ಭಾರತದ ಜಲ ಮಾಲಿನ್ಯ

ವಿಕಿಪೀಡಿಯ ಇಂದ
Jump to navigation Jump to search


ಭಾರತ ದೇಶವು ಜಲಮಾಲಿನ್ಯದ ಬಹುದೊಡ್ಡ ಸಮಸ್ಯೆಯನ್ನು ಹೊಂದಿದೆ ಎಂದು ಗುರುತಿಸಲ್ಪಡುತ್ತಿದೆ. ಇದಕ್ಕೆ ಪ್ರಬಲ ಕಾರಣವು ಒಳಚರಂಡಿ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸದಿರುವುದೇ ಆಗಿದೆ, ಭಾರಿ ಜನಸಂಖ್ಯೆಯ ಪ್ರದೇಶಗಳ ಮೂಲಕ ಹರಿಯುತ್ತಿರುವ ಗಂಗಾ, ಯಮುನಾ, ಇಂತಹ ನದಿಗಳು ಮಲಿನಗೊಂಡಿವೆ.

ಒಳಚರಂಡಿ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸದಿರುವುದು[ಬದಲಾಯಿಸಿ]

ಭಾರತದಲ್ಲಿ ಮೇಲೈ ಮತ್ತು ಅಂತರ್ಜಲ ಮಾಲಿನ್ಯಕ್ಕೆ ಬಹುಮುಖ್ಯವಾದ ಪ್ರಮುಖ ಕಾರಣವೆಂದರೆ ಒಳಚರಂಡಿ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸದಿರುವುದೇ ಆಗಿದೆ ಎಂದು ೨೦೦೭ರ ಅಧ್ಯಯನವು ತಿಳಿಸುತ್ತದೆ, ಭಾರತದಲ್ಲಿ ಗೃಹಬಳಕೆ ನಿರುಪಯುಕ್ತ ನೀರಿನ ಉತ್ಪಾದನೆ ಹಾಗೂ ನಿರ್ವಹಣೆಯ ನಡುವೆ ಬಹುದೊಡ್ಡ ಅಂತರವಿದೆ, ಭಾರತದಲ್ಲಿ ಸಾಕಷ್ಟು ನಿರ್ವಹಣಾ ಸಾಮರ್ಥ್ಯದ ಕೊರತೆಯಿದೆ ಎಂಬುದು ಮಾತ್ರವೇ ಅಲ್ಲ ಪ್ರಸ್ತುತ ಇರುವ ಒಳಚರಂಡಿ ವ್ಯವಸ್ಥೆಯ ನಿರ್ವಹಣೆಯ ಸ್ಥಾವರಗಳು ಕಾರ್ಯನಿರ್ವಹಿಸದಿರುವುದು ಹಾಗೂ ಸುಸ್ಥಿತಿಯಲಿಲ್ಲದಿರುವುದೂ ಕೂಡ ಸಮಸ್ಯೆಯಾಗಿದೆ.

ಸರ್ಕಾರಿ ಸ್ವಾಮ್ಯದ ಬಹಳಷ್ಟು ಒಳಚರಂಡಿ ನಿರ್ವಹಣಾ ಸ್ಥಾವರಗಳು ನೌಕರರ ಗೈರು ಹಾಜರಿ ಮತ್ತು ಕಳಪೆ ವ್ಯವಸ್ಥಾಪನೆಯೊಂದಿಗೆ, ಕ್ರಮಬದ್ದವಲ್ಲದ ರಚನೆ ಅಥವಾ ಕಳಪೆ ನಿರ್ವಹಣಾ ಅಥವಾ ಸ್ಥಾವರಗಳು ಕಾರ್ಯಚರಣೆ ಮಾಡುವುದಕ್ಕೆ ವಿಶ್ವಾಸಾರ್ಹ ವಿದ್ಯುಚ್ಚಕ್ತಿ ಸರಬರಾಜಿನ ಕೊರತೆಯ ಕಾರಣದಿಂದಾಗಿ ಬಹಳಷ್ಟು ಕಾಲದವರೆಗೆ ಸ್ಥಗಿತಗೊಂಡಿರುತ್ತವೆ. ಈ ಪ್ರದೇಶಗಳಲ್ಲಿ ಉತ್ಪಾದನೆಯಾದ ನಿರುಪಯುಕ್ತ ನೀರು ಸಾಮನ್ಯವಾಗಿ ಮಣ್ಣಿನಲ್ಲಿ ಸೇರಿಹೋಗುತ್ತದೆ ಅಥವಾ ಆವಿಯಾಗುತ್ತದೆ. ಸಂಗ್ರಹವಾದ ನಿರುಪಯುಕ್ತವಾದ ನೀರು ಸಂಚಿತವಾಗುತ್ತಾ ನಗರ ಪ್ರದೇಶಗಳಲ್ಲಿ ಅನಾರೋಗ್ಯಕರವಾದ ಪರಿಸ್ಥಿತಿಗಳನ್ನು ಉಂಟುಮಾಡಿ ಮೇಲ್ಮೆ ಮತ್ತು ಅಂತರ್ಜಾಲಕ್ಕೆ ಅಪಾಯವಾಗುವ ಮಲಿನಕಾರಕಗಳನ್ನು ಬಿಡುಗಡೆಗೊಳಿಸುತ್ತದೆ.

ಭಾರತದ ೩,೧೧೯ ಪಟ್ಟಣಗಳು ಮತ್ತು ನಗರಗಳ ಪೈಕಿ. ೨೦೯ರಲ್ಲಿ ಮಾತ್ರವೇ ಭಾಗಶ: ಒಳಚರಂಡಿ ನಿರ್ವಹಣಾ ಸೌಲಭ್ಯಗಳಿವೆ ಹಾಗೂ ೮ರಲ್ಲಿ ಮಾತ್ರವೇ ಸಂಪೂರ್ಣವಾದ ನಿರುಪಯುಕ್ತ ನೀರಿನ ನಿರ್ವಹಣಾ ಸೌಲಭ್ಯಗಳಿವೆ ಎಂದು ೧೯೯೨ರ ವಿಶ್ವ ಆರೋಗ್ಯ ಸಂಸ್ಥೆಯು ಅಧ್ಯಯನ ಮಾಡಿ ತಿಳಿಸಿರುತ್ತದೆಂದು ವರದಿಯಾಗಿದೆ, ತೊರೆಗಳ ಅಡಿಯಲ್ಲಿ ನಿರ್ವಹಿಸದಿರುವ ನೀರನ್ನು ಕುಡಿಯುವ ನೀರು ಸ್ನಾನ ಮತ್ತು ತೊಳೆಯುವುದಕ್ಕೆ ಬಳಸಲಾಗುತ್ತದೆ ಭಾರತದ ೧೧೪ ನಗರಗಳು ನಿರ್ವಹಣಾಯಾಗದ ಒಳಚರಂಡಿ ನೀರನ್ನು ಹಾಗೂ ಅರೆಬೆಂದ ಶವಗಳನ್ನು ನೇರವಾಗಿ ಗಂಗಾ ನದಿಗೆ ಬಿಡುತ್ತಾರೆ ಎಂದು ೧೯೯೫ರ ಒಂದು ವರದಿಯು ಸಮರ್ಥಿಸುತ್ತದೆ. ತೆರೆದ ಪ್ರದೇಶಗಳಲ್ಲಿ ಮಲವಿಸರ್ಜನೆ ಮಾಡುವುದು ಭಾರತದ ನಗರ ಪ್ರದೇಶಗಳಲ್ಲಿಯೂ ವ್ಯಾಪಕವಾಗಿ ಹಬ್ಬಿದೆ, ಇದು ಭಾರತದ ಹಾಗೂ ಇತರ ಅಭಿವೃದ್ದಿಶೀಲ ರಾಷ್ಟ್ರಗಳ ವಿಲಕ್ಷಣ ಪರಿಸ್ಥಿತಿಯಂತಾಗಿದೆ.

೨೦೦೫ರ ಮತ್ತೊಂದು ವರದಿಯ ಅನುಸಾರವಾಗಿ, ನಗರಗಳು ಮತ್ತು ಪಟ್ಟಣಗಳಿಂದ ಹೊರಹರಿಯುವ ಒಳಚರಂಡಿ ನೀರು ಭಾರತದಲ್ಲಿನ ಜಲಮಾಲಿನ್ಯದ ಪ್ರಮುಖ ಕಾರಣವಾಗಿದೆ. ಭಾರತದ ಒಳಚರಂಡಿ ನೀರಿನ ಪ್ರತಿದಿನದ ಉತ್ಪಾದನೆಯು ೨೯೦೦೦ ಮಿಲಿಯನ್ ಲೀಟರ್ ನಷ್ಟಾಗಿದ್ದು ನಿರ್ವಾಹಣ ಸಾಮರ್ಥ್ಯವು ಪ್ರತಿದಿನ ೬೦೦೦ ಮಿಲಿಯನ್ ಲೀಟರ್ ಮೊತ್ತವೇ ಆಗಿದೆ. ವ್ಯತ್ಯಾಸವನ್ನು ಸರಿಪಡಿಸಲು ಹೂಡಿಕೆಯ ಅಗತ್ಯವಿದೆ. ಗೃಹಬಳಕೆ ನಿರುಪಯುಕ್ತ ನೀರನ್ನು ಹೊರ ಹಾಕುವುದರ ಪರಿಣಾಮವಾಗಿ ಭಾರತದ ಬಹಳಷ್ಟು ಸಂಖ್ಯೆಯ ನದಿಗಳು ತಿವ್ರವಾಗಿ ಮಲಿನಗೊಂಡಿದೆ

ಭಾರತ ಸರ್ಕಾರದ, ಪರಿಸರ ಮತ್ತು ಅರಣ್ಯಗಳ ಮಂತ್ರಾಲಯದ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು, ರಾಷ್ಟ್ರದಾದ್ಯಂತ ವಿವಿಧಾ ನದಿಗಳು ಮತ್ತು ಜಲನಿಕಾಯಗಳ ಮೇಲೆ ೨೭ ರಾಜ್ಯಗಳು ಹಾಗೂ ೬ ಕೇಂದ್ರಾಡಳಿತ ಪ್ರದೇಶಗಳಲ್ಲಿ ೧೪೨೯ ಮೇಲ್ವಿಚಾರಣ ಸ್ಟೇಷನ್ ಗಳನ್ನು , ಒಳಗೊಂಡ ರಾಷ್ಟ್ರಿಯ ನೀರು ಗುಣಮಟ್ಟ ಮೇಲ್ವಿಚಾರಣ ಜಾಲತಾಣವನ್ನು ಸ್ಥಾಪಿಸಿದೆ. ಇದು ಇಡೀ ವರ್ಷ ನೀರಿನ ಗುಣಮಟ್ಟವನ್ನು ನಿರ್ವಹಿಸುತ್ತದೆ ಈ ನಿರ್ವಹಣೆಯು ಇರುವ ೨೯೩ ನದಿಗಳು ೯೪ ಸರೋವರಗಳು, ೯ ಕೆರೆಗಳು, ೪೧, ಕೊಳಗಳು, ೮ ತೊರೆಗಳು, ೨೩ ಕಾಲುವೆಗಳು, ೧೮ ನಾಲೆಗಳು ಮತ್ತು ೪೧೧ ಬಾವಿಗಳನ್ನು ಒಳಗೊಳ್ಳುತ್ತದೆ, ಕರಗಿದ ಆಮ್ಲ ಜನಕ, ಜೀವಾಣುಗಳು ಹಾಗೂ ನೀರಿನ ಗುಣಮಟ್ಟಕ್ಕಾಗಿ ಇತರ ಅಂತಾರಾಷ್ಟ್ರಿಯ ಸ್ಥಾಪಿತ ನಿಗಧಿತಮಿತಿಗಳನ್ನೂ ಒಳಗೊಂಡಂತೆ ೨೮ ನಿಗಧಿತಮಿತಿಗಳಿಗಾಗಿ ನೀರಿನ ಮಾದರಿಗಳನ್ನು ನಿಗಧಿತವಾಗಿ ವಿಶ್ಲೇಷಿಲಾಗಿದೆ. ಹೆಚ್ಚುವರಿ ೯ ಲೋಹಗಳ ಗುರುತು ನಿಗಧಿತಮಿತಿಗಳನ್ನು ಮತ್ತು ೨೮ ಕೀಟನಾಶಕ ಉಳಿಕೆಗಳನ್ನು ವಿಶ್ಲೇಷಿಸಲಾಗಿದೆ, ಕೆಲವು ಸ್ಥಳಗಳಲ್ಲಿ ಜೈವಿಕ ನಿರ್ವಹಣೆಯನ್ನೂ ಕೈಗೊಳ್ಳಲಾಗಿದೆ.

೧೯೯೫ರಿಂದ ೨೦೦೮ರವರೆಗೆ ನೀರಿನ ಮಾದರಿಗಳ ವೈಜ್ಞಾನಿಕ ವಿಶ್ಲೇಷಣೆಯು ಭಾರತದ ಜಲನಿಕಾಯಗಳಲ್ಲಿ ಕಾರ್ಬನ್ನಿನ ಬ್ಯಾಕ್ಟೀರಿಯಾದ ಮಲಿನಕಾರಿ ವಸ್ತುಗಳು ತೀವ್ರವಾಗಿದೆ ಎಂಬುದನ್ನು ಸೂಚಿಸುತ್ತದೆ . ಭಾರತದ ನಗರ ಕೇಂದ್ರಗಳು ನಿರ್ವಹಣೇಗೊಂಡಿಲ್ಲದ ಗೃಹಬಳಕೆ ನಿರುಪಯುಕ್ತ ನೀರನ್ನು ಹೊರಹಾಕುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಜೀವರಾಸಾಯನಿಕ ಆಮ್ಲಜನಕ ಕ್ಕೆ ಬೇಡಿಕೆ (ಬಿ.ಒ.ಡಿ)[ಬದಲಾಯಿಸಿ]

೨೦೦೮ರಲ್ಲಿನ ನೀರಿನ ಗುಣಮಟ್ಟ ಮೇಲ್ವಿಚಾರಣೆಯು ಬಹುತೇಕ ಎಲ್ಲ ನದಿಗಳು ಅತಿಹೆಚ್ಚಿನ ಮಟ್ಟದ ಜೀವರಾಸಾಯನಿಕ ಆಂಮ್ಲಜನಕಕ್ಕೆ ಬೇಡಿಕೆ (ಬಿಒಡಿ) ಉಳ್ಳದ್ದಾಗಿವೆಯೆಂಬುದನ್ನು ಗಮನಿಸಿತು. ಅತೀ ಕೆಟ್ಟ ಮಾಲಿನ್ಯವು. ಅವರೋಹಣ ಕ್ರಮದಲ್ಲಿ, ಮಾರಕಾನಂದ (೫೯೦ ಎಂಜಿ ಒ/ಐ), ಅದರ ನಂತರ ಕಾಲಿನದಿ (೩೬೪), ಆಮ್ಲಖಾದಿ ನದಿ (೩೫೩), ಯಮುನಾ ಕಾಳುವೆ (೨೪೭). ದೆಹಲಿಯಲ್ಲಿ ಯಮುನ ನದಿ (೭೦) ಮತ್ತು ಬೆತ್ವಾ ನದಿ (೫೮) ಎಂದು ಕಂಡುಬಂದಿದೆ, ಇದು ೫ ದಿನದ ಬಿಒಡಿಯೊಂದಿಗಿನ ೧ ಮತ್ತು ೨ ಎಂಜಿ ಒ/ಎಲ್ ನಡುವಿನ ನೀರಿನ ಮಾದರಿಯು ಬಹಳ ಶುದ್ದವಾದ ನೀರನ್ನು ತೋರಿಸುತ್ತದೆ, ೩ರಿಂದ ೮ ಎಂಜಿ ಒ/ಎಲ್ ಮಾದರಿಯು ಮದ್ಯಮ ಮಟ್ಟದ ಶುದ್ದ ನೀರನ್ನು ಸೂಚಿಸುತ್ತದೆ, ೮ರಿಂದ ೨೦ ಕಲುಷಿತಗೊಳ್ಳುವ ಅಂಚಿನಲ್ಲಿರುವುದನ್ನೂ ಹಾಗೂ ೨೦ ಎಂಜಿ ಒ/ಎಲ್ ಕ್ಕಿಂತ ಅಧಿಕವಾದದ್ದು ಪರಿಸರಕ್ಕೆ ಸುರಕ್ಷಿತವಲ್ಲದ ಕಲುಷಿತ ನೀರನ್ನು ಸೂಚಿಸುತ್ತದೆ. ಬಿಒಡಿಯ ಮಟ್ಟವು ನಗರಗಳ ಮತ್ತು ದೊಡ್ಡ ಪಟ್ಟಣಗಳ ಹತ್ತಿರ ತೀಕ್ಷ್ಣವಾಗಿರುತ್ತದೆ. ಭಾರತದ ಗ್ರಾಮೀಣ ಭಾಗಗಳಲ್ಲಿ ನದಿಗಳ ಬಿಒಡಿ ಮಟ್ಟವು ನೀರಿನಲ್ಲಿ ವಾಸಿಸುವ ಜೀವಿಗಳಿಗೆ ಬೆಂಬಲಕ್ಕೆ ಸಾಕಾಗುವಷ್ಟಿರುತ್ತದೆ.

ಕೋಲೈಫಾರ್ಮ ಮಟ್ಟಗಳು[ಬದಲಾಯಿಸಿ]

ಕೋಲೈಫಾರ್ಮ ಬ್ಯಾಕ್ಟೀರಿಯಾ ಒಂದು ವಿಧವಾದ ಬ್ಯಾಕ್ಟೀರಿಯಾ ನಮೂನೆ ಮಟ್ಟಗಳು ಯುಮುನಾ, ಗಂಗಾ ಗೋಮತಿ, ಘಗ್ಗರ್, ಚೆಂಬಲ್, ಮಾಹಿ, ವಾರ್ಧಾ ಈ ನದಿಗಳು ಭಾರತದ ಇತರ ಬಹುದೊಡ್ಡ ಕೋಲೈಫಾರ್ಮ ಮಾಲಿನ್ಯ ಜಲನಿಕಾಯ ಪೈಕಿಯ ನದಿಗಳು. ಉದಾಹರಣೆಗೆ ೧೦೪ ಎಂಪಿಎಸ್/೧೦೦ ಎಂಎಲ್ ಗೂ ಕಡಿಮೆ ಕೊಲೈಫಾರ್ಮ ಇರತಕ್ಕದ್ದು , ಮೇಲಾಗಿ, ಸಾಮಾನ್ಯವಾಗಿ ಮಾನವ ಬಳಕೆಗೆ ಮತ್ತು ನೀರಾವರಿಗಾಗಿ ಕ್ಷೇಮಕರವೆಂದು ಪರಿಗಣಿಸಗಾಗಿದೆ. ಆದರೆ. ಇದು ನೀರಿನಲ್ಲಿ ಇರಲೇಬಾರದು ಏಕೆಂದರೆ ಕೋಲೈಫಾರ್ಮ ಕೃಷಿಯಲ್ಲಿ ಕಲುಷಿತ ನೀರಿನ ಸ್ಪೋಟವು ರೋಗಗಳನ್ನು ಹರಡಬಹುದು.

೨೦೦೬ ರಲ್ಲಿ ಒಟ್ಟು ಸರಾಸರಿ ವಾರ್ಷಿಕಾ ಕೋಲೈಪಾರ್ಮ ಮಟ್ಟಗಳು ೫೦೦ ಎಂಪಿಎನ್/೧೦೦ಎಂಎಲ್ ಮೇಲಿನದ್ದು ಭಾರತದಲ್ಲಿನ ನೀರಿನ ಗುಣಮಟ್ಟ ನಿರ್ವಹಣೆ ಕೋಲೈಫಾರ್ಮ ಮಟ್ಟಗಳು ಶೇಕಡಾ ೪೭ ಎಂಬುದನ್ನು ವರದಿಯಲ್ಲಿ ಒತ್ತು ನೀಡುದೆ. ೨೦೦೮ರಲ್ಲಿ ನೀರಿನ ಗಣಮಟ್ಟದ ಎಲ್ಲಾ ಮೇಲ್ವಿಚಾರಣಾ ಘಟಕಗಳ ಶೇಕಡಾ ೩೩. ಆ ಮಟ್ಟಗಳನ್ನು ಮೀರಿರುವ ಒಟ್ಟು ಕೋಲೈಫಾರ್ಮ ಮಟ್ಟಗಳನ್ನು ಹೊಂದಿದೆ ಎಂದು ವರದಿಯಾಗಿದ್ದು . ಮಾಲಿನ್ಯ ನಿಯಂತ್ರಣ ಮೂಲಸೌಕರ್ಯಗಳನ್ನು ಹೆಚ್ಚು ಮಾಡುವ ಮತ್ತು ಭಾರತದಲ್ಲಿ ನಿರ್ವಹಣಾ ಸ್ಥಾವರಗಳನ್ನು ಉನ್ನತೀಕರಿಸುವ ಇತ್ತೀಚಿನ ಪ್ರಯತ್ನ ಸಲಹೆಯು, ನೀರಿನ ಮಾಲಿನ್ಯದ ಪ್ರವೃತ್ತಿಯನ್ನು ವ್ಯತಿರಿಕ್ತವಾಗಿರಿಸಬಹುದು, ಗೃಹಬಳಕೆ ಒಳಚರಂಡಿ ನೀರನ್ನು ನಿರ್ವಹಿಸಿ. ನಿರ್ವಹಿಸಲಾದ ಒಳಚರಂಡಿ ನೀರನ್ನು ನಂತರ ನೀರಾವರಿಗಾಗಿ ಬಳಸಿದಲ್ಲಿ ಅದು ಜಲನಿಕಾಯಗಳ ಮಾಲಿನ್ಯವನ್ನು ತಡೆಗಟ್ಟಿ, ನೀರಾವರಿವಲಯದಲ್ಲಿ ಶುದ್ದ ನೀರಿನ ಬೇಡಿಕೆಯನ್ನು ಕಡಿಮೆ ಮಾಡಬಹುದು ಮತ್ತು ನೀರಾವರಿಗಾಗಿ ಇದು ಸಂಪನ್ಮೂಲವಾಗಬಹುದು, ೨೦೦೫ ರಿಂದ ಭಾರತೀಯ ನಿರುಪಯುಕ್ತ ನೀರಿನ ನಿರ್ವಹಣೆ ಸ್ಥಾವರ ಮಾರುಕಟ್ಟೆ ವಾರ್ಷಿಕವಾಗಿ ಶೇಕಡಾ ೧೦ರಿಂದ ೧೨ರ ದರದಲ್ಲಿ ಬೆಳವಣಿಗೆಯಾಗುತ್ತಿದೆ ಅಮೇರಿಕಾ ಸಂಯುಕ್ತ ಸಂಸ್ಥಾನವು ಭಾರತಕ್ಕೆ ನಿರ್ವಹಣಾ ಸಲಕರಣೆಯ ಬಹುದೊಡ್ಡ ಸರಬರಾಜುದಾರನಾಗಿದ್ದು ಇದು ಹೊಸ ಯಂತ್ರ ಸ್ಥಾಪನೆಗಾಗಿ ಶೇಕಡಾ ೪೦ರ ಮಾರುಕಟ್ಟೆ ಷೇರನೊಂದಿ ಭಾರತಕ್ಕೆ ಸರಬರಾಜು ಮಾಡುತ್ತದೆ. ವೇಗದ ಈ ವಿಸ್ತರಣೆ ಮತ್ತು ಭಾರತ ಸರ್ಕಾರವು ಸುಧಾರಣೆಯಾಗಿದೆ.

ಇತರ ಸಮಸ್ಯೆಗಳು[ಬದಲಾಯಿಸಿ]

ಈ ಹಿಂದೆ ಕೆಲವು ವೀಕ್ಷಕರು ನಿರೀಕ್ಷಿಸಿದ್ದಂತೆ, ಜಲಸಂಪನ್ಮೂಲಗಳು ಅಂತರಿಕವಾಗಿಯಾಗಲೀ ಅಥವ ಅಂತರಾಷ್ರ್ಟಿಯವಾಗಿಯಾಗಲೀ, ಹಿಂಸಾತ್ಮಕ ಹೋರಾಟದ ಜೊತೆಯಾಗಿ ಸೇರಿಕೊಂಡಿಲ್ಲ ಕಾವೇರಿ ನದಿಯ ನೀರಿನ ಹಂಚಿಕೆಗೆ ಸಂಬಂಧಿಸಿದೆ ಕೆಲವು ಕೋಮು ಗಲಭೆಗಳು ಹಾಗೂ ಅಣೆಕಟ್ಟು ಪ್ರಾಜೆಕ್ಟ್ ಗಳಲ್ಲಿ ನಿರ್ದಿಷ್ಟವಾಗಿ ನರ್ಮದಾ ನದಿಯ ಮೇಲೆ ಸುತ್ತಲಿನ ವಾಸ್ತವಿಕ ಹಾಗೂ ಸಂಭಾವ್ಯ ಜನಸಂಖ್ಯೆಯ ಸ್ಥಳಾಂತರದ ಬಗ್ಗೆ ರಾಜಕೀಯ ಉದ್ವಗ್ನತೆಗಳು ಇವು ಕೆಲವು ಅಪವಾದಗಳು ಎಂದು ೨೦೦೪ರ ವರದಿಯು ತಿಳಿಸುತ್ತದೆ. ೧೯೯೭ರ ಒಂದು ಲೇಖನವು, ಪಂಜಾಬ್ ಇನ್ನೊಂದು ಜನಸಂಖ್ಯಾ ಕೋಮುವಾರು ಸ್ಥಳವೆಂದು ಸಮರ್ಥನೆ ಮಾಡಿದೆ. ಉದಾಹರಣೆಗೆ, ಭಾರತದ ಪಂಜಾಬ್ ನ. ಮಾಲ್ವಾ ಪ್ರದೇಶದ ಮೂಲಕ ಹರಿದು ಸಟ್ಲೇಜ್ ನದಿಯನ್ನು ಸೇರುವುದಕ್ಕೆ ಮೊದಲು ಲೂದಿಯಾನ ಜಿಲ್ಲೆಯ ದಟ್ಟ ಜನಸಂಖ್ಯೆಯ ನಡುವೆ ಹಾದುಹೋಗುವ, ಇಂಡಸ್ ನದಿಯ ಒಂದು ಉಪನದಿಯಾದ ಬುದ್ದನಲ್ಲಾ ಎಂಬ ಸಣ್ಣ ತೊರೆಯು ಮತ್ತೊಂದು ಬೋಪಾಲ್ ಅಗುತ್ತಿದೆ ಎಂದರೆ ಸಲಹೆ ನೀಡುವ, ಇತ್ತೀಚಿನ ಅಧ್ಯಯನದಲ್ಲಿ ಇಂದಿನ ಒಂದು ಪ್ರಮುಖ ಪ್ರಕರಣದ ಅಂಶವಾಗಿದೆ ೨೦೦೮ರಲ್ಲಿ ಪಿಜಿಐಎಂಇಆರ್ ಮತ್ತು ಪಂಜಾಬ್ ಮಾಲಿನ್ಯ ನಿಯಂತ್ರಣ ಮಂಡಳಿಯ ಜಂಟಿ ಅಧ್ಯಯನವು. ನಲ್ಲಾ ನದಿ ದಂಡೆಯ ಹಳ್ಳಿಗಳಲ್ಲಿ ಕ್ಯಾಲ್ಸಿಯಂ ಮೆಗ್ನಿಷಿಯಂ, ಪ್ಲೋರೈಡ್, ಮರ್ಕ್ಯುರಿ, ಬಿಟಾ-ಎಂಡೋಸಲ್ಪಾಸ್ ಹಾಗೂ ಹೆಪ್ಟಾಕ್ಲೋರ್ ಕೀಟನಾಶಕಗಳು. ತಳ ಹಾಗೂ ಮೇಲಿನ ಕೊಳಾಯಿ ನೀರಿನಲ್ಲಿ ಅನುಮತಿಸಲಾದ ಮಿತಿಗಿಂತ ಹೆಚ್ಚಾಗಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದೆ. ಜೋತೆಗೆ ನೀರು ರಾಸಾಯನಿಕ ಹಾಗೂ ಜೀವ ರಾಸಾಯನಿಕ ಬೇಡಿಕೆ (ಸಿಒಡಿ ಮತ್ತು ಬಿಒಡಿ) ಅಮೋನಿಯ. ಫಾಸ್ಫೇಟ್, ಕ್ಲೋರೈಡ್, ಕ್ರೋಮಿಯಂ, ಆರ್ಸೆನಿಕ್ ಹಾಗೂ ಕ್ಲೋರೋಪಿರಿಫೋಸ್ ಕೀಟನಾಶಕಗಳ ದಟ್ಟ ಸಾಂದ್ರತೆಯನ್ನು ಹೊಂದಿದೆ, ಗಜಿಯಾಬಾದ್ ನಗರದ ಮೂಲಕ ಹರಿಯುವ ಹಿಂದನ್ ನದಿಯು, ಅತಿಹೆಚ್ಚು ಕಲುಷಿತವಾಗಿದ್ದು ಈ ನಗರದ ಅಂತರ್ಜಲವು ಬಣ್ಣದಿಂದ ಕೂಡಿದ್ದು ಇದು ಕೈಗಾರಿಕೆಗಳ ತ್ಯಾಜ್ಯದ ನೀರಿನ ಹರಿವಿನಿಂದಾದಿ ವಿಷಯುಕ್ತವಾಗಿದೆ. ಹಿಂದನ್ ವಾಹಿನಿಯು ಜಲಮಾಲಿನ್ಯ ಚಟುವಟಿಕೆಗಳ ವಿರುದ್ದ ತೀವ್ರ ಹೋರಾಟ ನಡೆಸುತ್ತಿದೆ.

ಖುತುಮಾನಗಳ ಮಾನ್ಸೂನ್ ಸಂಧಂರ್ಭದಲ್ಲಿನ ಪ್ರವಾಹವು ತನ್ನ ನದಿಗಳು ಮತ್ತು ತರಿ ಜಮೀನಿನೊಳಗೆ ಎಲ್ಲಾ ತೆರೆನಾದ ಘನ ತ್ಯಾಜ್ಯಗಳು ಹಾಗೂ ಕಲುಷಿತ ಮಣ್ಣನ್ನು ತಳ್ಳುವುದರಿಂದಾಗಿ ಜಲಮಾಲಿನ್ಯ ಸಮಸ್ಯೆಗಳು ಮತ್ತಷ್ಟು ಜಟಿಲಗೊಳಿಸುತ್ತದೆ. ಭಾರತದಲ್ಲಿ ವಾರ್ಷಿಕ ಸರಾಸರಿ ಒತ್ತುವರಿಯು ಸುಮಾರು ೪೦೦೦ ಬಿಲಿಯನ್ ಕ್ಯೂಬಿಕ್ ಮೀಟರುಗಳು. ಇದರಿಂದ,೨೦೦೫ರಲ್ಲಿನ ಭಾರತೀಯ ಮೂಲಸೌಕರ್ಯ ದೆಸೆಯೊಂದಿಗೆ,ನದಿಗಳ ಮೂಲಕ ಲಭ್ಯವಾಗುವ ಜಲಸಂಪನ್ಮೂಲವು ಅಂದಾಜು ೧೮೬೯ ಬಿಲಿಯನ್ ಕ್ಯೂಬಿಕ್ ಮೀಟರುಗಳು, ಪ್ರತಿ ವರ್ಷವು ರಾಷ್ಟದಲ್ಲಿ ಏಕರೀತಿಯಾಗದ ಮಳೆಯನ್ನು ಲೆಕ್ಕಹಾಕಿ, ಅಂತರ್ಜಲವೂ ಒಳಗೊಂಡಂತೆ,ಬಳಕೆಗಾಗಿ ಲಭ್ಯವಾಗುವ ಜಲಸಂಪನ್ಮೂಲಗಳು ಸುಮಾರು ೧೧೨೨ ಬಿಲಿಯನ್ ಕ್ಯೂಬಿಕ್ ಮೀಟರುಗಳು ಎಂದು ಸಮರ್ಥಿಸುತ್ತದೆ. ಮಾಲಿನ್ಯವು ನೀರಿನ ಗುಣಮಟ್ಟವನ್ನು ಕಡಿಮೆದರ್ಜೆಗೆ ಇಳಿಸುವುದರಿಂದ ಈ ನೀರಿನ ಬಹುಪಾಲು ಸುರಕ್ಷಿತವಾಗಿರುವುದಿಲ್ಲ. ಜಲಮಾಲಿನ್ಯವು. ಭಾರತೀಯ ಗ್ರಾಹಕರಿಗೆ ,ತನ್ನ ಕೈಗಾರಿಕೆಗೆ ಹಾಗೂ ತನ್ನ ಕೃಷಿಗೆ ಲಭ್ಯವಾಗುವ ನೀರನ ಮೊತ್ತವನ್ನು ತೀವ್ರವಾಗಿ ಮಿತಿಗೊಳಿಸುತ್ತದೆ.

ನಿರ್ದಿಷ್ಟ ನದಿಗಳು[ಬದಲಾಯಿಸಿ]

ಗಂಗಾನದಿ[ಬದಲಾಯಿಸಿ]

ಗಂಗಾನದಿ ಯ ದಡದ ಉದ್ದಕ್ಕೂ ೪೦೦ ಮಿಲಿಯನ್ಗೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಹಿಂದೂಗಳು ಪವಿತ್ರವೆಂದು ಪರಿಗಣಿಸುವ ಈ ನದಿಯಲ್ಲಿ ಪ್ರತಿದಿನ ಅಂದಾಜು ೨.೦೦೦.೦೦೦ ಜನರು ಧಾರ್ಮಿಕವಾಗಿ ಸ್ನಾನ ಮಾಡುತ್ತಾರೆ. ಹೀಗಾಗಿ ಒಳಚರಂಡಿ ನೀರು ಹಾಗೂ ಅರೆಬೆಂದ ಶವಗಳ ಮಾಲಿನ್ಯದಿಂದ ಗಂಗಾ ನದಿಯೂ ಆರೋಗ್ಯಕ್ಕೆ ಹೆಚ್ಚು ಅಪಾರವಾಗಿದೆ. ಪರಿಸರ ಸಂರಕ್ಷಣೆ ಅಧಿನಿಯಮ, ೧೯೮೬ರ ೩(೩)ನೇ ಪ್ರಕರಣದ ಅಡಿಯಲ್ಲಿ ೨೦ನೇ ಫೆಬ್ರವರಿ ೨೦೦೯ರಂದು ಭಾರತದ ಕೇಂದ್ರ ಸರ್ಕಾರವು ಎನ್ ಆರ್ ಟಿ ಎ ಯನ್ನು ಸ್ಥಾಪಿಸಿತು. ಇದು ಗಂಗಾನದಿಯನ್ನು ಭಾರತದ "ರಾಷ್ಟೀಯ ನದಿ" ಎಂದೂ ಘೋಷಿಸಿತು. ಪೀಠವು ಭಾರತದ ಪ್ರಧಾನ ಮಂತ್ರಿ ಹಾಗೂ ಗಂಗೆಯು ಹರಿಯುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡಿರುತ್ತದೆ.

೨೦೦೭ರ ಒಂದು ಅಂದಾಜಿನ ಪ್ರಕಾರ, ದೆಹಲಿಯ ಪವಿತ್ರ ಯಮುನಾ ನದಿಯ ಪ್ರತಿ ೧೦೦ಸಿಸಿ ನೀರಿನಲ್ಲಿ ೭೫೦೦ ಕೊಲೈಫಾರ್ಮ್ ಬ್ಯಾಕ್ಟೀರಿಯವನ್ನು ಹೊಂದಿತ್ತು .ಬಹುದೊಡ್ಡ ಸಂಖ್ಯೆಯ ಸರ್ಕಾರೇತರ ಸಂಸ್ಥೆಗಳು. ಬಂಡಾಯ ಸಮೂಹಗಳು, ಪರಿಸರ ಕ್ಲಬ್ಗಳು ಹಾಗೂ ನಾಗರಿಕ ಅಂದೋಲನಗಳು. ನದಿಯನ್ನು ಶುದ್ದಗೊಳಿಸುವಲ್ಲಿ ಶ್ರಮವಹಿಸುತ್ತಿದ್ದಾರೆ. ಸಮುದಾಯ ಭಾಗವಹಿಸುವಿಕೆ ಮತ್ತು ನೀರಿನ ವ್ಯವಸ್ಥಾಪನೆಯ ವೀಕೆಂದ್ರಿಕರಣವನ್ನು ಉತ್ತೇಜಿಸುವುದ್ದಕ್ಕಾಗಿ ರಾಷ್ಟೀಯ ಜಲನೀತಿಯನ್ನು ೨೦೦೨ ರಲ್ಲಿ ಭಾರತ ದೇಶವು ಪರಿಷ್ಕರಿಸಿದ್ದರೂ ಕೊಡಾ, ಜಟಿಲವಾದ ಅಧಿಕಾರ ಶಾಹಿಯ "ಉದ್ದೇಶದ ಹೇಳಿಕೆ ಮಾತ್ರವೇ" ಆಗಿ ಇದು ಉಳಿಯುವುದನ್ನೂ ಖಚಿತ ಪಡಿಸಿದೆ ,ನೀರಿನ ವಿವಾದಗಳನ್ನು ನಿರ್ವಹಿಸುವ ಜವಾಬ್ದಾರಿಯು, ಡಜನ್ ಗಟ್ಟಲೆ ವಿವಿಧ ಮಂತ್ರಾಲಯಗಳು ಹಾಗೂ ಇಲಾಖೆಗಳ ನಡುವೆ ಯಾವುದೇ ಸಹಕಾರವಿಲ್ಲದೆ ಸ್ಥಗಿತಗೊಂಡಿವೆ, ಈ ಪ್ರಾಜೆಕ್ಟ್ ನ ಮೇಲೆ ಹಲವಾರು ವರ್ಷಗಳು ಹಾಗೂ ೧೪೦ ಮಿಲಿಯನ್ ಡಾಲರ್ಗಳನ್ನು ವ್ಯಯಮಾಡಿದ್ದರೂ, ಸರ್ಕಾರದ ಅಧಿಕಾರಶಾಹಿ ಹಾಗೂ ರಾಜ್ಯವು ನಡೆಸುತ್ತಿರುವ ಪ್ರಾಜೆಕ್ಟ್ ಇಲಾಖೆಗಳು ಸಮಸ್ಯೆಯನ್ನು ಪರಿಹರಿಸುವಲ್ಲಿ ವಿಫಲವಾಗಿವೆ.

ಇತರ[ಬದಲಾಯಿಸಿ]

  1. ಬುದ್ದನಲ್ಲಾ ಮಾಲ್ವಾ ಪ್ರದೇಶ ಮೂಲಕ ಹರಿಯುವ ಒಂದು ಕಾಲಿಕ ನೀರಿನ ಹರಿವು.
  2. ಮಿಥಿ ನದಿ, ಮುಂಬಯಿ ನಗರದ ಮೂಲಕ ಹರಿಯುವ ಒಂದು ಕಾಲಿಕ ನೀರಿನ ಹರಿವು ಇದು ಅತಿ ಹೆಚ್ಚು ಕಲುಷಿತವಾಗಿದೆ.