ಭಾಮಾ ಕುರುಪ್
ಭಾಮಾ | |
---|---|
ಜನನ | ರೇಖಿತಾ ಆರ್. ಕುರುಪ್ ಕೊಟ್ಟಾಯಂ, ಕೇರಳ, ಭಾರತ |
Other names | ಭಾಮಾ ಕುರುಪ್ |
ಶಿಕ್ಷಣ | ನಟಿ |
Years active | ೨೦೦೭-೨೦೧೯ |
ಮಕ್ಕಳು | ೧ |
Parent(s) | ರಾಜೇಂದ್ರನ್ ಕುರುಪ್ ಶೈಲಜಾ |
ಭಾಮಾ ಎಂಬ ರಂಗನಾಮದಿಂದ ಚಿರಪರಿಚಿತರಾದ ರೇಖಿತಾ ಆರ್. ಕುರುಪ್, ಪ್ರಧಾನವಾಗಿ ಮಲಯಾಳಂ ಮತ್ತು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿದ ಭಾರತೀಯ ನಟಿ. ಅವರು ೨೦೦೭ ರಲ್ಲಿ ಎಕೆ ಲೋಹಿತದಾಸ್ ನಿರ್ದೇಶನದ ಮಲಯಾಳಂ ಚಿತ್ರ ನಿವೇದ್ಯಂ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು ೪೧ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.
ವೈಯಕ್ತಿಕ ಜೀವನ
[ಬದಲಾಯಿಸಿ]ಭಾಮಾ ಅವರು ರಾಜೇಂದ್ರ ಕುರುಪ್ ಮತ್ತು ಶೈಲಜಾ ದಂಪತಿಯ ಕಿರಿಯ ಮಗಳು. ಅವರಿಗೆ ರೇಶ್ಮಿತಾ ಆರ್ ಕುರುಪ್ ಮತ್ತು ರೆಂಜಿತಾ ಆರ್ ಕುರುಪ್ ಎಂಬ ಇಬ್ಬರು ಹಿರಿಯ ಸಹೋದರಿಯರಿದ್ದಾರೆ .
ಭಾಮಾ ತಮ್ಮ ಶಾಲಾ ಶಿಕ್ಷಣವನ್ನು ಮಣಾರ್ಕಾಡ್ನ ಸೇಂಟ್ ಮೇರಿ ಹೈಯರ್ ಸೆಕೆಂಡರಿ ಶಾಲೆ ಮತ್ತು ಮಣಾರ್ಕಾಡ್ನ ಇನ್ಫೆಂಟ್ ಜೀಸಸ್ ಬೆಥನಿ ಕಾನ್ವೆಂಟ್ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮಾಡಿದರು. ಅವರು ಪತ್ರವ್ಯವಹಾರದ ಕೋರ್ಸ್ ಮೂಲಕ ಸಮಾಜಶಾಸ್ತ್ರದಲ್ಲಿ ಪದವಿ ಪಡೆದರು.[೧]
ಜನವರಿ ೨೦೨೦ ರಲ್ಲಿ ಭಾಮಾ ಅರುಣ್ ಅವರನ್ನು ವಿವಾಹವಾದರು.[೨]
ವೃತ್ತಿಜೀವನ
[ಬದಲಾಯಿಸಿ]ಅವರು ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು, ಸೂರ್ಯ ಟಿವಿಯಲ್ಲಿ "ಥಾಲಿ" ಎಂಬ ಕಾರ್ಯಕ್ರಮದ ನಿರೂಪಕಿಯಾಗಿದ್ದರು. ಅವರು ಕ್ರಿಶ್ಚಿಯನ್ ಭಕ್ತಿಗೀತೆಗಳ ಆಲ್ಬಂನಲ್ಲಿಯೂ ನಟಿಸಿದ್ದಾರೆ. ನಿರ್ದೇಶಕ ಲೋಹಿತದಾಸ್ ಅವರು ನಿವೇದ್ಯಂ ಚಿತ್ರದಲ್ಲಿ ಅವರನ್ನು ತಮ್ಮ ಮೊದಲ ಚಿತ್ರದ ನಾಯಕಿಯಾಗಿ ಆಯ್ಕೆ ಮಾಡಿದರು. ಅವರ ಎರಡನೇ ಚಿತ್ರ ವಿನಯನ್ ನಿರ್ದೇಶಿಸಿದ, ಹರೀಂದ್ರನ್ ಒರು ನಿಷ್ಕಲಂಕನ್. ಇದರಲ್ಲಿ ಅವರು ಮಣಿಕುಟ್ಟನ್ ಎದುರು ನಟಿಸಿದ್ದರು. ಜಾನಿ ಆಂಟನಿ ನಿರ್ದೇಶನದ ಸೈಕಲ್ನಲ್ಲಿ ಅವರು ವಿನೀತ್ ಶ್ರೀನಿವಾಸನ್ ಅವರೊಂದಿಗೆ ಜೋಡಿಯಾಗಿ ನಟಿಸಿದರು.
೨೦೧೧ ರವರೆಗೆ ಮಲಯಾಳಂನಲ್ಲಿ ಒಂದೇ ರೀತಿಯ ಪಾತ್ರಗಳು ಸಿಗುತ್ತಿದ್ದವು ಎಂದು ಭಾಮಾ ಹೇಳಿದರು. ಅವರು ಕನ್ನಡ ಚಲನಚಿತ್ರಗಳ ಆಫರ್ಗಳನ್ನು ಸ್ವೀಕರಿಸಲು ಪ್ರಾರಂಭಿಸಿದರು. ನಂತರ ಅವರಿಗೆ ಮಲಯಾಳಂನಲ್ಲಿ ಹೊಸ ಮತ್ತು ಆಸಕ್ತಿದಾಯಕ ಪಾತ್ರಗಳು ಸಿಗಲು ಪ್ರಾರಂಭಿಸಿದವು.[೩] ಅವರು ಸೋಹನ್ಲಾಲ್ ಅವರ ಕಾದವೀಡು ಚಿತ್ರದಲ್ಲಿ ಎಂ.ಟಿ. ವಾಸುದೇವನ್ ನಾಯರ್ ಅವರಿಗೆ ನಾಯಕಿಯಾಗಿ ನಟಿಸಿದರು. ಇದರಲ್ಲಿ ಅವರ ಪಾತ್ರವು ಆಧಿನಿಕ, ಬುದ್ಧಿವಂತ ಹುಡುಗಿಯದ್ದಾಗಿತ್ತು. ವಿನೋದ್ ವಿಜಯನ್ ಅವರ ಡಿ ಕಂಪನಿ ವಿಭಾಗದ ಡೇ ಆಫ್ ಜಡ್ಜ್ಮೆಂಟ್ನಲ್ಲಿ ಚಿಕ್ಕದಾದರೂ ಮಹತ್ವದ ಪಾತ್ರವನ್ನು ನಿರ್ವಹಿಸಿದರು. ಇದರಲ್ಲಿ ಫಹಾದ್ ಫಾಸಿಲ್ ನಟಿಸಿದ್ದರು, ಇದರಲ್ಲಿ ಅವರು ಮೇಕಪ್ ಇಲ್ಲದೆ ಸೈಕೋ ಪಾತ್ರವನ್ನು ನಿರ್ವಹಿಸಿದರು.[೪]
೨೦೧೪ ರಲ್ಲಿ, ಅವರ ಐದು ಮಲಯಾಳಂ ಚಿತ್ರಗಳು ಬಿಡುಗಡೆಯಾದವು. ರಾಕೇಶ್ ಗೋಪನ್ ಅವರ ೧೦೦ ಡಿಗ್ರಿ ಸೆಲ್ಸಿಯಸ್ ಚಿತ್ರದಲ್ಲಿ ಅವರು ಕ್ರಿಶ್ಚಿಯನ್ ಗೃಹಿಣಿಯ ಪಾತ್ರವನ್ನು ನಿರ್ವಹಿಸಿದರು ಮತ್ತು ವಿನೋದ್ ಮಂಕಾರ ಅವರ ಒಟ್ಟಮಂದರಂ ಚಿತ್ರದಲ್ಲಿ ತಾಯಿಯಾಗಿ ಕಾಣಿಸಿಕೊಂಡರು.[೫] ಆ ವರ್ಷದ ಅವರ ಏಕೈಕ ಮಲಯಾಳಂ ಅಲ್ಲದ ಬಿಡುಗಡೆಯಾದ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜೀವನಚರಿತ್ರೆಯ ತಮಿಳು-ಇಂಗ್ಲಿಷ್ ಚಿತ್ರ ರಾಮಾನುಜನ್ನಲ್ಲಿ, ಅವರು ರಾಮಾನುಜನ್ ಅವರ ಪತ್ನಿ ಜಾನಕಿಯಮ್ಮಾಳ್ ಪಾತ್ರವನ್ನು ನಿರ್ವಹಿಸಿದರು.[೬][೭]
ಹಿನ್ನೆಲೆ ಗಾಯನ
[ಬದಲಾಯಿಸಿ]ಭಾಮಾ ಸಾಂದರ್ಭಿಕವಾಗಿ ಹಿನ್ನೆಲೆ ಗಾಯಕಿಯಾಗಿಯೂ ಕೆಲಸ ಮಾಡಿದ್ದಾರೆ. ರಾಹುಲ್ ರಾಜ್ ಅವರು ಬೈಕ್ ಎಂಬ ಚಿತ್ರಕ್ಕಾಗಿ ಸಂಯೋಜಿಸಿದ "ಕನ್ನಿಲ್ ಕನ್ನಿಲ್" ಹಾಡನ್ನು ಅವರು ಹಾಡಿದ್ದಾರೆಂದು ವರದಿಯಾಗಿದೆ.[೮] ಆದಾಗ್ಯೂ, ಆ ಚಿತ್ರವನ್ನು ರದ್ದುಗೊಳಿಸಲಾಯಿತು ಮತ್ತು ಹಾಡು ಬಿಡುಗಡೆಯಾಗದೆ ಉಳಿದಿದೆ. ಅವರು ಭಕ್ತಿಗೀತೆಗಳಾದ ಮಾಯಾ ಮಾಧವಂ (೨೦೦೯) ಗಾಗಿ ತಮ್ಮ ಧ್ವನಿಯನ್ನು ನೀಡಿದ್ದಾರೆ.[೯] ಮಕ್ಕಳ ಚಿತ್ರ ಮಿಯಾಂವ್ ಮಿಯಾಂವ್ ಕರಿಂಪೂಚಾ ಗಾಗಿ ಶೀರ್ಷಿಕೆ ಗೀತೆಯನ್ನು ಹಾಡಿದ್ದಾರೆ.[೧೦] ಸರಯು ನಿರ್ದೇಶನದ ಪಚಾ ಎಂಬ ಕಿರುಚಿತ್ರಕ್ಕೆ ಅವರು ಧ್ವನಿ ನೀಡಿದ್ದಾರೆ. ಅವರು ೧೦೦ ಡಿಗ್ರಿ ಸೆಲ್ಸಿಯಸ್ ಚಿತ್ರದಲ್ಲಿ ಅನನ್ಯಾ, ಮೇಘನಾ ರಾಜ್ ಮತ್ತು ಶ್ವೇತಾ ಮೆನನ್ ಅವರೊಂದಿಗೆ ಒಂದು ಹಾಡನ್ನು ಹಾಡಿದ್ದಾರೆ.[೧೧][೧೨]
ಪ್ರಶಸ್ತಿಗಳು
[ಬದಲಾಯಿಸಿ]- ೨೦೦೭ –ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಯಿಂದ, ಅತ್ಯುತ್ತಮ ತಾರಾ ಜೋಡಿ ಪ್ರಶಸ್ತಿ, ನಿವೇದ್ಯಂ ( ವಿನು ಮೋಹನ್ ಜೊತೆ ಹಂಚಿಕೊಂಡರು).[೧೩]
- ೨೦೦೭ – ಸತ್ಯನ್ ಸ್ಮಾರಕ ಚಲನಚಿತ್ರ ಪ್ರಶಸ್ತಿಯಿಂದ, ಬೆಸ್ಟ್ ನ್ಯೂ ಕಮ್ಮರ್ ಪ್ರಶಸ್ತಿ – ನಿವೇದ್ಯಂ [೧೪]
- ೨೦೦೭ – ಅತ್ಯುತ್ತಮ ಹೊಸಬರಿಗೆ ನೀಡುವ ಚಲನಚಿತ್ರ ವಿಮರ್ಶಕರ ಪ್ರಶಸ್ತಿ – ನಿವೇದ್ಯಂ [೧೫]
- ೨೦೦೭ – ಅಲಾ ಅತ್ಯುತ್ತಮ ನಟಿ ಪ್ರಶಸ್ತಿ – ನಿವೇದ್ಯಂ [೧೬]
- ೨೦೦೭ – ಅತ್ಯುತ್ತಮ ಹೊಸ ನಟಿಗಾಗಿ ವನಿತಾ ನಿಪ್ಪಾನ್ ಪ್ರಶಸ್ತಿ – ನಿವೇದ್ಯಂ [೧೭]
- ೨೦೦೯ – ಅತ್ಯುತ್ತಮ ತೆರೆ ಜೋಡಿಗಾಗಿ ಮಾತೃಭೂಮಿ-ಅಮೃತ ಪ್ರಶಸ್ತಿ – ಐವರ್ ವಿವಾಹರಾಯಲ್ ( ಜಯಸೂರ್ಯ ಅವರೊಂದಿಗೆ ಹಂಚಿಕೊಂಡಿದ್ದಾರೆ) [೧೮]
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ವರ್ಷ | ಚಿತ್ರ | ಪಾತ್ರ | ಭಾಷೆ | ಟಿಪ್ಪಣಿ |
---|---|---|---|---|
೨೦೦೭ | ನಿವೇದ್ಯಂ | ಸತ್ಯಭಾಮಾ | ಮಲೆಯಾಳಂ | ಮಲೆಯಾಳಂಗೆ ಪಾದಾರ್ಪಣೆ |
ಹರೀಂದ್ರನ್ ಒರು ನಿಷ್ಕಳಂಕನ್ | ಇಂದು | |||
೨೦೦೮ | ಸೈಕಲ್ | ಅನ್ನೀ | ||
ವನ್ ವೇ ಟಿಕೆಟ್ | ಸುನಂದಾ | |||
ಎಲ್ಲಮ್ ಅವಳ್ ಸೇಯಲ್ | ಚಿಂತಾಮಣಿ | ತಮಿಳು | ತಮಿಳಿಗೆ ಪಾದಾರ್ಪಣೆ | |
೨೦೦೯ | ಸ್ವಪ್ನಂಗಳಿಲ್ ಹೈಸಲ್ ಮೇರಿ | ಹೈಸಲ್ ಮೇರಿ | ಮಲೆಯಾಳಂ | |
ಕನ್ನೇರಿನು ಮಧುರಮ್ | ಸುಭದ್ರಾ | |||
ಕಲರ್ಸ್ | ಪೂಜಾ | |||
ಇವರ್ ವಿವಾಹಿತರಾಯಲ್ | ಕಾವ್ಯಾ | |||
ಒರು ಬ್ಲಾಕ್ ಆಂಡ್ ವೈಟ್ ಕುಟುಂಬಮ್ | ಮಿನ್ನು | |||
೨೦೧೦ | ಸಕುಟುಂಬಂ ಶ್ಯಾಮಲಂ | ನಂದನಾ | ||
ನೀಲಾಂಬರಿ | ಪಾರ್ವತಿ | |||
ಕೂಟ್ಟುಕಾರ್ | ಅಶ್ವತಿ | |||
ಕಾಲೇಜ್ ಡೇಸ್ | ಅಥಿರಾ | |||
ಮೊದಲಾಸಲ | ದೀಪು | ಕನ್ನಡ | ಕನ್ನಡಕ್ಕೆ ಪಾದಾರ್ಪಣೆ | |
೨೦೧೧ | ಜನಪ್ರಿಯನ್ | ಮೀರಾ | ಮಲೆಯಾಳಂ | |
ಸೆವೆನ್ಸ್ | ಗೌರಿ | |||
ಸ್ವಪ್ನ ಸಂಚಾರಿ | ಅಶ್ವತಿ (ಅಚ್ಚು) | |||
ಮಂಚಿವಾಡು | ಇಂದು | ತೆಲುಗು | ತೆಲುಗಿಗೆ ಪಾದಾರ್ಪಣೆ | |
ಶೈಲೂ | ಶೈಲೇಶ್ವರಿ (ಶೈಲೂ) | ಕನ್ನಡ | ||
೨೦೧೨ | ಸೇವರ್ಕ್ಕೊಡಿ | ವಲ್ಲಿ | ತಮಿಳು | |
ಹಸ್ಬೆಂಡ್ ಇನ್ ಗೋವಾ | ಅಭಿರಾಮಿ | ಮಲೆಯಾಳಂ | ||
ಒಂದು ಕ್ಷಣದಲ್ಲಿ | ದಿವ್ಯಾ | ಕನ್ನಡ | ||
೧೦೧ ವೆಡ್ಡಿಂಗ್ಸ್ | ರುಖಿಯಾ | ಮಲೆಯಾಳಂ | ||
೨೦೧೩ | ಆಟೋ ರಾಜ | ರಧಾ/ರಾಣಿ | ಕನ್ನಡ | |
ಬರ್ಫಿ | ಖುಷಿ | |||
ಅಪ್ಪಯ್ಯ | ಗೌರಿ | |||
ಡಿ ಕಂಪನಿ | ಜೀನಾ | ಮಲೆಯಾಳಂ | ||
ಅಂಬರ | ಅರುಂಧತಿ | ಕನ್ನಡ | ||
ಕದವೀಡು | ಜೀನಾ | ಮಲೆಯಾಳಂ | [೧೯] | |
೨೦೧೪ | ಕೊಂತಯುಮ್ ಪೂನುಲುಮ್ | ಅಮೃತಾ | ||
ನಾಕು ಪೆಂಟ ನಾಕು ತಕಾ | ಶುಭಾ | |||
ರಾಮಾನುಜನ್ | ಜಾನಕಿ ಅಮ್ಮಳ್ ರಾಮಾನುಜನ್ | ಇಂಗ್ಲಿಷ್/ತಮಿಳು | ||
೧೦೦ ಡಿಗ್ರೀ ಸೆಲ್ಸಿಯಸ್ | ನ್ಯಾನ್ಸೀ | ಮಲೆಯಾಳಂ | ||
ಒತ್ತಮಂದರಮ್ | ಕಲಾ | |||
ಮಾತೈ ಕುಜಪ್ಪಕ್ಕರನಲ್ಲ | ಅಣ್ಣಮ್ಮ | |||
೨೦೧೫ | ಅರ್ಜುನ | ಪಿಯಾ ಅರ್ಜುನಾ | ಕನ್ನಡ | |
೨೦೧೬ | ಮಾಲ್ಗುಡಿ ಡೇಸ್ | ಜಾನೆಟ್ | ಮಲೆಯಾಳಂ | |
ಮಾರುಪಡಿ | ಸಾರಾ | |||
೨೦೧೭ | ರಾಗ | ಅನು | ಕನ್ನಡ | |
೨೦೧೮ | ಖಿಲಾಫತ್ | ಅಮೀನಾ | ಮಲೆಯಾಳಂ |
ದೂರದರ್ಶನ
[ಬದಲಾಯಿಸಿ]- ಗಿಫ್ಟ್ ಆಂಡ್ ಗ್ರೀಟಿಂಗ್ (ಕ್ಯಾಬಿನೆಟ್)
- ಥಾಲಿ ( ಸೂರ್ಯ ಟಿವಿ )
- ಕೇರಳ ಸಮಾಜಂ ( ಏಷ್ಯಾನೆಟ್ ) - ೨೦೧೯
- ಕಾಮಿಡಿ ಸ್ಟಾರ್ಸ್ ( ಏಷ್ಯಾನೆಟ್ )
- ಸ್ಟಾರ್ ಮ್ಯಾಜಿಕ್ (ಫ್ಲವರ್ಸ್)
- ಟಾಪ್ ಸಿಂಗರ್ (ಫ್ಲವರ್ಸ್)
ಉಲ್ಲೇಖಗಳು
[ಬದಲಾಯಿಸಿ]- ↑ "ml:മലയാളത്തിന്റെ ഭാമസൗന്ദര്യത്തിനും പ്രണയമുണ്ട്" (in ಮಲಯಾಳಂ) (February 2013): 12, 13, 14.
{{cite journal}}
: Cite journal requires|journal=
(help) - ↑ "Actress Bhama reveals she is 'single mother', drops pics with daughter". English.Mathrubhumi (in ಇಂಗ್ಲಿಷ್). 2024-05-07. Retrieved 2024-07-26.
- ↑ "Finally, I'm getting my due in Malayalam: Bhamaa". The Times of India. Archived from the original on 2 November 2017. Retrieved 17 August 2013.
- ↑ "Finally, I'm getting my due in Malayalam: Bhamaa". The Times of India. Archived from the original on 2 November 2017. Retrieved 17 August 2013.
- ↑ Radhika C Pillai (18 May 2014) I am on the right track: Bhamaa Archived 27 November 2024[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.. Times of India. Retrieved 18 May 2014.
- ↑ "Gemini's grandson to play lead in Ramanujan biopic". The Hindu. Chennai, India. Indo-Asian News Service. 29 April 2013. Archived from the original on 1 May 2013. Retrieved 29 April 2013.
- ↑ "Bhama discards village belle image". The New Indian Express. 14 July 2012. Archived from the original on 17 August 2016. Retrieved 10 July 2016.
- ↑ "Bhama turns Playback singer – Malayalam Movie News". IndiaGlitz. 26 May 2008. Archived from the original on 9 July 2012. Retrieved 25 January 2012.
- ↑ "Bhama turns a singer – Malayalam Movie News". IndiaGlitz. 5 October 2009. Archived from the original on 12 July 2012. Retrieved 25 January 2012.
- ↑ Jiji Ann Cherian DC Kochi (15 January 2012). "Bhama, the girl next door". Deccan Chronicle. Archived from the original on 17 January 2012. Retrieved 25 January 2012.
- ↑ V.P, Nicy (6 October 2014). "'100 Degree Celsius' Starring Meghana Raj, Bhama, Shwetha Menon to Hit Theatres This Week". ibtimes.co.in (in ಇಂಗ್ಲಿಷ್). Retrieved 15 June 2021.
- ↑ Sreekumar, Priya (29 September 2015). "100 degree celsius going all over". Deccan Chronicle (in ಇಂಗ್ಲಿಷ್). Retrieved 15 June 2021.
- ↑ "Kerala / Thiruvananthapuram News: Ujala-Asianet film awards announced". The Hindu. Chennai, India. 13 January 2008. Archived from the original on 12 October 2020. Retrieved 10 July 2016.
- ↑ "Kerala / Kollam News: Sathyan memorial film awards announced". The Hindu. Chennai, India. 7 November 2007. Retrieved 25 January 2012.
- ↑ "'Ore Kadal', 'Thaniye' share critics award for best film". The Economic Times. Press Trust of India. 31 January 2008. Archived from the original on 16 December 2014. Retrieved 25 January 2012.
- ↑ "Kerala / Kozhikode News: 'Thaniye' bags Ala award". The Hindu. Chennai, India. 17 January 2008. Archived from the original on 2 June 2008. Retrieved 25 January 2012.
- ↑ "Vanitha awards for Mammootty, Meera Jasmine – Malayalam Movie News". IndiaGlitz. 7 February 2008. Archived from the original on 12 July 2012. Retrieved 25 January 2012.
- ↑ "Welcome to Amrita TV". Amrita TV. Archived from the original on 16 December 2012. Retrieved 25 January 2012.
- ↑ Priya Sreekumar (17 May 2013). "Village belle to glam doll". Deccan Chronicle. Archived from the original on 5 October 2016. Retrieved 10 July 2016.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- CS1 errors: missing periodical
- CS1 ಮಲಯಾಳಂ-language sources (ml)
- CS1 ಇಂಗ್ಲಿಷ್-language sources (en)
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using infobox person with multiple parents
- Articles with hCards
- ಸ್ತ್ರೀವಾದ ಮತ್ತು ಜಾನಪದ ಸಂಪಾದನೋತ್ಸವ ೨೦೨೫ ಸ್ಪರ್ಧಾ ಲೇಖನ
- ಭಾರತೀಯ ಚಲನಚಿತ್ರ ನಟಿಯರು
- ತೆಲುಗು ಚಲನಚಿತ್ರ ನಟಿಯರು
- ಕನ್ನಡ ಚಲನಚಿತ್ರ ನಟಿಯರು
- ಜೀವಂತ ವ್ಯಕ್ತಿಗಳು