ಭದ್ರಾಕ್ಷಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಭದ್ರಾಕ್ಷಿ ಮರ

ಭದ್ರಾಕ್ಷಿ ಸಾಮಾನ್ಯವಾಗಿ ವೆಸ್ಟ್ ಇಂಡಿಯನ್ ಎಲ್ಮ್ ಅಥವಾ ಬೇ ಸೆಡರ್ ಎಂದು ಕರೆಯಲ್ಪಡುತ್ತದೆ. ಗುಝುಮಾ ಅಲ್ಮಿಫೋಲಿಯಾ ಅಥವಾ ಗುಝುಮಾ ಟೊಮೆಂಟೋಸಾ ಎನ್ನುವುದು ಇದರ ವೈಜ್ಞಾನಿಕ ಹೆಸರು. ಇದು ಸಾಮಾನ್ಯವಾಗಿ ಹುಲ್ಲುಗಾವಲುಗಳು ಮತ್ತು ಕಾಡುಗಳಲ್ಲಿ ಕಂಡುಬರುವ ಮಧ್ಯಮ ಗಾತ್ರದ ಮರವಾಗಿದೆ. ಇದೊಂದು ಹೂಬಿಡುವ ಗಿಡವಾಗಿದ್ದು ೩೦ಮೀ ಎತ್ತರ ಬೆಳೆಯುತ್ತದೆ. ಭದ್ರಾಕ್ಷಿಯು ಮಾಲ್ವಸಿಯ ಸಸ್ಯ ಕುಟುಂಬಕ್ಕೆ ಸೇರಿದೆ.[೧]

ಸಾಮಾನ್ಯ ಹೆಸರುಗಳು[ಬದಲಾಯಿಸಿ]

  • ಬಂಗಾಳಿ: ನಿಪ್ಪಲ್ತುಂತ್
  • ಇಂಗ್ಲೀಷ್: ಬಾಸ್ಟರ್ಡ್ ಸೀಡರ್, ಬೇ ಸೀಡರ್, ವೆಸ್ಟ್ ಇಂಡಿಯನ್ ಎಲ್ಮ್
  • ಫ್ರೆಂಚ್: ವುಡ್ ಎಲ್ಮ್
  • ಪೋರ್ಚುಗೀಸ್: ಎಲ್ಮ್,
  • ಸ್ಪ್ಯಾನಿಷ್:ಕ್ಯಾಬಲೊ, ಟೊರೊ[೨]

ವಿವರಣೆ[ಬದಲಾಯಿಸಿ]

ಭದ್ರಾಕ್ಷಿ ಮರದ ಹೂವು

ಭದ್ರಾಕ್ಷಿ ೩೦ಮೀಟರ್ ಎತ್ತರ ಮತ್ತು ೩೦-೪೦ಸೆಂ.ಮೀ ವ್ಯಾಸದಲ್ಲಿ ಬೆಳೆಯುತ್ತದೆ. ಎಲೆಗಳು ಅಂಡಾಕಾರವಾಗಿರುತ್ತವೆ ಮತ್ತು ಸಾಮಾನ್ಯವಾಗಿ ಒರಟಾದ ರಚನೆಯನ್ನು ಹೊಂದಿರುತ್ತವೆ. ಈ ಜಾತಿಯ ಸಸ್ಯಗಳು ವರ್ಷದ ಉದ್ದಕ್ಕೂ ನಿರ್ದಿಷ್ಟವಾಗಿ ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ಹೂಗಳನ್ನು ಉತ್ಪಾದಿಸುತ್ತವೆ. ಬೀಜಗಳನ್ನು ನೆಡುವುದಕ್ಕೆ ಮುಂಚಿತವಾಗಿ ಅದನ್ನು ಕುದಿಯುವ ನೀರಿನಲ್ಲಿ ೩೦ ಸೆಕೆಂಡುಗಳ ಕಾಲ ನೆನೆ ಹಾಕುತ್ತಾರೆ. ತಾಜಾ ಬೀಜಗಳನ್ನು ನೆಟ್ಟ ೭-೧೪ ದಿನಗಳ ನಂತರ ಸಸ್ಯ ಬೆಳವಣಿಗೆಯನ್ನು ಆರಂಭಿಸುತ್ತದೆ.[೩]

ಉಪಯೋಗ[ಬದಲಾಯಿಸಿ]

ಭದ್ರಾಕ್ಷಿ ಮರವನ್ನು ಆಂತರಿಕ ಮರಗೆಲಸ, ಬೆಳಕಿನ ನಿರ್ಮಾಣ, ಪೆಟ್ಟಿಗೆಗಳು, ಕ್ರೇಟುಗಳು, ಶೂ ಕೊಂಬುಗಳು, ಉಪಕರಣದ ಹಿಡಿಕೆಗಳು ಮತ್ತು ಇದ್ದಿಲುಗಳಿಗಾಗಿ ಬಳಸಲಾಗುತ್ತದೆ. ಶುಷ್ಕ ಪ್ರದೇಶದ ಶುಷ್ಕ ಋತುವಿನ ಕೊನೆಯಲ್ಲಿ ಜಾನುವಾರುಗಳಿಗೆ ಭದ್ರಾಕ್ಷಿಯನ್ನು ಮೇವಾಗಿ ನೀಡುತ್ತಾರೆ. ಇದನ್ನು ಜಮೈಕಾದಲ್ಲಿ ಮೇವಾಗಿ ಬಳಸುತ್ತಾರೆ. ಹಣ್ಣುಗಳು ಮತ್ತು ಎಲೆಗಳನ್ನು ಕುದುರೆ ಹಾಗೂ ಜಾನುವಾರುಗಳಿಗೆ ಆಹಾರವಾಗಿ ನೀಡಲಾಗುತ್ತದೆ. ಪೋರ್ಟೊ ರಿಕೊದಲ್ಲಿ ಹಂದಿಗಳಿಗೆ ಇದರ ಹಣ್ಣುಗಳನ್ನು ನೀಡಲಾಗುತ್ತದೆ.[೪]

ಔಷಧೀಯ ಬಳಕೆ[ಬದಲಾಯಿಸಿ]

ನೀರಿನಲ್ಲಿ ನೆನೆಸಿರುವ ಪುಡಿಮಾಡಿದ ಭದ್ರಾಕ್ಷಿ ಬೀಜಗಳ ಪಾನೀಯವನ್ನು ಅತಿಸಾರ ಭೇದಿ, ಶೀತ, ಕೆಮ್ಮು, ರಕ್ತಸ್ರಾವ ಮತ್ತು ವಿಷಪೂರಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದನ್ನು ಮೂತ್ರವರ್ಧಕವಾಗಿಯೂ ಬಳಸುತ್ತಾರೆ.[೫]

ಉಲ್ಲೇಖ[ಬದಲಾಯಿಸಿ]

  1. http://tropical.theferns.info/viewtropical.php?id=Guazuma+ulmifolia
  2. "ಆರ್ಕೈವ್ ನಕಲು". Archived from the original on 2016-01-10. Retrieved 2018-08-23.
  3. http://www.missouribotanicalgarden.org/PlantFinder/PlantFinderDetails.aspx?taxonid=287260&isprofile=0&
  4. https://www.jstor.org/stable/42606433?seq=1#page_scan_tab_contents
  5. https://herbpathy.com/Uses-and-Benefits-of-Guazuma-Ulmifolia-Cid4427