ವಿಷಯಕ್ಕೆ ಹೋಗು

ಭಾಗ್ಯದ ಬಳೆಗಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾಗ್ಯದ ಬಳೆಗಾರ ಹೋಗಿ ಬಾ ಒಂದು ಜನಪ್ರಿಯ ಕನ್ನಡ ಜಾನಪದ ಗೀತೆಯಾಗಿದೆ. ಈ ಹಾಡು ಹೊಸದಾಗಿ ಮದುವೆಯಾದ ಹೆಣ್ಣು ಮಗಳು ಮತ್ತು ಆ ಹೆಣ್ಣಿನ ಊರಿಗೆ ಬಳೆ ಮಾರಲು ಬಂದ ಬಳೆ ಮಾರಾಟಗಾರನ ನಡುವಿನ ಸಂಭಾಷಣೆಯನ್ನು ತಿಳಿಸುತ್ತದೆ. ಆ ಹೆಣ್ಣು, ಬಳೆ ಮಾರಾಟಗಾರನಲ್ಲಿ ತನ್ನ ಹೆತ್ತವರ (ಆ ಹೆಣ್ಣಿನ ಹೆತ್ತವರ) ಮನೆಗೆ ಭೇಟಿ ನೀಡಲು ಹೇಳುತ್ತಾಳೆ, ಆದರೆ ಮಾರಾಟಗಾರನು ಅಲ್ಲಿಗೆ ಹೇಗೆ ಹೋಗಬೇಕೆಂದು ತನಗೆ ತಿಳಿದಿಲ್ಲ ಎಂದು ಹೇಳುತ್ತಾನೆ. ಆ ಹೆಣ್ಣು ತನ್ನ ಹೆತ್ತವರ ಊರಿಗೆ ಕಾವ್ಯಾತ್ಮಕ ರೀತಿಯಲ್ಲಿ ನಿರ್ದೇಶನಗಳನ್ನು ನೀಡುತ್ತಾಳೆ.[]

"ಭಾಗ್ಯದ ಬಳೆಗಾರ" ಕರ್ನಾಟಕ ಮತ್ತು ದಕ್ಷಿಣ ಭಾರತದಾದ್ಯಂತ ಬಹಳ ಜನಪ್ರಿಯವಾಗಿದೆ.

ಕೆ. ಎಸ್. ಚಿತ್ರಾ , ಮಧು ಬಾಲಕೃಷ್ಣನ್ , ಬಿ. ಆರ್. ಛಾಯಾ , ಎಸ್.ಪಿ.ಬಾಲಸುಬ್ರಹ್ಮಣ್ಯಂ , ಮಂಜುಳಾ ಗುರುರಾಜ್ , ಕಸ್ತೂರಿ ಶಂಕರ್ , ರತ್ನಮಾಲಾ ಪ್ರಕಾಶ್ , ನಂದಿತಾ , ಶ್ರೇಯಾ ಘೋಷಾಲ್ , ಕುನಾಲ್ ಗಾಂಜಾವಾಲಾ , ಮತ್ತು ಅಮ್ಮ ರಾಮಚಂದ್ರ ಸೇರಿದಂತೆ ಅನೇಕ ಗಾಯಕರು ಈ ಹಾಡನ್ನು ಹಾಡಿದ್ದಾರೆ.[][]

ಸಾಹಿತ್ಯ

[ಬದಲಾಯಿಸಿ]

ಸಂಯೋಜನೆಯ ಪಠ್ಯ []

[ಬದಲಾಯಿಸಿ]

          ಹೆಣ್ಣು ಮಗಳು:
            ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
            ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
            ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
            ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ

            ಬಳೆಗಾರ:
            ನಿನ್ನ ತವರೂರಾ ನಾನೇನು ಬಲ್ಲೆನು
            ನಿನ್ನ ತವರೂರಾ ನಾನೇನು ಬಲ್ಲೆನು
            ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
            ಗೊತ್ತಿಲ್ಲ ಎನಗೆ ಗುರಿಯಿಲ್ಲ ಎಲೆಬಾಲೆ
            ತೋರಿಸು ಬಾರೆ ತವರೂರ

            ಹೆಣ್ಣು ಮಗಳು:
            ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
            ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ

            ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು
            ಬಾಳೆ ಬಲಕ್ಕೆ ಬೀಡು ಸೀಬೆ ಎಡಕ್ಕೆ ಬೀಡು
            ನಟ್ಟ ನಡುವೇಲ್ಲಿ ನೀ ಹೋಗು ಬಳೆಗಾರ
            ನಟ್ಟ ನಡುವೇಲ್ಲಿ ನೀ ಹೋಗು ಬಳೆಗಾರ
            ಅಲ್ಲಿಹುದೆನ್ನಾ ತವರೂರು

            ಬಳೆಗಾರ:
            ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
            ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ

           ಹೆಣ್ಣು ಮಗಳು:
           ಹಂಚಿನಾ ಮನೆ ಕಾಣೋ ಕಂಚಿನಾ ಕದ ಕಾಣೋ
           ಹಂಚಿನಾ ಮನೆ ಕಾಣೋ ಕಂಚಿನಾ ಕದ ಕಾಣೋ
           ಇಂಚಾಡೋವೆರಡು ಗಿಳಿ ಕಾಣೋ ಬಳೆಗಾರ
           ಅಲ್ಲಿಹುದೆನ್ನಾ ತವರೂರು

           ಬಳೆಗಾರ:
           ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
           ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ

           ಹೆಣ್ಣು ಮಗಳು:
           ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ
           ಆಲೆ ಆಡುತ್ತಾವೇ ಗಾಣ ತಿರುಗುತ್ತಾವೇ
           ನವಿಲು ಸಾರಂಗ ನಲಿದಾವೇ ಬಳೆಗಾರ
           ಅಲ್ಲಿಹುದೆನ್ನಾ ತವರೂರು

            ಬಳೆಗಾರ:
           ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
           ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ

           ಹೆಣ್ಣು ಮಗಳು:
           ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರ ಹಾಸಿ
           ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರ ಹಾಸಿ
           ನಟ್ಟ ನಡುವೇಲ್ಲಿ ಪಗಡೆಯ ಆಡುತ್ತಾಳೆ
           ನಟ್ಟ ನಡುವೇಲ್ಲಿ ಪಗಡೆಯ ಆಡುತ್ತಾಳೆ
           ಅವಳೆ ಕಣೋ ನನ್ನ ಹಡೆದವ್ವ

              ಬಳೆಗಾರ:
           ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ
           ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ನ ತವರೂರಾ

           ಹೆಣ್ಣು ಮಗಳು:
           ಅಚ್ಚ ಕೆಂಪಿನ ಬಳೆ,ಹಸಿರು ಗೀರಿನ ಬಳೆ
           ಅಚ್ಚ ಕೆಂಪಿನ ಬಳೆ,ಹಸಿರು ಗೀರಿನ ಬಳೆ
           ನನ್ನ ಹಡೆದವ್ವಗೆ ಬಲು ಆಸೆ ಬಳೆಗಾರ
           ನನ್ನ ಹಡೆದವ್ವಗೆ ಬಲು ಆಸೆ ಬಳೆಗಾರ
           ಕೊಂಡು ಹೋಗೊ ನನ್ನ ತವರೀಗೆ
              ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ
              ಭಾಗ್ಯದ ಬಳೆಗಾರ ಹೋಗಿ ಬಾ ನನ್ ತವರೀಗೇ

           ಬಳೆಗಾರ:
           ನಿನ್ನ ತವರೂರ ನಾನೀಗ ಬಲ್ಲೆನು
           ಗೊತ್ತಾಯ್ತು ಎನಗೆ, ಗುರಿಯಾಯ್ತು ಎಲೆ ಹೆಣ್ಣೆ
           ಹೋಗಿ ಬರ್ತೀನಿ ನಿನ್ನ ತವರೀಗೆ

ಸಾರಾಂಶ

[ಬದಲಾಯಿಸಿ]

ಹೆಣ್ಣು ಮಗಳು:

ಒಂದು ದಿನ ಬಳೆ ಮಾರುವವನು ಹೊಸದಾಗಿ ಮದುವೆಯಾದ ಹೆಣ್ಣಿನ ಮನೆಗೆ ಬಳೆ ಮಾರಲು ಬಂದಾಗ ಆ ಹೆಣ್ಣು ಭಾಗ್ಯದ ಬಳೆಗಾರ ದಯವಿಟ್ಟು ನನ್ನ ತವರು ಮನೆಗೆ ಹೋಗಿ ಬಾ ಎಂದು ಹೇಳುತ್ತಾಳೆ.

ಬಳೆಗಾರ: ನಿನ್ನ ತವರೂರು ಎಲ್ಲಿದೆ ಎಂದು ನನಗೆ ಗೊತ್ತಿಲ್ಲ. ನನಗೆ ದಿಕ್ಕುಗಳು ಗೊತ್ತಿಲ್ಲ. ನೀವು ನನಗೆ ನಿಮ್ಮ ತವರು ಮನೆಯ ದಾರಿ ತೋರಿಸಿ.

ಹೆಣ್ಣು ಮಗಳು : (ದಾರಿಯನ್ನು ಹೇಳಲು ಶುರು ಮಾಡುತ್ತಾಳೆ) ನೀವು ಬಲಭಾಗದಲ್ಲಿ ಬಾಳೆ ತೋಟವನ್ನು ಕಾಣುತ್ತೀರಿ, ಎಡಭಾಗದಲ್ಲಿ ಪೇರಲ ತೋಟವನ್ನು ಕಾಣುತ್ತೀರಿ, ಈ ಎರಡರ ನಡುವೆ ಇರುವ ರಸ್ತೆಯನ್ನು ಹಿಡಿಯಿರಿ, ಅದು ನನ್ನ ಮನೆಗೆ ಕರೆದೊಯ್ಯುತ್ತದೆ.

ಬಳೆಗಾರ: ಹೇ ನವವಿವಾಹಿತೆ, ನನಗೆ ನಿಮ್ಮ ತವರು ಮನೆ ತೋರಿಸಿ. ಅದು ನೋಡಲು ಹೇಗೆ ಇದೆ ಎಂದು ತಿಳಿಸಿ.

ಹೆಣ್ಣು ಮಗಳು : ಅದು ಹಂಚಿನ ಮನೆಯಾಗಿದ್ದು, ಕಂಚಿನ ಬಾಗಿಲು ಇರುವ ಮನೆಯಾಗಿದೆ, ಅಲ್ಲಿ ಎರಡು ಗಿಳಿಗಳು ಹಾಡುತ್ತಿರುತ್ತದೆ. ಅದುವೆ ನನ್ನ ಮನೆ.

ಬಳೆಗಾರ: (ಇನ್ನೂ ಅವಳ ಮನೆಯ ಬಗ್ಗೆ ಮಾಹಿತಿ ಕೇಳುತ್ತಾನೆ) ಹೇ ನವವಿವಾಹಿತೆ, ನನಗೆ ನಿಮ್ಮ ತವರು ಮನೆ ಬಗ್ಗೆ ಇನ್ನಷ್ಟು ತಿಳಿಸಿ.

ಹೆಣ್ಣು ಮಗಳು : ಆಲೆ ಆಡುತ್ತವೆ, ಎಣ್ಣೆ ಚಕ್ರ ಸುತ್ತುತ್ತಿರುವುದು, ನವಿಲು, ಸಾರಂಗ ಕುಣಿಯುತ್ತಿರುವುದು ಅದೇ ನನ್ನ ತವರೂರು.

ಮುತ್ತುಗಳಿಂದ ಅಲಂಕರಿಸಿದ ಮನೆ, ಅದರಲ್ಲಿ ನನ್ನ ತಾಯಿ ಇನ್ನೂ ಪಗಡೆ ಆಟವಾಡುತ್ತಿದ್ದಾರೆ.(ಇದು ಮದುವೆಯ ಸಂಭ್ರಮ ಇನ್ನೂ ಮುಗಿಯಿಲ್ಲ, ಮದುವೆ ಸಮಾರಂಭಕ್ಕಾಗಿ ಕಟ್ಟಿದ ತಾತ್ಕಾಲಿಕ ಅಲಂಕಾರ ಇನ್ನೂ ಹೊಸದಾಗಿದೆ ಎಂದು ಸೂಚಿಸುತ್ತದೆ).

ನನ್ನ ತಾಯಿಗೆ ಅಚ್ಚ ಕೆಂಪು ಬಣ್ಣದ ಬಳೆ ಮತ್ತು ಹಸಿರು ಗೀರಿನ ಬಳೆಗಳು ತುಂಬಾ ಇಷ್ಟ. ನೀವು ಹೋಗುವಾಗ ಅವುಗಳನ್ನು ತೆಗೆದುಕೊಂಡು ಹೋಗಿ.

ಬಳೆಗಾರ: ಈಗ ನನಗೆ ನಿಮ್ಮ ಮನೆಯ ಬಗ್ಗೆ ಗೊತ್ತಾಗಿದೆ,ನಾನು ದಿಕ್ಕುಗಳನ್ನು ತಿಳಿದುಕೊಂಡಿದ್ದೇನೆ, ನಾನು ಖಂಡಿತವಾಗಿಯೂ ಭೇಟಿ ನೀಡುತ್ತೇನೆ ಎಂದು ಹೇಳುತ್ತಾನೆ.

ಉಲ್ಲೇಖಗಳು

[ಬದಲಾಯಿಸಿ]
  1. "Bhagyada Balegara - Various Mp3 Download". raagtune.com. Archived from the original on 2016-03-04.
  2. "Sevanthi Sevanthi mp3 songs". mp3mad.com.
  3. "Bhagyada Balegara mp3 songs". mp3mad.com.
  4. "Kannadalyrics: Kannada folk song: Bhagayada Balegara Kannada lyrics". 3 December 2012.