ಭಾರತದಲ್ಲಿ ಅಲೆಕ್ಸಾಂಡರ್

ವಿಕಿಪೀಡಿಯ ಇಂದ
Jump to navigation Jump to search


Alexandr Makedonsky, Summer Garden
battle of Isus
ಅಲೆಕ್ಸಾಂಡರ್
AlexanderTheGreat Bust

https:/

Aleksander-d-store

ಅಲೆಕ್ಸಾಂಡರ್[ಬದಲಾಯಿಸಿ]

ತನ್ನ ವಿಶ್ವ ವಿಜಯಕ್ಕಿಂತ ಮಿಗಿಲಾದ ಒಂದು ವಿಜಯವಿದೆ ಎಂಬುದನ್ನು ಕಂಡುಕೊಂಡಿದ್ದ ಅಲೆಕ್ಸಾಂಡರ.[ಬದಲಾಯಿಸಿ]

` ಅಲೆಕ್ಸಾಂಡರ್ ಒಬ್ಬ ಜಗಜ್ಜೇತ ಚಕ್ರವರ್ತಿ ಇಡೀ ಪ್ರಪಂಚವನ್ನೆ, ಜಗತ್ತನ್ನೆ ಗೆಲ್ಲಬೇಕೆಂದು ಹೊರಟಿದ್ದ. ಎಲ್ಲಾ ಕಡೆ ಗೆಲುವುಕಂಡಿದ್ದ ಅಲೆಕ್ಸಾಂದಡರಿಗೆ ಭಾರತವನ್ನು ಪ್ರವೇಶಿಸಿ ಭಾರತವನ್ನು ತನ್ನ ವಶ ಪಡಿಸಿಕೊಳ್ಳಲ್ಲೆಂದು ಬಯಸಿದ್ದ. ಈ ಮಾತುಗಳು ಅಲೆಕ್ಸಾಂಡರನ ಹೃದಯದ ಹೊಡೆತದೊದನೆ ಇನ್ನೂ ಧ್ವನಿ ಗೊಡುಗುತ್ತಿದ್ದವು. ತನ್ನೊಡನೆ ಯುದ್ದದಲ್ಲಿ ಸೋತು, ಸೆರೆಯಾಳಾಗಿ, ಎದುರಿಗೆ ನಿಂತ ಭಾರತದ ಅರಸನೊಬ್ಬನ ನುಡಿಗಳಿವವು, ಗ್ರೀಕ್ ಸಮ್ರಾಟನ ಕಣ್ಣಿನ ಮಂಜನ್ನು ಹರಿಸಿದ್ದವು; ವಿಚಾರದಲ್ಲಿ ಕೆದಹಿದ್ದುವು. ಆತ್ಮ ನೀರೀಕ್ಷಣೆಯ ದಿವ್ಯ ಕನ್ನಡವನ್ನು ಕೊಟ್ಟಿದ್ದವು. ಜಗಜ್ಜೇತ ! ಅಲೆಕ್ಸಾಂದಡರ !! ಅಲೆಕ್ಸಾಂದಡರನು ಭಾರತ ರಾಜ್ಯದ ರಾಜನನ್ನು ಪೌರಸ ಎಂದು ಕರೆದಿದ್ದಾನೆ. ಜಗತ್ತನ್ನೇ ಗೆದ್ದಿದೇನೆ. ಪೃಥ್ವಿಯೊಂದು ನನ್ನ ಅಂಗೈಯಲ್ಲಿದೆ ಎಂದು ಭಾವಿಸಿದ.ಭಾರತದಲ್ಲಿಯೂ ವಿಜಯ ನನ್ನದೇ ಎಂದು ತಿಳಿದಿದ್ದ. ಈ ಜಗತ್ತಿನ ಕಣ್ನಿಗೆ ಪೌರಸ ಎಂದರೇ ಭಾರತ ರಾಜ್ಯದ ರಾಜ. ಅಲೆಕ್ಸಾಂಡರನ ಸೆರೆಯಾಳು ಎಂದು ಭಾವಿಸಿದ, ಅಲೆಕ್ಸಾಂಡರನ ಮನಸೆಂಬ್ಬ ಪಕ್ಷಿಯು ಭಾರತ ರಾಜ್ಯದ ರಾಜನ ಪಂಜರದಲ್ಲಿ ಸಿಲುಕಿ ವಿಲಿವಿಲಿ ಒದ್ದಾಡುತ್ತಿತ್ತು. ಯಾವ ರೀತಿ ಎಂದರೆ ಆ ಆದಿಕವಿಯ ಎದುರಿಗೆ ಬೇಡನ ಬಾಣದ ಹೊಡೆ ತಕ್ಕೆ ಬಲಿಯಾದ ಅಂದಿನ ಕ್ರೌಂಚಪಕ್ಷಿಯಂತೆ, ತನ್ನ ಈ ಮನಸ್ಥಿತಿಯಿಂದ ಇನ್ನಾವ ಮಹಾಕಾವ್ಯ ಸೃಷ್ಟಿಯಾಗಲಿದೆಯೊ ಎಂದು ಭಾವಿಸಿದ. ಮುಂದೆ ಬರುವ ಯಾವ ಸಂಭವಗಳನ್ನು ಯೋಚಿಸದೆ ಸಾಗಿದ್ದಾನೆ.ಅಲೆಕ್ಸಾಂದಡರನು ಭಾರತದ ವಾತವರಣವನ್ನು ಈಗೆ ವರ್ಣಿಸಿದ್ದಾನೆ.

ಪೂರ್ವ ದಿಕ್ಕಿನಲ್ಲಿ ಇನ್ನೂ ದಿನಮಣಿ ಉದಯಿಸಿಲ್ಲ. ನಾಲ್ಕು ಮಾರಿನ ಆಚೆಯ ನೆಲವೂ ಕಾಣದಂತೆ ಮಂಜು ಮುಸುಕಿದೆ. ಹಿಂದೆ ಹೊರಳಿ ನೋಡಿದರೆ, ಸಮೀಪದಲ್ಲಿ ಇದ್ದ ತನ್ನ ಅಪಾರ ಸೇನೆಯೂ ಕಾಣದು. ಮಗ್ಗು ಲಲ್ಲೇ ಹರಿಯುತ್ತಿದ್ದ ವಿಸ್ತಾರವಾದ ಸಿಂಧುವು ತನ್ನ ಹೃದಯದ ನಂಜನ್ನು ಹೊರದೂಡುವಂತೆ, ಮಂಜನ್ನು ತೆರೆತೆರೆಯಾಗಿ ಭೂಮಿಯತ್ತ ಕಳಿಸುತಿದೆ. ಅದೇನು ಮಂಜೋ, ಭಾರತ ಭೂಮಿಯ ಯಜ್ನ - ಯಾಗಗಳ ಧೂಪಧೂಮವೋ! ಏನಿದ್ದರೇನು? ಅಲೆಕ್ಸಾಂಡರನ ಮೈ-ಮನೆಗಳನ್ನದು ಮುತ್ತುತ್ತಿದೆ ಸುತ್ತುತ್ತಿದೆ, ಎಲ್ಲೆಲ್ಲಿಯೋ ಕೊಂಡೊಯ್ಯುತ್ತಿದೆ.ಭಾರತದ ಈ ವಾತಾವರಣದಲ್ಲಿ ಹಿಂಜಿದರಳೆಗಿಂತ ಹಗುರಾಗಿ ಹಾರುತ್ತಿದ್ದಾನೆ. ಪೋರಸನನ್ನು ಗೆದ್ದಿದ್ದಾನೆ. ಪೋರಸನ ಎದುರಿನಲ್ಲಿಂದು ಸೋತಿದ್ದಾನೆ, ಆ ಗೆಲಿವು, ಈ ಸೊಲು, ಎರದರಲ್ಲಿ ಯಾವುದು ಮಿಗಿಲು? ಹೆಲವೋ ಸೋಲೋ?-ಏನೂ ತಿಳಿಯದಾಗಿತ್ತು. ಎಲ್ಲಾ ಅದರೊಲಗೇ ಅಡಗಿದೆ -ಎನಿಸಿತ್ತು.

ಯಾವುದರಲ್ಲಿ ಎಂದರೆ? ಮುಖಕ್ಕೆ ಮುತ್ತಿದ ಮಂಜಿನ ಹನಿಗಳನ್ನು ತನ್ನ ಅಂಗೈಗಳಿಂದ ಒರಸಿಕೊಂಡ,ಅಲೆಕ್ಸಾಂಡರ, ಹುಬ್ಬು, ರೆಪ್ಪೆಯ ಕೂದಲುಗಳ ಮೇಲೆ ಸಣ್ಣ ಮುತ್ತಿನಂತೆ ನಿಂತ ಸೀರ್ಪನಿಗಳು, ಇದ್ದ ಲಿಯೇನೀರಾಗಿ ಅವನ ಕೈಗಳನ್ನು ಒದ್ದೆಗೊಳಿಸಿದುವು. ಸಹಸ್ರಾರು ಜೀವಗಳನ್ನು ಹತ್ತಿಕ್ಕಿದ ಆ ಕರಗಲಿಗೆ ಈ ಹನಿಗಳ ಇರುವು ಗಮನಕ್ಕೂ ಬಾರದೆ ಹೋಗಿರಬೇಕು. ಅದರೆ ಕೈ ಮಾತ್ರ ಒದ್ದೆಯಾಗದೆ ಹೋಗಲಿಲ್ಲ. ಇನ್ನೂ ಮುಂದೆ ಸಾಗಿದ್ದಾನೆ ಅಲೆಕ್ಸಾಂಡರ ! ಏಕಾಕಿಯಾದರೇನಂತೆ ! ಜಗಜ್ಜೇತನಿಗೆ ಅದುರುಂಟೆ? ನಡೆದ ; ಹಾಗೆಯೇ ನಡೆದ ಅಲೆಕ್ಸಾಂಡರ, ಅವನ ಜೊತೆಯಲ್ಲಿಯೇ ಸಿಂಧೂ ನದೆಯು ಪ್ರವಹಿಸುತ್ತಿತ್ತು. ಸಾಗರದೆಡೆಗೆ ಧಾವಿಸುತ್ತಿತ್ತು. ಬೆಳಗಿನ ಹೊತ್ತು, ಅಲೆಕ್ಸಾಂಡರನಿಗೆ ಎಷ್ಟು ದೂರ ನಡೆದರೂ ಪ್ರಯಾಸವೆಂಬುದಿಲ್ಲ.ಮನಸ್ಸು ಮಲ್ಲಿಗೆಯಂತೆ ಅರಳಿತ್ತು.ಹೊರಗೆ ಮಾತ್ರ ಇನ್ನೂ ಮಂಜು ಮುಸುಕಿತ್ತು. ಅದನ್ನೂ ಹೊಡೆದೋಡಿಸಲು ಬರುವಂತೆ ಪೂರ್ವದಿಕ್ಕಿನಲ್ಲಿ ರವಿಯು ಬಂದ.ಮೆಲ್ಲನೆ ಮಂಜು ಕರಗಹತ್ತಿತು. ಒಳಗಿನ ಬೆಳಕು ಹೊರಗೆ ಹರಿಯಹತ್ತಿತು.

ಪರರಾಷ್ಟ್ರ, ಎರಡು ದಿನಗಳ ಹಿಂದೆಯೇ ಇಲ್ಲಿಯ ಜನಪ್ರಿಯ ಅರಸ ಪೋರಸನನ್ನು -ಗೆದ್ದು ಬಂದಿಸಿದ್ದಾಗಿದೆ. ಭಾರತೀಯರ ಹೃದಯ ತಕಪಕನೆ ಇನ್ನೂ ಕುದಿಯುತ್ತಿರಬೇಕು. ಗ್ರೀಕ್ ಸೈನ್ಯ ವಿಜಯದ ಮಬ್ಬಿನಲ್ಲಿ ಮೈಮರೆತು ಮಲಗಿದೆ. ಚತುರ ಸೇನಾನಿಯಾದ ಅಲೆಕ್ಸಾಂಡರನಿಗೆ ಇಂದು ಇದಾವುದರ ಅರಿವು ಇಲ್ಲ. ಇದ್ದರೂ ಅದರ ಹೆದರಿಕೆಯೂ ಎಲ್ಲ. ಬೆಳಗಿನಲ್ಲಿಯೇ ಎದ್ದು ಸ್ವಚ್ಛಂಧವಾಗಿ ವಿಹರಿಸುತ್ತ ಸಿಂಧುವಿನ ರೀರದಗುಂಟ ಸಾಗಿದ್ದಾನೆ. ಇಂತಹ ಪರಿವರ್ತನ ಏತರಿಂದ? ಅದೇತರಿಂದ?

ಇನ್ನೂ ಪೂರ್ಣ ಮಂಜು ಮಾಯಾವಾಗಿರಲಿಲ್ಲ. ದೂರದ ವರೆಗೆ ದೃಷ್ಟಿಯು ಹರಿಯುತ್ತಿರಲಿಲ್ಲ, ಏನೋ ಒಂದು ಅಸ್ಪಷ್ಟ ಸ್ವರ ಚಕ್ರವರ್ತಿಯ ಕಿವಿಗೆ ಬಂದು ತಗುಲಿತು. ನದಿಯು ತೀರದೆಡೆಯಿಂದ ಬರುವ ಪಲ್ಲವಿಯಿದು.

                 " ಸತ್ತ್ವೇಷು ಮೈತ್ರಿ ಗುಣಿಷು ಪ್ರಮೋದಂ
                  ಕ್ಲಿಷ್ಟೇಷು ಜೀವೇಷು ಕೃಪಾಪರತ್ವಂ
                  ಮಾಧ್ಯಸ್ಥ ಭಾವಂ ವಿಪರೀತ ವೃತ್ತೌ
                  ಸದಾ ಮಮಾತ್ಮಾ ವಿದಧಾತು ದೇವ !"

ಅಲೆಕ್ಸಾಂಡರ ನೆಟ್ಟನೆ ನಿಂತಲ್ಲಿಯೇ ನಿಂತ. ಧ್ವನಿ ಬಂದತ್ತ ಕಿವಿಗೊಟ್ಟು ಆಲಿಸಿದ. ಏನೋ ಗುಣು ಗುಣು ನಾದ -ಭಾರತೀಯ ಭಾಷೆ. ಅರ್ಥ ಹೊಳೆಯದು. ಅರಿಯದ ಭಾವ. ಆದರೂ ಏನೋ ಒಂದು ಪ್ರಸನ್ನತೆ. ಇನ್ನೂ ಕೇಳಬೇಂಕಂಬ ಆಶೆ. ಆದರೆ......

ಮರುಕ್ಷಣದಲ್ಲಿಯೇ ಅಲೆಕ್ಸಾಂಡರನಲ್ಲಿ ತನ್ನ ಯೋಧವೃತ್ತಿ ಜಾಗೃತವಾಯಿತು. ಆಂ?ಭಾರತವನ್ನು ಪದಾಕ್ರಾಂತ ಮಾಡಲು ಬಂದ ವೀರನು ನಾನು. ಇನ್ನೂ ಈ ಗಡಿಯಲ್ಲಿಯೇ ಇರುವೆ. ವಿಶ್ವವಿಜಯ ಹೀಗೆ ವಿಲಂಬ ಮಾಡಿದರೆ ಹೇಗೆ? ಎನು ಕವಿದಿದ್ದಿತು. ನನ್ನ ಬುದ್ದಿಗೆ ....?ಅದೆಂಥ ಕಾವಲ ಕವಿಯಿತೋ ಎನೋ ! ಕೂಡಲ ಸೈನ್ಯವಿದ್ದಲ್ಲಿ ಮರಳ ಬೇಕು. ಪ್ರಸ್ಡಾನ ಭೇರಿಯನ್ನು ಹೊಡಯಿಸಬೇಕು .ವಿಶ್ವದಾಕಾಶದಲೆಲ್ಲ ಜಗಜ್ಜೇತೃವಿನ ವಿಜಯ ದುಂದುಭಿ ಮೊಳಗಲಿ ! ಆ ಕ್ಷಣದಲ್ಲಿಯೇ ಅಲೆಕ್ಸಾಂಡರನ ಮೈ ಗದಗದ ನಡುಗಿತು . ಹೊರಗಿನ ತಂಗಾಳಿಯ ಪರಿಣಾಮವೇ ? ಅಲ್ಲ ; ಅಲ್ಲ . ಒಳಗಿನ ನಡುಕ. ಹೃದಯದಾಳದಿಂದ ಹೊರಹೊಮ್ಮಿ ಬರುವ .ಹೆದರಿಕೆಯ ಬಾಣಗಲು ಅಂಗಾಂಗಳಲ್ಲಿ ಮೂಡಿ ನಿಲ್ಲ್ಲುವಂತೆ ಮೈಯೆಲ್ಲ ಮುಳ್ಳುಗಳೆದ್ದುವು. ಅದೊಂದು ಕ್ಷಣ ಅಧೀರನಾದ. ತಾನು ಏಕಾಕಿಯಾಗಿ ಈ ನಿರ್ಜನ ನದೀತೀರದಲ್ಲಿ ವಿಹರಿಸುತ್ತ ಬಂದುದರ ಅರಿವಾಯಿತವನಿಗೆ. ಶತ್ರು ಪ್ರದೇಶದಲ್ಲಿ, ಸೈನ್ಯವನ್ನು ದೂರ ಬಿಟ್ಟು, ಮೈಗಾವಲಿಗೆ ಯಾರೂ ಇಲ್ಲದೆ, ಇಷ್ಟು ದೂರ ಬಂದುದು. ಸುತ್ತಲೂ ಮಂಜು. ಸಮೀಪದಲ್ಲಿ ಭಯಂಕರ ಜಲರಾಶಿ. ಪ್ರಕೃತಿಯೆಲ್ಲವೂ ಮಾಯೆಯಾಗಿ ಅವನ್ನನ್ನು ಹೆದರಿಸಹತ್ತಿತ್ತು. ಎಷ್ಟಾದರೂ ಯೋಧ, ಸ್ವಾಭಾವಿಕವಾಗಿ ಅವನ ಬಲಗೈಯೂ ಎಡದ ನದುವಿನಲ್ಲಿ, ನೇತಾಡುವ ಕತ್ತಿಯತ್ತ ಧಾವಿಸಿತು. ಎಡಗೈಯಿಂದ ಹಿಂದೆ ಬೆನ್ನಿಗೆ ನಿಂತ ಬರ್ಚಿಯನ್ನು ಮುಟ್ಟಿ ನೋಡಿದ. ಆ ಆಯುಧಗಳ ಸಂರಕ್ಷಣೆಯಿಂದ ಸ್ವಲ್ಪ ಧೈರ್ಯ ಬಂದಿರಬೇಕವನಿಗೆ, ಹೂಂ! ಪರದೇಶ! ಸಿಂಹನಿಗೆ ಯಾವುದಾದರೇನು?- ಎಂದು ಹೂಂಕರಿಸಿದ, ಎದೆ ಸೆಟೆಸಿ ನಿಂತ. ಹಃ! ಹಃ! ಹಃ!!

ಯಾರೋ ತನ್ನನ್ನೇ ನೋಡಿ ನಕ್ಕಂತಾಯಿತವನಿಗೆ. ಮುಖದ ವೀರಶ್ರೀ ಒಂದು ಕ್ಷಣ ಇಳಿಯಿತು. ಪೋರಸನ ಮೂರ್ತಿ ಒಂದು ನಿಮಿಷ ಬಗೆಗಣ್ಣೈನೆದುರಿಗೆ ಸುಳಿಯಿತು.

ಹೂಂ! ಪರಾಜಿತ!

ತುಟಿಯಲ್ಲಿಯೇ ಪುಟಪುಟಿಸಿದ. ಮುಖದಲ್ಲಿ ವಿಜಯೋನ್ಮಾದ ಮೂಡುವುದರಲ್ಲಿತ್ತು.

ಮತ್ತೆ ಆ ನಗುವಿನ ಸದ್ದು!

ಸುತ್ತಲೂ ದಿಟ್ಟಿಯಟ್ಟಿ ನೋಡಿದ. ಅಲೆಕ್ಸಾಂಡರ. ಸಮೀಪದ ಬಂಡೆಯೊಂದರಿಂದ ಮೆಲ್ಲನೆ ಕೆಳಗೆ ಇಳಿಯುತ್ತ ಒಂದು ವ್ಯಕ್ತಿ ಬಯಲಿಗೆ ಬರುತ್ತಿದೆ! ಮೈಮೇಲೆ ಒಂದು ಚೂರೂ ವಸ್ತ್ರವಿಲ್ಲ. ಹುಟ್ಟಿ ಬಂದಂತೆಯೇ ಬೆಳೆದು ನಿಂತ ಜೀವ.ತುಂಬ ಬೆಳೆದ ಗಡ್ಡ ಅದರಲ್ಲಿ ತೆರೆದ ತುಟಿಗಳಿಂದ ಒಡೆದು ತೋರುವ ಬಿಳಿಯ ದಂತಪಂಕ್ತಿ. ತುಂಬ ಕೃಶವಾದ ಮೈಯು, ತನ್ನಲ್ಲಿಯೇ ತಾನು ಮಗ್ನನಾದಂತೆ ಇದ್ದ. ಇಳಿದುಬರುತ್ತ ಇದ್ದ.

ಅದಾಗಲೇ ಮಂಜು ಅಳಿಯುತ್ತಿದ್ದಿತು. ಸೂರ್ಯದೇವ ಮೇಲೇರಿ ಬರುತಲಿದ್ದ. ಸುತ್ತಲೂ ಸ್ವಚ್ಛವಾದ ಪ್ರಕಾಶ ಪಸರಿಸುತ್ತಲಿತ್ತು.

ಆ ಪ್ರಕಾಶದಲ್ಲಿ ಆ ಅಪರಿಚಿತ ವ್ಯಕ್ತಿಯ ನಗ್ನತ್ವ ಇನ್ನಿಷ್ಟು ಒಡೆದು ತೋರಿತು, ಅಲೆಕ್ಸಾಂಡರನಿಗೆ.

ಅಯ್ಯೋ ಕಾಡುಜೀವ!

ಇನ್ನೂ ದಿಗಂಬರ!

ನಾಗರಿಕತೆಯನೇ ಅರಿಯದ ಪಾಮರ !

ನನ್ನ ಬಟ್ಟೆ ಬರೆಗಳನ್ನು ನೋಡಿ ನಕ್ಕಿರಬೇಕು. ದಿ ಢನಾಗಿರಬೇಕು.ಒಂದರ್ಧಕ್ಷಣದಲ್ಲಿ ಹಲವಾರು ವಿಚಾರಗಳು ಸುಳಿದುಹೋದುವು, ವಿಶ್ವವಿಜಯಿಯ ತಲೆಯಲ್ಲಿ. ಮಾತನಾಡಿಸಿ ನೋಡಬೇಕೆಂದು ಬಗೆದ. ಕೂಡಲೆ ಸೈನ್ಯಾಧಿಪತಿಯು ಗದುಸುಸ್ವರದಲ್ಲಿ :-

             "ಅದಾರು ? ಬಾಯಿಲ್ಲಿ.....
  ಆಜ್ಣಾಪಿಸಿದ ಅಲೆಕ್ಸಾಂಡರ. ಈ ಕರೆಗೆ, ನುಡಿದ ಠೀವಿಗೆ, ಮೂರು ಲೋಕವೇ ಮಣಿದು ಎದುರಿಗೆ ಬಂದಿರಬೇಕು - ಎನ್ನುವ ಭಾವ ನುಡಿಯಲ್ಲಿ ತುಂಬಿ ತುಳುಕುತಲಿತ್ತು.
 ಇದಾವುದನ್ನೂ ಗಮನಿಸದೆ ಆ ವ್ಯಕ್ತಿ ತನ್ನ ದಾರಿಯಲ್ಲಿ ತಾನು ಮುಂದುವರಿಯಿತು.
          "ಎಲೋ !" ಗುಡುಗಿದ ಅಲೆಕ್ಸಾಂಡರ.
 ಒಂದು ಕ್ಷಣ ನಿಂತು, ಹೊರಳಿ ನೋಡಿ, ಮಂದಹಾಸ ಒಂದನ್ನು ಬೀರಿ, ಮೆಲ್ಲನೆ ನಡೆಯಿತಾ ವ್ಯಕ್ತಿ.
           ಆ ಮಂದಹಾಸ! ಅದರಲ್ಲೆಂಥ ಉಪವಾಸ !!
           ಜಗಜ್ಜೇತನನ್ನು ಕೆರಳಿಸಿತು ಆ ಮನುಷ್ಯನ ನಗೆ.
           "ನಿಲ್ಲು; ಮುಂದೆ ಹೆಜ್ಜೆ ಇಟ್ಟೆಯಾದರೆ ಅಲ್ಲಿಯೆ ಕಡಿದು ಚೆಲ್ಲಿಯೇನು ?"
          ಆಜ್ಣಾಪಿಸಿದ, ಹತ್ತು ಸಾವಿರಸೇನೆಯ ನಾಯಕ. ಈ ಮಾತಿಗೆ ಆ ವ್ಯಕ್ತಿಯು "ನನ್ನನ್ನೇ ? ಎಂದು ಕೇಲಿದ ಮತ್ತು ಅದೇ ಶಾಂತ -ಗಂಭೀರ ಮುಖಭಾವದಲ್ಲಿ ನುಡಿದ, ಅಲೆಕ್ಸಾಂಡರನ ಕಡೆಗೆ ಹೊರಳಿ ನೋಡಿದ ಆ ಭಾರತೀಯ ಮುನಿ.
        ಅವನಲ್ಲೇನೂ ಹೆದರಿಕೆಯ ಚಿಹ್ನೆಗಳು ಕಂಡುಬರಲಿಲ್ಲ, ಅಲೆಕ್ಸಾಂಡರನಿಗೆ.ಮೈ ಜುಮ್ಮೆಂದಿತು. ಒಂದು ಕ್ಷಣ ನಿಂತಲ್ಲಿಯೇ ನಿಂತ.
        ತಿರುಗಿ ನಿಂತ ಆ ವ್ಯಕ್ತಿ ಒಂದರೆಕ್ಷಣ ಅಲೆಕ್ಸಾಂಡರನನ್ನು ದಿಟ್ಟ್ಚಿಸಿತು. ಆ ದೃಷ್ಟಿಯ ಶಕ್ತಿಯು ಎದುರಿಗೆ ಜಗಜ್ಜೇತನಿಗೆ ತಲೆಯೆತ್ತಿ ನಿಲ್ಲಲಾಗಲಿಲ್ಲ ; ಅದನ್ನು ಎದುರಿಸುವುದಾಗಲಿಲ್ಲ. ತಾನಾಗಿಯೇ ಶಿರ ಬಾಗಿತು, ಬಾಳೆಗೊನೆಯಂತೆ ಎರಡು ಕ್ಷಣ ಹಾಗೆಯೇ ಶಿಲಾಸ್ತಂಭದಂತೆ ಚಲಿಸದೆ ನಿಂತ ಚಕ್ರವರ್ತಿ!
        ಮೆಲ್ಲನೆ ಮುಖವನ್ನು ಮೇಲೆತ್ತಿ ನೋಡಿದ.
     ಸಾವಧಾನವಾಗಿ ನಡೆದಿತ್ತಾ ವ್ಯಕ್ತಿ !ಯಾರ ಹಂಗೂ ಇಲ್ಲ. ಹೆದರಿಕೆಯೂ ಇಲ್ಲ.
       " ನಿಜವಾದ ವಿಶ್ವವಿಜಯಿ ಈತ !"

ತನ್ನಿಂದ ತಾನೇ ಅಲೆಕ್ಸಾಂಡರನ ತುಟಿಗಳಿಂದ ಮಾತೊಂದು ಹೊರಹೊಮ್ಮಿತು.ಪೂರ್ವದಲ್ಲಿ ಸೂರ್ಯ ಮೇಲ್ಕ್ಕೇರುತಲಿದ್ದು. ಲೋಕದಲ್ಲೆಲ್ಲ ಆತನ ಪ್ರಕಾಶ ಬೆಳಗುತಲಿದ್ದಿತು. ಸೋಲಿನ ಸವಿಯನ್ನುಂಡು ಆ ಸೇನಾಪತಿ ಸೈನ್ಯದತ್ತ ಮರಳಿದ್ದ. ಆದರೆ ಗೆಲುವಿನ ಆನಂದವನ್ನು ಅನುಭವಿಸುತ್ತಿತು ಅವನ ಹೃದಯ !.


       ರಾಜ್ಯಭಾರ =	೩೩೬–೩೨೩ ಕ್ರಿಪೂ
       ಹುಟ್ಟು   =  ೨೦ ಜುಲೈ ೩೫೬ ಕ್ರಿಪೂ
       ಹುಟ್ಟುಸ್ಥಳ =	ಪೆಲ್ಲ, ಮೆಸಿಡೊನ್ ಗ್ರೀಸ್
       ಸಾವು 	  =   ೧೦ ಜೂನ್ ಅಥವಾ ೧೧ ಜೂನ್ ೩೨೩ ಕ್ರಿಪೂ (ವಯಸ್ಸು ೩೨)
       ಸಾವಿನ ಸ್ಥಳ  =	ಬೆಬಿಲಾನ್
       ಪೂರ್ವಾಧಿಕಾರಿ =	ಮೆಸಿಡೊನ್‍ನ ಫಿಲಿಪ್ ೨
       ಉತ್ತರಾಧಿಕಾರಿ =	ಮೆಸಿಡೊನ್‌ನ ಅಲೆಕ್ಸಾಂಡರ್ ೪
       Consort to =	ಬ್ಯಾಕ್ಟ್ರಿಯದ ರೊಕ್ಸಾನ, ಪರ್ಷಿಯಾದ ಸ್ಟೆಟೀರ
       Offspring  =	ಮೆಸಿಡೊನ್‌ನ ಅಲೆಕ್ಸಾಂಡರ್ ೪
       ತಂದೆ 	  =  ಮೆಸಿಡೊನ್‌ನ ಫಿಲಿಪ್ ೨
       ತಾಯಿ 	  =   ಎಪಿರಸ್‌ನ ಒಲಿಂಪಿಯಾಸ್

ಅಲೆಕ್ಸಾಂಡರ್ ದಿ ಗ್ರೆಅಟ್ ಎಂದು ಪ್ರಸಿದ್ದವಾಗಿರುವ ಮಸೆಡೊನಿಯದ ಮುಮ್ಮುಡಿ ಅಲೆಕ್ಸಾಂಡರ್ ಗ್ರೀಸ್ ದೇಶದ ಒಬ್ಬ ಮಹಾನ್ ದಂಡನಾಯಕ. ಗ್ರೀಸ್ ದೆಶಕ್ಕೆ ಸೆರಿದ ಮಸೆಡೊನಿಯ ರಜ್ಯದ ರಜನಾದ ಇತ ಆರಿಸ್ಟೊಟ್ಲೆ ಎಂಬ ತತ್ವಜ್ನ್ಯಾನಿಯ ಶಿಶ್ಯ.. ಈತ ಇತಿಹಾಸದ ಓಂದು ಬಹುದೋಡ್ಡ ಸಮ್ರಾಜ್ಯವನ್ನು ನಿರ್ಮಿಸಿದ. ಇವನ ನಿಧನದ ಹೊತ್ತಿಗೆ ಇವನು ಪರ್ಷಿಯನ್ ಹಾಸದ ಓಂದು ಬಹುದೋಡ್ಡ ಸಮ್ರಾಜ್ಯವನ್ನು ನಿರ್ಮಿಸಿದ. ಇವನ ನಿಧನದ ಹೊತ್ತಿಗೆ ಇವನು ಪರ್ಷಿಯನ್ ಸಾಮ್ರಾಜ್ಯವನ್ನು ಪರಾಭವ ಗೊಳಿಸಿ ಅದನ್ನು ಗ್ರೀಕ್ ಸಾಮ್ರಾಜ್ಯದ ಭಾಗವನ್ನಾಗಿ ಮಾಡಿದ್ದ ಇವನ ಸಾಮ್ರಾಜ್ಯ ಗ್ರೀಸ್ನಿಂದ ಹಿಮಾಲಯಾದ ತಪ್ಪಲಿನ ವರಗೆ ವಿಸ್ತರಿಸಿತ್ತು.