭಾಗಗಳಲ್ಲಿ ಹರಡಿತು. ೧೨೦೪ರಲ್ಲಿ, ಬಖ್ತಿಯಾರ್ ಖಿಲ್ಜಿ ಬಂಗಾಳದ ಮುಸ್ಲಿಮ್ ವಿಜಯದ ನೇತೃತ್ವ ವಹಿಸಿದನು, ಮತ್ತು ಆ ಕಾಲದಲ್ಲಿ ಇದು ಇಸ್ಲಾಮ್‍ನ ಅತ್ಯಂತ ಪೂರ್ವದ ವಿಸ್ತರಣೆಯಾಗಿ ಗುರುತಿಸಿಕೊಂಡಿತು.